ಪಾಕಿಸ್ತಾನಕ್ಕೆ ನೆರವು ನೀಡಿದ ಚೀನಾ, ಟರ್ಕಿ, ಅಜರ್‌ಬೈಜಾನ್ ದೇಶಗಳ ವಿಮಾನ ಹಾಗೂ ಹೋಟೆಲ್ ಬುಕಿಂಗ್‌ಗಳನ್ನು ಇಕ್ಸಿಗೋ ರದ್ದುಗೊಳಿಸಿದೆ. ಟರ್ಕಿ ಸೇಬಿನ ಮಾರಾಟವನ್ನು ಪುಣೆ ವರ್ತಕರು ನಿಷೇಧಿಸಿದ್ದಾರೆ. ಭಾರತೀಯರು ಈ ರಾಷ್ಟ್ರಗಳ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿದ್ದಾರೆ. ಇಕ್ಸಿಗೋ, ಈಸ್‌ಮೈಟ್ರಿಪ್, ಕಾಕ್ಸ್ ಆ್ಯಂಡ್ ಕಿಂಗ್ಸ್ ಕಂಪನಿಗಳು ಇದೇ ನಿರ್ಧಾರ ಕೈಗೊಂಡಿವೆ. ಗೋ ಹೋಮ್‌ಸ್ಟೇ ಸಂಸ್ಥೆಯೂ ಟರ್ಕಿಶ್ ಏರ್‌ಲೈನ್ಸ್ ಜೊತೆಗಿನ ಒಪ್ಪಂದ ರದ್ದುಪಡಿಸಿದೆ.

ನವದೆಹಲಿ(ಮೇ.13) ಪೆಹಲ್ಗಾಂ ಉಗ್ರ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಭಾರತದ ಆಪರೇಶನ್ ಸಿಂದೂರ್ ಮೂಲಕ ಪ್ರತೀಕಾರ ತೀರಿಸಿದರೆ, ಪಾಕಿಸ್ತಾನ ಭಾರತದ ಮೇಲೆ ದಾಳಿಗೆ ಯತ್ನಿಸಿತ್ತು. ಭಾರತದ ಮೇಲಿನ ದಾಳಿ ನಡೆಸಲು ಪಾಕಿಸ್ತಾನಕ್ಕೆ ಕೆಲ ರಾಷ್ಟ್ರಗಳು ಸಹಕಾರ ನೀಡಿತ್ತು. ಪಾಕಿಸ್ತಾನಕ್ಕೆ ಬೆಂಬಲ ನೀಡಿದ ರಾಷ್ಟ್ರಗಳ ಪೈಕಿ ಟೀನಾ, ಟರ್ಕಿ ಹಾಗೂ ಅಜರ್‌ಬೈಜನ್ ಮುಂಚೂಣಿಯಲ್ಲಿದೆ. ಶಸ್ತಾಸ್ತ್ರ ಪೂರೈಕೆ, ಯುದ್ಧ ನೌಕೆ ರವಾನೆ, ಮಿಸೈಲ್ ರವಾನೆ ಸೇರಿದಂತೆ ಹಲವು ರೀತಿ ನೆರವು ನೀಡಿದೆ. ನೆರವು ನೀಡಿದರೂ ಪಾಕಿಸ್ತಾನಕ್ಕೆ ಪ್ರಯೋಜನವಾಗಲಿಲ್ಲ, ಇತ್ತ ಪಾಕ್‌ಗೆ ನೆರವು ನೀಡಿದ ರಾಷ್ಟ್ರಗಳು ಇದೀಗ ಕಂಗಾಲಾಗಿದೆ.

ಪಾಕಿಸ್ತಾನಕ್ಕೆ ನೆರವು ನೀಡಿದ ರಾಷ್ಟ್ರಗಳ ಉತ್ಪನ್ನಗಳನ್ನು ಭಾರತೀಯರು ಬಹಿಷ್ಕರಿಸುತ್ತಿದ್ದಾರೆ.  ಟರ್ಕಿ ಆ್ಯಪಲ್ ಹಣ್ಣನ್ನು ಪುಣೆ ವರ್ತಕರು ಬ್ಯಾನ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಇಕ್ಸಿಗೋ ಟ್ರಾವೆಲ್ ಕಂಪನಿ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನಿ ಮೋದಿ ಅದಂಪುರ ವಾಯುನೆಲೆಯಲ್ಲಿ ಆಡಿದ ಮಾತುಗಳನ್ನೇ ಬಳಸಿಕೊಂಡು ನಿರ್ಧಾರ ಘೋಷಿಸಿದ್ದಾರೆ. ಇಕ್ಸಿಗೋ ಟ್ರಾವೆಲ್ ಕಂಪನಿ ಇದೀಗ ಚೀನಾ, ಟರ್ಕಿ ಹಾಗೂ ಅಜರ್‌ಬೈಜಾನ್‌ ಫ್ಲೈಟ್, ಹೊಟೆಲ್ ಬುಕಿಂಗ್ ರದ್ದು ಮಾಡಿದೆ. 

ಪಾಕಿಸ್ತಾನ ಜೊತೆ ಸೇರಿದ ರಾಷ್ಟ್ರಕ್ಕೆ ಶಾಕ್, ಭಾರತೀಯ ವರ್ತಕರಿಂಗ ಟರ್ಕಿ ಆ್ಯಪಲ್ ಬ್ಯಾನ್

ಪಾಕಿಸ್ತಾನ ಬೆಂಬಲಿಸಿದ ರಾಷ್ಟ್ರಗಳ ಜೊತೆ ಸಾಗಲು ಸಾಧ್ಯವಿಲ್ಲ. ಬ್ಲಡ್ ಹಾಗೂ ಬುಕಿಂಗ್ ಜೊತೆ ಜೊತೆಯಾಗಿ ಸಾಗುವುದಿಲ್ಲ. ಇಕ್ಸಿಗೋ ಸಂಸ್ಥೆ, ಚೀನಾ, ಟರ್ಕಿ ಹಾಗೂ ಅಜರ್‌ಬೈಜಾನ್ ಎಲ್ಲಾ ಫ್ಲೈಟ್ ಹಾಗೂ ಹೊಟೆಲ್ ಬುಕಿಂಗ್ ಕ್ಯಾನ್ಸಲ್ ಮಾಡುತ್ತಿದ್ದೇವೆ ಎಂದು ಇಕ್ಸಿಗೋ ಸಿಇಒ ಅಲೋಕ್ ಬಾಜ್‌ಪೈ ಟ್ವೀಟ್ ಮಾಡಿದ್ದಾರೆ. ದೇಶದ ಪ್ರಶ್ನೆ ಬಂದಾಗ ಇನ್ಯಾವುದು ನೋಡುವುದಿಲ್ಲ. ನಾವು ಭಾರತದ ಜೊತೆಗೆ, ನಮ್ಮ ಯೋಧರ ಜೊತೆ ನಿಲ್ಲುತ್ತೇವೆ. ಹೀಗಾಗಿ ಚೀನಾ, ಟರ್ಕಿ, ಅಜರ್‌ಬೈಜನ್ ಫ್ಲೈಟ್, ಹೊಟೆಲ್ ಬುಕಿಂಗ್ ರದ್ದು ಮಾಡುತ್ತಿದ್ದೇವೆ ಎಂದು ಇಕ್ಸಿಕೋ ಟ್ವೀಟ್ ಮಾಡಿದೆ. 

ಇದಕ್ಕೂ ಮೊದಲು ಈಸ್ ಮೈ ಟ್ರಿಪ್ ಹಾಗೂ ಕಾಕ್ಸ್ ಆ್ಯಂಡ್ ಕಿಂಗ್ ಕಂಪನಿ ಕೂಡ ಇದೇ ನಿರ್ಧಾರವನ್ನು ಘೋಷಿಸಿತ್ತು. ಇದೀಗ ಇಕ್ಸಿಗೋ ಘೋಷಿಸಿದೆ. ಇನ್ನು ಗೋ ಹೋಮ್‌ಸ್ಟೇ ಸಂಸ್ಥೆ, ಟರ್ಕಿಶಿ ಏರ್‌ಲೈನ್ಸ್ ಜೊತೆ ಮಾಡಿದ್ದ ಒಪ್ಪಂದದಿಂದ ಹಿಂದೆ ಸರಿದಿದೆ. ಭಾರತದ ವಿರುದ್ದ ನಿಲುವು ಇರುವ ಟರ್ಕಿ ಜೊತೆಗಿನ ಎಲ್ಲಾ ಅಂತಾರಾಷ್ರೀಯ ವಿಮಾನ ಸೇವೆ ಒಪ್ಪಂದ, ಟ್ರಾವೆಲ್ ಪ್ಯಾಕೇಜ್ ರದ್ದುಗೊಳಿಸುತ್ತಿದ್ದೇವೆ ಎಂದಿತ್ತು.

 

Scroll to load tweet…

 

ವರ್ತಕರಿಂದ ಆ್ಯಪಲ್ ಬ್ಯಾನ್
ಟರ್ಕಿ ಆ್ಯಪಲ್ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿತ್ತು. ಇದರಿಂದ 1,000 ದಿಂದ 2,000 ಕೋಟಿ ರೂಪಾಯಿ ವೆರೆಗಿನ ವಹಿವಾಟನ್ನು ಟರ್ಕಿ ಮಾಡುತ್ತಿತ್ತು. ಆದರೆ ಟರ್ಕಿ, ಪಾಕಿಸ್ತಾನಕ್ಕೆ ನೆರವು ನೀಡಿದ ಕಾರಣ ಪುಣೆ ಸೇಬು ಹಣ್ಣಿನ ವರ್ತಕರು ಟರ್ಕಿ ಆ್ಯಪಲ್  ಹಣ್ಣು ನಿಷೇಧಿಸಿದ್ದಾರೆ. ಹಿಮಾಚಲ ಪ್ರದೇಶ, ಉತ್ತರಖಂಡ ಹಾಗೂ ಇರಾನ್‌ನಿಂದ ಆ್ಯಪಲ್ ತರಿಸಿಕೊಳ್ಳಲಾಗುತ್ತದೆ ಎಂದು ಪುಣೆ ವರ್ತಕರು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್‌ಗೆ ಬಿಗ್ ಶಾಕ್ ಕೊಟ್ಟ ಭಾರತ; ಮೊದಲ ಬಾರಿಗೆ ಮಹತ್ವದ ನಿರ್ಧಾರ