ದ್ವೀಪದೇಶ ಶ್ರೀಲಂಕಾ ಅಯೋಮಯ: ನೆರೆಮನೆ ಅರಾಜಕತೆ!
ಸಾಂಸ್ಕೃತಿಕ, ಬೌದ್ಧಿಕ,ಭಾಷಿಕ ಮತ್ತು ಧಾರ್ಮಿಕವಾಗಿ ಭಾರತದೊಂದಿಗೆ ಸಾಕಷ್ಟು ಸಾಮ್ಯತೆ ಹೊಂದಿರುವ ನೆರೆಮನೆ ಶ್ರೀಲಂಕಾದಲ್ಲೀಗ ಅರಾಜಕತೆ ಭುಗಿಲೆದ್ದಿದೆ. ದಶಕಗಳ ಕಾಲದ ಕುಟುಂಬ ರಾಜಕೀಯ, ಆಡಳಿತದಲ್ಲಿನ ಮಿತಿಮೀರಿದ ಭ್ರಷ್ಟಾಚಾರ, ರಾಜಕೀಯ ನಾಯಕರ ದೂರದೃಷ್ಟಿ ಕೊರತೆಯಳ್ಳ ನೀತಿಗಳು, ಆರ್ಥಿಕತೆಗೆ ಪೂರ್ಣವಾಗಿ ಪ್ರವಾಸೋದ್ಯಮವನ್ನೇ ನಂಬಿರುವ ದೇಶದಲ್ಲೀಗ ಯಾರಿಗೂ ಏನೂ ಅರಿವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಸಿವಿನಿಂದ ಕಂಗೆಟ್ಟ ಲಕ್ಷಾಂತರ ಜನ ಬೀದಿಗಿಳಿದು ಅಳಿವು-ಉಳಿವಿನ ಹೋರಾಟ ಆರಂಭಿಸಿದ್ದಾರೆ. ಲಂಕಾದ ಈ ಅಯೋಮಯ ಸ್ಥಿತಿಯ ಹಿನ್ನೆಲೆ, ಅದರ ಪರಿಣಾಮಗಳ ಕುರಿತ ಹಿನ್ನೋಟ ಇಲ್ಲಿದೆ..
ಹೆಚ್ಚು ಕಡಿಮೆ ಬೆಂಗಳೂರಿನ ಎರಡು ಪಟ್ಟು ಅಥವಾ ಕರ್ನಾಟಕದ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗ (2.1 ಕೋಟಿ) ಜನಸಂಖ್ಯೆಯ ಪುಟ್ಟ ದೇಶ ಶ್ರೀಲಂಕಾ, ತನ್ನ ಆರ್ಥಿಕತೆಗೆ ಬಹುತೇಕ ಪ್ರವಾಸೋದ್ಯಮ ನೆಚ್ಚಿಕೊಂಡಿದೆ. ಇಲ್ಲಿನ ಬೀಚ್, ರೆಸಾರ್ಟ್, ಕ್ಯಾಸಿನೋಗಳು ವಿದೇಶಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳು.
ಆದರೆ ದಶಕಗಳಿಂದಲೂ ದೇಶವನ್ನಾಳಿದ ಸರ್ಕಾರಗಳು ತನ್ನ ಆರ್ಥಿಕತೆ ಅಭಿವೃದ್ಧಿಗೆ ಪ್ರವಾಸೋದ್ಯಮ ಬಿಟ್ಟರೆ ಬೇರೆ ಮಾರ್ಗ ಹುಡುಕಲಿಲ್ಲ. ದೂರದೃಷ್ಟಿ ಇಟ್ಟುಕೊಂಡು ಆರ್ಥಿಕತೆ ಕಟ್ಟುವ ಕೆಲಸ ಮಾಡಲಿಲ್ಲ. ನಿತ್ಯದ ಬಹುತೇಕ ವಸ್ತುಗಳಿಗೆ ವಿದೇಶಗಳನ್ನೇ ನಂಬಿರುವ ಲಂಕಾ ಸರ್ಕಾರ, ದೇಶೀಯ ಮಾರುಕಟ್ಟೆಗೆ ಬೇಕಾದ ವಸ್ತುಗಳನ್ನು ಪೂರೈಕೆ ಮಾಡುವುದಕ್ಕೇ ಅಭಿವೃದ್ಧಿ ಯೋಜನೆ ಸೀಮಿತ ಮಾಡಿತೇ ಹೊರತೂ ವಿದೇಶಗಳಿಗೆ ಮಾಡತೇ ಮಾಡುವಂಥ ಯಾವುದೇ ಉದ್ಯಮ ಬೆಳೆಸಲಿಲ್ಲ. ಹೀಗಾಗಿ ಪ್ರತಿ ವರ್ಷ ದೇಶದ ಮಾಡುತೇ ಕುಂಠಿತವಾಗಿ, ಆಮದು ಹೆಚ್ಚಾಗುತ್ತಲೇ ಹೋಯಿತು. ದೇಶದ ವಿದೇಶಿ ವಿನಿಮಯ ಕೊರತೆಯ ಮೊದಲ ಹೆಜ್ಜೆ ಆರಂಭವಾಗಿದ್ದು ಈ ಹಂತದಲ್ಲಿ.
ಈ ನಡುವೆ 2019ರ ಈಸ್ಟರ್ ಭಾನುವಾರ ಸರಣಿ ಬಾಂಬ್ ಸೋಟ ಇಡೀ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿತು. ವಿದೇಶಿಗರನ್ನೇ ಗುರಿಯಾಗಿಸಿ ನಡೆದ ದಾಳಿ ವಿದೇಶಿಗರಲ್ಲಿ ಲಂಕಾ ಬಗ್ಗೆ ಆತಂಕ ಹುಟ್ಟುಹಾಕಿ, ಪ್ರವಾಸಿಗರ ಸಂಖ್ಯೆ ಇಳಿಕೆ ಮಾಡಿತು. ಪರಿಣಾಮ ಜನರ ಕೈಖಾಲಿಯಾಗಿದ್ದು ಮಾತ್ರವಲ್ಲದೇ, ಸರ್ಕಾರದ ಬೊಕ್ಕಸವೂ ಬರಿದಾಯಿತು. ಹೀಗಾಗಿ ಸರ್ಕಾರ ಜನರನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ತೆರಿಗೆ ದರ ಕಡಿತ ಮಾಡಿತು. ಆದರೆ ಇದರಿಂದಾಗಿ ಸರ್ಕಾರ ಬೊಕ್ಕಸದ ಕೊರತೆ ಇನ್ನಷ್ಟು ಹಿರಿದಾಯಿತು.
ಶ್ರೀಲಂಕಾ ಸ್ಥಿತಿ ಬಗ್ಗೆ IMF ಕಣ್ಣು, ರಾಜಕೀಯ ಸಂಕಷ್ಟ ನಿವಾರಣೆಯಾಗುತ್ತಿದ್ದಂತೆಯೇ ಬೇಲ್‌ಔಟ್ ಡೀಲ್ ಚರ್ಚೆ!
ಇದರ ನಡುವೆಯೇ 2020ರಲ್ಲಿ ಕಾಣಿಸಿಕೊಂಡ ಕೋವಿಡ್ ಬಿಕ್ಕಟ್ಟು ಪ್ರವಾಸೋದ್ಯಮವನ್ನು ಶೂನ್ಯಸ್ಥಿತಿಗೆ ತಲುಪಿಸಿತು. ದೇಶದ ಆದಾಯ, ವಿದೇಶಿ ವಿನಿಮಯ ಹರಿವು ಶೂನ್ಯವನ್ನು ಅಪ್ಪಿಕೊಂಡಿತು. 2019ರಲ್ಲಿ ದೇಶದ ವಿದೇಶಿ ಸಾಲ ಒಟ್ಟು ಜಿಡಿಪಿಯ ಶೇ.42ರಷ್ಟಿದ್ದರೆ, 2021ರಲ್ಲಿ ಅದು ಜಿಡಿಪಿಯ ಶೇ.101ಕ್ಕೆ ತಲುಪುವ ಮೂಲಕ ದೇಶದ ದುಸ್ಥಿತಿಗೆ ಕನ್ನಡಿ ಹಿಡಿಯಿತು.
ಬೇರೆ ದಾರಿ ಕಾಣದ ಸರ್ಕಾರ ವಿದೇಶಿ ವಿನಿಮಯ ಉಳಿಸಲು ವಿದೇಶದಿಂದ ರಸಗೊಬ್ಬರ ಆಮದಿಗೆ ನಿಷೇಧ ಹೇರಿತು. ಇದು ಕೃಷಿ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರಿ, ಭತ್ತ ಸೇರಿದಂತೆ ಅಗತ್ಯ ಆಹಾರ ವಸ್ತುಗಳ ಉತ್ಪಾದನೆಯಲ್ಲಿ ಭಾರೀ ಕುಸಿತಕ್ಕೆ ದಾರಿ ಮಾಡಿಕೊಟ್ಟಿತು. ಹೀಗಾಗಿ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಆಹಾರದ ಸಮಸ್ಯೆ ಕಾಣಿಸಿಕೊಂಡಿತು. ವಿದೇಶಿ ವಿನಿಮಯ ಉಳಿಸಲು ಸರ್ಕಾರ ಕೈಗೊಂಡ ಪ್ರತಿ ಕ್ರಮಗಳು ಸರ್ಕಾರಕ್ಕೆ ವಿರುದ್ಧವಾಗಿಯೇ ಪುಟಿದೆದ್ದು, ಸರ್ಕಾರದ ಬೊಕ್ಕಸವನ್ನು ದಿನೇ ದಿನೇ ಖಾಲಿ ಮಾಡುತ್ತಲೇ ಹೋಯಿತು.
2022ರಲ್ಲಿ ಸರ್ಕಾರದ ಬಳಿ ವಿದೇಶಗಳಿಂದ ತೈಲ ಸೇರಿದಂತೆ ಅಗತ್ಯ ವಸ್ತು ಖರೀದಿಗೂ ಲಂಕಾ ಬಳಿ ಹಣ ಇಲ್ಲದಾಯಿತು. ಸರ್ಕಾರದ ವಿದೇಶಿ ಸಾಲ 4 ಲಕ್ಷ ಕೋಟಿ ದಾಟಿದ ಕಾರಣ, ಎಲ್ಲಿಂದಲೂ ನೆರವು ಸಿಗಲಿಲ್ಲ. ಪರಿಣಾಮ ದೇಶಾದ್ಯಂತ ಅಕ್ಕಿ, ಎಣ್ಣೆ, ಗೋ„, ಹಾಲಿನ ಪುಡಿ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿತು. ಪೆಟ್ರೋಲ್, ಡೀಸೆಲ್ ಖರೀದಿಗಾಗಿ ವಾರಗಟ್ಟಲೆ ಕಾಯುವಂತಾಯಿತು. ಇದರ ನಡುವೆ ಗೋಟಬಯ ಕುಟುಂಬದ ರಾಜಕೀಯ ಭ್ರಷ್ಟಾಚಾರ ಕೂಡಾ ಜನರ ಆಕ್ರೋಶದ ಬೆಂಕಿಗೆ ತುಪ್ಪ ಸುರಿದು ಜನರು ಬೀದಿಗಿಳಿದು ಹೋರಾಡುವಂತೆ ಮಾಡಿದೆ.
92 ದಿನಗಳ ಸುದೀರ್ಘ ಹೋರಾಟ
ಶನಿವಾರ ಶ್ರೀಲಂಕಾದಲ್ಲಿ ನಡೆದ ಹಿಂಸಾಚಾರಕ್ಕೆ ಸುದೀರ್ಘ 92 ದಿನಗಳ ಹೋರಾಟದ ಹಿನ್ನೆಲೆ ಇದೆ. ದೇಶದಲ್ಲಿ ದಿನೇ ದಿನೇ ಕುಸಿಯುತ್ತಿರುವ ಆರ್ಥಿಕತೆ, ನಿರುದ್ಯೋಗ ಹೆಚ್ಚಳ, ಹಣದುಬ್ಬರ ಹೆಚ್ಚಳ ಜನರನ್ನು ಹೈರಾಣಾಗಿಸಿತ್ತು. ಇದರ ವಿರುದ್ಧ 2022 ಮಾರ್ಚ್ ಮಧ್ಯಭಾಗದಲ್ಲಿ ನಿಧಾನವಾಗಿ ಪ್ರತಿಭಟನೆಯ ಸಣ್ಣ ಕಿಚ್ಚು ಹೊತ್ತಿಕೊಂಡಿತ್ತು. ಮೊದಲಿಗೆ ಕೊಲಂಬೋಗೆ ಸೀಮಿತವಾಗಿದ್ದ ಪ್ರತಿಭಟನೆ ನಿಧಾನವಾಗಿ ದೇಶವ್ಯಾಪಿ ಆಯಿತು. ಎಲ್ಲೆಡೆ ಸಣ್ಣ ಸಣ್ಣ ಮಟ್ಟದಲ್ಲಿ ಆಡಳಿತ ವಿರೋ„, ರಾಜಪಕ್ಸೆ ಕುಟುಂಬದ ವಿರುದ್ಧ ಆಕ್ರೋಶದ ಕಿಡಿ ಏಳಲಾರಂಭಿಸಿತು. ಮಾರ್ಚ್ ಅಂತ್ಯದ ವೇಳೆಗೆ ಸಾವಿರಾರು ಜನ ಬೀದಿಗಿಳಿದು ಹೋರಾಟ ಆರಂಭಿಸಿದರು.
ಶ್ರೀಲಂಕಾದಲ್ಲಿ ಮುಂದೇನು? ಗೊಟಬಯ ರಾಜೀನಾಮೆ ಬಳಿಕ ಮುಂದಿನ ಅಧ್ಯಕ್ಷರ ಆಯ್ಕೆ ಹೇಗೆ ನಡೆಯುತ್ತೆ?
ಜನರ ಆಕ್ರೋಶ ತಡೆಯಲಾಗದ ಸರ್ಕಾರ ಏ.2ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿತು. ದೇಶಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿ ಹೋರಾಟ ಹತ್ತಿಕ್ಕುವ ಯತ್ನ ಮಾಡಲಾಯಿತು. ಆದರೆ ಜನರು ಇದಕ್ಕೆ ಜಗ್ಗಲಿಲ್ಲ. ತಮ್ಮ ಹೋರಾಟ ಮತ್ತಷ್ಟು ತೀವ್ರಗೊಳಿಸಿದರು. ಹೀಗಾಗಿ ಜನಾಕ್ರೋಶ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕೆಲ ಸಚಿವರ ರಾಜೀನಾಮೆ ಪಡೆಯಿತು. ಆದರೂ ಜನರ ಆಕ್ರೋಶ ತಣ್ಣಗಾಲಿಲ್ಲ. ಏ.9ರಂದು ಜನರು ಕೊಲಂಬೋದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಅಧ್ಯಕ್ಷರ ಮನೆ ಮುಂದಿನ ಸ್ಥಳವನ್ನು ಆಕ್ರಮಿಸಿಕೊಂಡರು. ಹೋರಾಟ ಹತ್ತಿಕ್ಕಲು ಭದ್ರತಾ ಪಡೆಗಳನ್ನು ಬಳಸಿಕೊಂಡ ಸರ್ಕಾರ, ಪ್ರತಿಭಟನಾಕಾರರ ಮೇಲೆ ಕ್ರೌರ್ಯವೆಸಗಿತು.
ಇದಕ್ಕೆ ಜಾಗತಿಕ ಆಕ್ರೋಶ ವ್ಯಕ್ತವಾಗುತ್ತಲೇ ಮೇ 6ರಂದು ಎರಡನೇ ಬಾರಿಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಮೇ 9ರಂದು ಪ್ರಧಾನಿ ಮಹಿಂದಾ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಜೊತೆಗೆ ಕುಟುಂಬ ಸಮೇತ ಮನೆ ತೊರೆದು ನೌಕಾನೆಲೆಯಲ್ಲಿ ಆಶ್ರಯ ಪಡೆದುಕೊಂಡರು.
ಇದರಿಂದ ಆಕ್ರೋಶಗೊಂಡ ಜನರು ಅವರ ಮನೆಗೆ, ವಾಹನಕ್ಕೆ ಬೆಂಕಿ ಹಚ್ಚಿದರು. ಹೀಗಾಗಿ ಸರ್ಕಾರ ಕಂಡಲ್ಲಿ ಗುಂಡು ಹಾರಿಸಲು ಆದೇಶ ಹೊರಡಿಸಿತು. ಇದು ಪ್ರತಿಭಟನೆಯ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿತು. ಬೇರೆ ದಾರಿ ಕಾಣದೆ, ಸರ್ಕಾರ ಉಳಿಸಿಕೊಳ್ಳುವ ಅಂತಿಮ ಹಂತವಾಗಿ ಅಧ್ಯಕ್ಷ ಗೋಟಬಯ ರಾಜಪಕ್ಸೆ, ಮೇ 23ಕ್ಕೆ ಸಂವಿಧಾನಕ್ಕೆ 21 ತಿದ್ದುಪಡಿ ತಂದು, ಅಧ್ಯಕ್ಷರ ಅ„ಕಾರಕ್ಕೆ ಕತ್ತರಿ ಹಾಕಿದರು. ಆದರೂ ವಿಪಕ್ಷಗಳು ಮಣಿಯಲಿಲ್ಲ. ಬದಲಾಗಿ ಸರ್ಕಾರದ ರಾಜೀನಾಮೆ ಒತ್ತಾಯಿಸಿ ಪ್ರತಿಭಟನೆ ಮುಂದುವರೆದು, ಜು.9ಕ್ಕೆ ಅಧ್ಯಕ್ಷರ ಮನೆ ಮುತ್ತಿಗೆಗೆ ಕಾರಣವಾಗಿದೆ.
ಚೀನಾ ಸಾಲ ರಾಜತಾಂತ್ರಿಕತೆ ಕುತಂತ್ರಕ್ಕೆ ಲಂಕಾ ಬಲಿ
ಶ್ರೀಲಂಕಾ ಇಂದಿನ ಪರಿಸ್ಥಿತಿಗೆ ಚೀನಾದ ಬಹುದೊಡ್ಡ ಕೊಡುಗೆ ಇದೆ. ಲಂಕಾಕ್ಕೆ ನೆರವಿನ ನೆಪದಲ್ಲಿ ಚೀನಾ ಸರ್ಕಾರ 60000 ಕೋಟಿ ರು.ಗೂ ಹೆಚ್ಚಿನ ಸಾಲ ನೀಡಿ ವಿವಿಧ ಯೋಜನೆ ಜಾರಿ ಮಾಡಿದೆ. ಆದರೆ ಈ ಪೈಕಿ ಬಹುತೇಕ ಯೋಜನೆಗಳು ಚೀನಾ ನಿರ್ಮಾಣ ಕಂಪನಿಗಳಿಗೆ ಲಾಭ ಮಾಡುವ ಉದ್ದೇಶ ಹೊಂದಿತ್ತೇ ವಿನಃ, ಲಂಕಾ ನಾಗರಿಕರಿಗಿಲ್ಲ. ಈ ಯೋಜನೆಗಳಿಂದ ಆರ್ಥಿಕತೆಗೆ ಯಾವುದೇ ಲಾಭವಾಗದ ಕಾರಣ ಈ ಎಲ್ಲಾ ಯೋಜನೆಗಳು ಲಂಕಾ ಪಾಲಿಗೆ ಸಾಲದ ಕೂಪವಾಗಿ ಪರಿಣಮಿ ಸಿವೆ. ಚೀನಾದ ಸಾಲದ ರಾಜತಾಂತ್ರಿಕತೆ ಲಂಕಾವನ್ನು ತತ್ತರಿಸುವಂತೆ ಮಾಡಿದೆ. ಸಾಲ ತೀರಿಸಲಾ ಗದೇ ತನ್ನ ಆಯಕಟ್ಟಿನ ಭೂಭಾಗವನ್ನೇ ಚೀನಾ ಕಂಪನಿಗೆ ಮಾರುವ ಸ್ಥಿತಿಗೆ ಲಂಕಾ ತಲುಪಿದೆ.
ಆರ್ಥಿಕ ದುಸ್ಥಿತಿಯ ಪರಿಣಾಮಗಳೇನಾಯಿತು?
ಪ್ರವಾಸೋದ್ಯಮ ನಲುಗಿದ ಕಾರಣ, ಅದನ್ನೇ ಆದಾಯದ ಮೂಲವಾಗಿ ನಂಬಿದ್ದ ಸಾವಿರಾರು ಉದ್ಯಮಗಳು ಮುಚ್ಚಿದವು. ಲಕ್ಷಾಂತರ ಜನರು ಅಕ್ಷರಶಃ ನಿರುದ್ಯೋಗಿಗಳಾದರು. ರಸಗೊಬ್ಬರ ಕೊರತೆ ಕಾರಣ, ಕೃಷಿ ಉತ್ಪನ್ನಗಳ ಉತ್ಪಾದನೆ ಕುಸಿದು ಕೊರತೆ ಉಂಟಾಯಿತು. ಇದರಿಂದಾಗಿ ಒಂದೆಡೆ ಬೆಲೆ ಏರಿದರೆ, ಮತ್ತೊಂದೆಡೆ ಆಹಾರದ ಕೊರತೆಯಿಂದಾಗಿ ಲಕ್ಷಾಂತರ ಜನರು ಹಸಿವಿನ ಕೂಪಕ್ಕೆ ತಳ್ಳಲ್ಪಟ್ಟರು. ತೈಲ ಆಮದಿಗೂ ಹಣವಿಲ್ಲದ ಕಾರಣ, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಕಾಡಿತು. ಇವುಗಳನ್ನೇ ಅವಲಂಬಿಸಿರುವ ಉದ್ಯಮಗಳು ಮುಚ್ಚಿದವು. ಪೆಟ್ರೋಲ್, ಡೀಸೆಲ್ ಖರೀದಿಗೆ 1 ವಾರ ಸರದಿ ನಿಲ್ಲುವ ದುಸ್ಥಿತಿ ಎದುರಾಯಿತು. ಹೀಗಾಗಿ ತುರ್ತು ಅಗತ್ಯವಲ್ಲದ ಸರ್ಕಾರಿ, ಖಾಸಗಿ ಕಚೇರಿ ಮುಚ್ಚಿ ವರ್ಕ್-À್ರಂ ಹೋಮ್ ನೀತಿ ಜಾರಿಗೊಳಿಸಲಾಯಿತು. ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಕಾಗದವಿಲ್ಲದ ಕಾರಣ ಪರೀಕ್ಷೆಗಳನ್ನೇ ರದ್ದು ಮಾಡಲಾಯಿತು. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಮುದ್ರಿಸುವುದೂ ಸರ್ಕಾರದ ಪಾಲಿಗೆ ಅಸಾಧ್ಯವಾಗಿz
ಮಾ.16 ವಿಪಕ್ಷಗಳ ಬೆಂಬಲದೊಂದಿಗೆ 10 ಸಾವಿರ ಮಂದಿ ಪ್ರತಿಭಟನೆ
ಮಾ.30 ಸಚಿವ ನಮಲ್ ರಾಜಪಕ್ಸೆ ವಿರುದ್ಧ ರಸ್ತೆ ತಡೆ ಪ್ರತಿಭಟನೆ
ಮಾ.31 ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ದಾಳಿ, ಬಂಧನ
ಏ.2 ಅಧ್ಯಕ್ಷರಿಂದ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ
ಏ.3 ದೇಶಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆ ರದ್ದು
ಏ.3 ಹಲವು ಕ್ಯಾಬಿನೆಟ್ ಸಚಿವರುಗಳ ರಾಜೀನಾಮೆ
ಏ.9 ಕೊಲೊಂಬೋದಲ್ಲಿ ಬೃಹತ್ ಪ್ರತಿಭಟನೆ, ಗಾಲೇ ಫೇಸ್ ಸ್ವಾಧೀನ
ಏ.29 ಪ್ರತಿಭಟನಾಕಾರರ ವಿರುದ್ಧ ಪೊಲೀಸರ ಕ್ರೌರ್ಯ
ಮೇ.6 ಎರಡನೇ ಬಾರಿ ತುರ್ತು ಪರಿಸ್ಥಿತಿ ಘೋಷಣೆ
ಮೇ.9 ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ
ಮೇ.11 ಸರ್ಕಾರದಿಂದ ಕಂಡಲ್ಲಿ ಗುಂಡು ಆದೇಶ ಜಾರಿ
ಜು.9 ಅಧ್ಯಕ್ಷರ ಮನೆಗೆ ನುಗ್ಗಿದ ಪ್ರತಿಭಟನಾಕಾರರು