ಹೊಸ ಎಂಜಿನೀಯರ್‌ಗೆ 20,000 ಸಂಬಳವೇ ಹೆಚ್ಚು, ಕಂಪನಿ ನಿರ್ಧಾರ ಸಮರ್ಥಿಸಿದ ಬೆಂಗಳೂರು ಉದ್ಯಮಿ!
ಫ್ರೆಶರ್ ಎಂಜಿನೀಯರ್‌ಗೆ ತಿಂಗಳ ಸ್ಯಾಲರಿ ಕೇವಲ 20,000 ರೂಪಾಯಿ ಎಂದು ಟೆಕ್ ಕಂಪನಿ ಘೋಷಿಸಿದೆ. ಇದು ಭಾರಿ ಟೀಕೆಗೆ ಕಾರಣವಾಗಿದೆ. ಆದರೆ ಫ್ರೆಶರ್ ಎಂಜಿನೀಯರ್‌ಗೆ ತಿಂಗಳಿಗೆ 20 ಸಾವಿರ ಸ್ಯಾಲರಿ ನೀಡಲು ಲಾಯಕ್ಕಿಲ್ಲ ಎಂದು ಬೆಂಗಳೂರು ಉದ್ಯಮಿ ಟೀಕಾಕಾರ ಬಾಯಿ ಮುಚ್ಚಿಸುವಂತೆ ಉತ್ತರ ನೀಡಿದ್ದಾರೆ.
ಬೆಂಗಳೂರು(ಆ.15) ಬೆಂಗಳೂರು ಇತರ ಎಲ್ಲಾ ನಗರಗಳಿಗಿಂತ ಹೆಚ್ಚಿನ ವೇತನ ನೀಡುವ ನಗರ. ಐಟಿ ಸಿಟಿ, ಸಿಲಿಕಾನ್ ಸಿಟಿ ಎಂದೇ ಖ್ಯಾತಿಗೊಂಡಿರುವ ಬೆಂಗಳೂರಿಗೆ ಪ್ರತಿ ದಿನ ಕೆಲಸ ಅರಸಿಕೊಂಡು ಸಾವಿರಾರು ಮಂದಿ ಆಗಮಿಸುತ್ತಾರೆ.ಅದರಲ್ಲೂ ಟೆಕ್ ಕಂಪನಿಗಳು ಲಕ್ಷ ಲಕ್ಷ ರೂಪಾಯಿ ವೇತನ ನೀಡುತ್ತದೆ. ಆದರೆ ಕಾಗ್ನೆಝೆಂಟ್ ಕಂಪನಿ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಿಕೊಳ್ಳುವ ಫ್ರೆಶರ್ ಎಂಜಿನಿಯರ್ಸ್‌ಗೆ ತಿಂಗಳಿಗೆ 20,000 ರೂಪಾಯಿ ವೇತನ ಫಿಕ್ಸ್ ಮಾಡಿದೆ. ಇದು ಟೀಕೆಗೆ ಕಾರಣವಾಗಿದೆ. ಆದರೆ ಈ ಟೀಕೆಗೆ ಬೆಂಗಳೂರು ಉದ್ಯಮಿ ವತ್ಸಲ್ ಸಂಘ್ವಿ ಉತ್ತರ ನೀಡಿದ್ದಾರೆ. ಫ್ರೆಶರ್ ಎಂಜಿನೀಯರ್‌ಗೆ 20,000 ರೂಪಾಯಿ ಸಂಬಳ ಹೆಚ್ಚಾಗಿದೆ ಎಂದಿದ್ದಾರೆ.
ಕಾಗ್ನಝೆಂಟ್ ಕಂಪನಿ ಫ್ರೆಶರ್ ಎಂಜಿನೀಯರ್ಸ್ ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ವೇಳೆ ಆಯ್ಕೆಯಾಗುವ ಫ್ರೆಶರ್ ಎಂಜಿನೀಯರ್‌ಗೆ ವಾರ್ಷಿಕ 2.5 ಲಕ್ಷ ರೂಪಾಯಿ ವೇತನ ಘೋಷಿಸಿದೆ. ಸಾಮಾನ್ಯವಾಗಿ ಫ್ರೆಶರ್ ಎಂಜನಿಯರ್ಸ್ ಕನಿಷ್ಠ ವೇತನ ಇದಕ್ಕಿಂತ ಮೂರು ಪಟ್ಟು ಹೆಚ್ಚಿರುತ್ತದೆ. ಹೀಗಾಗಿ ಈ ನಿರ್ಧಾರ ಟ್ರೋಲ್ ಆಗಿತ್ತು. ಈ ಟೀಕೆ ಬೆನ್ನಲ್ಲೇ ಬೆಂಗಳೂರಿನ ಉದ್ಯಮಿ, 1811 ಲ್ಯಾಬ್ಸ್ ಸಂಸ್ಥಾಪಕ ವತ್ಸಲ್ ಸಂಘ್ವಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
AI ಅಲ್ಲ, ಅದಕ್ಕೂ ಮೀರಿದ ತಂತ್ರಜ್ಞಾನ ಬಂದರೂ.., ಈ 10 ಕ್ಷೇತ್ರಗಳ ಮಾನವರ ಕೆಲಸ ಕಿತ್ತುಕೊಳ್ಳಲಾಗಲ್ಲ!
ಹೊಸ ಎಂಜಿನೀಯರ್ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಅವರು ತಿಂಗಳಿಗೆ 20,000 ರೂಪಾಯಿ ಪಡೆಯಲು ಅರ್ಹರಲ್ಲ. ಫ್ರೆಶರ್ ಆಗಿ ಆಯ್ಕೆಯಾಗಿ ಬರವು ಎಂಜಿನೀಯರ್ಸ್‌ಗೆ ಕೋಡಿಂಗ್ ಮಾಡಲು ಬರುವುದಿಲ್ಲ, ವೃತ್ತಿಪರವಾಗಿ ಸಂವಹನ ನಡೆಸಲು ತಿಳಿದಿಲ್ಲ. ಹೆಚ್ಚಿನವರಿಗೆ ವೃತ್ತಿಪರವಾಗಿ ಹೇಗಿರಬೇಕು ಅನ್ನೋದೇ ತಿಳಿದಿಲ್ಲ. ಇದು ತರಬೇತಿ ವೇಳೆ ನೀಡುವ ವೇತನ. ಅತ್ಯಂತ ಕಡಿಮೆ ಸಂಬಳ ಎಂದೆನಿಸಿದರೆ ಈ ಕಂಪನಿಯ ಕೆಲಸಕ್ಕೆ ಅರ್ಜಿ ಹಾಕಬೇಡಿ. ಮುಕ್ತ ಮಾರುಕಟ್ಟೆ ಹೊಂದಿರುವ ಭಾರತದಲ್ಲಿ ಎಂಜಿನಿಯರ್ಸ್‌ಗೆ ವಿಫುಲ ಅಕಾಶಗಳಿವೆ. ಈ ಕಂಪನಿಗಳು ನಿಜವಾದ ಪ್ರತಿಭೆಗಳಿಗೆ ಅವಕಾಶ ನೀಡಿ ಅವರನ್ನು ಬೆಳೆಸುತ್ತದೆ ಎಂದು ವತ್ಸಲ್ ಸಂಘ್ವಿ ಹೇಳಿದ್ದಾರೆ.
ವತ್ಸಲ್ ಸಂಘ್ವಿ ಮಾತಿಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಫ್ರೆಶರ್ ಎಂಜಿನೀಯರ್ ಗುಣಮಟ್ಟ ಕಳಪೆಯಾಗಿದೆ ಎಂದರೆ, ಕಾಲೇಜಿನಲ್ಲೇ ಈ ಎಂಜಿನೀಯರ್ಸ್‌ಗೆ ತರಬೇತಿ ನೀಡುವ ಕಾರ್ಯ ಯಾಕೆ ಮಾಡಬಾರದು. ವಾರಕ್ಕೆ ಇಷ್ಟು ದಿನ ತರಗತಿ ತೆಗೆದುಕೊಂಡು ಅವರ ಪ್ರತಿಭೆ, ಕೌಶಲ್ಯ ವೃದ್ಧಿಸುವ ಕೆಲಸ ಯಾಕೆ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ. ಈಗ ಎಲ್ಲಾ ಕೆಲಸಗಳ ಕನಿಷ್ಠ ವೇತನ 30 ಸಾವಿರ ಮೇಲಿದೆ. ಕೇವಲ 20 ಸಾವಿರ ಮಾಸಿಕ ವೇತನ ಪಡೆಯಲು ಲಕ್ಷ ಲಕ್ಷ ಕೊಟ್ಟು ಎಂಜಿನೀಯರಿಂಗ್ ಮಾಡಬೇಕಾ ಎಂದು ಹಲವರು ಪ್ರಶ್ನಿಸಿದ್ದಾರೆ.
ಜಾಬ್ ಕಟ್ ನಡುವೆ ಭಾರತದಲ್ಲಿ 20 ಸಾವಿರ ಉದ್ಯೋಗಿಗಳ ನೇಮಕ ಘೋಷಿಸಿದ ಟೆಕ್ ದೈತ್ಯ ಒರಾಕಲ್!