ಭಾರತದಲ್ಲಿ ಒಂದೇ ದಿನ 122 ಓಮಿಕ್ರಾನ್ ಕೇಸ್ ಪತ್ತೆಯಾಗುವ ಮೂಲಕ ಆತಂಕ ಹೆಚ್ಚಿಸಿದೆ. ಫೆಬ್ರವರಿಯಲ್ಲಿ ಒಮಿಕ್ರಾನ್ ಅಬ್ಬರ ಹೆಚ್ಚಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಟೀಂ ಇಂಡಿಯಾ ಸರಣಿ ಗೆದ್ದರೆ ಮಾತ್ರ ರ್ಯಾಂಕಿಂಗ್ ಪಟ್ಟ ಉಳಿಯಲಿದೆ. ಬೊಮ್ಮಾಯಿ ಹೇಳಿಕೆಯಿಂದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗದ್ದಲ. ಸಿನಿಮಾಗೆ ಪಡೆದ ಮುಂಗಡ ಹಣ ಹಿಂತಿರುಗಿಸಿದ ಅಪ್ಪು ಪತ್ನಿ, ಜನವರಿ 16 ದಿನ ಬ್ಯಾಂಕ್‌ಗಳಿ ರಜೆ ಸೇರಿದಂತೆ ಡಿಸೆಂಬರ್ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
Omicron In India: ರೂಪಾಂತರಿ ಸ್ಫೋಟ ಒಂದೇ ದಿನ 122 ಕೇಸ್..ಫೆಬ್ರವರಿಗೆ ಘೋರ!

ಅತಿ ಅಪಾಯಕಾರಿ ಎಂದು ಬಣ್ಣಿಸಲಾಗಿರುವ ಒಮಿಕ್ರೋನ್ (Omicron) ಕೋವಿಡ್ (Coronavirus) ರೂಪಾಂತರಿ ತಳಿ ಭಾರತದಲ್ಲಿ (India)ಸ್ಫೋಟಗೊಳ್ಳುತ್ತಿದ್ದು, ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ಬರೋಬ್ಬರಿ 122 ಒಮಿಕ್ರೋನ್ ಪ್ರಕರಣಗಳು ಪತ್ತೆಯಾಗಿವೆ. ಇದು ಈವರೆಗೆ ಒಂದು ದಿನದಲ್ಲಿ ಪತ್ತೆಯಾದ ಗರಿಷ್ಠ ಸಂಖ್ಯೆ.
Belagavi Violence : ಮಹಾ ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ ಬೊಮ್ಮಾಯಿ ಹೇಳಿಕೆ,, ಪುಂಡರು ಮುಂಬೈಗೆ!

ಮಹಾರಾಷ್ಟ್ರದ (Maharashtra) ಜತ್ತ ತಾಲೂಕಿನ 40 ಗ್ರಾಮ ಪಂಚಾಯಿತಿಗಳು ಕರ್ನಾಟಕ (Karnataka) ಸೇರಲು ಬಯಸಿ ನಿರ್ಣಯ ಅಂಗೀಕರಿಸಿದರೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿಧಾನಸಭೆಯಲ್ಲಿ ನೀಡಿದ್ದ ಹೇಳಿಕೆ ಮಹಾರಾಷ್ಟ್ರದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಈ ಬಗ್ಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶುಕ್ರವಾರ ಕೆಲಹೊತ್ತು ಚರ್ಚೆಯೂ ಆಗಿದೆ.
ICC Test Rankings: ಟೀಂ ಇಂಡಿಯಾ ಸರಣಿ ಗೆದ್ದರಷ್ಟೇ ನಂ.1 ಸ್ಥಾನ ಭದ್ರ..!

ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿ ಭಾನುವಾರದಿಂದ ಆರಂಭಗೊಳ್ಳಲಿದ್ದು, ಐಸಿಸಿ ಟೆಸ್ಟ್ ತಂಡಗಳ ರ‍್ಯಾಂಕಿಂಗ್ (ICC Test Rankings) ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಉಳಿಸಿಕೊಳ್ಳಬೇಕಿದ್ದರೆ ಸರಣಿ ಗೆಲ್ಲಬೇಕಿದೆ
Ashwini Puneeth Rajkumar: ಅಪ್ಪು ಸಿನಿಮಾ ಸಲುವಾಗಿ ಪಡೆದ ಮುಂಗಡ ಹಣವನ್ನು ಹಿಂತಿರುಗಿಸಿದ ಪತ್ನಿ!

ಸಿನಿಮಾಗಳ ಸಲುವಾಗಿ ಪುನೀತ್ ಪಡೆದ ಮುಂಗಡ ಹಣವನ್ನು ಹಿಂತಿರುಗಿಸಿದ ಪತ್ನಿ ಅಶ್ವಿನಿ ಪುನೀತ್. ದೊಡ್ಮನೆ ಗುಣಕ್ಕೆ ಸಲಾಂ ಎಂದ ಅಭಿಮಾನಿಗಳು.
Best Smartphones 2021: ಈ ವರ್ಷದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಯಾವುವು ಗೊತ್ತಾ? ಇಲ್ಲಿದೆ ಪಟ್ಟಿ

ಭಾರತದ ನಂ.1 ಮೊಬೈಲ್ ಬ್ರ್ಯಾಂಡ್ ಆಗಿ ಶಾಓಮಿ ಮುಂದುವರೆದಿದೆ. ಈ ಮಧ್ಯೆ ಭಾರತದ ಎರಡನೇ ದೊಡ್ಡ ಬ್ಯ್ರಾಂಡ್ ಆಗಿ ಹೊರಹೊಮ್ಮಿದ Realmeಯ ಬೆಳವಣಿಗೆ ಕೂಡ ಸ್ಪಷ್ಟವಾಗಿ ಗೋಚರಿಸುತ್ತಿದೆ.
Bank Holidays: ಜನವರಿಯಲ್ಲಿ 16 ದಿನ ಬ್ಯಾಂಕಿಗೆ ರಜೆ; ಇಲ್ಲಿದೆ RBI ಹಾಲಿಡೇ ಕ್ಯಾಲೆಂಡರ್
ಹೊಸ ವರ್ಷದಲ್ಲೇ ಬ್ಯಾಂಕ್ ಕೆಲ್ಸಗಳನ್ನು ಮುಗಿಸಬೇಕೆಂದು ಪ್ಲ್ಯಾನ್ ಮಾಡಿಕೊಂಡಿರೋರು ಜನವರಿಯಲ್ಲಿ ಯಾವೆಲ್ಲ ದಿನ ಬ್ಯಾಂಕ್ ಕ್ಲೋಸ್ ಆಗಿರುತ್ತೆ ಎಂಬ ಮಾಹಿತಿ ಹೊಂದಿರೋದು ಅಗತ್ಯ. RBI ಬಿಡುಗಡೆ ಮಾಡಿರೋ ಜನವರಿಯ ರಜಾದಿನಗಳ ಪಟ್ಟಿ ಇಲ್ಲಿದೆ.
Neha Bhasin Fashion: ನೇರಳೆ ಬ್ರಾಲೆಟ್‌ನಲ್ಲಿ ಮಿಂಚಿದ ನಟಿ, ಉರ್ಫಿಯ ದೊಡ್ಡಕ್ಕನಾ ಎಂದ ನೆಟ್ಟಿಗರು

ಉರ್ಫಿ ಜಾವೇದ್ ಮಾಡರ್ನ್ ಡ್ರೆಸ್‌ನಲ್ಲಿ ಮಿಂಚೋದು ಹೊಸದೇನಲ್ಲ. ಅದರಲ್ಲೂ ಚಿತ್ರ ವಿತ್ರ ಬಟ್ಟೆ ಹಾಕೋದು ತುಂಬಾ ಕಾಮನ್. ಈಗ ನೇಹಾ ಬಾಸಿನ್ ಕೂಡಾ ಇದೇ ಅವತಾರದಲ್ಲಿ ಕಾಣಿಸ್ಕೊಂಡಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಿಸಲು(Pollution) ನಿಮಯಗಳು ಮತ್ತಷ್ಟು ಕಠಿಣವಾಗಿದೆ. ಹೊಗೆ ಉಗುಳುವ ಹಳೇ ವಾಹನ ರಸ್ತೆಗಿಳಿಸಿದರೆ ದಂಡ ಖಚಿತ. ಇದಕ್ಕಾಗಿ ವಾಹನ ಗುಜುರಿ ನೀತಿಯನ್ನು ಜಾರಿಗೆ ತರಲಾಗಿದೆ.
