ಗೃಹ ಬಂಧನದಲ್ಲಿರುವ ಮಿರ್‌ವೈಜ್ ಬಿಡುಗಡೆ ಯಾವಾಗ? ಹುರಿಯತ್ ಅಸಮಾಧಾನ?

ಪ್ರತ್ಯೇಕವಾದಿಗಳ ಪ್ರತಿಭಟನೆ ತಡೆಯಲು ಹುರಿಯತ್ ಸಂಘಟನೆ ಅಧ್ಯಕ್ಷ ಮಿರ್‌ವೈಜ್ ಉಮರ್ ಫಾರೂಖ್ ಕಳೆದ 20 ತಿಂಗಳಿನಿಂದ ಗೃಹ ಬಂಧನದಲ್ಲಿದ್ದಾರೆ. ಇದೀಗ ಹುರಿಯತ್ ಕೇಂದ್ರದ ವಿರುದ್ದ ಅಸಮಾಧಾನ ಹೊರಹಾಕಿದೆ. ರಂಜಾನ್ ಹಬ್ಬ ಬಂದರೂ ಬಿಡುಗಡೆ ಯಾಕಿಲ್ಲ ಎಂದು ಪ್ರಶ್ನಿಸಿದೆ.

Huriyat ask center govt to release leader Mirwaiz Umar Farooq in the month of Ramzan ckm

ಜಮ್ಮು ಮತ್ತು ಕಾಶ್ಮೀರ(ಏ.16):  ರಂಜಾನ್ ಹಬ್ಬಕ್ಕೆ ಹುರಿಯತ್ ಸಂಘಟನೆ ಅಧ್ಯಕ್ಷ ಮಿರ್‌ವೈಜ್ ಉಮರ್ ಫಾರೂಖ್ ಬಿಡುಗಡೆ ಆಗ್ರಹಿಸಿ ಹುರಿಯತ್ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದೆ. ಕಳೆದ 20 ತಿಂಗಳಿನಿಂದ ಬಂಧನದಲ್ಲಿರುವ ಮಿರ್‌ವೈಜ್ ಬಿಡುಗಡೆ ಯಾವಾಗ ಎಂದು ಕೇಂದ್ರವನ್ನು ಪ್ರಶ್ನಿಸಿದ್ದಾರೆ.

18 ತಿಂಗಳ ಬಳಿಕ ಜಮ್ಮು-ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಆರಂಭ!...

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವಾಗ(ಆರ್ಟಿಕಲ್ 370) ಯಾವುದೇ ಹಿಂಸಾಚಾರಕ್ಕೆ ಆಸ್ಪದ ನೀಡದಿರಲು ಪ್ರತ್ಯೇಕವಾದಿ ಸಂಘಟನೆ ನಾಯಕರನ್ನು ಗೃಹ ಬಂಧನದಲ್ಲಿಡಲಾಗಿದೆ. ಆಗಸ್ಟ್ 4,2019ರಂದು ಹುರಿಯತ್ ನಾಯಕ ಮಿರ್‌ವೈಜ್ ಉಮರ್ ಫಾರೂಖ್‌ನ್ನು ಗೃಹ ಬಂಧನದಲ್ಲಿಡಲಾಯಿತು. 

ಹುರಿಯತ್ ನಾಯಕನ ಬಂಧನ ಕಾಶ್ಮೀರ ಮುಸ್ಲಿಂ ಸಮುದಾಯಕ್ಕೆ ತೀವ್ರ ನೋವು ತಂದಿದೆ. ಇದೀಗ ಮೊದಲ ಶುಕ್ರವಾರ ರಂಜಾನ್ ಹಬ್ಬ ಆರಂಭಗೊಳ್ಳುತ್ತಿರುವುದು ವಿಶೇಷವಾಗಿದೆ. ಆದರೆ ಮಿರ್‌ವೈಜ್ ಕಳೆದ 20 ತಿಂಗಳಿನಿಂದ ಗೃಹ ಬಂಧನದಲ್ಲಿಟ್ಟಿರುವುದು ದುರದೃಷ್ಟಕರ ಎಂದು ಹುರಿಯತ್ ಕಾಶ್ಮೀರ ಪ್ರತ್ಯೇಕವಾದಿ ಸಂಘಟನೆ ಹೇಳಿದೆ.

ಮಿರ್ವೈಜ್ ಪ್ರಮುಖ ಧಾರ್ಮಿಕ ಮುಖಂಡರಾಗಿದ್ದಾರೆ. ಶ್ರೀನಗರದಲ್ಲಿನ ಜಾಮಿಯಾ ಮಸೀದಿಯಲ್ಲಿ ಪವಿತ್ರ ರಂಜಾನ್ ತಿಂಗಳು  ಧರ್ಮೋಪದೇಶ ಮತ್ತು ಉಪದೇಶಗಳನ್ನು ನೀಡುತ್ತಾರೆ. ಆದರೆ ಕಳೆದ 20 ತಿಂಗಳಿನಿಂದ ಗೃಹ ಬಂಧನದಲ್ಲಿಟ್ಟುಕೊಂಡಿರುವುದು ತಪ್ಪು ಎಂದು ಹುರಿಯತ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios