ಲಡಾಖ್(ಜು. 02)  ಲಡಾಖ್ ಗಡಿಯಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಅಬ್ಬರಿಸಿದ್ದಾರೆ. ಭಾರತ ಚೀನಾ ಸಂಘರ್ಷದ ನಂತರ ಪ್ರಧಾನಿ ಭೇಟಿ ನೀಡಿದ್ದಾರೆ.

"

ಸೈನಿಕರಿಗೆ ಮೋದಿ ಮತ್ತಷ್ಟು ಸ್ಪೂರ್ತಿ ತುಂಬಿದ್ದಾರೆ. ನೀವು ಮತ್ತು ನಿಮ್ಮ ಸ್ನೇಹಿತರು ತೋರಿರುವ ಸಾಹಸದಿಂದ ಇಡೀ ಪ್ರಪಂಚಕ್ಕೆ ಒಂದು ಸಂದೇಶ ತಲುಪಿದೆ. ಭಾರತ ಮಾತೆಯ ವೈರಿಗಳು ನಿಮ್ಮ ಬಂದೂಕಿನ ಬೆಂಕಿಗೆ ಬಲಿಯಾಗಬೇಕಾಗುತ್ತದೆ ಎಂಬುದನ್ನು ನಿರೂಪಿಸಿದ್ದೀರಿ ಎಂದಿದ್ದಾರೆ.

ನಿಮ್ಮ ಶಕ್ತಿ ಸಾಮರ್ಥ್ಯಕ್ಕಿಂತ ಎತ್ತರದ ಜಾಗದಲ್ಲಿ ಕೆಲಸ ಮಾಡುತ್ತಾ ಇದ್ದೀರಿ, ಗಾಲ್ವಾನ್ ಕಣಿವೆಯಲ್ಲಿ ಪ್ರಾಣ ತ್ಯಾಗ ಮಾಡಿದವರಿಗೆ ಮತ್ತೊಮ್ಮೆ ವಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಸೈನಿಕರ ಶೌರ್ಯ ಪಾರಕ್ರಮ ಎಲ್ಲ ಕಡೆ ಕೊಂಡಾಡಲಾಗುತ್ತಿದೆ. ನಿಮ್ಮ ಸಾಹಸದ ಕತೆಗಳು ಪ್ರತಿ ಮನೆಯಲ್ಲಿಯೂ ದೇಶಭಕ್ತಿ ಬಿತ್ತಿದೆ ಎಂದು ಸೈನಿಕರಿಗೆ ವಂದನೆ ಸಲ್ಲಿಸಿದರು.

ಚೀನಾದ ಕತೆ ಇನ್ನು ಮುಂದೆ ಅಷ್ಟೆ, ಕೇಂದ್ರದ ದಿಟ್ಟ ತೀರ್ಮಾನದ ಎಫೆಕ್ಟ್!

ಧೈರ್ಯ ಶಕ್ತಿ ಎಂಬುದು ಶಾಂತಿ ಪಡೆದುಕೊಳ್ಳಲು ಇರಬೇಕಾದ ಹಿಂದಿನ ಸೂತ್ರ. ನನ್ನ ಮುಂದೆ ಮಹಿಳಾ ಸೈನಿಕರು ಕುಳಿತಿದ್ದಾರೆ. ಇದಕ್ಕಿಂತ ದೊಡ್ಡ ಸ್ಫೂರ್ತಿಯ ಸಂಗತಿ ಇನ್ನೇನಿದೆ ಎಂದರು.

ದೇಶದ ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಕಲ ಕ್ರಮ ತೆಗೆದುಕೊಂಡಿದ್ದೇವೆ.  ಯೋಜನೆ ಹಾಕುವ ಕಾಲಗಳು ಮುಗಿದು ಹೋದವು. ಇದು ನಿಜವಾದ ಅಭಿವೃದ್ಧಿಯ ಕಾಲ.  ಇತಿಹಾಸ ನಮಗೆ ಪಾಠ ಹೇಳುತ್ತಲೇ ಬಂದಿದೆ ಎಂದರು.

ಕೊಳಲು ಊದುವ ಕೃಷ್ಣನನ್ನು ಪೂಜೆ ಮಾಡುತ್ತೇವೆ, ಸುದರ್ಶನ ಚಕ್ರ ಹಿಡಿದ ಕೃಷ್ಣನನ್ನು ಆರಾಧಿಸುತ್ತೇವೆ.  ದೇಶದ ಒಳಿತಿಗಾಗಿ ಸದಾ ಕೆಲಸ ಮಾಡೋಣ ಎಂದರು.  ದುರ್ಬಲರಿಂದ ಎಂದಿಗೂ ಶಾಂತಿ ಸ್ಥಾಪನೆ ಸಾಧ್ಯವಿಲ್ಲ, ಶಾಂತಿ ಸ್ಥಾಪನೆಗೆ ಧೈರ್ಯ-ಶೌರ್ಯ  ಬೇಕೇ ಬೇಕು ಎಂದರು.