Asianet Suvarna News Asianet Suvarna News

ಲೆಫ್ಟಿನೆಂಟ್‌ ಜನರಲ್ ಕಂಡಂತೆ ಕಾಶ್ಮೀರ, ಪ್ರತ್ಯೇಕತಾವಾದಿ ಮತ್ತು ರಾಜಕೀಯ ಗೀಲಾನಿಯ ಪುರಾಣ!

* ಕಣಿವೆನಾಡಿನ ಪ್ರತ್ಯೇಕತಾವಾದಿ ನಾಯಕ ಗೀಲಾನಿ ವಿಧಿವಶ

* ಪ್ರತ್ಯೇಕತಾವಾದಿ ಚಳುವಳಿಯನ್ನು ಆರಂಭದಿಂದ ಮುನ್ನಡೆಸಿದ್ದ ಗೀಲಾನಿ

* ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಸಂಘಟನೆ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಗೀಲಾನಿ ಅನುಪಸ್ಥಿತಿ?

Geelani rabble rousing and pragmatism An Army general's account Lt Gen Syed Ata Hasnain pod
Author
Bangalore, First Published Sep 4, 2021, 6:34 PM IST

ಲೇಖಕರು: ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೈನ್ (ನಿವೃತ್ತ)
ಶ್ರೀನಗರ: 15 ಕಾರ್ಪ್ಸ್ ಮಾಜಿ ಕಮಾಂಡರ್ ಮತ್ತು ಕಾಶ್ಮೀರದ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ.

ಶ್ರೀನಗರ(ಸೆ.04): ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕತಾವಾದಿ ಚಳುವಳಿಯನ್ನು ಆರಂಭದಿಂದ ಮುನ್ನಡೆಸಿ, ಮಾರ್ಗದರ್ಶನ ನೀಡಿದ 91 ವರ್ಷದ ನಾಯಕ ಸೈಯದ್ ಅಲಿ ಶಾ ಗೀಲಾನಿ ನಿಧನರಾಗಿದ್ದಾರೆ. 2021 ಸೆಪ್ಟೆಂಬರ್ 1ರಂದು ಗೀಲಾನಿ ಮೃತಪಟ್ಟಿದ್ದರೂ, ಅವರ ಅನುಪಸ್ಥಿತಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಸಂಘಟನೆ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದೆಂಬ ಚರ್ಚೆ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿವೆ.

ಅವರು ಹುರಿಯತ್‌ನ ಅಧ್ಯಕ್ಷರಾಗಿರದಿದ್ದರೂ, ಸುಮಾರು 15 ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರೂ, ಅವರ ನಿಧನದಿಂದ ಪ್ರತ್ಯೇಕತಾವಾದಿಗಳ ಭಾವನೆಯನ್ನು ಕೆರಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬ ಅನುಮಾನವಿತ್ತು. ಹೀಗಾಗೇ ಅವರ ಅಂತಿಮ ಕ್ರಿಯೆಗಳನ್ನೆಲ್ಲಾ ರಾಜ್ಯದ ಭದ್ರತೆಯಡಿ ನಿರ್ವಹಿಸಲಾಯಿತು. ಅವರ ಇಚ್ಛೆಗೆ ವಿರುದ್ಧವಾಗಿ ಹುತಾತ್ಮರ ಸ್ಮಶಾನದಲ್ಲಿ ಅಂತ್ಯತಕ್ರಿಯೆ ನಡೆಸದೆ, ರಹಸ್ಯವಾಗಿ ಧಫನ್ ನಡೆಸಲಾಯಿತು. ಅಲ್ಲದೇ ಸಾಮೂಹಿಕ ಭಾವನೆ ವಿನಿಮಯಗೊಂಡು  ಜನರು ದಂಗೆ ಏಳದಿರಲಿ ಎಂದು ಅತ್ತ ಇಂಟರ್‌ನೆಟ್‌ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೂ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚು ಸುಧಾರಿತ ಮತ್ತು ಸ್ಥಿರಗೊಂಡ ಭದ್ರತಾ ವಾತಾವರಣದಲ್ಲಿಯೂ ಸಹ ಕೆಲ ಅಸಮಾಧಾನಕರ ಘಟನೆಗಳು, ಹಿಂಸಾಚಾರ ನಡೆಯುವ ಸಾಧ್ಯತೆಗಳಿತ್ತೆನ್ನಲಾಗಿದೆ. 

ಅಫ್ಘಾನಿಸ್ತಾನ: ರಾಷ್ಟ್ರವೊಂದರ ಅಸ್ಥಿರತೆ, ಇಡೀ ವಿಶ್ವದ ಮೇಲೆ ಪ್ರಭಾವ!

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಭೇಟಿಯಾಗುವ ಅವಕಾಶ

ಹುರಿಯತ್ ಸಮ್ಮೇಳನದ ಸ್ಥಾಪಕ ಸದಸ್ಯರಾಗಿ ಗೀಲಾನಿಯವರ ಕಾರ್ಯಗಳನ್ನು ನೆನಪಿಸಿಕೊಳ್ಳುವುದು ಸೂಕ್ತ. ಆದರೆ 2004 ರಲ್ಲಿ ಇದರಿಂದ ಬೇರ್ಪಟ್ಟ ಗೀಲಾನಿ ತಮ್ಮದೇ ತೆಹ್ರೀಕ್-ಇ-ಹುರಿಯತ್ ಎಂಬ ಸಂಘಟನೆ ರಚಿಸಿದರು. ಭಾರತೀಯ ಸಂಘಟನೆಗಳೊಂದಿಗೆ ಯಾವುದೇ ಮಾತುಕತೆಗೆ ಪ್ರಯತ್ನಿಸದ ಅವರು ಪಾಕಿಸ್ತಾನದ ಪರವಾದ ಆಮೂಲಾಗ್ರವಾದ ಮನೋಭಾವವನ್ನು ಹೊಂದಿದ್ದರು. 1987 ರಲ್ಲಿ ಮುಸ್ಲಿಂ ಯುನೈಟೆಡ್ ಫ್ರಂಟ್ ಬ್ಯಾನರ್‌ನಡಿ ಚುನಾವಣೆಗೆ ನಿಂತವರಲ್ಲಿ ಗೀಲಾನಿ ಕೂಡಾ ಒಬ್ಬರು, ಆದರೆ 1987 ರಲ್ಲಿ ಕಾಶ್ಮೀರದಲ್ಲಿ ಸಂಭವಿಸಿದ ಉಗ್ರಗಾಮಿ ಸ್ಫೋಟದ ಬಳಿಕ ಅವರ ಅವಧಿಯೂ ಕೊನೆಯಾಯಿತು. 

ಸೋಪೋರ್ ಪ್ರದೇಶದವರಾಗಿದ್ದ ಗೀಲಾನಿ, ತಮ್ಮ ರಾಜಕೀಯ ವೃತ್ತಿ ಬದುಕಿನ ಹೆಚ್ಚಿನ ಅವಧಿಯಲ್ಲಿ ಜಮಾತ್-ಎ-ಇಸ್ಲಾಮೀ ಕಾಶ್ಮೀರ (ಜೆಐ-ಕೆ)ನ ಪ್ರಬಲ ಬೆಂಬಲಿಗರಾಗಿದ್ದರು.

ವೈಯಕ್ತಿಕವಾಗಿ ನೋಡುವುದಾದರೆ, ಕಾಶ್ಮೀರದಲ್ಲಿ ನನ್ನ ಸುದೀರ್ಘ ವರ್ಷಗಳ ಸೇವೆ ಸಲ್ಲಿಸದ್ದರೂ, ಗೀಲಾನಿಯನ್ನು ಭೇಟಿಯಾಗಲು ನನಗೆ ಸಿಕ್ಕಿದ್ದು ಕೇವಲ ಒಂದೇ ಅವಕಾಶ. ಅದು ಶ್ರೀನಗರ ವಿಮಾನ ನಿಲ್ದಾಣದಲ್ಲಿ. ಇಲ್ಲಿ ನಾವು ಔಪಚಾರಿಕವಾಗಿ ಭೇಟಿಯಾಗಿದ್ದೆವು. ಹೀಗಿದ್ದರೂ ಇಬ್ಬರ ಮನಸ್ಸಿನಲ್ಲಿ, ಪರಸ್ಪರರ ವಿರುದದ್ಧ ಚೆನ್ನಾಗಿ ತಿಳಿದುಕೊಂಡಿದ್ದೆವು. 

ಅಪ್ಘಾನಿಸ್ತಾನದಲ್ಲಿ ತಾಲಿಬಾನಿಯರ ಅಟ್ಟಹಾಸ, ಅಮೆರಿಕದ ಸೇನೆ ಸೋತಿದ್ದೇಕೆ?

ಒಂದು ಟರ್ನಿಂಗ್ ಪಾಯಿಂಟ್

ಕೊನೆಯ ಕ್ಷಣದಲ್ಲಿ, ಅವರು ಹುರಿಯತ್ ಬಣ ಜೊತೆಗಿನ ತಮ್ಮ ಭೇಟಿಯನ್ನು ರದ್ದುಗೊಳಿಸಿದರು. ನಾನು 2007 ರಲ್ಲಿ ಡಾಗರ್ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಆಗಿ ಮರಳಿದೆ. 2008 ರ ಏಪ್ರಿಲ್ 24ರವರೆಗೆ ಎಲ್ಲರೂ ಸುಮ್ಮನಿದ್ದರು ಮತ್ತು ಪರಿಸ್ಥಿತಿ ಸಾಮಾನ್ಯವಾಗಿತ್ತು. ಸ್ಥಳೀಯ ಐಕಾನ್‌ಗಳಾಗಿ ಗುರುತಿಸಿಕೊಂಡಿದ್ದ ಹಾಗೂ ಕುಖ್ಯಾತ ಇಬ್ಬರು ಉಗ್ರರನ್ನು ನಮ್ಮ ಪಡೆ ಪಟ್ಟಣದಲ್ಲಿ ಎನ್‌ಕೌಂಟರ್‌ ಮಾಡಿತ್ತು. ತನ್ವೀರ್ ಅಹ್ಮದ್ ಮತ್ತು ಇಮ್ತಿಯಾಜ್‌ ಇಬ್ಬರೂ ತಮ್ಮ ಅಂತ್ಯಕ್ರಿಯೆಯ ಪ್ರಾರ್ಥನೆಯ ನೇತೃತ್ವ ಗೀಲಾನಿಯೇ ವಹಿಸಬೇಕೆಂದು ಬಯಸಿದ್ದರು. ಇದಕ್ಕಾಗಿ ಅವರು ಬಂದಿದ್ದರು ಕೂಡಾ. ಅದೇ ವರ್ಷ ಅಥವಾ ಅಲ್ಲಿಂದಲೇ ಗೀಲಾನಿ ತನ್ನ ಪ್ರಕ್ಷುಬ್ಧತೆಯ ಧ್ಯೇಯವನ್ನು ಕೈಗೊಂಡರು, ಹಾಗೂ ಭಾವನೆ ಕೆರಳಿಸುವ ವಿಚಾರವನ್ನು ಅರಿತುಕೊಂಡರೆನ್ನಲಾಗುತ್ತದೆ.

ಆ ವರ್ಷ, ಶ್ರೀ ಅಮರನಾಥ ದೇಗುಲ ಮಂಡಳಿಯ ಕೆಲವು ಸೌಲಭ್ಯಗಳನ್ನು ಸ್ಥಾಪಿಸಲು ಕೆಲ ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಘಟನೆಯನ್ನು ಬಳಸಿಕೊಂಡ ಗೀಲಾನಿ, ಬೀದಿ ಪ್ರತಿಭಟನೆ ಮೂಲಕ ಭಾವನೆ ಕೆರಳಿಸಿದವರು ಈ ಮೂಲಕ ಸೈನ್ಯ ಮತ್ತು ಪೋಲಿಸ್ ಇಬ್ಬರನ್ನೂ ಅಚ್ಚರಿಗೀಡು ಮಾಡಿದ್ದರು.  ಹೈದರ್‌ಪೋರಾದಲ್ಲಿರುವ ಅವರು ಗೃಹ ಬಂಧನದಲ್ಲಿದ್ದಾಗ, ಮೊಬೈಲ್ ಬಳಸಿಭಾವನೆಗಳನ್ನು ಕೆರಳಿಸಿದ್ದರು. ಈ ಮೂಲಕ 'ಚಲೋ (ಹೋಗೋಣ) ೆಂ ಕಾರ್ಯಕ್ರಮಗಳಮನ್ನು ಆಯೋಜಿಸಿದರು. ಅಲ್ಲಿಂದಲೇ ನಾನು ಅವರ ಮನಸ್ಸನ್ನು ಸ್ವಲ್ಪ ಹೆಚ್ಚು ಾರಿತುಕೊಳ್ಳಲು ಯತ್ನಿಸಿದೆ.

ಪ್ರಸಿದ್ಧ ಅಧ್ಯಾಯ ಉಪಸಂಹಾರವು  'ಅಹಿಂಸಾತ್ಮಕ ಕ್ರಿಯೆಯ 198 ವಿಧಾನಗಳು'. ನಾವು ಬಾರಾಮುಲ್ಲಾದಲ್ಲಿ ಬೀದಿಗಳಲ್ಲಿ ಏನಾಗುತ್ತಿದೆ ಎಂಬುದನ್ನು ಶಾರ್ಪ್ ಭವಿಷ್ಯ ನುಡಿದ ಮತ್ತು ಬರೆದದ್ದನ್ನು ಅರಿತುಕೊಂಡೆವು.

ಸ್ಮಶಾನಗಳ ಸಾಮ್ರಾಜ್ಯವಾದ ಅಪ್ಘಾನಿಸ್ತಾನ: ಅಮೆರಿಕ ಪಡೆ ನಿರ್ಗಮನ, ತಾಲೀಬಾನಿಯರ ಅಟ್ಟಹಾಸ!

ಪ್ರಚೋದನೆ ಮತ್ತು ಉದ್ವೇಗಕ್ಕೊಳಗಾದ ಕಾಶ್ಮೀರಿ ಯುವಕರ ಗುಂಪುಕಲ್ಲುಗಳನ್ನು ಎಸೆದು ಹೊರಬಂದರು, ಇದನ್ನು ಗೀಲಾನಿ ಎಂದಿಗೂ ಖಂಡಿಸಲಿಲ್ಲ; ಖಂಡಿಸಿದರೂ ಅದು ಕೇವಲ ತೀರ್ಪಡಿಕೆಗಷ್ಟೇ ಆಗಿತ್ತು. ಆ ವರ್ಷ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಹಲವಾರು ಜನರು ಸಾವನ್ನಪ್ಪಿದರು. ಪ್ರಚೋದನಾಕಾರರಿಗೆ ಒಂದು ಕರೆ ಕೊಟ್ಟು ಇದನ್ನು ನಿಲ್ಲಿಸಲು ಹೇಳಿದ್ದರೆ, ಇಲ್ಲಿ ನಡೆದ ಹಿಂಸಾಚಾರವನ್ನು ಬಹಳಷ್ಟು ಮಟ್ಟಿಗೆ ತಡೆಯಬಹುದಿತ್ತು. ದುರದೃಷ್ಟವಶಾತ್, ಅವರು ಹೀಗೆ ಮಾಡಲಿಲ್ಲ.

ಗಿಲಾನಿ ಕೈಮೀರಿ ಹೋದ 'ಭಭಯೋತ್ಪಾದನೆ ಆಂದೋಲನ'

2009 ರಲ್ಲಿ, ಶೋಪಿಯಾನದ ಇಬ್ಬರು ಯುವತಿಯರ ಅತ್ಯಾಚಾರ ಪ್ರಕರಣವನ್ನು ಮತ್ತದೇ ಭಾವನೆ ಕೆರಳಿಸಲು ಬಳಸಿದರು. 2010 ರಲ್ಲಿ, ದುರದೃಷ್ಟಕರ ಮ್ಯಾಚಿಲ್ ಪ್ರಕರಣ ಮತ್ತು ಅಶ್ರುವಾಯು ಶೆಲ್‌ನಿಂದ ಸಂಭವಿಸಿದ 11 ವರ್ಷದ ತುಫೈಲ್ ಮಟ್ಟೂ ಆಕಸ್ಮಿಕ ಸಾವನ್ನು ಬಳಸಿಕೊಂಡವರು. ಆದರೆ ಈ ಬೀದಿ ಆಂದೋಲನವನ್ನು ನಮ್ಮ ಸೈನ್ಯ 'ಭಯೋತ್ಪಾದನೆ ಆಂದೋಲನ' ಎಂದು ಕರೆಯುವಂತೆ ಮಾಡಿತು. ಅಲ್ಲದೇ ಇದರ ನಿಯಂತ್ರಣ ಗೀಲಾನಿ ಮತ್ತು ಆತನ ಸಹವರ್ತಿಗಳಾದ ಮಸರತ್ ಆಲಂ ಮತ್ತು ದುಕ್ತರನ್-ಇ-ಮಿಲ್ಲತ್‌ನ ಮುಖ್ಯಸ್ಥ ಅಶಿಯಾ ಅಂದ್ರಾಬಿ ಕೈ ಮೀರಿ ಮುಂದುವರೆದಿತ್ತು. ಕಾಶ್ಮೀರವು ಧಗಧಗಿಸುತ್ತಿದ್ದಾಗ, ಪೊಲೀಸರು ತೋರಿದ ಪ್ರತಿದಾಳಿಯಲ್ಲಿ117 ಕ್ಕೂ ಹೆಚ್ಚು ಯುವ ಕಾಶ್ಮೀರಿಗಳು ಗುಂಡಿಗೆ ಬಲಿಯಾದರು. ಇದೇ ಕ್ಷಣ ಬಳಸಿಕೊಂಡ ಗೀಲಾನಿ ತಮ್ಮ ಅನುಯಾಯಿಗಳಿಗೆ ಸೇನಾ ಶಿಬಿರಗಳಿಗೆ ಘೇರಾವ್ ಮಾಡಲು ಎಚ್ಚರಿಸಿದರು. ಇದು ಗೀಲಾನಿಗೆ ತಿರುಗೇಟು ಕೊಟ್ಟಿತು. ತಿರುಗಿಬಿದ್ದ ಸೇನೆ ಈ ಕೃತ್ಯಕ್ಕೆ ಕೇವಲ ಗೀಲಾನಿ ಮಾತ್ರ ಜವಾಬ್ದಾರರಾಗಿರುತ್ತಾರೆಂದಿತು, ಇದು ಗೀಲಾಗನಿಗೆ ತನ್ನ ಬೆದರಿಕೆ ಹಿಂತೆಗೆದುಕೊಳ್ಳುವಂತೆ ಮಾಡಿತು. ಸೇನೆಯು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಅವರು ಜಾಗರೂಕರಾಗಿದ್ದರು.

ಡ್ರೋನ್‌ ಎಂಬ ಆಯುಧ, ಭಾರತಕ್ಕೀಗ ಹೊಸ ಸವಾಲು!

ಇದಾದ ಬಳಿಕ ಗೀಲಾನಿಯನ್ನು ಎರಡು ಬಾರಿ ಭೇಟಿಯಾಗುವ ಅವಕಾಶವಿತ್ತು. ಆದರೆ ಎರಡೂ ಬಾರಿ ಅವರು ಗೈರಾಗಿದ್ದರು. ಮೇ 2011 ರಲ್ಲಿ, ಬಾರಾಮುಲ್ಲಾದ ಪ್ರಮುಖ ಮತ್ತು ಹಿರಿಯ ಅರ್ಚಕ ನಿಧನರಾದರು. ಅವರು ಶಾಂತಿಯ ಪ್ರತಿಪಾದಕರಾಗಿದ್ದರು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖವಾದ ಸ್ಥಳೀಯ ಭಾವನೆಗಳನ್ನು ನಿರ್ವಹಿಸಲು ನನಗೆ ಆಗಾಗ್ಗೆ ಸಲಹೆ ನೀಡುತ್ತಿದ್ದರು. ನನಗೆ ಸಂಜೆ ಸುದ್ದಿ ಸಿಕ್ಕಿತು. ಗೀಲಾನಿ ಮರುದಿನ ದುಃಖಿತ ಕುಟುಂಬವನ್ನು ಭೇಟಿ ಮಾಡುತ್ತಾರೆ ಎಂದು ನನಗೆ ತಿಳಿದಿತ್ತು ಆದರೆ ನಾನು ಅವನನ್ನು ಸೋಲಿಸಬೇಕು ಎಂದು ನಿರ್ಧರಿಸಿದೆ; ಕನಿಷ್ಟ ಯಾರಾದರೂ ಅವರ ಅಹಂಕಾರವನ್ನು ಕಡಿಮೆ ಮಾಡಬೇಕಿತ್ತು. ನಾನು ಹೆಲಿಕಾಪ್ಟರ್ ಮೂಲಕ ಬಾರಾಮುಲ್ಲಾಕ್ಕೆ ಹೋಗಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದೆ. ಇದಾದ ಬಳಿಕ 7 ಗಂಟೆಗೆ ಗೀಲಾನಿ ಭೇಟಿ ನೀಡಿದರು. ಆದರೆ ಅದಕ್ಕೂ ಮುನ್ನ ನಾನಲ್ಲಿಗೆ ವೈಯಕ್ತಿಕವಾಗಿ ಭೇಟಿ ನೀಡಿ ನನ್ನ ಸಂತಾಪವನ್ನು ವ್ಯಕ್ತಪಡಿಸಿದ್ದೇನೆ ಎಂಬ ಸುದ್ದಿ ಅವರಿಗೆ ತಲುಪಿತ್ತು. ಇದು ಅವರಿಗೆ ಹೆಚ್ಚು ಖುಷಿ ಕೊಟ್ಟಿರಲಿಲ್ಲ.

ಪುಸ್ತಕ ಬಿಡುಗಡೆ ಕಾರ್ಯಕ್ರಮ

2012 ರ ಆರಂಭದ ವೇಳೆಗೆ, ಗೀಲಾನಿ ತನ್ನ ಆತ್ಮಚರಿತ್ರೆಯನ್ನು ಉರ್ದುವಿನಲ್ಲಿ ‘ವುಲ್ಲಾರ್ ಕಿನಾರೆ’ ಹೆಸರಿನಡಿ ಪ್ರಕಟಿಸಿದರು. ಕೆಲವು ಕಾರ್ಯಕರ್ತರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದರು ಮತ್ತು ಪುಸ್ತಕದ ಆರು ಪ್ರತಿಗಳನ್ನು ಖರೀದಿಸಿದರು. ಈ ಆರು ಪ್ರತಿಗಳು ‘ಯಾರು ಮತ್ತು ಏಕೆ’ ಎಂದು ಕೇಳಲಾಯಿತು. ಇವುಗಳನ್ನು ಕಾರ್ಪ್ಸ್ ಕಮಾಂಡರ್ (ನನಗೆ) ಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿದ ನಂತರ, ಪ್ರಕಾಶಕರು ಬಹ: ಉತ್ಸುಕರಾದರು ಅಲ್ಲದೇ ಪುಸ್ತಕಗಳನ್ನು ಗೀಲಾನಿ ಸಹಿ ಮಾಡಬೇಕೆಂದು ಬಯಸಿದರು.

ಇರಾನ್‌ ಅಧ್ಯಕ್ಷೀಯ ಚುನಾವಣೆ: ಭೌಗೋಳಿಕ ರಾಜಕೀಯ ಪರಿಣಾಮದ ವಿಮರ್ಶೆ

ಮರುದಿನ, ಕಾಶ್ಮೀರಿ ಮಾಧ್ಯಮವು ಮೊದಲ ಪುಟದಲ್ಲಿ ಗೀಲಾನಿಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ, ಆರು ಪ್ರತಿಗಳನ್ನು ಕಾರ್ಪ್ಸ್ ಕಮಾಂಡರ್ ಖರೀದಿಸಿದ್ದಾರೆ ಎಂಬ ಸುದ್ದಿ ಪ್ರಕಟವಾಯಿತು. ನಾನು ಈ ಬೆಳವಣಿಗೆಯನ್ನು ನನ್ನ ಅನುಕೂಲಕ್ಕೆ ಬಳಸಿಕೊಳ್ಳಲು ನಿರ್ಧರಿಸಿದೆ ಮತ್ತು ಮರುದಿನವೇ ಇನ್ನೊಂದು ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದೆ. ನಾನು ಪುಸ್ತಕವನ್ನು ಏಕೆ ಖರೀದಿಸಿದೆ ಹಾಗೂ ಏಕೆ ಆರು ಪ್ರತಿಗಳು ಏಕೆ ಎಂಬ ಪ್ರಶ್ನೆ ಅನಿವಾರ್ಯವಾಗಿ ಕೇಳಲಾಯ್ತು. ನಾನು ತಕ್ಷಣ ಉರ್ದುವಿನಲ್ಲಿ ಪ್ರತಿಕ್ರಿಯಿಸಿ, “ಗೀಲಾನಿ ಸಾಹೇಬರು ತಮ್ಮ ಆಲೋಚನೆಗಳನ್ನು ಚೆನ್ನಾಗಿ ವ್ಯಕ್ತಪಡಿಸಿದ್ದಾರೆ ಎಂದು ನಾನು ಭಾವಿಸಿದೆ. ಅವರು ಹಿರಿಯರು ಮತ್ತು ಅತ್ಯಂತ ಅನುಭವಿ ವ್ಯಕ್ತಿತ್ವ ಹೊಂದಿರುವುದರಿಂದ, ಬಹುಶಃ ಅವರ ಪುಸ್ತಕವನ್ನು ಓದುವುದು ಬಹುಶಃ ನನಗೆ ಮತ್ತು ನನ್ನ ಅಧಿಕಾರಿಗಳಿಗೆ ಅವರ ಕೆಲವು ಆಲೋಚನೆಗಳು ಮತ್ತು ಕೆಲಸದ ಸಂಸ್ಕೃತಿಯನ್ನು ಒಳಗೊಳ್ಳುವ ಅವಕಾಶವನ್ನು ನೀಡುತ್ತದೆ ಎಂದಿದ್ದೆ. ಮರುದಿನ ಬೆಳಿಗ್ಗೆ ಕಾಶ್ಮೀರದ ಮಾಧ್ಯಮಗಳಲ್ಲಿ ಈ ಪ್ರತಿಕ್ರಿಯೆಯನ್ನು ಪ್ರಮುಖ ಸುದ್ದಿಯಾಗಿ ಪ್ರಕಟಿಸಲಾಯಿತು. ಇದು ಗೀಲಾನಿಗೆ ಬಹಳ ಖುಷಿ ಕೊಟ್ಟಿತ್ತು ಎಂದು ನನ್ನ ಮೂಲಗಳಿಂದ ತಿಳಿಯಿತು.

ಅವರ ಹಿಂದಿನ ಸಾಂಪ್ರದಾಯಿಕ ಸ್ಥಾನಮಾನಕ್ಕೆ ಹೋಲಿಸಿದರೆ ತುಲನಾತ್ಮಕವಾಗಿ ಅಪ್ರಸ್ತುತವಾಗಿದ್ದರೂ, ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿಗಳು ಮತ್ತು ಪಾಕಿಸ್ತಾನದ ಅನೇಕ ನಿರ್ವಾಹಕರಿಗೆ ನಿಸ್ಸಂದೇಹವಾಗಿ ಅವರ ಅನುಪಸ್ಥಿತ ಕಾಡಲಿದೆ. ಗೀಲಾನಿಯವರಲ್ಲಿ ಪ್ರಚೋದಿಸುವ ಮತ್ತು ಪ್ರಜ್ಞಾಪೂರ್ವಕ ಪ್ರಜ್ಞೆಯನ್ನು ಬೆರೆಸುವ ಸಾಮರ್ಥ್ಯವಿತ್ತು. ಪ್ರತಿಯೊಂದರಲ್ಲೂ ಅತ್ಯಂತ ಸೂಕ್ತ ಕ್ಷಣಕ್ಕೆ ಕಾಯುತ್ತಿದ್ದರು. ಕಳೆದ ಕೆಲವು ವರ್ಷಗಳಲ್ಲಿ, ಕಿರಿಯ ಮತ್ತು ಮುಂದಿನ ಪೀಳಿಗೆಯ ಕಾಶ್ಮೀರಿಗಳನ್ನು ತನ್ನ ತೆಕ್ಕೆಗೆ ಹೊಂದಿಸಲು ಅವರು ಅಸಮರ್ಥರಾಗಿದ್ದರೆಂಬ ವಿಚಾರಕ್ಕೆ ಅಸಮಾಧಾನ ಹುಟ್ಟಿಕೊಂಡಿತ್ತು. ಭಾವನೆಗಳಿಗೆ ಬಲಿಯಾಗುವ ವಿಚಾರ ಕೊನೆಯಾಗಲಾರಂಭಿಸಿತ್ತು. ಇತ್ತ ಆರ್ಟಿಕಲ್ 370 ಅನ್ನು ತಿದ್ದುಪಡಿ ಮಾಡಿದರೆ, 35 ಎ ರದ್ದುಗೊಳಿಸಲಾಯಿತು, ರಸ್ತೆಯ ಕೊನೆಯಲ್ಲಿ ಪ್ರಕ್ರಿಯೆಯು ಆಳವಾಯಿತು. 

Follow Us:
Download App:
  • android
  • ios