ಕಾಲು ಕೆರೆದು ಬಂದ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ ಬಳಿಕ ಇದೀಗ ತಣ್ಣಗಾಗಿದೆ. ಆದರೆ ಪಾಕಿಸ್ತಾನ ಸೈಲೆಂಟ್ ಆದ ಬೆನ್ನಲ್ಲೇ ಇತ್ತ ಚೀನಾ ಕಿರಿಕ್ ಶುರು ಮಾಡಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಕಿರಿಕ್ ಆರಂಭಿಸಿದ್ದು, ಭಾರತ ಖಡಕ್ ತಿರುಗೇಟು ನೀಡಿದೆ.
ನವದೆಹಲಿ(ಮೇ.14) ಉಗ್ರರ ಕಳುಹಿಸಿ ಭಾರತೀಯರ ಮೇಲೆ ದಾಳಿ ನಡೆಸಿದ ಪಾಕಿಸ್ತಾನ ಬಳಿಕ ಭಾರತದ ಪ್ರತ್ಯುತ್ತರಕ್ಕೆ ಕಂಗಾಲಾಗಿದೆ. ಆಪರೇಶನ್ ಸಿಂದೂರ ಮೂಲಕ ಭಾರತ ನೀಡಿದ ಉತ್ತರಕ್ಕೆ ಪಾಕಿಸ್ತಾನ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಕದನ ವಿರಾಮ ಮನವಿಯಿಂದ ಭಾರತ ಇದೀಗ ದಾಳಿಯಿಂದ ಹಿಂದೆ ಸರಿದಿದೆ. ಪಾಕಿಸ್ತಾನಕ್ಕೆ ಎಲ್ಲಾ ದಿಕ್ಕುಗಳಿಂದ ಭಾರತ ಹೊಡೆತ ನೀಡಿದೆ. ಇದರ ಪರಿಣಾಮ ಪಾಕಿಸ್ತಾನ ಸೈಲೆಂಟ್ ಆಗಿದೆ. ಪಾಕಿಸ್ತಾನ ಮೆತ್ತಗಾದ ಬೆನ್ನಲ್ಲೇ ಇದೀಗ ಚೀನಾ ಕಿರಿಕ್ ಶುರು ಮಾಡಿದೆ. ಚೀನಾ ಇದೀಗ ಭಾರತದ ಅರುಣಾಚಲ ಪ್ರದೇಶದಲ್ಲಿ ಕಿರಿಕ್ ಆರಂಭಿಸಿದೆ. ಅರುಣಾಚಲ ಪ್ರದೇಶದ ಹಲವು ಭಾಗಗಳನ್ನು ಚೀನಾ ತನ್ನದೆಂದು ಹೊಸ ನಾಮಕರಣ ಮಾಡಿದೆ. ಚೀನಾ ನಡೆಗೆ ಭಾರತ ತಕ್ಕ ಉತ್ತರ ನೀಡಿದೆ.
ಅರುಣಾಚಲ ಪ್ರದೇಶದ 27 ಭೂಭಾಗಗಳಿಗೆ ಮರುನಾಮಕರಣ ಮಾಡಿದ ಚೀನಾ
ಚೀನಾ ಇದೀಗ ಅರುಣಾಚಲ ಪ್ರದೇಶದಲ್ಲಿ ತಲೆನೋವು ಹೆಚ್ಚಿಸಿದೆ. ಚೀನಾ ಸಿವಿಲ್ ಎವಿಯೇಶನ್ ಸಚಿವಾಲಯ ಇದೀಗ ಅರುಣಾಚಲ ಪ್ರದೇಶದ 27 ಪ್ರದೇಶಗಳಿಗೆ ಮರುನಾಮಕರಣ ಮಾಡಿದೆ. ಈ ಭೂಭಾಗಗಳು ಚೀನಾದ ಭಾಗ ಎಂದು ಹೇಳಿಕೊಂಡಿದೆ. ಚೀನಾ ಭೂಭಾಗಗಳಿಗೆ ಮರುನಾಮಕರಣ ಮಾಡಲಾಗಿದೆ ಎಂದು ಸಚಿವಾಲಯ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನ ವಿರುದ್ದ ಮೇಲುಗೈ ಸಾಧಿಸಿದ ಬೆನ್ನಲ್ಲೇ ಚೀನಾ ಕೆರಳಿದೆ. ಇದೀಗ ಭಾರತದ ವಿರುದ್ಧ ಚೀನಾ ಹಳೆ ಅಸ್ತ್ರವನ್ನೇ ಹೊಸದಾಗಿ ಪ್ರಯೋಗಿಸಿದೆ.
ಟ್ರಾವೆಲ್ ಸಂಸ್ಧೆ ನಿರ್ಧಾರದಿಂದ ಪಾಕ್ ಬೆಂಬಲಿಸಿದ ಚೀನಾ, ಟರ್ಕಿ, ಅಜರ್‌ಬೈಜಾನ್ ಕಂಗಾಲು
ಭಾರತದಿಂದ ತಿರುಗೇಟು
ಚೀನಾ ನಡೆಯನ್ನು ಭಾರತ ವಿದೇಶಾಂಗ ಸಚಿವಾಲಯ ಖಂಡಿಸಿದೆ. ಇಷ್ಟೇ ಅಲ್ಲ ಹೊಸ ಹೆಸರು ಕೊಟ್ಟ ತಕ್ಷಣ ಭೂಭಾಗ ಚೀನಾಗೆ ಸೇರಲ್ಲ. ಚೀನಾದ ನಡೆಯನ್ನು ಭಾರತ ಗಮನಿಸಿದೆ. ಭಾರತದವನ್ನು ಪ್ರಚೋದಿಸುವ ಕೆಲಸವನ್ನು ಚೀನಾ ಮಾಡುತ್ತಿದೆ. ನಾಮಕರಣ ಮಾಡಿದಾದ ಇತಿಹಾಸ ಬದಲಾಗುವುದಿಲ್ಲ. ಅರುಣಾಚ ಪ್ರದೇಶದ ಇಂಚಿಂಚು ಭಾಗ ಭಾರತದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಚೀನಾ ಈ ರೀತಿಯ ಸಣ್ಣ ನಡೆಗಳಿಂದ ಹಿಂದೆ ಸರಿಯಬೇಕು ಎಂದು ಭಾರತದ ವಿದೇಶಾಂಗ ಸಚಿವಾಲಯ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾಗೆ ಭಾರಿ ಹಿನ್ನಡೆ
ಉಗ್ರರ ವಿರುದ್ಧ ಭಾರತ ಆಪರೇಶನ್ ಸಿಂದೂರ್ ಕಾರ್ಯಾಚರಣೆ ನಡೆಸಿದರೆ, ಪಾಕಿಸ್ತಾನ ಭಾರತದ ಮೇಲೆ ಯುದ್ಧಕ್ಕೆ ಬಂದಿತ್ತು. ಪಾಕಿಸ್ತಾನಕ್ಕೆ ಚೀನಾ, ಟರ್ಕಿ, ಅಜರ್‌ಬೈಜಾನ್ ಬೆಂಬಲ ನೀಡಿತ್ತು. ಚೀನಾ ಡ್ರೋನ್ ಸೇರಿದಂತೆ ಇತರ ಶಸ್ತ್ರಾಸ್ತ್ರ ಪೂರೈಕೆ ಮಾಡಿತ್ತು. ಆದರೆ ಚೀನಾ ಶಸ್ತ್ರಾಸ್ತ್ರಗಳನ್ನು ಭಾರತ ಹೊಡೆದುರುಳಿಸಿತ್ತು. ಮತ್ತೆ ಕೆಲ ಚೀನಾ ಡ್ರೋನ್ ಹಾಗೂ ಕ್ಷಿಪಣಿಗಳು ಸರಿಯಾಗಿ ಕಾರ್ಯನಿರ್ವಹಿಸದ ಭಾರತ ಹೊಲ ಗದ್ದೆಗಳಲ್ಲಿ ಬಿದ್ದಿದೆ. ಇದು ಚೀನಾದ ಉತ್ಪನ್ನಗಳ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತು ಪಡಿಸಿತ್ತು. ಇದರಿಂದ ಚೀನಾದ ಡಿಫೆನ್ಸ್ ರಿಲೇಟೆಡ್ ಷೇರುಗಳ ಮೌಲ್ಯ ಕುಸಿತ ಕಂಡಿತ್ತು. ಚೀನಾಗೆ ಈ ಹಿನ್ನಡೆ ಕೊಟ್ಟ ಭಾರತದ ಮೇಲೆ ಆಕ್ರೋಶ ಹೆಚ್ಚಾಗಿದೆ. ಹೀಗಾಗಿ ಇದೀಗ ಚೀನಾ, ಭಾರತದ ಮೇಲೆ ಕಿರಿಕ್ ಮಾಡಲು ಆರಂಭಿಸಿದೆ.


