ಭಾರತ ಸರ್ಕಾರದ ಬಾಹ್ಯ ಸಾಲವು ಒಟ್ಟು 50 ಲಕ್ಷ ಕೋಟಿ ರು.ಗಳ ಪೈಕಿ 21 ಲಕ್ಷ ಕೋಟಿ ರು. ಮಾತ್ರ. ಹಾಗಾದರೆ ಬೇರೆ ಸಾಲ ಯಾರದ್ದು? ಅದು ಹಣಕಾಸು ಸಂಸ್ಥೆಗಳು, ಕೆಲವು ಲಾಭರಹಿತ ಸಂಸ್ಥೆಗಳು ಮತ್ತು ಅಂತಿಮವಾಗಿ ಕಾರ್ಪೊರೇಟ್ ಕಂಪನಿಗಳು ಮಾಡಿದ ಸಾಲ.
ಈಗ ಉಕ್ರೇನ್ ಯುದ್ಧ ನಡೆಯುತ್ತಿದೆ. ಇದರ ಪರಿಣಾಮವಾಗಿ ಭಾರತದ ಆರ್ಥಿಕತೆಯೂ ಕುಗ್ಗುತ್ತದೆ. ಸಾಲದ ಸ್ಥಿತಿಯನ್ನೇ ನೋಡಿ. 2022ರಲ್ಲಿ ಭಾರತವು 621 ಬಿಲಿಯನ್ (ಸುಮಾರು 50 ಲಕ್ಷ ಕೋಟಿ ರು.) ಡಾಲರ್ ಬಾಹ್ಯ ಸಾಲದ ಸುಮಾರು 267 ಬಿಲಿಯನ್ ಡಾಲರ್ (21 ಲಕ್ಷ ಕೋಟಿ ರು.) ಮರುಪಾವತಿ ಮಾಡಬೇಕಾಗಿದೆ. ಇದನ್ನು ಮೋದಿ ಸರ್ಕಾರ ಹೇಗೆ ಪರಿಹರಿಸುತ್ತದೆ?
ಇದು ಅಜ್ಞಾನಿಗಳು ಅಥವಾ ತಿಳಿದುಕೊಳ್ಳಲು ತುಂಬಾ ಸೋಮಾರಿ ಆದರೂ ಕಾಮೆಂಟ್ ಮಾಡಲು ತುಂಬಾ ಉತ್ಸಾಹಿಯಾಗಿರುವ ವರ್ಗದವರ ಪ್ರಶ್ನೆ. ಆದರೆ, ನಿಜವಾದ ವಿಷಯ ಏನು ಎಂಬುದರ ಬಗ್ಗೆ ಸ್ಪಷ್ಟತೆಯನ್ನು ಹೊಂದೋಣ:
5G Spectrum Auction:5ಜಿ ಸ್ಪೆಕ್ಟ್ರಂ ಹರಾಜಿಗೆ ಅದಾನಿ ಗ್ರೂಪ್ ಎಂಟ್ರಿ; ಜಿಯೋ, ಏರ್‌ಟೆಲ್‌ಗೆ ಬಿಗ್ ಶಾಕ್!
ಭಾರತದ ಒಟ್ಟು ಸಾಲದಲ್ಲಿ 621 ಬಿಲಿಯನ್ ಡಾಲರ್ ಬಾಹ್ಯ ಸಾಲ. ಆದರೆ ಭಾರತ ಸರ್ಕಾರ ಈ ಸಾಲವನ್ನು ತೆಗೆದುಕೊಂಡಿದೆ ಎಂಬುದು ಇದರ ಅರ್ಥವೇ? ಅರೆ ಬೆಂದವರು ಹೌದು ಎಂದೇ ಹೇಳುತ್ತಾರೆ. ಆದರೆ, ವಾಸ್ತವ ವಿಭಿನ್ನವಾಗಿದೆ.
ಭಾರತ ಸರ್ಕಾರದ ಸಾಲವು ಒಟ್ಟು 621 ಬಿಲಿಯನ್ ಸಾಲದಲ್ಲಿ ಕೇವಲ 130 ಬಿಲಿಯನ್. ಹಾಗಾದರೆ ಬೇರೆ ಸಾಲ ಯಾರದ್ದು? ಅದು ಹಣಕಾಸು ಸಂಸ್ಥೆಗಳು, ಕೆಲವು ಲಾಭರಹಿತ ಸಂಸ್ಥೆಗಳು ಮತ್ತು ಅಂತಿಮವಾಗಿ ಕಾರ್ಪೊರೇಟ್ ಕಂಪನಿಗಳು ಮಾಡಿದ ಸಾಲ.
ಆದ್ದರಿಂದ, ಈ ವರ್ಷ ಬಾಕಿ ಇರುವ ಎಲ್ಲಾ 267 ಬಿಲಿಯನ್ ಡಾಲರ್ ಸಾಲವನ್ನು ಪಾವತಿಸಲು ಭಾರತ ಸರ್ಕಾರ ಹೊಣೆಯಾಗಿದೆಯೇ ಎಂಬ ಪ್ರಶ್ನೆಗೆ ಇಲ್ಲ ಎಂಬುದೇ ಉತ್ತರ.
ವಿದೇಶಿ ಮೀಸಲಿನ ಕತೆ ಏನು?
ಬಹುಪಾಲು ಸಾಲವನ್ನು ಸರ್ಕಾರೇತರ ಸಂಸ್ಥೆಗಳು ಪಾವತಿ ಮಾಡಬೇಕಾಗಿರುವುದರಿಂದ ಸ್ವಲ್ಪ ಭಾಗವನ್ನು ಮಾತ್ರ ಭಾರತ ಸರ್ಕಾರ ಮರುಪಾವತಿಸಬೇಕಾಗಿದೆ. ಸರಿ, ಹಾಗಿದ್ದರೆ ಈ ಸಂದರ್ಭದಲ್ಲಿ ವಿದೇಶಿ ವಿನಿಮಯ ಮೀಸಲುಗಳ (ಫೋರೆಕ್ಸ್ ರಿಸವ್‌ರ್) ಮೇಲೆ ಅದರ ಪ್ರಭಾವ ಏನು? ಸುಮಾರು 590 ಬಿಲಿಯನ್ ಡಾಲರ್ ಫೋರೆಕ್ಸ್ ಮೀಸಲುಗಳಲ್ಲಿ, 267 ಬಿಲಿಯನ್ ಡಾಲರ್ ಮರುಪಾವತಿಸಿದರೆ ಭಾರತವು ತನ್ನ ವಿದೇಶಿ ವ್ಯಾಪಾರವನ್ನು ಉಳಿಸಿಕೊಳ್ಳಬಹುದೇ? 1991ರಲ್ಲಿ ಕಾಂಗ್ರೆಸ್ ಸರ್ಕಾರ ಭಾರತವನ್ನು ತಳ್ಳಿದ ಪರಿಸ್ಥಿತಿಗೆ ಭಾರತ ಈ ಮತ್ತೆ ಹೋಗಲಿದೆಯೇ ಎಂಬ ಪ್ರಶ್ನೆ ಸಹಜ.
ಇಲ್ಲ. ಉತ್ತರವು ತುಂಬಾ ಸ್ಪಷ್ಟವಾಗಿದೆ. ಹೆಚ್ಚಿನ ಕಾರ್ಪೊರೇಟ್ ಕಂಪನಿಗಳು ವಿದೇಶದಲ್ಲಿ ಡಾಲರ್ ಮೌಲ್ಯದ ಸಂಚಯವನ್ನು ಹೊಂದಿವೆ. ಅದನ್ನು ಈ ಸಾಲಗಳನ್ನು ಹೊಂದಿಸಲು ಬಳಸಲಾಗುತ್ತದೆ. ಜೊತೆಗೆ, ಭಾರತಕ್ಕೆ ಯಾವಾಗಲೂ ಅಮೆರಿಕದ ಡಾಲರ್‌ಗಳ ಒಳಹರಿವು ಇರುತ್ತದೆ. ಅದು 1991ರಲ್ಲಿ ಸಂಭವಿಸಿದಂತೆ ಭಾರತವು ಎಂದಿಗೂ ಆತಂಕದ ಪರಿಸ್ಥಿತಿಯಲ್ಲಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.
Inflation: ಪ್ರಸಕ್ತ ಆರ್ಥಿಕ ಸಾಲಿನ ದ್ವಿತಿಯಾರ್ಧದಲ್ಲಿ ಹಣದುಬ್ಬರ ತಗ್ಗುವ ನಿರೀಕ್ಷೆ: ಆರ್‌ಬಿಐ ಗವರ್ನರ್
1991ರಲ್ಲಿ ಸಮಸ್ಯೆ ಏನಾಗಿತ್ತು?
1991ರಲ್ಲಿ ಭಾರತವು ಕೇವಲ ಎರಡು ವಾರಗಳ ಆಮದುಗಳಿಗೆ ಪಾವತಿಸಲು ಅಂದರೆ ಅರ್ಧ ತಿಂಗಳಿಗಷ್ಟೇ ಸಾಕಷ್ಟುವಿದೇಶಿ ವಿನಿಮಯವನ್ನು ಹೊಂದಿತ್ತು. ಆದರೆ ಇಂದು ಈ ಸಾಲ ಮರುಪಾವತಿಯ ನಂತರವೂ, ಹನ್ನೆರಡು ತಿಂಗಳಿಗಿಂತ ಹೆಚ್ಚಿನ ಆಮದುಗಳಿಗೆ ಪಾವತಿಸಲು ನಮ್ಮ ವಿದೇಶಿ ವಿನಿಮಯ ಮೀಸಲು ಸಾಕಾಗುತ್ತದೆ. 2021-22ರ ಆರ್ಥಿಕ ವರ್ಷದಲ್ಲಿ 83.57 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಜೊತೆಗೆ, ಮೇಕ್ ಇನ್ ಇಂಡಿಯಾ ಮತ್ತು ಪ್ರೊಡಕ್ಷನ್ ಲಿಂಕ್‌್ಡ ಇನ್‌ಸೆಂಟಿವ್ (ಪಿಎಲ್‌ಐ) ಯೋಜನೆಗಳ ನೆರವಿನಿಂದ ಭಾರತವು ಸಮರ್ಥ ಸ್ಥಾನದಲ್ಲಿದೆ ಎಂಬುದು ಬಹಳ ಸ್ಪಷ್ಟವಾಗಿದೆ. ಆದ್ದರಿಂದ, ಹೆಚ್ಚಿನ ಡಾಲರ್‌ಗಳೂ ನಮ್ಮತ್ತ ಹರಿದುಬರಲಿವೆ.
ಆದ್ದರಿಂದ ಅಲ್ಪಾವಧಿಯ ಪರಿಣಾಮವನ್ನು ನೋಡಿದರೆ, ಅಮೆರಿಕವು ತನ್ನ ಬಡ್ಡಿದರಗಳನ್ನು ಹೆಚ್ಚಿಸುವುದರೊಂದಿಗೆ, ಕೆಲವು ಅಮೆರಿಕನ್ ಡಾಲರ್ ನಿಧಿಗಳು ಹಿಂತಿರುಗಬಹುದು ಮತ್ತು ಮರುಪಾವತಿಗಾಗಿ ಡಾಲರ್‌ಗಳ ಬೇಡಿಕೆಯನ್ನು ಮುಂದಿಡಬಹುದು. ಇದರಿಂದ ರುಪಾಯಿಯ ಡಾಲರ್ ಎದುರಿನ ವಿನಿಮಯ ಮೌಲ್ಯ 80 ರುಪಾಯಿಗೆ ಇಳಿಯಬಹುದು.
ಇನ್ನು 5 ವರ್ಷದಲ್ಲಿ ದೇಶದಲ್ಲಿ ಪೆಟ್ರೋಲ್ ನಿಷೇಧ: ಸಚಿವ Nitin Gadkari
ಮೋದಿ ಸರ್ಕಾರ ಏನು ಮಾಡುತ್ತಿದೆ?
ಈ ಬಗ್ಗೆ ಮೋದಿ ಸರ್ಕಾರ ಏನು ಮಾಡುತ್ತಿದೆ ಎಂಬ ಪ್ರಶ್ನೆ ಸಹಜ. ನೀವು ಇದನ್ನು ಓದುತ್ತಿರುವ ಸಂದರ್ಭದಲ್ಲೇ ರಿಸವ್‌ರ್ ಬ್ಯಾಂಕ್ (ಆರ್‌ಬಿಐ) ಈಗಾಗಲೇ ಬಡ್ಡಿದರಗಳ ಸಡಿಲಿಕೆಯನ್ನು ಅನುಮತಿಸಿದೆ. ಬಾಹ್ಯ ವಾಣಿಜ್ಯ ಸಾಲಗಳ (ಇಸಿಬಿ) ಅಡಿಯಲ್ಲಿ ಮಿತಿಯನ್ನು ದ್ವಿಗುಣಗೊಳಿಸುವುದರಿಂದ ನಮ್ಮ ದೇಶಕ್ಕೆ ಹೆಚ್ಚಿನ ಅಮೆರಿಕದ ಡಾಲರ್ ಆಕರ್ಷಿಸುವ ಮೂಲಕ ರುಪಾಯಿಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
ಒಟ್ಟಾರೆಯಾಗಿ ಕೆಲ ಕಿಡಿಗೇಡಿಗಳು ಇಂದಿನ ಭಾರತದ ಪರಿಸ್ಥಿತಿಯನ್ನು 1991ರೊಂದಿಗೆ ಹೋಲಿಸಲು ಪ್ರಯತ್ನಿಸುತ್ತಿದ್ದರೆ ಅವರು ಮೂರ್ಖರ ಸ್ವರ್ಗದಲ್ಲಿ ವಾಸಿಸುತ್ತಿದ್ದಾರೆ ಎಂದರ್ಥ. ಚಿಂತಿಸಬೇಡಿ; ನಿಮ್ಮ ವ್ಯವಹಾರದ ಮೇಲೆ ಗಮನ ಕೇಂದ್ರೀಕರಿಸಿ. ಭಾರತದಲ್ಲಿ ಸಾಕಷ್ಟುಒಳ್ಳೆಯ ಕಾರ್ಯಗಳು ನಡೆಯುತ್ತಿವೆ.
ಪ್ರಮುಖ ನಿಯತಾಂಕಗಳ ಸಂಕ್ಷಿಪ್ತ ಹೋಲಿಕೆಯು ಎಲ್ಲಾ ನಿಯತಾಂಕಗಳಲ್ಲಿ 2014ರಲ್ಲಿ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿದ್ದುದಕ್ಕಿಂತ 2022ರಲ್ಲಿ ಮೋದಿ ಸರ್ಕಾರದ ಅಡಿಯಲ್ಲಿ ಭಾರತವು ಉತ್ತಮವಾಗಿದೆ ಎಂಬುದನ್ನು ತೋರಿಸುತ್ತದೆ.
- ಡಾ.ಸಮೀರ್ ಕಾಗಲಕರ್, ಸಂಚಾಲಕ, ಬಿಜೆಪಿ ಆರ್ಥಿಕ ಪ್ರಕೋಷ್ಠ
