ನವದೆಹಲಿ(ಮೇ. 12): ಪಾಕಿಸ್ತಾನ ಮೂಲದ ಲಷ್ಕರ್‌-ಎ- ತೊಯ್ಬಾ ಉಗ್ರ ಸಂಘಟನೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಜೊತೆಗೂಡಿ ಜಮ್ಮು- ಕಾಶ್ಮೀರ ಮತ್ತು ದೇಶದ ಇತರ ಭಾಗಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಪಾಕಿಸ್ತಾನ ಗಢ ಗಢ: ಗಡಿಯಲ್ಲಿ ಯುದ್ಧ ವಿಮಾಗಳ ಹಾರಾಟ, ಮತ್ತಷ್ಟು ಕಣ್ಗಾವಲು!

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಭದ್ರತೆಯೊಂದಿಗೆ ಭಾನುವಾರದಂದು ಇಸ್ಲಾಮಾಬಾದ್‌ನಲ್ಲಿರುವ ತನ್ನ ತೋಟದ ಮನೆಯಲ್ಲಿ ದಾವೂದ್‌ ಕಾಣಿಸಿಕೊಂಡಿದ್ದಾನೆ. ಈ ವೇಳೆ ಲಷ್ಕರ್‌ ಮುಖಂಡರ ಜೊತೆ ಆತ ಮಾತುಕತೆ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಭಾರತ ಕೊರೋನಾ ವೈರಸ್‌ ವಿರುದ್ಧದ ಹೋರಾಟಕ್ಕೆ ಗಮನ ಕೇಂದ್ರೀಕರಿಸಿರುವ ಸಂದರ್ಭದಲ್ಲಿ, ದೇಶದಲ್ಲಿ ಹಿಂಸಾಚಾರ ಸೃಷ್ಟಿಸಲು ಐಐಎಸ್‌ ಯೋಜನೆ ರೂಪಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.