Mumbai attack: ಮಾತಿಗಿಂತ ಕಾರ್ಯ ಮಾತನಾಡಬೇಕಿತ್ತು, 26/11 ದಾಳಿಯಲ್ಲಿ UPA ವೈಫಲ್ಯ ಟೀಕಿಸಿದ ಕಾಂಗ್ರೆಸ್ ನಾಯಕ ತಿವಾರಿ!

  • ಬಿಡುಗಡೆಗೆ ಸಜ್ಜಾಗಿದೆ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಪುಸ್ತಕ
  • 10 ಫ್ಲ್ಯಾಶ್ ಪಾಯಿಂಟ್ಸ್; 20 ವರ್ಷ ಭಾರತದ ಮೇಲೆ ಪ್ರಭಾವ ಬೀರಿದ ರಾಷ್ಟ್ರೀಯ ಭದ್ರತಾ ಪರಿಸ್ಥಿತಿ
  • ಪುಸ್ತಕದಲ್ಲಿ ಕಾಂಗ್ರೆಸ್ ನೇೃತ್ವದ UPA ಸರ್ಕಾರ ನಿಷ್ಕ್ರೀಯತೆ ಟೀಕಿಸಿದ ನಾಯಕ
India should have acted against Pakistan after 2008 Mumbai attacks Congress MP Manish Tewari upcoming book remark ckm

ನವದೆಹಲಿ(ನ.23):  ಕಾಂಗ್ರೆಸ್(Congress) ನಾಯಕರು ಒಬ್ಬರ ಹಿಂದೆ ಒಬ್ಬರು ಪುಸ್ತಕ ಬಿಡುಗಡೆ(Book Laucnh) ಮಾಡುತ್ತಿದ್ದಾರೆ. ಸಲ್ಮಾನ್ ಖುರ್ಷಿದ್ ವಿವಾದಾತ್ಮಕ ಪುಸ್ತಕದ ಬಳಿಕ ಇದೀಗ ಮನೀಶ್ ತಿವಾರಿ(Manish Tewari ) ಸರದಿ. ಇದೀಗ ತಿವಾರಿ ಪುಸ್ತಕ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಕಾರಣ ಈ ಪುಸ್ತಕದಲ್ಲಿ ಕಾಂಗ್ರೆಸ್ ನಾಯಕ ತಮ್ಮದೇ ಸರ್ಕಾರವನ್ನು ಟೀಕಿಸಿದ್ದಾರೆ. 26/11ರ ಮುಂಬೈ ದಾಳಿ(2008 Mumbai attacks) ಬಳಿಕ  UPA ಸರ್ಕಾರ ತೋರಿದ ನಿಷ್ಕ್ರೀಯತೆಯನ್ನು ಮನೀಶ್ ತಿವಾರಿ ಟೀಕಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದೆ.

ಮನೀಶ್ ತಿವಾರಿ ಬರೆದಿರುವ  10 ಫ್ಲ್ಯಾಶ್ ಪಾಯಿಂಟ್ಸ್, 20 ವರ್ಷ ಭಾರತದ ಮೇಲೆ ಪ್ರಭಾವ ಬೀರಿದ ರಾಷ್ಟ್ರೀಯ ಭದ್ರತಾ ವಿಚಾರ(10 Flash Points; 20 Years - National Security Situations that Impacted India) ಅನ್ನೋ ಪುಸ್ತಕ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ತಿವಾರಿ ಟ್ವಿಟರ್‌ನಲ್ಲಿ ಪುಸ್ತಕದ ಆಯ್ದ ಭಾಗಗಳನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಭಾರತದ ಭದ್ರತೆಗೆ ಸವಾಲೊಡ್ಡಿದ ಪ್ರಮುಖ ಘಟನೆಗಳಲ್ಲಿ 26/11ರ ಮುಂಬೈ ಮೇಲಿನ ಭಯೋತ್ಪಾದಕರ ದಾಳಿ ಪ್ರಮುಖವಾಗಿದೆ. ಈ ದಾಳಿ ಹಾಗೂ ಬಳಿಕ ತೆಗೆದುಕೊಂಡು ನಿರ್ಧಾರಗಳ ಕುರಿತು ತಿವಾರಿ ತಮ್ಮದೇ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ. ದಾಳಿ ಬಳಿಕ ಕಾಂಗ್ರೆಸ್ ನಿರ್ಧಾರ ಭಾರತ ಶಕ್ತಿ ಹೀನ ದೇಶವಾಗಿ ಚಿತ್ರಿಸಲ್ಪಟ್ಟಿತು. ಯಾವುದೇ ಸ್ಪಷ್ಟ ಸಂದೇಶ ನೀಡಲು ಸಾಧ್ಯವಾಗಿಲ್ಲ ಎಂದು ತಿವಾರಿ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಉಗ್ರ ಚಟುವಟಿಕೆಗೆ ಹಣ ನೀಡಿದ ಆರೋಪ, 26/11 ರೂವಾರಿ ಲಖ್ವಿ ಬಂಧನ!

166 ಮಂದಿ ಅಮಾಯಕರ ಜೀವ ಬಲಿ ಪಡೆದ ಈ ದಾಳಿ, ಭಾರತದ ಇತಿಹಾಸದಲ್ಲಿ ನಡೆದ ಅತ್ಯಂತ ಘನಘೋರ ಭಯೋತ್ಪಾದಕ ದಾಳಿಯಾಗಿದೆ. ದಾಳಿ ಸಂಭವಿಸಿಯಾಗಿದೆ. ಇದು ಭದ್ರತಾ ಲೋಪ ಹೌದು. ದಾಳಿ ಬಳಿಕ ಯುಪಿಎ ಸರ್ಕಾರ ಅತೀಯಾದ ಸಂಯಮ ವಹಿಸಿತ್ತು. ಅಮೆರಿಕ ಪಾಕಿಸ್ತಾನವನ್ನು ಬೊಟ್ಟು ಮಾಡಲಿ ಎಂದು ಸಮಯ ವ್ಯರ್ಥಮಾಡಿತು. ದಾಳಿ ಬಳಿಕ ಯುಪಿಎ ಸರ್ಕಾರ ತೋರಿದ ಸಂಯಮ, ತಾಳ್ಮೆ ದೌರ್ಬಲ್ಯವಾಗಿತ್ತು. ಇದು ಸಾಮರ್ಥ್ಯ ಪ್ರದರ್ಶನವಾಗಿರಲಿಲ್ಲ. ಇದು ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ವೈಫಲ್ಯ ಎಂದು ನೇರವಾಗಿ ಆಡಳಿತವನ್ನು(UPA Government) ಟೀಕಿಸಿದ್ದಾರೆ. 

ಗಡಿ ಪ್ರದೇಶದಲ್ಲಿ ದಾಳಿ ಕುರಿತು ಕಟ್ಟೆಚ್ಚರ ವಹಿಸಿದ್ದ ಭಾರತ ಮುಂಬೈ ಮಹಾನಗರದ(Mumbai City) ಮೇಲೆ ಈ ರೀತಿಯ ದಾಳಿಯನ್ನು ಊಹಿಸಿರಲಿಲ್ಲ. ಆದರೆ ದಾಳಿ ಬಳಿಕ ತೆಗೆದುಕೊಳ್ಳಬೇಕಾದ ಕೆಲ ನಿರ್ಧಾರ ಹಾಗೂ ಮಾಡಬೇಕಾದ ಕಾರ್ಯಗಳನ್ನು ಯುಪಿಎ ಸರ್ಕಾರ ಮಾಡಿಲ್ಲ ಎಂದು ತಿವಾರಿ ಹೇಳಿದ್ದಾರೆ.  ದೇಶದ ಭದ್ರತೆಗೆ ಸವಾಲೋಡ್ಡುವ, ಸಾರ್ವಭೌಮತ್ವಕ್ಕೆ, ಏಕತೆಗೆ ಧಕ್ಕೆ ತರುವ ವಿಚಾರಗಳು ಬಂದಾಗ ದಿಟ್ಟ ನಿರ್ಧಾರದ ಅವಶ್ಯಕತೆ ಇದೆ. ಈ ವೇಳೆ ಸರ್ಕಾರ ಮಾತಿಗಿಂತ ತಮ್ಮ ಕಾರ್ಯದ ಮೂಲಕ ತೋರಿಸಬೇಕು. ತಾವು ತೆಗೆದುಕೊಂಡ ನಿರ್ಧಾರಗಳು ಹೆಚ್ಚು ಮಾತನಾಡಬೇಕು. ಆದರೆ ಮುಂಬೈ ದಾಳಿ ಬಳಿಕ ಯುಪಿಎ ಸರ್ಕಾರದ ಕಾರ್ಯಗಳು ಈ ರೀತಿ ಇರಲಿಲ್ಲ ಎಂದು ತಿವಾರಿ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ದಾವೂದ್‌ ಜೊತೆಗೂಡಿ ಭಾರತದಲ್ಲಿ ದಾಳಿಗೆ ಲಷ್ಕರ್‌ ಉಗ್ರ ಸಂಚು!

ಮುಂಬೈ ದಾಳಿ ಬಳಿಕ ಭಾರತ ಕೆಲ ಕಠಿಣ ನಿರ್ಧಾರಗಳನ್ನು ಯಾವುದೇ ಮುಲಾಜಿಲ್ಲದೆ ತೆಗೆದುಕೊಳ್ಳಬೇಕಿತ್ತು. ಆದರೆ ಯುಪಿಎ ಸರ್ಕಾರ ಆ ಧೈರ್ಯ ಮಾಡಿಲ್ಲ ಎಂದಿದ್ದಾರೆ. ಮನ್‌ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ, ಈ ದಾಳಿ ಬಳಿಕ ಭಾರಿ ಟೀಕೆಗೆ ಒಳಗಾಗಿತ್ತು. ಇದೇ ಸರ್ಕಾರದಲ್ಲಿ ಮನೀಶ್ ತಿವಾರಿ ಕೇಂದ್ರ ಮಂತ್ರಿಯಾಗಿದ್ದರು. ಅಂದು ಯುಪಿಎ ಸರ್ಕಾರ ನಡೆದುಕೊಂಡ ರೀತಿ ಭಾರತದ ಭದ್ರತೆಯನ್ನು ಪ್ರಶ್ನಿಸುವ ಹಾಗೂ ಸವಾಲೊಡ್ಡುವಂತಿತ್ತು ಎಂದು ತಿವಾರಿ ತಮ್ಮ ಪುಸ್ಕತದಲ್ಲಿ ತಮ್ಮದೇ ಸರ್ಕಾರನ್ನು ಟೀಕಿಸಿದ್ದಾರೆ.

ಮನೀಶ್ ತಿವಾರಿ ಪುಸ್ತಕ ಕಾಂಗ್ರೆಸ್‌ಗೆ ಇರಿಸು ಮುರಿಸು ತಂದಿದೆ. ಕಾರಣ ತಮ್ಮ ಪಕ್ಷದ ನಿಷ್ಠಾವಂತ ಹಾಗೂ ಹಿರಿಯ ನಾಯಕ, ತಮ್ಮ ಪಕ್ಷವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇಷ್ಟೇ ಅಲ್ಲ ಮುಂಬೈ ದಾಳಿ ಯುಪಿ ಸರ್ಕಾರದ ವೈಫಲ್ಯ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದೆ. ಇದೀಗ ಬಿಜೆಪಿ ಆರೋಪಕ್ಕೆ ಮನೀಶ್ ತಿವಾರಿ ಪುಸ್ತಕ ಮತ್ತಷ್ಟು ಪುಷ್ಠಿ ನೀಡಲಿದೆ.  ಇತ್ತೀಚೆಗೆ ಸಲ್ಮಾನ್ ಖುರ್ಷಿದ್ ಬಿಡುಗಡೆ ಮಾಡಿದ ಅಯೋಧ್ಯೆ ಪುಸ್ತಕದಲ್ಲಿ ಹಿಂದುತ್ವವನ್ನು ಭಯೋತ್ಪಾದನೆಗೆ ಹೋಲಿಕೆ ಮಾಡಿದ್ದರು. ಇದು ಭಾರಿ ವಿವಾದ ಸೃಷ್ಟಿಸಿತ್ತು. ಬಿಜೆಪಿ ಟೀಕೆಗೆ ಕಾಂಗ್ರೆಸ್ ಕೂಡ ಬಸವಳಿದಿತ್ತು.  ಇದೀಗ ಮನೀಶ್ ತಿವಾರಿ ಪುಸ್ತಕ ಕಾಂಗ್ರೆಸ್‌ಗೆ ಮತ್ತಷ್ಟು ಹಿನ್ನಡೆ ತಂದಿದೆ. 

ಮುಂಬೈ ದಾಳಿಗೆ 11 ವರ್ಷ: ಉಸಿರಿರುವವರೆಗೂ ಹುತಾತ್ಮರನ್ನು ನೆನೆಯುವ ಉದ್ಘೋಷ!

ಮುಂಬೈ ಉಗ್ರ ದಾಳಿ:
ಪಾಕಿಸ್ತಾನದ ಕರಾಚಿ ಸಮುದ್ರ ತೀರದಿಂದ ಬೋಟಿನ ಮೂಲಕ ಮುಂಬೈಗೆ ಆಗಮಿಸಿದ ಪಾಕಿಸ್ತಾನ ಲಷ್ಕರ್ ಇ ತೈಬಾ ಹಾಗೂ ಇಸ್ಲಾಮಿಸ್ಟ್ ಉಗ್ರ ಸಂಘಟನೆಯ 10 ಮಂದಿ ಭಯೋತ್ಪಾದಕರು 2008, ನವೆಂಬರ್ 26ರ ರಾತ್ರಿ ಮುಂಬೈಗೆ ತಲುಪಿದ್ದಾರೆ. ತಾಜ್ ಹೊಟೆಲ್, ಚತ್ರಪತಿ ಶಿವಾಜಿ ಟರ್ಮಿನಲ್, ಒಬೆರಾಯ್ ಹೊಟೆಲ್, ನರಿಮನ್ ಹೌಸ್ ಸೇರಿದಂತೆ ಮುಂಬೈನ ಹಲವು ಭಾಗಗಳಲ್ಲಿ ದಾಳಿ ನಡೆಸಲಾಯಿತು. ಈ ದಾಳಿಯಲ್ಲಿ 166 ಅಮಾಯಕರು ಬಲಿಯಾಗಿದ್ದಾರೆ. 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನವೆಂಬರ್ 29 ರಂದು 9 ಉಗ್ರರ ಹತ್ಯೆ ಮಾಡಿದ ಭಾರತೀಯ ಭದ್ರತಾ ಪಡೆ ದಾಳಿ ಅಂತ್ಯಗೊಳಿಸಿತ್ತು. ಓರ್ವ ಉಗ್ರ ಅಜ್ಮಲ್ ಕಸಾಬ್‌ನನ್ನು ಜೀವಂತವಾಗಿ ಹಿಡಿಯಲಾಗಿತ್ತು.
 

Latest Videos
Follow Us:
Download App:
  • android
  • ios