ನವದೆಹಲಿ(ನ.23): ಕುತಂತ್ರ ಬುದ್ಧಿಗೆ ಹೆಸರಾಗಿರುವ ಚೀನಾ ಮಾತುಕತೆ ಎನ್ನುತ್ತಲೇ ಯಾವಾಗ ಬೇಕಾದರೂ ದಾಳಿ ಮಾಡಬಹುದು ಎಂಬುದನ್ನು ಚೆನ್ನಾಗಿ ಅರಿತಿರುವ ಭಾರತ, ದಶಕಗಳ ಹಿಂದೆ ಚೀನಾ ಬಳಸಿದ್ದ ‘ಸುರಂಗ ತಂತ್ರಗಾರಿಕೆ’ಯನ್ನೇ ಪೂರ್ವ ಲಡಾಖ್‌ ಗಡಿಯಲ್ಲಿ ಜಾರಿಗೆ ತಂದು ಎದುರಾಳಿ ದೇಶವನ್ನು ಚಕಿತಗೊಳಿಸಿದೆ.

ಟಿಬೆಟ್‌ ಚೀನಾ ಸೇನೆ ಆಕ್ರಮಿತ ಪ್ರದೇಶ: ವರದಿಯಲ್ಲಿ ಡ್ರ್ಯಾಗನ್ ಕಿರುಕುಳದ ಬಗ್ಗೆ ಅನಾವರಣ!

ಗಡಿಯಲ್ಲಿ ಬೃಹತ್‌ ಗಾತ್ರದ ಸುರಂಗ ಕೊರೆದು ಕಾಂಕ್ರಿಟ್‌ ಪೈಪುಗಳನ್ನು ಭಾರತ ಅಳವಡಿಸಿದೆ. ಅದರಲ್ಲಿ ಯೋಧರನ್ನು ಅಡಗಿಸಿಡಬಹುದು. ಒಂದು ವೇಳೆ ಚೀನಾ ಏನಾದರೂ ಏಕಾಏಕಿ ದಾಳಿ ಮಾಡಿದರೆ ಸುರಂಗದೊಳಗಿರುವ ಯೋಧರಿಗೆ ಏನೂ ಆಗುವುದಿಲ್ಲ. ಪ್ರತಿಕೂಲ ಸಂದರ್ಭದಲ್ಲಿ ಈ ಸುರಂಗದಿಂದ ಯೋಧರು ಪುಟಿದೆದ್ದು ಚೀನಾಕ್ಕೆ ಅಚ್ಚರಿ ನೀಡಬಹುದು.

ಈ ಕೊಳವೆ ಮಾರ್ಗ 6ರಿಂದ 8 ಅಡಿ ಸುತ್ತಳತೆ ಹೊಂದಿದ್ದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಶತ್ರುವಿನ ಕಣ್ಣಿಗೆ ಕಾಣದಂತೆ ಯೋಧರನ್ನು ಸುಲಭವಾಗಿ ರವಾನಿಸಲೂ ಬಳಕೆಯಾಗಲಿದೆ. ಜತೆಗೆ ಉಷ್ಣತೆಯಿಂದ ರಕ್ಷಣೆ ಹೊಂದಿರುವ ಕಾರಣ ಮೈನಸ್‌ ಡಿಗ್ರಿಯ ಚಳಿ, ಹಿಮಪಾತದಿಂದಲೂ ಯೋಧರಿಗೆ ರಕ್ಷಣೆ ದೊರೆಯಲಿದೆ.

ಮುಂಬೈ ಸ್ತಬ್ಧಗೊಳಿಸಿದ್ದ ವಿದ್ಯುತ್‌ ಕಡಿತಕ್ಕೆ ಸೈಬರ್‌ ದಾಳಿ ಕಾರಣ?

ಅಂದಹಾಗೆ, 1940ರ ದಶಕದಲ್ಲಿ ಜಪಾನ್‌- ಚೀನಾ ನಡುವೆ ನಡೆದಿದ್ದ 2ನೇ ಯುದ್ಧದ ವೇಳೆ ಚೀನಾ ಬಳಸಿದ್ದ ತಂತ್ರಗಾರಿಕೆ ಇದು. ಲ್ಹಾಸಾ ವಾಯುನೆಲೆಯಲ್ಲಿ ವಿಮಾನಗಳನ್ನು ಅಡಗಿಸಿಡಲು ಬೃಹತ್‌ ಸುರಂಗಗಳನ್ನು ಚೀನಾ ತೋಡಿತ್ತು. ಅಲ್ಲದೆ ಸಮುದ್ರದಾಳದಲ್ಲಿ ಸಬ್‌ಮರೀನ್‌ ರಹಸ್ಯ ಅಡಗುತಾಣಗಳನ್ನು ನಿರ್ಮಿಸಿ ಅಣ್ವಸ್ತ್ರಗಳನ್ನು ಅಡಗಿಸಿಟ್ಟಿತ್ತು.

ಚೀನಾದ ಈ ರಹಸ್ಯ ಸುರಂಗ ತಂತ್ರವನ್ನು ಅಮೆರಿಕ ವಿರುದ್ಧದ ಸಮರದಲ್ಲಿ ವಿಯೆಟ್ನಾಂ, ಕೊರಿಯಾ ಯುದ್ಧದ ವೇಳೆ ಉತ್ತರ ಕೊರಿಯಾ ಬಳಕೆ ಮಾಡಿದ್ದವು.