ಇನ್ನು 30 ವರ್ಷದಲ್ಲಿ ದೇಶದ ಜನಸಂಖ್ಯೆ 160 ಕೋಟಿ ಆದರೂ ನಂತರದ ದಿನಗಳಲ್ಲಿ ಶೇ.3.2ರಷ್ಟುಇಳಿಕೆ ಕಂಡು 2100ರ ಹೊತ್ತಿಗೆ 109 ಕೋಟಿಗೆ ಕುಸಿಯಬಹುದೆಂಬ ಅಂದಾಜಿದೆ.

ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯು ಭವಿಷ್ಯದಲ್ಲಿ ಮನುಕುಲಕ್ಕೆ ಮಾರಕವಾಗಲಿದೆ ಎಂದು 19ನೆಯ ಶತಮಾನದಲ್ಲಿಯೇ ಹೇಳಿದ್ದ ಬ್ರಿಟಿಷ್‌ ಅರ್ಥಶಾಸ್ತ್ರಜ್ಞ ರಾಬರ್ಚ್‌ ಮಾಲ್ಥಸ್‌. ಅವರು ಬರೆದ ‘ಪ್ರಿನ್ಸಿಪಲ್ಸ್‌ ಆಫ್‌ ಪಾಪ್ಯುಲೇಶನ್‌’ ಎಂಬ ಪ್ರಬಂಧದಲ್ಲಿ ಜನಸಂಖ್ಯೆಯ ಹೆಚ್ಚಳದಿಂದ ಈಗ ಆಗುವ ಸಮಸ್ಯೆ ಮತ್ತು ಕೊರತೆಗಳನ್ನು ಆಗಲೇ ವಿವರಿಸಿದ್ದರು.

ಜನಸಂಖ್ಯೆ ನಾಗಾಲೋಟದಲ್ಲಿ ಬೆಳೆಯುತ್ತದೆ, ಆಹಾರದ ಉತ್ಪನ್ನದ ಪ್ರಮಾಣ ಆಮೆಯ ವೇಗದಲ್ಲಿ ವೃದ್ಧಿಸುತ್ತದೆ ಎಂದು ಹೇಳಿದ್ದರು. ದಿನ ಕಳೆದಂತೆ ಭವಿಷ್ಯದಲ್ಲಿ ಇವುಗಳ ಅಂತರ ಹೆಚ್ಚಾಗಿ ಅಂತರಿಕ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಹೀಗಾಗಿ ಜನಸಂಖ್ಯೆ ಹೆಚ್ಚುತ್ತಿರುವ ದೇಶಗಳು ಸಕಾರಾತ್ಮಕವಾಗಿ ನಿಯಂತ್ರಿಸಿಕೊಳ್ಳಬೇಕು, ಒಂದು ವೇಳೆ ಆಡಳಿತ ವ್ಯವಸ್ಥೆ ನಿಯಂತ್ರಿಸದಿದ್ದರೆ ಪ್ರಕೃತಿಯೇ ಅದನ್ನು ನಿಯಂತ್ರಿಸುತ್ತದೆ ಎಂದು ಹೇಳಿದ್ದರು.

ಪ್ರಕೃತಿಯೇ ನಿಯಂತ್ರಿಸುತ್ತದೆ!

ಯುದ್ಧಗಳು, ಬರಗಾಲ, ಸಾಂಕ್ರಾಮಿಕ ರೋಗಗಳಂಥ ಮಹಾವ್ಯಾಧಿಗಳು ವಿವಿಧ ಬಗೆಗಳಲ್ಲಿ ನಾಗರಿಕತೆಯನ್ನು ಕಾಡಿ ಜನಸಂಖ್ಯೆಯನ್ನು ಕಡಿಮೆಗೊಳಿಸುತ್ತವೆ. ಆಗ ಹೇಳಿದ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕೆಲವು ದೇಶಗಳು ಕುಟುಂಬ ಯೋಜನೆಯನ್ನು ಯುದ್ಧೋಪಾದಿಯಲ್ಲಿ ಜಾರಿಗೆ ತಂದವು. ವಿಶೇಷವಾಗಿ ಚೀನಾ ದೇಶ ‘ಒಂದು ಕುಟುಂಬಕ್ಕೆ ಒಂದೇ ಮಗು’ ಎಂಬ ನೀತಿ ತಂದಿತು. ಅದರ ಫಲ ಈಗ ಸೂಪರ್‌ ಪವರ್‌ ದೇಶವಾಗಿ ಖ್ಯಾತಿಗೂ ಮತ್ತು ಕುಖ್ಯಾತಿಗೂ ಪಾತ್ರವಾಗಿದೆ. ಇದೇ ರೀತಿ ಅಮೆರಿಕ ಕೂಡ ತನ್ನ ದೇಶದ ಜನಸಂಖ್ಯೆಯನ್ನು ನಿಯಂತ್ರಿಸಿ ಅಭಿವೃದ್ಧಿಯ ವೇಗ ಕಾಯ್ದುಕೊಂಡಿದೆ. ಇಂದಿನ ನಮ್ಮ ಕಳವಳಕಾರಿ ಸಂಗತಿಯೆಂದರೆ, 1947ರಲ್ಲಿ ಭಾರತದ ಜನಸಂಖ್ಯೆ ಕೇವಲ 33 ಕೋಟಿ ಇದ್ದುದು ಈಗ 140 ಕೋಟಿಗೇರಿ ಜಗತ್ತಿನ ಜನಸಂಖ್ಯೆಯ ಬೆಳವಣಿಗೆಯ ದರದಲ್ಲಿ 2ನೆಯ ಸ್ಥಾನಕ್ಕೇರಿದೆ.

Indian Economy: ದೇಶ ಮತ್ತೆ 1991 ರ ಆರ್ಥಿಕ ದುಸ್ಥಿತಿಯತ್ತ ಸಾಗುತ್ತಿದೆ ಎಂಬ ಆರೋಪಗಳು ನಿಜನಾ.?

ಭಾರತದ ಅರ್ಧಕ್ಕಿಂತಲೂ ಹೆಚ್ಚು ಮಂದಿ 25ಕ್ಕಿಂತ ಹೆಚ್ಚು ವಯಸ್ಸಿನವರು! ಸಾವಿನ ಪ್ರಮಾಣ, ವಲಸೆ ಗತಿ ಹಾಗೂ ಸಂತಾನೋತ್ಪತ್ತಿ ಸಮೃದ್ಧತೆಯ ಅಂಕಿ-ಅಂಶಗಳನ್ನು ಆಧರಿಸಿ ಸಂಶೋಧಕರು ಭಾರತದ ಭವಿಷ್ಯದ ಜನಸಂಖ್ಯೆಯ ಸಾಧ್ಯತೆಗಳನ್ನು ಅಂದಾಜಿಸಿದ್ದಾರೆ.

ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್‌ ಸಾಂಕ್ರಾಮಿಕದಿಂದ ಜಗತ್ತಿನಲ್ಲಿ ಸಂಭವಿಸಿರುವ ಸಾವಿನ ಪ್ರಮಾಣವನ್ನು ಕೂಡ ಭವಿಷ್ಯದ ಜನಸಂಖ್ಯೆ ಅಂದಾಜಿಸಲು ಸಂಶೋಧಕರು ಪರಿಗಣಿಸಿದ್ದಾರೆ. ವಿಶ್ವದಲ್ಲಿ ಚೀನಾ ನಂತರ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಮುಂದಿನ 28 ರ್ಷಗಳಲ್ಲಿ ಜನಸಂಖ್ಯೆ ತೀವ್ರಗತಿಯಲ್ಲಿ ಏರಲಿದೆ. 2048ರ ಹೊತ್ತಿಗೆ ಭಾರತದ ಜನಸಂಖ್ಯೆ 160 ಕೋಟಿ ಮುಟ್ಟಲಿದೆ ಎಂದು ಸದ್ಯದ ಅಧ್ಯಯನ ತಿಳಿಸಿದೆ.

ಕುಟುಂಬ ಯೋಜನೆಯ ಸವಾಲು

ನಮ್ಮ ದೇಶದಲ್ಲಿ ರಾಷ್ಟ್ರೀಯ ಕುಟುಂಬ ಯೋಜನೆ ಕಾರ್ಯಕ್ರಮ ಆಚರಣೆಗೆ ಬಂದ 69 ರ್ಷಗಳ ನಂತರವೂ ಜನತೆಯ ಹಿಂದಿನ ಪ್ರವೃತ್ತಿಗಳು ಹೆಚ್ಚು ಬದಲಾಗಿಲ್ಲ. ಕುಟುಂಬ ಯೋಜನೆಯಲ್ಲಿ ಭಾಗವಹಿಸುವಲ್ಲಿ ಸ್ತ್ರೀಯರಿಗಿಂತ ಪುರುಷರು ಕಡಿಮೆ ಉತ್ಸಾಹ ಹೊಂದಿದ್ದಾರೆ. ಇದೇ ಕಾರಣಕ್ಕೆ ಪುರುಷರ ಸಂತಾನಹರಣ ವಿಧಾನವಾದ ವ್ಯಾಸೆಕ್ಟಮಿ ಭಾರತದಲ್ಲಿ ಅತಿ ಕಡಿಮೆ ಆದ್ಯತೆಯಲ್ಲಿ ಪ್ರಯೋಗಿಸಲ್ಪಟ್ಟಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವಿವರಿಸುತ್ತದೆ. ಇತ್ತೀಚೆಗೆ ಕಾಂಡೋಮ್‌ ಬಳಕೆ ಕೂಡ ಶೇ.52ರಷ್ಟುಕಡಿಮೆಯಾಗಿದೆ ಮತ್ತು ಸಂತಾನಹರಣ ಕೇಂದ್ರಗಳು ಶೇ.73ಕ್ಕೆ ಇಳಿದಿವೆ.

EPF ಹೊಸ ಪ್ಲ್ಯಾನ್, ಜುಲೈ 30 ಕ್ಕೆ ದೇಶದ 73 ಲಕ್ಷ ಪಿಂಚಣಿದಾರರಿಗೆ ಸಿಗಲಿದೆ ಗುಡ್‌ನ್ಯೂಸ್!

ಕಳೆದ ಒಂದು ದಶಕದಲ್ಲಿ, ಮಹಿಳೆಯರಲ್ಲಿ ನೈರ್ಮಲ್ಯದ ಬಗ್ಗೆ ಕಾಳಜಿ ಹೆಚ್ಚಿದೆ. ಸ್ತ್ರೀಯರು ಕ್ರಮೇಣ ಕುಟುಂಬ ಯೋಜನೆಯ ಮಹತ್ವದ ಬಗ್ಗೆ ಅರಿತುಕೊಳ್ಳುತ್ತಿದ್ದಾರೆ. ಆದರೂ, ಗಂಡು ಮಗು ಬೇಕೆನ್ನುವ ಕುಟುಂಬದ ಒತ್ತಡವನ್ನು ಪ್ರತಿಭಟಿಸುವ ಶಕ್ತಿಯನ್ನು ಹೆಣ್ಮಕ್ಕಳು ಇನ್ನೂ ಪಡೆದಿಲ್ಲ. ವಿಶೇಷವಾಗಿ ಸಮಾಜದ ಕೆಳರ್ಗದಲ್ಲಿ ಈ ಪ್ರಕ್ರಿಯೆ ಹೆಚ್ಚಾಗಿ ಕಾಣಬರುತ್ತಿದೆ. ದೇಶದ ನಾಗರಿಕತೆ ಬೆಳೆದಂತೆ ಜನ ಹೆಚ್ಚು ಹೆಚ್ಚು ಪ್ರಬುದ್ಧರಾಗಬೇಕು. ಆಗ ದೇಶ ಸುಭಿಕ್ಷವಾಗುತ್ತದೆ. ಭಾರತದ ಜನಸಂಖ್ಯೆ ಹೆಚ್ಚು ಹೆಚ್ಚು ಮಧ್ಯವಯಸ್ಕವಾಗುತ್ತಿದೆ.

ಫಲವತ್ತತೆ ಸೂಚ್ಯಂಕ ಕಡಿಮೆಯಾಗುವುದರೊಂದಿಗೆ ಆಯರ್ಮಾನ ಹೆಚ್ಚುತ್ತಿದೆ. ಬಿಹಾರದ ಫಲವತ್ತತೆ ದರ ದೇಶದಲ್ಲೇ ಹೆಚ್ಚು 3.2% ಇದೆ. ನಂತರದ ಸ್ಥಾನ ಉತ್ತರ ಪ್ರದೇಶದ್ದು. ಇಲ್ಲಿನ ಫಲವತ್ತತೆ ದರ 2.9% ಇದೆ. ಕೇರಳ ರಾಜ್ಯದಲ್ಲಿ ಫಲವತ್ತತೆ ದರ 1.7%ರಷ್ಟುಕೆಳಕ್ಕೆ ಇಳಿದಿದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಜಮ್ಮು ಕಾಶ್ಮೀರ, ಹಿಮಾಚಲ ಹಾಗೂ ಪಂಜಾಬ್‌ಗಳ ಫಲವತ್ತತೆ ದರ ಈಗ ಕೇರಳಕ್ಕಿಂತಲೂ ಕೆಳಕ್ಕಿಳಿದಿದ್ದು, 1.6%ರಷ್ಟಿದೆ. ಆದರೆ ಇವುಗಳ ಯುವಜನರ ಪ್ರಮಾಣ ಕೇರಳಕ್ಕಿಂತ ಹೆಚ್ಚು ಇದೆ.

ವೃದ್ಧರ ಸಂಖ್ಯೆ ಹೆಚ್ಚಳದ ಸಮಸ್ಯೆ

ಇನ್ನೊಂದು ವಿಚಿತ್ರ ಸಂಗತಿ ಎಂದರೆ, ನಗರ ಪ್ರದೇಶದಲ್ಲಿ ಫಲವತ್ತತೆ ದರ ಕಡಿಮೆ ಹಾಗೂ ಹಳ್ಳಿ ಪ್ರದೇಶದಲ್ಲಿ ಹೆಚ್ಚು ಇದೆ; ಹೀಗಾಗಿ ಯುವಜನರ ಸಂಖ್ಯೆ ಪ್ರಮಾಣ ಹಳ್ಳಿಗಳಲ್ಲಿ ಹೆಚ್ಚಿದೆ ಹಾಗೂ ನಗರಗಳಲ್ಲಿ ಕಡಿಮೆ ಇದೆ. ಈ ಅಂಕಿ ಸಂಖ್ಯೆಗಳನ್ನು ಪ್ರಭಾವಿಸುವಲ್ಲಿ ಇನ್ನೊಂದು ಅಂಶವೂ ಇರಬಹುದು. ಗ್ರಾಮಾಂತರ ಪ್ರದೇಶಗಳಿಂದ ನಗರಗಳಿಗೆ ಯಾವಾಗಲೂ ವಲಸೆ ನಡೆಯುತ್ತಲೇ ಇರುತ್ತದೆ. ಮಹಿಳೆಯರಲ್ಲಿ ಸರಾಸರಿ ಆಯರ್ಮಾನ ಪ್ರಮಾಣ ಹೆಚ್ಚು ಇದೆ. ಕೆಲವು ರಾಜ್ಯಗಳಲ್ಲಿ ವರ್ಷಾಂತರಗಳಿಂದ ಲಿಂಗಾನುಪಾತದಲ್ಲಿ ಮಹಿಳೆಯರ ಪ್ರಮಾಣ ಕಡಿಮೆ; ಹೀಗಾಗಿ 25 ವರ್ಷದೊಳಗಿನ ಯುವಜನರ ಪ್ರಮಾಣದಲ್ಲಿ ಸ್ತ್ರೀಯರ ಸಂಖ್ಯೆ ಕಡಿಮೆಯದಾಗಿ ಕಾಣುತ್ತಿದೆ. ರಾಷ್ಟ್ರೀಯ ಸರಾಸರಿ ತೆಗೆದರೆ 25 ವರ್ಷದೊಳಗಿನ ಸ್ತ್ರೀಯರ ಪ್ರಮಾಣ ಶೇ.46.3 ಇದೆ; ಪುರುಷರ ಪ್ರಮಾಣ ಶೇ.47.44 ಇದೆ.

ದ್ವೀಪದೇಶ ಶ್ರೀಲಂಕಾ ಅಯೋಮಯ: ನೆರೆಮನೆ ಅರಾಜಕತೆ!

2048ರ ಹೊತ್ತಿಗೆ ದೇಶದ ಜನಸಂಖ್ಯೆ 160 ಕೋಟಿ ಆದರೂ ನಂತರದ ದಿನಗಳಲ್ಲಿ ಶೇ.3.2ರಷ್ಟುಇಳಿಕೆ ಕಂಡು 2100ರ ಹೊತ್ತಿಗೆ 109 ಕೋಟಿಗೆ ಕುಸಿಯಬಹುದೆಂಬ ಅಂದಾಜಿದೆ. ಹಾಗೆಯೇ ದೇಶದಲ್ಲಿನ ದುಡಿಯುವ ವಯಸ್ಕರ ಸಂಖ್ಯೆ 2017ರಲ್ಲಿ 76 ಕೋಟಿ ಇದ್ದುದು 2100ರ ಹೊತ್ತಿಗೆ 57.8 ಕೋಟಿಗೆ ಇಳಿಕೆಯಾಗಲಿದೆ.

ನೆರೆಯ ಚೀನಾದಲ್ಲಿ 2017ರಲ್ಲಿ 95 ಕೋಟಿಯಷ್ಟಿದ್ದ ದುಡಿಯುವ ಸಾಮರ್ಥ್ಯದ ವಯಸ್ಕರ ಪ್ರಮಾಣ 2100ರ ವೇಳೆಗೆ 35.7 ಕೋಟಿಗೆ ಕುಸಿಯಲಿದೆ. ಅಂದರೆ ಭಾರತ ಹಾಗೂ ಚೀನಾದಲ್ಲಿ ಹಿರಿಯ ನಾಗರಿಕರ ಪ್ರಮಾಣ ಹೆಚ್ಚಲಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಧಕ್ಕೆಯಾಗಲಿದೆ. ಜಾಗತಿಕವಾಗಿ ಪ್ರಭಾವ ಕಡಿಮೆಯಾದ ರಾಷ್ಟ್ರಗಳ ಪಟ್ಟಿಗೆ ಇವು ಸರ್ಪಡೆಯಾಗಲಿವೆ ಎಂದು ಲ್ಯಾನ್ಸೆಟ್‌ ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟವಾದ ಅಮೆರಿಕದ ತಜ್ಞರ ಅಧ್ಯಯನ ವರದಿ ಹೇಳುತ್ತದೆ.

- ಪ್ರೊ.ಮಂಜುನಾಥ ಉಲವತ್ತಿ ಶೆಟ್ಟರ್‌, ಬಳ್ಳಾರಿ