ಶ್ರೀನಗರ(ಜು.03): ಭಾರತೀಯ ಸೇನೆ ಕಾರ್ಯಚರಣೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಡಿಗಿರುವ ಉಗ್ರರು ಬೆಚ್ಚಿ ಬಿದ್ದಿದ್ದಾರೆ. ಪ್ರತಿ ದಿನ ಕಾರ್ಯಚರಣೆಯಲ್ಲಿ ಉಗ್ರರನ್ನು ಹುಡುಕಿ ಭಾರತೀಯ ಸೇನೆ ಗುಂಡಿಕ್ಕಿ ಹತ್ಯೆ ಮಾಡುತ್ತಿದೆ.  ಇತ್ತೀಚೆಗಿನ ಕಾರ್ಯಚರಣೆಯಲ್ಲಿ CRPF ಯೋಧ ಹಾಗೂ ಬಾಲಕನ ಸಾವಿಗೆ ಕಾರಣವಾಗಿದ್ದ ಉಗ್ರ ಝಾಹಿದ್ ಅಹಮ್ಮದ್ ದಾಸ್ ವಿರುದ್ಧ ಸೇನೆ ಸೇಡು ತೀರಿಸಿಕೊಂಡಿದೆ.

ಉಗ್ರರ ಗುಂಡಿನ ದಾಳಿ ನಡುವೆ ಭಾರತೀಯ ಯೋಧನ ಕೈಯ್ಯಲ್ಲಿ ಸುರಕ್ಷಿತ ಈ ಕಂದ!..

ಜೂನ್ 26ರಂದು ನಡೆದ ಉಗ್ರರ ವಿರುದ್ಧದ ಕಾರ್ಯಚರಣೆಯಲ್ಲಿ  CRPF ಯೋಧ ಹಾಗೂ 6 ವರ್ಷದ ಪುಟ್ಟ ಬಾಲಕನ ಮೇಲೆ ಉಗ್ರ ಝಾಹಿದ್ ಅಹಮ್ಮದ್ ದಾಸ್ ಗುಂಡಿನ ಮಳೆಗೆರೆದಿದ್ದ. ಬಳಿಕ ಎಸ್ಕೇಪ್ ಆಗಿದ್ದ. ಆದರೆ ಜೂನ್ 30 ರಂದು ಶ್ರೀನಗರದ ಮಲ್‌ಭಾಗ್ ವಲಯದಲ್ಲಿ ಸರ್ಚ್ ಆಪರೇಶನ್ ನಡೆಸಿದ ಸೇನೆ ಉಗ್ರರ ವಿರುದ್ಧ ಗುಂಡಿ ಸುರಿಮಳೆಗೆರೆದಿದೆ.

ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿಲ್ಲ; ಆರೋಪಗಳಿಗೆ CRPF ಪ್ರತಿಕ್ರಿಯೆ! 

ಸೇನೆಯ ದಾಳಿಗೆ ಉಗ್ರ ಝಾಹಿದ್ ಅಮ್ಮದ್ ದಾಸ್  ಹಾಗೂ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಈ ಮೂಲಕ ಸೇನೆ ಸೇಡು ತೀರಿಸಿಕೊಂಡಿದೆ.  1 -2 ಉಗ್ರರು ಅವಿತುಕೊಂಡಿರುವ ಸಾಧ್ಯತೆ ಇದೆ. ಹೀಗಾಗಿ ಸೇನೆ ಕೂಂಬಿಂಗ್ ಮುಂದುವರಿಸಿದೆ.