Asianet Suvarna News Asianet Suvarna News

Vehicle Scrap Policy ಹಳೇ ವಾಹನ ಮಾಲೀಕರು ಪ್ರತಿ ವರ್ಷ ಮಾಡಬೇಕು FC,ಕಟ್ಟಬೇಕು ಗ್ರೀನ್ ಟ್ಯಾಕ್ಸ್, ಇದ್ಕಿಂತ ಹೊಸ ವಾಹನವೇ ಲೇಸು

  • ವಾಹನ ಗುಜರಿ ನೀತಿಯಿಂದ ಹಳೆ ವಾಹನ ಮಾಲೀಕರಿಗೆ ಶಾಕ್
  • 15 ವರ್ಷಕ್ಕಿಂತ ಹಳೆ ವಾಹನ ಗಜುರಿಕೆ ಹಾಕದೆ ಉಳಿಸಿಕೊಳ್ಳಲು ಅವಕಾಶ
  • ಆದರೆ ಫಿಟ್ನೆಸ್ ಸರ್ಟಿಫಿಕೇಟ್, ಗ್ರೀನ್ ಟ್ಯಾಕ್ಸ್ ಸೇರಿದಂತೆ ಹಲವು ತೆರಿಗೆ ದುಬಾರಿ
Vehicle Scrappage Policy vehicles older than 15 years Fitness certificate mandate for every year ckm
Author
Bengaluru, First Published Dec 25, 2021, 3:52 PM IST

ನವದೆಹಲಿ(ಡಿ.25):  ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಿಸಲು(Pollution) ನಿಮಯಗಳು ಮತ್ತಷ್ಟು ಕಠಿಣವಾಗಿದೆ. ಹೊಗೆ ಉಗುಳುವ ಹಳೇ ವಾಹನ ರಸ್ತೆಗಿಳಿಸಿದರೆ ದಂಡ ಖಚಿತ. ಇದಕ್ಕಾಗಿ ವಾಹನ ಗುಜುರಿ ನೀತಿಯನ್ನು ಜಾರಿಗೆ ತರಲಾಗಿದೆ. ಈ ನೀತಿ ಪ್ರಕಾರ 15 ವರ್ಷಕ್ಕಿಂತ ಹಳೇ ವಾಹನಗಳನ್ನು(vehicles older than 15 years ) ಗುಜುರಿಗೆ ಹಾಕಬೇಕು. ಹಾಗಂತ ಅತ್ಯುತ್ತಮ ಕಂಡೀಷನ್‌ನಲ್ಲಿರುವ ವಾಹನವನ್ನು ಗುಜುರಿಗೆ ಹಾಕಲೇಬೇಕು ಅಂತಲ್ಲ. ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ನಿಗದಿತ ಸಮಯ ಮೀರಿದ ಹಳೇ ವಾಹನ ಉಳಿಸಿಕೊಳ್ಳುವುದು ಹೊಸ ವಾಹನ ಖರೀದಿಗಿಂತ ತಲೆನೋವಿನ ಕೆಲಸವಾಗಿದೆ.

15 ವರ್ಷಕ್ಕಿಂತ ಹಳೇ ವಾಹನ ಉಳಿಸಿಕೊಳ್ಳಲು ವಾಹನ ಗುಜುರಿ ನೀತಿಯಲ್ಲಿ(Vehicle Scrappage Policy) ಅವಕಾಶ ನೀಡಲಾಗಿದೆ. ಆದರೆ ಹಳೇ ವಾಹನ ಉಳಿಸಿಕೊಳ್ಳಲು ಅತ್ಯಂತ ಕಠಿಣ ನಿಯಮವನ್ನು ಜಾರಿಗೆ ತರಲಾಗಿದೆ. 15 ವರ್ಷದ ಬಳಿಕ ಎಲ್ಲಾ ವಾಹನಗಳ ರಿಜಿಸ್ಟ್ರೇಶನ್ ರದ್ದಾಗಲಿದೆ. ಹೀಗಾಗಿ ಹಳೇ ವಾಹನಗಳನ್ನು ಉಳಿಸಲು ಮತ್ತೆ ರಿ ರಿಜಿಸ್ಟ್ರೇಶನ್(vehicle registration) ಮಾಡಿಸಬೇಕು. ಇದು ಹೊಸ ವಾಹನದ ರಿಜಿಸ್ಟ್ರೇಶನ್‌ಗಿಂತ ದುಬಾರಿಯಾಗಿದೆ. 

Vehicle Scrap Policy:15 ವರ್ಷಕ್ಕಿಂತ ಹಳೆ ವಾಹನ ಗುಜುರಿಗೆ; ರಸ್ತೆಗಳಿದರೂ, ಪಾರ್ಕ್ ಮಾಡಿದರೂ ದಂಡ!

15 ವರ್ಷದ ಬಳಿಕ ಹಳೇ ವಾಹನ ನೋಂದಣಿ ರದ್ದಾಗಲಿದೆ. ರದ್ದಾದ ವಾಹನ ಮತ್ತೆ ರಸ್ತೆಗಿಳಿಸಿದರೆ 10,000 ರೂಪಾಯಿ ದಂಡ ಪಾವತಿಸಬೇಕು. ಇನ್ನು ಮೋಟರ್‌ಸೈಕಲ್ ಹೊಸ ರಿಜಿಸ್ಟ್ರೇಶನ್ ಬೆಲೆ 300 ರೂಪಾಯಿ, ಆದರೆ ಮೋಟರ್‌ಸೈಕಲ್   ರಿ ರಿಜಿಸ್ಟ್ರೇಶನ್ ಮಾಡಿಸಲು 1,000 ರೂಪಾಯಿ ಪಾವತಿಸಬೇಕು.  ಮೂರು ಚಕ್ರ ವಾಹನ ಅಥವಾ ಆಟೋ ರಿಕ್ಷಾಗಳ ಹೊಸ ರಿಜಿಸ್ಟ್ರೇಶನ್ ಬೆಲೆ 600 ರೂಪಾಯಿ ತಗುಲಿದರೆ, ಹಳೇ ಆಟೋ ರಿಕ್ಷಾ ರಿ ರಿಜಿಸ್ಟ್ರೇಶನ್ ಮೌಲ್ಯ 2,500 ರೂಪಾಯಿ. ಕಾರು ಸೇರಿದಂತೆ ಲೈಟ್ ಮೋಟಾರು ಹೊಸ ವಾಹನ ರಿಜಿಸ್ಟ್ರೇಶನ್ 600 ರೂಪಾಯಿ ಇದ್ದರೆ, ಹಳೇ ವಾಹನ ರಿ ರಿಜಿಸ್ಟ್ರೇಶನ್ ಬೆಲೆ 5,000 ರೂಪಾಯಿ. ವಿದೇಶದಿಂದ ಆಮದು ಮಾಡಿಕೊಂಡ ವಾಹನಗಳ ರಿ ರಿಜಿಸ್ಟ್ರೇಶನ್ ಬೆಲೆ 10,000 ರೂಪಾಯಿ.

ಹಳೇ ವಾಹನ ಮಾಲೀಕರು ಪ್ರತಿ ವರ್ಷ ವಾಹನದ ಫಿಟ್ನೆಸ್ ಸರ್ಟಿಫಿಕೇಟ್(vehicle fitness certificate) ಮಾಡಿಸಬೇಕು. ಈ ಹಿಂದೆ ಮಾಡುತ್ತಿದ್ದ ವಾಹನ ಫಿಟ್ನೆಸ್ ಸರ್ಟಿಫಿಕೇಟ್ ರೀತಿಯಲ್ಲಿ ಸುಲಭವಾಗಿ ಕೈಗೆ ಸಿಗುವುದಿಲ್ಲ. ಅಲ್ಲೂ ಕೂಡ ನಿಯಮ ಕಠಿಣ ಮಾಡಲಾಗಿದೆ. ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಲು ಹಲವು ಮಾನದಂಡಗಳಲ್ಲಿ ವಾಹನ ಪಾಸ್ ಆಗಬೇಕು. ವಾಹನ ದಾರಿಯಲ್ಲಿ ಓಡಲು ಯೋಗ್ಯವಾಗಿದೆಯೇ ಅನ್ನೋದನ್ನು ದೃಢವಾಗಬೇಕು. ವಾಹನದಿಂದ ಪರಿಸರಲ್ಲಿ ಹಾನಿಯಾಗುವ ಪ್ರಮಾಣ ಸರ್ಕಾರ ವಿಧಿಸಿರುವ ಪ್ರಮಾಣ ಮೀರಿರಬಾರದು. ಹೀಗಾದಲ್ಲಿ ಮಾತ್ರ ಫಿಟ್ನೆಸ್ ಸರ್ಟಿಫಿಕೇಟ್ ಲಭ್ಯವಾಗಲಿದೆ. ಈ ಫಿಟ್ನೆಸ್ ಸರ್ಟಿಫಿಕೇಟ್ ಪ್ರತಿ ವರ್ಷ ಮಾಡಿಸಬೇಕು. ಇದರ ನಡುವೆ ಪೊಲೀಸರಿಗೆ ಅನುಮಾನ ಬಂದರೆ ಅಥವಾ ವಾಹನ ಹೆಚ್ಚು ಹೊಗೆ ಉಗುಳುತ್ತಿರುವುದು ಕಂಡು ಬಂದರೆ ಅಂತಹ ವಾಹನ ಪರಿಶೀಲನೆಗೆ ಒಳಪಡಿಸಲಿದ್ದಾರೆ. ಈ ವೇಳೆ ಫಿಟ್ನೆಸ್ ಪಾಸ್ ಆಗಿದ್ದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಫಿಟ್ನೆಸ್ ಪ್ರಮಾಣ ಪತ್ರ ಪಡೆಯಲು ಯೋಗ್ಯವಾಗಿಲ್ಲದಿದ್ದರೆ, ದುಬಾರಿ ದಂಡ ಪಾವತಿಸಬೇಕು.

Helicopter from scrap ಕಾರು ಬಿಡಿಭಾಗದಿಂದ ಹೆಲಿಕಾಪ್ಟರ್ ನಿರ್ಮಾಣ, ವ್ಯಂಗ್ಯವಾಡಿದ ಗ್ರಾಮಸ್ಥರ ಮುಂದೆ ಹಾರಿತು ಲೋಕಲ್ ಚಾಪರ್!

ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ಹಣ ಪಾವತಿ ಅನಿವಾರ್ಯವಾಗಿದೆ. ಫಿಟ್ನೆಸ್ ಸರ್ಟಿಫಿಕೇಟ್ ಮೋಟಾರು ವಾಹನಕ್ಕೆ 1,000 ರೂಪಾಯಿ.  ಮೂರು ಚಕ್ರವಾಹನದ ಫಿಟ್ನೆಸ್ ಸರ್ಟಿಫಿಕೇಟ್ 3,500 ರೂಪಾಯಿ. ಕಾರು ಸೇರಿದಂತೆ ಲಘುವಾಹನಕ್ಕೆ 7,500 ರೂಪಾಯಿ.  ಮೀಡಿಯಂ ಗೂಡ್ಸ್ ಹಾಗೂ ಪ್ಯಾಸೇಂಜರ್ ವಾಹನಕ್ಕೆ  10,000 ರೂಪಾಯಿ, ಘನ ವಾಹನ ಹಾಗೂ ಘನ ಪ್ಯಾಸೇಂಜರ್ ವಾಹನಕ್ಕೆ 12,500 ರೂಪಾಯಿ ಪ್ರತಿ ವರ್ಷ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ಪಾವತಿಸಬೇಕು. 

15 ವರ್ಷಕ್ಕಿಂತ ಹಳೇ ವಾಹನಕ್ಕೆ  ಪ್ರತಿ ವರ್ಷ ಹಸಿರು ತೆರಿಗೆ ಪಾವತಿಸಬೇಕು. ಇದು ನಗರದಿಂದ ನಗರಕಕ್ಕೆ, ಪಟ್ಟಣ, ಹಳ್ಳಿಗಳಲ್ಲಿ ವ್ಯತ್ಯಾಸವಾಗಲಿದೆ. ದೆಹಲಿಯಲ್ಲಿ ವಾಹನದ ರಸ್ತೆ ತರೆಗಿಯೆ ಶೇಕಡಾ 50 ರಷ್ಟು ಮೊತ್ತವನ್ನು ಗ್ರೀನ್ ಟ್ಯಾಕ್ಸ್ ಆಗಿ ಪಾವತಿಸಬೇಕು. 

Follow Us:
Download App:
  • android
  • ios