Asianet Suvarna News Asianet Suvarna News

ಭಾರತದ ಐಟಿ ಉದ್ಯಮ ಕುಸಿತ ಭೀತಿ: ಅಮೇರಿಕದ ಸಾಫ್ಟ್‌ವೇರ್ ಪ್ರಾಜೆಕ್ಟ್‌ಗಳು ವಿಯೆಟ್ನಾಂ, ಫಿಲಿಪೈನ್ಸ್ ಪಾಲು

ಭಾರತೀಯ ಐಟಿ ಉದ್ಯಮ ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಎಚ್ಚರಿಕೆ ಗಂಟೆ. ಅಮೇರಿಕಾ ಸೇರಿ ಹಲವು ದೇಶಗಳು ಭಾರತಕ್ಕೆ ಬದಲಾಗಿ ವಿಯೆಟ್ನಾಂ ಮತ್ತು ಫಿಲಿಪೈನ್ಸ್ ದೇಶಗಳಿಗೆ ಕಡಿಮೆ ಹಣಕ್ಕೆ ಪ್ರಾಜೆಕ್ಟ್‌ಗಳನ್ನು ನೀಡುತ್ತಿವೆ.

Indian IT industry collapse fear US software development projects gave to Vietnam Philippines sat
Author
First Published Aug 15, 2024, 7:55 PM IST | Last Updated Aug 15, 2024, 7:55 PM IST

ಜಾಗತಿಕ ಮಟ್ಟದಲ್ಲಿ ಐಟಿ ಉದ್ಯಮಕ್ಕೆ ಸಂಬಂಧಿಸಿದಂತೆ ಇದು ಎಚ್ಚರಿಕೆಯ ಗಂಟೆಯಾಗಿದೆ. ವಿಶ್ವದ ದೊಡ್ಡಣ್ಣ ಅಮೇರಿಕಾ ಸೇರಿದಂತೆ ಬಹುತೇಕ ರಾಷ್ಟ್ರಗಳು ಸಾಫ್ಟ್‌ವೇರ್ ಡೆವಲಪ್‌ಮೆಂಟ್‌ಗೆ ಭಾರತದ ಐಟಿ ಉದ್ಯಮಕ್ಕೆ ಗುತ್ತಿಗೆ ಆಧಾರದಲ್ಲಿ ಪ್ರಾಜೆಕ್ಟ್‌ಗಳನ್ನು ನೀಡುತ್ತಿದ್ದವು. ಆದರೆ, ಈಗ ಭಾರತಕ್ಕಿಂತ ಕಡಿಮೆ ವೆಚ್ಚಕ್ಕೆ ಸಾಫ್ಟ್‌ವೇರ್ ಪ್ರಾಜೆಕ್ಟ್‌ಗಳನ್ನು ಬದಲಿ ದೇಶಗಳು ಮಾಡಿಕೊಡಲು ಮುಂದಾಗಿದ್ದು, ಭಾರತೀಯ ಇಂಜಿನಿಯರ್ಸ್‌ಗಳ ತಂಡಗಳು ಕೆಲಸ ಕಳೆದುಕೊಂಡು ದಿವಾಳಿಯಾಗುತ್ತಿವೆ. 

ಈ ಕುರಿತು ಉದ್ಯಮ ಸಲಹೆಗಾರ ಆಶಿಶ್ ಸಾರಡ್ಕ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತೀಯ ಐಟಿ ಉದ್ಯಮಕ್ಕೆ ಇದೊಂದು ಎಚ್ಚರಿಕೆಯ ಗಂಟೆಯಾಗಿರುವಂತಹ ವಿದ್ಯಾಮಾನಗಳುಕಳೆದ ಒಂದೆರೆಡು ವರ್ಷಗಳಿಂದ ನಡೆಯುತ್ತಿದೆ. ಇತ್ತೀಚೆಗೆ ಒಬ್ಬ ಇಂಜಿನಿಯರ್ ಈ ಬಗ್ಗೆಯೇ ಲಿಂಕ್ಡ್‌ಇನ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾನೆ. ಭಾರತದಲ್ಲಿದ್ದ ಅವರ ಇಂಜಿನಿಯರ್‌ಗಳ ತಂಡವನ್ನು ವಿಯೆಟ್ನಾಂನಲ್ಲಿ ಇರುವಂತಹ ಸಾಪ್ಟ್‌ವೇರ್ ಡೆವಲಪ್‌ಮೆಂಟ್ ತಂಡವು ರಿಪ್ಲೇಸ್ ಮಾಡುತ್ತಿದೆ. ಇದು ಆತನೊಬ್ಬನ ವಿಚಾರ ಮಾತ್ರವಲ್ಲ. ಇದು ಇಡೀ ಭಾರತೀಯ ಐಟಿ ಉದ್ಯಮದಲ್ಲಿ ಈ ಬದಲಾವಣೆ ಹೆಚ್ಚಾಗಿ ಕಂಡುಬರುತ್ತಿದೆ. 

ಇದನ್ನೂ ಓದಿ: ಹೊಸ ಎಂಜಿನೀಯರ್‌ಗೆ 20,000 ಸಂಬಳವೇ ಹೆಚ್ಚು, ಕಂಪನಿ ನಿರ್ಧಾರ ಸಮರ್ಥಿಸಿದ ಬೆಂಗಳೂರು ಉದ್ಯಮಿ!

ಭಾರತೀಯರು ಈ ಮುಂಚೆ ಲೋ ಕಾಸ್ಟ್ ಇನ್ವೆಸ್ಟ್‌ಮೆಂಟರ್ ಆಗಿದ್ದರಿಂದ ಭಾರತೀಯರಿಗೆ ಅಮೇರಿಕಾ ಸೇರಿದಂತೆ ಹಲವು ದೇಶಗಳು ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಪ್ರಾಜೆಕ್ಟ್‌ಗಳನ್ನು ಹೊರ ಗುತ್ತಿಗೆಗೆ ತುಂಬಾ ಕಡಿಮೆ ದರಕ್ಕೆ ನೀಡುತ್ತಿದ್ದವು. ಆದರೆ, ಇಂದು ಭಾರತಕ್ಕಿಂತ ಅತಿ ಕಡಿಮೆ ದರಕ್ಕೆ ಪ್ರಾಜೆಕ್ಟ್‌ಗಳನ್ನು ವಿಯೆಟ್ನಾಂ ಮತ್ತು ಫಿಲಿಪೈನ್ಸ್ ಇಂಜಿನಿಯರ್‌ಗಳ ತಂಡವು ಮಾಡಿಕೊಡುತ್ತಿದೆ. ಅಂದರೆಮ, ಭಾರತದ ಐಟಿ ಉದ್ಯಮದ ಕ್ಷೇತ್ರವನ್ನು ವಿಯೆಟ್ನಾಂ ಮತ್ತು ಫಿಲಿಪೈನ್ಸ್ ದೇಶಗಳು ಆಕ್ರಮಣ ಮಾಡಿಕೊಳ್ಳುತ್ತಿವೆ.

ಭಾರತೀಯರು ಏನು ಮಾಡಬೇಕು ?
ಇಂಜಿನಿಯರಿಂಗ್‌ನಲ್ಲಿ ಐಟಿ ಇಂಡಸ್ಟ್ರಿ ಮಾತ್ರವೇ ಬದುಕಲ್ಲ ಎಂಬುದನ್ನು ಮೊದಲು ನಾವು ನಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಈ ಬಗ್ಗೆ ನಮಗೂ ಅದು ಅರ್ಥ ಆಗಬೇಕು. ಎಐ ಎಂದು ಹೇಳುವಂತಹ ತಂತ್ರಜ್ಞಾನ ಬಂದಿದ್ದು, ಒಂದೇ ರೀತಿಯ ಪುನರಾವರ್ತಿಕ ಕೆಲಸಗಳನ್ನು ಮಾಡುವಂತಹ ಹಾಗೂ ಡೇಟಾ ಎಂಟ್ರಿ ಮಾಡುವಂತಹ ಕೆಲಸಗಳನ್ನು ಮುಂದಿನ 2-3 ವರ್ಷಗಳಲ್ಲಿ ಆಕ್ರಮಣ ಮಾಡಿಕೊಳ್ಳಲಿದೆ. ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕೆಲಸವೂ ಇನ್ನು 10 ವರ್ಷಗಳಲ್ಲಿ ಇರುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಇದಕ್ಕಾಗಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಪಾಂಡಿತ್ಯವನ್ನು ಪಡೆದುಕೊಳ್ಳುವ ಕ್ಷೇತ್ರಗಳತ್ತ ಹಾಗೂ ಐಟಿ ಇಂಡಸ್ಟ್ರಿ ಹೊರತಾದ ಆಯ್ಕೆಗಳ ಕಡೆಗೂ ಗಮನ ಹರಿಸಬೇಕಿದೆ. ಜೊತೆಗೆ, ಐಟಿ ಉದ್ಯಮದ ಹೊರತಾದ ಎರಡನೇ ಆದಾಯ ಬರುವಂತಹ ಕ್ಷೇತ್ರವೊಂದರಲ್ಲಿ ತೊಡಗಿಕೊಳ್ಳಬೇಕು. ಐಟಿ ಉದ್ಯಮ ಇನ್ನೂ ಮುಂದುವರೆಯಬಹುದು, ಆದರೆ ಅದೊಂದೇ ಉದ್ಯಮ ನಂಬಿಕೊಳ್ಳಬೇಡಿ ಎಂದು ಆಶಿಶ್ ಸಾರಡ್ಕ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ದಿನಕ್ಕೆ 14 ಗಂಟೆ ಕೆಲಸ: ರಾಜ್ಯ ಸರ್ಕಾರ ಜಾರಿಗೆ ತರಲು ಚಿಂತಿಸಿದ ಹೊಸ ಬಿಲ್‌ಗೆ ಟೆಕ್ಕಿಗಳ ತೀವ್ರ ವಿರೋಧ

20 ಸಾವಿರ ಉದ್ಯೋಗ ನಷ್ಟ, 14 ಗಂಟೆಗಳ ಐಟಿ ಕೆಲಸ:
ಇತ್ತೀಚಿನ ವರ್ಷಗಳಲ್ಲಿ, ಐಟಿ ಉದ್ಯಮವು ತನ್ನ ಕಾರ್ಯಶೈಲಿಯಲ್ಲಿ ತೀವ್ರವಾದ ಬದಲಾವಣೆಯನ್ನು ಕಂಡಿದೆ. ಐಟಿ ಉದ್ಯಮ ಲೋಕದಲ್ಲಿ ಉದ್ಯೋಗಿಗಳಿಗೆ ಕೊಡುವ ವೆಚ್ಚವನ್ನು ಕಡಿಮೆ ಮಾಡಲು ಒತ್ತಡ ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕಂತೆಯೇ ಭಾರತದಲ್ಲಿ 20 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಅನೇಕ ಕಂಪನಿಗಳ ಮಾಲೀಕರು ಐಟಿ ಉದ್ಯೋಗಿಗಳಿಗೆ ಕೆಲಸದ ಅವಧಿಯನ್ನು 14 ಗಂಟೆಗಳಿಗೆ ಹೆಚ್ಚಳ ಮಾಡಲೂ ಮುಂದಾಗಿದ್ದಾರೆ. ಇದಕ್ಕೆ ಕಾರಣ ಭಾರತೀಯ ಐಟಿ ಉದ್ಯಮದ ಇಂಜಿನಿಯರ್‌ಗಳು ಮಾಡಿಕೊಡುವ ಪ್ರಾಜೆಕ್ಟ್‌ಗಳ ವೆಚ್ಚಕ್ಕಿಂತಲೂ ಕಡಿಮೆ ಹಣಕ್ಕೆ ವಿಯೆಟ್ನಾಂ ಮತ್ತು ಫಿಲಿಪೈನ್ಸ್ ದೇಶಗಳ ಇಂಜಿನಿಯರ್‌ಗಳು ಕೆಲಸವನ್ನು ಮಾಡಿಕೊಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಸಾಪ್ಟ್‌ವೇರ್ ಇಂಜಿನಿಯರಿಂಗ್ ಕ್ಷೇತ್ರಕ್ಕೆ ದೊಡ್ಡ ಹೊಡೆತವೇ ಬೀಳುವಂತಹ ಸಾಧ್ಯತೆ ಹೆಚ್ಚಾಗಿದೆ.

Latest Videos
Follow Us:
Download App:
  • android
  • ios