ದಿನಕ್ಕೆ 14 ಗಂಟೆ ಕೆಲಸ: ರಾಜ್ಯ ಸರ್ಕಾರ ಜಾರಿಗೆ ತರಲು ಚಿಂತಿಸಿದ ಹೊಸ ಬಿಲ್‌ಗೆ ಟೆಕ್ಕಿಗಳ ತೀವ್ರ ವಿರೋಧ

ಕರ್ನಾಟಕ ಸರ್ಕಾರವೂ ಐಟಿ ಉದ್ಯೋಗಿಗಳ ದಿನದ ಕೆಲಸದ ಅವಧಿಯನ್ನು 14 ಗಂಟೆಗಳಿಗೆ ಹೆಚ್ಚಿಸುವ ಬಗ್ಗೆ ಕಾನೂನು ತರಲು ಮುಂದಾಗಿದೆ. ಕರ್ನಾಟಕ ರಾಜ್ಯ  ಐಟಿ ಹಾಗೂ ಐಟಿಇಎಸ್‌ ಉದ್ಯೋಗಿಗಳ ಸಂಘವೂ ಈ ವಿಚಾರವನ್ನು ಖಚಿತಪಡಿಸಿದ್ದು, ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. 

14 hours work a day The techies are strongly opposed to the new bill proposed by the Karnataka government akb

ನವದೆಹಲಿ: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ ಮಸೂದೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿರುವ ನಡುವೆ ಈಗ ಕರ್ನಾಟಕ ಸರ್ಕಾರವೂ ಐಟಿ ಉದ್ಯೋಗಿಗಳ ದಿನದ ಕೆಲಸದ ಅವಧಿಯನ್ನು 14 ಗಂಟೆಗಳಿಗೆ ಹೆಚ್ಚಿಸುವ ಬಗ್ಗೆ ಕಾನೂನು ತರಲು ಮುಂದಾಗಿದೆ. ಕರ್ನಾಟಕ ರಾಜ್ಯ  ಐಟಿ ಹಾಗೂ ಐಟಿಇಎಸ್‌ ಉದ್ಯೋಗಿಗಳ ಸಂಘವೂ ಈ ವಿಚಾರವನ್ನು ಖಚಿತಪಡಿಸಿದ್ದು, ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. 

ಕೆಐಟಿಯು ಪ್ರಕಾರ, ದಿನಕ್ಕೆ 14 ಗಂಟೆಗಳ ಕಾಲ ಉದ್ಯೋಗಿಗಳು ಕೆಲಸ ಮಾಡಲು ಅನುಕೂಲವಾಗುವಂತೆ ಕರ್ನಾಟಕದ ಅಂಗಡಿಗಳು ಹಾಗೂ ಕಮರ್ಷಿಯಲ್ ಎಸ್ಟಾಬ್ಲಿಷ್‌ಮೆಂಟ್‌ ಕಾಯ್ದೆಗೆ  ತಿದ್ದುಪಡಿ ತರುವ ಪ್ರಸ್ತಾಪದ ಬಗ್ಗೆ ಅಭಿಪ್ರಾಯ ಕೇಳಲು ಕಾರ್ಮಿಕ ಇಲಾಖೆಯೂ ಉದ್ಯಮದ ವಿವಿಧ ಪಾಲುದಾರರೊಂದಿಗೆ ಕರೆದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತುತಪಡಿಸಿದೆ. ಒಂದು ವೇಳೆ ಇದು ಜಾರಿಗೆ ಬಂದಲ್ಲಿ ವಾರಕ್ಕೆ 70 ಗಂಟೆಗಳ ಕಾಲ  ಐಟಿ ಉದ್ಯೋಗಿಗಳು ಕೆಲಸ ಮಾಡಬೇಕಾಗುತ್ತದೆ. ಅಲ್ಲದೇ ಇದು ಐಟಿ ಸಿಟಿ ಎನಿಸಿರುವ ಬೆಂಗಳೂರಿನ ಮೇಲೆ ಭಾರಿ ದೊಡ್ಡ ಪರಿಣಾಮ ಬೀರಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇದುವರೆಗೆ ಏನು ಹೇಳಿಲ್ಲ.

ವಾರದಲ್ಲಿ 80- 100 ಗಂಟೆ ಕೆಲಸ ಮಾಡ್ತಾರೆ ಈ ಫ್ಲಿಪ್‌ಕಾರ್ಟ್ ಮಾಲೀಕ ಸಚಿನ್ ಬನ್ಸಾಲ್‌

ಈಗ ಚರ್ಚೆಗೆ ಕಾರಣವಾಗಿರುವ ಈ ಉದ್ದೇಶಿತ ಹೊಸ ತಿದ್ದುಪಡಿ ಮಸೂದೆಯೂ (Karnataka Shops and Commercial Establishments (Amendment) Bill 2024) 14 ಗಂಟೆಗಳ ಕೆಲಸದ ಸಮಯವನ್ನು ಸಹಜಗೊಳಿಸಲು ಯತ್ನಿಸುತ್ತಿದೆ. ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆ ಒವರ್‌ಟೈಂ ಸೇರಿಯೂ ಹೆಚ್ಚೆಂದರೆ ದಿನಕ್ಕೆ ಗರಿಷ್ಠ 10 ಗಂಟೆಗಳ ಕೆಲಸದ ಸಮಯಕ್ಕೆ ಮಾತ್ರ ಅನುಮತಿ ನೀಡುತ್ತದೆ. ಆದರೆ ಇದನ್ನು ಹೊಸ ತಿದ್ದುಪಡಿ ಕಾಯ್ದೆಯಿಂದ ಸಂಪೂರ್ಣವಾಗಿ ತೆಗೆಯಲಾಗಿದೆ. ಹಾಗೂ ಇದು ಐಟಿ ಫೀಲ್ಡ್‌ಗಳಲ್ಲಿ ಕೆಲಸ ಮಾಡುವವರ ಕೆಲಸದ ಅವಧಿಯನ್ನು ಅನಿರ್ದಿಷ್ಟವಾಗಿ ವಿಸ್ತರಿಸಲು ಅನುಕೂಲ ಮಾಡಿಕೊಂಡುತ್ತದೆ ಎಂದು ಐಟಿ & ಐಟಿಇಎಸ್‌ ಉದ್ಯೋಗಿಗಳ ಸಂಘವೂ ಹೇಳಿದೆ. 

ಒಂದು ವೇಳೆ ಈ ಕಾಯ್ದೆ ಜಾರಿಗೆ ಬಂದಲ್ಲಿ ಇದು ಈ ಯುಗದಲ್ಲೇ ಕಾರ್ಮಿಕ ವರ್ಗದ ಮೇಲೆ ನಡೆದ ಇದುವರೆಗಿನ ಅತೀ ದೊಡ್ಡ ದಾಳಿ ಆಗಲಿದೆ ಎಂದು ಐಟಿ ಉದ್ಯೋಗಿಗಳ ಸಂಘ ಹೇಳಿದೆ. ಇದರ ಜೊತೆಗೆ ಪ್ರಸ್ತುತ ಅಸ್ತಿತ್ವದಲ್ಲಿರುವ ಮೂರು ಶಿಫ್ಟ್‌ಗಳ ವ್ಯವಸ್ಥೆಯ ಬದಲು ಕೇವಲ ಎರಡು ಶಿಫ್ಟ್‌ಗಳನ್ನು ಮಾತ್ರ ಜಾರಿಗೆ ತರಲು ಇದು ಐಟಿ ಸಂಸ್ಥೆಗಳಿಗೆ ಅವಕಾಶ ನೀಡುತ್ತದೆ ಹಾಗೂ ಹಾಗೆಯೇ 3ನೇ ಒಂದು ಭಾಗದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ  ಎಂದು ಸಂಘವೂ ಹೇಳಿದೆ.

ಕೆಲಸಕ್ಕೆ ಹೋಗುವಾಗ ಕಾರ್ಮಿಕ ಮೃತಪಟ್ಟರೂ ಪರಿಹಾರಕ್ಕೆ ಅರ್ಹ

ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್, ಐಟಿ ಸಂಸ್ಥೆಗಳು ಹಾಗೂ ಬಯೋಟೆಕ್ನಾಲಾಜಿ ಸಂಸ್ಥೆಗಳ ಅಧಿಕಾರಿಗಳು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ ಉದ್ಯೋಗಿಗಳ ಸಂಘದ ಸದಸ್ಯರು ಕೂಡ ಭಾಗಿಯಾಗಿದ್ದು, ಈ ರೀತಿಯ ಸುಧೀರ್ಘ ಅವಧಿಯ ಕೆಲಸದಿಂದ ಐಟಿ ಉದ್ಯೋಗಿಗಳ ಆರೋಗ್ಯದ ಮೇಲೆ ತೀವ್ರ ಪ್ರಭಾವ ಬೀರಲಿಸಿದೆ ಎಂದು ಸಲಹೆ ನೀಡಿದೆ ಎಂದು ಕೆಐಟಿಯು ಹೇಳಿದೆ. 

ಕರ್ನಾಟಕದ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ವರದಿಯ ಪ್ರಕಾರ, ಐಟಿ ಸೆಕ್ಟರ್‌ನಲ್ಲಿ ಕೆಲಸ ಮಾಡುವ ಶೇಕಡಾ 45ರಷ್ಟು ಉದ್ಯೋಗಿಗಳು ಮಾನಸಿಕಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗೆಯೇ ಶೇಕಡಾ 55ರಷ್ಟು ಜನ ದೈಹಿಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರ ಜೊತೆಗೆ ಕೆಲಸದ ಅವಧಿಯನ್ನು ಇನ್ನಷ್ಟು ಮುಂದುವರಿಸಿದಲ್ಲಿ ಇದು ಅವರ ಆರೋಗ್ಯ  ಸ್ಥಿತಿಯನ್ನು ಮತ್ತಷ್ಟು ಬಿಗಾಡಾಯಿಸಲಿದೆ. ಡಬ್ಲ್ಯುಹೆಚ್‌ಒ ಐಎಲ್‌ಒ ಸ್ಟಡಿ ಪ್ರಕಾರ, ಕೆಲಸದ ಅವಧಿ ಹೆಚ್ಚು ಮಾಡುವುದರಿಂದ  ಇದು ಸ್ಟ್ರೋಕ್(ಪಾರ್ಶ್ವವಾಯು) ಹಾಗೂ ಹೃದ್ರೋಗ, ಹೃದಯಾಘಾತದಂತಹ ಸಮಸ್ಯೆಯನ್ನು ಶೇಕಡಾ 35ರಷ್ಟು ಹೆಚ್ಚು ಮಾಡುತ್ತದೆ.

ಕಾರ್ಮಿಕರಿಗೆ 10 ತಾಸು ಕೆಲಸ: ಹೈಕೋರ್ಟ್ ಆಕ್ಷೇಪ

ಹೆಚ್ಚಿದ ಕೆಲಸದ ಸಮಯವು ಕೆಲಸದ ಸ್ಥಳದಲ್ಲಿ ಉತ್ಪಾದಕತೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತು ಹೆಚ್ಚಿನ ದೇಶಗಳು ಯಾವುದೇ ಉದ್ಯೋಗಿಯ ಮೂಲ ಹಕ್ಕನ್ನು ಕಡಿತಗೊಳಿಸದೇ ಅವರ ಹಕ್ಕನ್ನು ಸ್ವೀಕರಿಸುವಂತಹ ಹೊಸ ಕಾನೂನುಗಳೊಂದಿಗೆ ಬರುತ್ತಿರುವ ಬೆನ್ನೆಲ್ಲೇ ಇತ್ತ ರಾಜ್ಯದಲ್ಲಿ ಕೆಲಸದ ಅವಧಿ ವಿಸ್ತರಿಸುವ ಕಾನೂನು ಜಾರಿಗೆ ಬರುತ್ತಿದೆ ಎಂದು ಐಟಿ ಉದ್ಯೋಗಿಗಳ ಯೂನಿಯನ್ ಹೇಳಿದೆ. 

ಅಲ್ಲದೇ ಕರ್ನಾಟಕ ರಾಜ್ಯದ ಐಟಿ ಉದ್ಯೋಗಿಗಳ ಸಂಘವೂ ಈ ವಿಚಾರವಾಗಿ ಮರು ಪರಿಶೀಲನೆ ಮಾಡುವಂತೆ  ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ. ಅಲ್ಲದೇ ಐಟಿ ಉದ್ಯೋಗಿಗಳ ಸಂಘವೂ ಕೂಡ ಐಟಿ ಸೆಕ್ಟರ್‌ನಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳಿಗೆ ಈ ವಿಚಾರವಾಗಿ ಸಂಘಟಿತರಾಗಿ ಒಗ್ಗಟ್ಟಾಗಿ ಮುಂದೆ ಬಂದು ಇದನ್ನು ವಿರೋಧಿಸುವಂತೆ ಸೂಚಿಸಿದೆ. 

Latest Videos
Follow Us:
Download App:
  • android
  • ios