Asianet Suvarna News Asianet Suvarna News

OIC Meet ಪಾಕ್‌ ಇಸ್ಲಾಮಿಕ್ ಸಹಕಾರ ಸಂಘಟನೆ ಸಭೆಗೆ ಹುರಿಯತ್ ನಾಯಕರ ಆಹ್ವಾನ ಖಂಡಿಸಿದ ಭಾರತ!

  • ಪಾಕಿಸ್ತಾನದಲ್ಲಿ ನಡೆಯಲಿದೆ ಇಸ್ಲಾಮಿಕ್ ಸಹಾಕಾರ ಸಂಘಟನೆ ಸಭೆ
  • ವಿದೇಶಾಂಗ ವ್ಯವಾಹರ ಸಭೆಗೆ ಕಾಶ್ಮೀರದಲ್ಲಿ ರಕ್ತಪಾತ ನಡೆಸಿದ  ಹುರಿಯತ್‌ಗೆ ಆಹ್ವಾನ
  • ಹುರಿಯತ್ ನಾಯಕರ ಆಹ್ವಾನಕ್ಕೆ ಭಾರತ ಖಂಡನೆ, ಭಾರತದ ಸೌರ್ವಭೌಮತೆಗೆ ಧಕ್ಕೆ
India slams Islamic body OIC on Kashmir Hits out over invite to Hurriyat leader for Islamabad meet ckm
Author
Bengaluru, First Published Mar 18, 2022, 3:33 PM IST

ನವದೆಹಲಿ(ಮಾ.18): ಭಾರದಲ್ಲಿ ಹುರಿಯತ್ ಸಂಘಟನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಶ್ಮೀರದಲ್ಲಿನ ಹಿಂದೂ ಹತ್ಯಾಕಾಂಡದ ಹಿಂದೆ, ಕಣಿವೆ ರಾಜ್ಯದಲ್ಲಿನ ಭಯೋತ್ಪಾದನೆ ಹಿಂದೆ ಈ ಹುರಿಯತ್ ನಾಯಕರ ಕೈವಾಡವಿದೆ ಅನ್ನೋ ಆರೋಪ ಇಂದು ನಿನ್ನೆಯದಲ್ಲ. ಆದರೆ ದಿ ಕಾಶ್ಮೀರಿ ಫೈಲ್ಸ್ ಚಿತ್ರದ ಬಳಿಕ ಈ ಆರೋಪ ಬಲವಾಗಿದೆ. ಆಕ್ರೋಶ ಹೆಚ್ಚಾಗಿದೆ. ಇದರ ನಡುವೆ ಪಾಕಿಸ್ತಾನದಲ್ಲಿ ನಡೆಯಲಿರುವ ಇಸ್ಲಾಮಿಕ್ ಸಹಕಾರ ಸಂಘಟನೆಯ ವಿದೇಶಾಂಗ ವ್ಯವಾಹರ ಸಚಿವರ ಸಭೆಗೆ ಇದೇ ಹುರಿಯತ್ ನಾಯಕರನ್ನು ಆಹ್ವಾನಿಸಲಾಗಿದೆ. ಈ ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ.

ಹುರಿಯತ್ ಸಂಘಟನೆ ಭಾರತದಲ್ಲಿ ಭಯೋತ್ಪಾದನೆ ಹಾಗೂ ದೇಶ ವಿರೋಧಿ ಚಟುವಟಿಕೆಯಲ್ಲಿ ಸಕ್ರಿಯವಾಗಿದೆ. ಈ ಸಂಘನೆ ನಾಯಕರನ್ನು ಇಸ್ಲಾಮಿಕ್ ವಿದೇಶಾಂಗ ವ್ಯವಾಹರ ಸಚಿವರ ಸಭೆ ಆಹ್ವಾನಿಸಿರುವುದು ಅತೀ ದೊಡ್ಡ ತಪ್ಪು. ಭಾರತದ ಏಕತೆಗೆ ಧಕ್ಕೆ ತರುವ, ಸೌರ್ವಭೌಮತೆಗೆ, ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುವ ಇಂತಹ ನಡೆಗಳನ್ನು ಭಾರತ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಭಗ್ಚಿ ಹೇಳಿದ್ದಾರೆ.

ಲೆಫ್ಟಿನೆಂಟ್‌ ಜನರಲ್ ಕಂಡಂತೆ ಕಾಶ್ಮೀರ, ಪ್ರತ್ಯೇಕತಾವಾದಿ ಮತ್ತು ರಾಜಕೀಯ ಗೀಲಾನಿಯ ಪುರಾಣ!

ಇಸ್ಲಾಮಿಕ್ ಸಹಾಕಾರ ಸಂಘಟನೆ ಕಾಶ್ಮೀರದಲ್ಲಿ ರಕ್ತಪಾತ ನಡೆಸುತ್ತಿರುವ ಹುರಿಯತ್ ನಾಯಕ ಮಿರ್ವೈಝ್ ಒಮರ್ ಫಾರೂಖ್‌ಗೆ ಆಹ್ವಾ ನೀಡಿದೆ. ಭಾರತದಲ್ಲಿ ಇಸ್ಲಾಂ ಮೇಲೆ ಸತತ ಆಕ್ರಮಣಗಳು ನಡೆಯುತ್ತಿದೆ. ಮುಸ್ಲಿಮರು ಮುಕ್ತವಾಗಿ ಬದುಕುವುದುಕ್ಕೆ ಸಾದ್ಯವಾಗುತ್ತಿಲ್ಲ. ಇದಕ್ಕೆ ಮುಕ್ತಿ ಹಾಗೂ ಪರಿಹಾರ ಕುರಿತು ಚರ್ಚಿಸಲು ಹುರಿಯತ್ ನಾಯಕರನ್ನು ಸಭೆಗೆ ಆಹ್ವಾನಿಸಲಾಗಿದೆ. 

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಮಾರ್ಚ್ 23 ಹಾಗೂ 24 ರಂದು ಇಸ್ಲಾಮಿಕ್ ಸಹಕಾರ ಸಂಘಟನೆಯ ಸಭೆ ನಡೆಯಲಿದೆ. ಈ ಸಭೆಗೆ ಕಾಶ್ಮೀರದ ಪ್ರತ್ಯೇಕತಾವಾದಿ ಹುರಿಯತ್‌ ಕಾನ್ಫರೆನ್ಸನ್ನು ಆರ್ಗನೈಸೇಶನ್‌ ಆಫ್‌ ಇಸ್ಲಾಮಿಕ್‌ ಕಾರ್ಪೋರೇಶನ್‌ (ಒಐಸಿ) ಸಂಘಟನೆ ಆಹ್ವಾನಿಸಿದೆ. ಈ ನಡೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಗೃಹ ಬಂಧನದಲ್ಲಿರುವ ಮಿರ್‌ವೈಜ್ ಬಿಡುಗಡೆ ಯಾವಾಗ? ಹುರಿಯತ್ ಅಸಮಾಧಾನ?

ಒಐಸಿ ಅಭಿವೃದ್ಧಿ ಚಟುವಟಿಕೆಗಳ ಬದಲಿಗೆ ರಾಜಕೀಯ ಅಜೆಂಡಾ ಹೊಂದಿರುವ ಏಕ ವ್ಯಕ್ತಿಯ ಕಾರ‍್ಯಸೂಚಿಯಿಂದ ಮಾರ್ಗದರ್ಶನ ಪಡೆಯುತ್ತಿರುವುದು ದುದೃಷ್ಟಕರ ಎಂದು ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

ಗಿಲಾನಿ ಉತ್ತರಾಧಿಕಾರಿ ಪಟ್ಟ‘ಉಗ್ರ’ ಮಸರತ್‌ಗೆ
ಭಯೋತ್ಪಾದಕ ಸಂಘಟನೆಗಳಿಗೆ ಧನಸಹಾಯ ಕೇಸ್‌ನಲ್ಲಿ ತಿಹಾರ್‌ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಸರತ್‌ ಅಲಂ ಭಟ್‌ ಅವರನ್ನು ಹುರಿಯತ್‌ ಕಾನ್ಫರೆನ್ಸ್‌ ಅಧ್ಯಕ್ಷರನ್ನಾಗಿ  ಆಯ್ಕೆ ಮಾಡಲಾಗಿದೆ. ಹುರಿಯತ್‌ ಕಾನ್ಫರೆನ್ಸ್‌ ನಾಯಕ ಸಯ್ಯದ್‌ ಅಲಿ ಶಾ ಗಿಲಾನಿ ನಿಧನದಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಅವರ ಸ್ಥಾನಕ್ಕೆ ಇದೀಗ ಮಸರತ್‌ ಅಲಂ ಭಟ್‌ ಅವರನ್ನು ಹಾಗೂ ಶಬೀರ್‌ ಅಹ್ಮದ್‌ ಶಾ ಮತ್ತು ಗುಲಾಂ ಅಹ್ಮದ್‌ ಗುಲ್ಜಾರ್‌ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹುರಿಯತ್‌ ಕಾನ್ಫರೆನ್ಸ್‌ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದೆ.

ಹುರಿಯತ್‌ ನಾಯಕನ ಉಗ್ರ ಪುತ್ರ ಕಾಶ್ಮೀರದಲ್ಲಿ ಎನ್‌ಕೌಂಟರ್‌ಗೆ ಬಲಿ
ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಭದ್ರತಾ ಪಡೆಗಳು 15 ತಾಸು ಗುಂಡಿನ ಚಕಮಕಿ ನಡೆಸಿ, ಹಿಜ್ಬುಲ್‌ ಮುಜಾಹಿದೀನ್‌ ಉಗ್ರಗಾಮಿ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಮಂಗಳವಾರ ಹೊಡೆದುರುಳಿಸಿವೆ. ಮೃತರಲ್ಲಿ ಒಬ್ಬ ಉಗ್ರನನ್ನು ಜುನೈದ್‌ ಅಶ್ರಫ್‌ ಖಾನ್‌ ಎಂದು ಗುರುತಿಸಲಾಗಿದೆ. ಈತ ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆಗಳ ಒಕ್ಕೂಟವಾಗಿರುವ ತೆಹ್ರೀಕ್‌ ಎ ಹುರಿಯತ್‌ ಸಂಘಟನೆಯ ಮುಖ್ಯಸ್ಥ ಅಶ್ರಫ್‌ ಸೆಹರಾಯಿ ಪುತ್ರ ಎಂಬುದು ಸಂಚಲನಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಹುರಿಯತ್‌ ನಾಯಕರು ಭಯೋತ್ಪಾದಕರ ಜತೆ ನಂಟು ಹೊಂದಿದ್ದರೂ, ಉಗ್ರವಾದಕ್ಕೆ ಕುಮ್ಮಕ್ಕು ನೀಡಿದರೂ ಅವರ ಮಕ್ಕಳು ಹಾಗೂ ಬಂಧುಗಳು ಭಯೋತ್ಪಾದಕರಾಗಿರುವುದಿಲ್ಲ. ಸರ್ಕಾರಿ ಹುದ್ದೆಗಳಲ್ಲಿ ಅಥವಾ ವಿದೇಶಗಳಲ್ಲಿ ನೆಲೆಯೂರಿರುತ್ತಾರೆ. ಪ್ರತ್ಯೇಕತಾವಾದಿ ಸಂಘಟನೆಯ ನಾಯಕನೊಬ್ಬನ ಮಗ ಉಗ್ರನಾಗಿರುವ ಮೊದಲ ಪ್ರಕರಣ ಇದಾಗಿದ್ದು, ಆತನನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.

Follow Us:
Download App:
  • android
  • ios