08:22 PM (IST) Aug 05

India Latest News Live 5 August 2026 ಸಂಸದರು ಶಾಸಕರಿಗಾಗಿ ಹವಾಮಾನ- ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರ

ಕೃಷಿ ಸ್ಥೈರ್ಯವನ್ನು ಬಲಪಡಿಸಲು ಹಾಗೂ ದೀರ್ಘಕಾಲೀನ ಬೆಳವಣಿಗೆಗೆ ಬೆಂಬಲ ನೀಡಲು ತಂತ್ರಜ್ಞಾನ, ಬೆಳೆ ವಿಮೆ, ನೀರಾವರಿ ಯೋಜನೆಗಳು ಹಾಗೂ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಕುರಿತು ಕಾರ್ಯಗಾರದಲ್ಲಿ ಮಾಹಿತಿ ನೀಡಲಾಯಿತು.

Read Full Story
08:14 PM (IST) Aug 05

India Latest News Live 5 August 2026 1000 ವರ್ಷಗಳ ಹಳೇ ಮರ.. ಅದರೊಳಗೆ ರೆಸ್ಟೋರೆಂಟ್‌ನಂಥ ಬಾರ್‌! ಇದು ಪೊಟರೆಯೊಳಗಿನ ಲೋಕ..!

ದಕ್ಷಿಣ ಆಫ್ರಿಕಾದಲ್ಲಿ 1000 ವರ್ಷಕ್ಕೂ ಹಳೆಯ ಬಾಬಾಬ್ ಮರದ ಪೊಟರೆಯೊಳಗೆ 'ಸನ್‌ಲ್ಯಾಂಡ್ ಬಾಬಾಬ್ ಟ್ರೀ ಬಾರ್' ಎಂಬ ವಿಶಿಷ್ಟ ಬಾರ್ ಇದೆ. 1993ರಲ್ಲಿ ಮರದೊಳಗಿನ ಖಾಲಿ ಜಾಗವನ್ನು ಬಳಸಿ ನಿರ್ಮಿಸಲಾದ ಈ ಬಾರ್, ಏಕಕಾಲದಲ್ಲಿ 15-20 ಜನರಿಗೆ ಆಸನ ವ್ಯವಸ್ಥೆ ಕಲ್ಪಿಸುತ್ತದೆ ಮತ್ತು ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಒಂದು ಅದ್ಭುತ ತಾಣವಾಗಿದೆ.
Read Full Story
07:18 PM (IST) Aug 05

India Latest News Live 5 August 2026 ಹಣ ಪಡೆದು ಕಾನೂನು ಬಾಹಿರ, ಪ್ರೊಪಗಾಂಡ ಕಂಟೆಂಟ್ ಪ್ರಮೋಟ್, ತಪ್ಪು ಒಪ್ಪಿಕೊಂಡ ಮೆಟಾ

ಕೆಲ ಕಂಟೆಂಟ್ ಪ್ರಮೋಶನ್ ಮಾಡಲು ಮೆಟಾ ಸಂಸ್ಥೆಗೆ ವಿಪರೀತ ಹಣ ಬಂದಿದೆ. ಪ್ರಪೋಗಾಂಡ, ಕಾನೂನು ಬಾಹಿರ ಕಂಟೆಂಟ್‌ಗಳನ್ನು ಪ್ರಮೋಟ್ ಮಾಡಲಾಗಿದೆ ಎಂದು ಮೆಟಾ ತನ್ನ ಕ್ಷಮಾಪಣಾ ಪತ್ರದಲ್ಲಿ ಹೇಳಿದೆ.

Read Full Story
06:44 PM (IST) Aug 05

India Latest News Live 5 August 2026 ಪನೀರ್ ಪ್ರಿಯರಿಗೆ ಶಾಕ್​ - ಇನ್ಮುಂದೆ ಮಾರಿದ್ರೆ ಜೈಲು ಶಿಕ್ಷೆ! 'ಮಹಾ' ನಿರ್ಧಾರ- ಏನಿದು Analogue Paneer

ಮಾರುಕಟ್ಟೆಯಲ್ಲಿ 'ಅನಲಾಗ್ ಪನೀರ್' ಹೆಸರಿನಲ್ಲಿ ನಕಲಿ ಪನೀರ್ ಹಾವಳಿ ಹೆಚ್ಚಾಗಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಇದನ್ನು ನಿಷೇಧಿಸಿದ್ದು, ಅಸಲಿ ಮತ್ತು ನಕಲಿ ಪನೀರ್ ಅನ್ನು ಗುರುತಿಸುವ ಸುಲಭ ವಿಧಾನಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story
06:06 PM (IST) Aug 05

India Latest News Live 5 August 2026 ಪತ್ನಿಯ ಓದಿಗಾಗಿ ಕೂಲಿಯನ್ನೂ ಮಾಡಿದ, ಜಮೀನೂ ಮಾರಿದ - ಕೆಲಸ ಸಿಕ್ಕ ಮೇಲೆ ಸತಿ ಶಿರೋಮಣಿ ಮಾಡಿದ್ದೇನು

ಪತ್ನಿಯ ಓದಿನ ಕನಸಿಗಾಗಿ ಕೂಲಿ ಮಾಡಿ, ಜಮೀನು ಮಾರಿ ತ್ಯಾಗ ಮಾಡಿದ ಗಂಡ ಅಮನ್ ಕುಮಾರ್. ಆದರೆ, ಉನ್ನತ ಉದ್ಯೋಗ ಸಿಕ್ಕ ಬಳಿಕ ಪತ್ನಿ ಗುಂಜನ್ ಕುಮಾರಿ, ಗಂಡನನ್ನೇ ತಿರಸ್ಕರಿಸಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡಳು. ಪತ್ನಿಯ ವಂಚನೆಯನ್ನು ಕಣ್ಣಾರೆ ಕಂಡ ಪತಿ ಇದೀಗ ನ್ಯಾಯಕ್ಕಾಗಿ ಹೋರಾಡುತ್ತಿದ್ದಾನೆ.
Read Full Story
04:52 PM (IST) Aug 05

India Latest News Live 5 August 2026 ಚೊಚ್ಚಲ ಪಂದ್ಯದಲ್ಲೇ ಬೊಂಬಾಟ್‌ ಫಿಫ್ಟಿ, ನಂತ್ರ ಟೀಂ ಇಂಡಿಯಾದಲ್ಲಿ ಎಂದೂ ಕಾಣಿಸಿಕೊಳ್ಳದ ನತದೃಷ್ಟ ಕ್ರಿಕೆಟಿಗ!

ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಫೈಝ್ ಫಝಲ್, ತಮ್ಮ ಮೊದಲ ಪಂದ್ಯದಲ್ಲೇ ಅಜೇಯ ಅರ್ಧಶತಕ ಸಿಡಿಸಿದ್ದರು. ಆದರೆ ದುರದೃಷ್ಟವಶಾತ್, 2016ರ ಜಿಂಬಾಬ್ವೆ ವಿರುದ್ಧದ ಆ ಪಂದ್ಯವೇ ಅವರ ವೃತ್ತಿಜೀವನದ ಏಕೈಕ ಅಂತರಾಷ್ಟ್ರೀಯ ಪಂದ್ಯವಾಗಿ ಉಳಿಯಿತು.
Read Full Story
04:36 PM (IST) Aug 05

India Latest News Live 5 August 2026 ಭಾರತದಲ್ಲಿ ಫೇಸ್‌ಬುಕ್ ಬ್ಯಾನ್ ಆಗುತ್ತಾ? ಮೂರು ದಿನದ ಡೆಡ್ ಲೈನ್ ನೀಡಿದ ಸಂಸದೀಯ ಸಮಿತಿ

ಭಾರತದಲ್ಲಿ ಫೇಸ್‌ಬುಕ್ ಬ್ಯಾನ್ ಆಗುತ್ತಾ? ಪ್ರಧಾನಿ ಮೋದಿ ವಿಡಿಯೋ ಡಿಲೀಟ್ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಮೆಟಾಗೆ ಇದೀಗ ಸಂಸದೀಯ ಸಮಿತಿ ಕೇವಲ 3 ದಿನದ ಡೆಡ್‌ಲೈನ್ ನೀಡಿದೆ. ಮೂರು ದಿನ ಬಳಿಕ ಫೇಸ್‌ಬುಕ್ ಬಂದ್ ಆಗುತ್ತಾ?

Read Full Story
04:12 PM (IST) Aug 05

India Latest News Live 5 August 2026 ಕಾರುಗಳಲ್ಲಿ ಚೀನಾ ಬ್ಯಾಟರಿ ಬಳಸೋದಿಲ್ಲ ಎಂದ ಟಾಟಾ, ಸ್ವದೇಶಿ LFP ತಂತ್ರಜ್ಞಾನ ಅಭಿವೃದ್ಧಿಗೆ ಬಿಗ್ ಪ್ಲಾನ್, ಬೆಂಗಳೂರಲ್ಲಿ R&D ಕೇಂದ್ರ!

ಚೀನಾ ಸರ್ಕಾರದ ಬ್ಯಾಟರಿ ತಂತ್ರಜ್ಞಾನ ರಫ್ತು ನಿರ್ಬಂಧದ ಹಿನ್ನೆಲೆಯಲ್ಲಿ, ಟಾಟಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ವಾಹನಗಳಲ್ಲಿ ಚೀನೀ ಬ್ಯಾಟರಿಗಳ ಬಳಕೆಯನ್ನು ನಿಲ್ಲಿಸಲು ನಿರ್ಧರಿಸಿದೆ.

Read Full Story
04:06 PM (IST) Aug 05

India Latest News Live 5 August 2026 ಗೋವಾ ಕ್ಯಾಸಿನೋ ಪ್ಲಾನ್ ಮಾಡಿದ್ದೀರಾ? ಹೊಸ ನಿಯಮ ಜಾರಿ, ಯಾರಿಗೆಲ್ಲಾ ಪ್ರವೇಶ ಬ್ಯಾನ್?

ಮಳೆಗಾಲ ಮುಗಿಯುತ್ತಿದ್ದಂತೆ ಗೋವಾ ಪ್ರವಾಸಕ್ಕೆ ಪ್ಲಾನ್ ಮಾಡಿದ್ದೀರಾ? ಗೋವಾ ಹೋದಾಗ ಕ್ಯಾಸಿನೋಗೆ ಭೇಟಿ ನೀಡದೆ ಬರುವುದು ಹೇಗೆ ಎಂದು ಆಲೋಚಿಸುತ್ತಿದ್ದೀರಾ?ಪ್ರವೇಶ ಬ್ಯಾನ್ ಸೇರಿದಂತೆ ಹಲವು ನಿರ್ಬಂಧಗಳು ಜಾರಿಯಾಗಿದೆ. ಯಾರಿಗೆಲ್ಲಾ ಬ್ಯಾನ್?

Read Full Story
03:40 PM (IST) Aug 05

India Latest News Live 5 August 2026 ಆಗಸ್ಟ್ 28ಕ್ಕೆ MG ನೂತನ SUV ರಿಲೀಸ್‌ - ಮಹೀಂದ್ರಾ XUV 7XO, ಟಾಟಾ ಸಫಾರಿಗೆ ಶುರುವಾಯ್ತು ನಡುಕ!

ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ತನ್ನ ಹೊಸ 'ಹೆಕ್ಟರ್ ಹ್ಯಾಕ್' ಎಸ್‌ಯುವಿಯನ್ನು ಆಗಸ್ಟ್ 28 ರಂದು ಬಿಡುಗಡೆ ಮಾಡಲಿದೆ. 'ಎಡಾಪ್ಟ್' ಪ್ಲಾಟ್‌ಫಾರ್ಮ್ ಆಧಾರಿತ ಈ ಕಾರು, ಸಂಪೂರ್ಣ ಎಲೆಕ್ಟ್ರಿಕ್ (EV) ಮತ್ತು ಪ್ಲಗ್-ಇನ್ ಹೈಬ್ರಿಡ್ (PHEV) ಆವೃತ್ತಿಗಳಲ್ಲಿ ಲಭ್ಯವಿರಲಿದೆ.

Read Full Story
03:29 PM (IST) Aug 05

India Latest News Live 5 August 2026 ಗಂಭೀರ್‌ ಅಲ್ಲ, ದ್ರಾವಿಡ್ ಕೂಡಾ ಅಲ್ಲ, ಇವರೇ ನೋಡಿ ಮೊಹಮ್ಮದ್ ಶಮಿ ಪಾಲಿನ ಟೀಂ ಇಂಡಿಯಾ ಫೇವರೇಟ್ ಕೋಚ್..!

ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ, ರವಿಶಾಸ್ತ್ರಿಯವರೇ ತಮ್ಮ ನೆಚ್ಚಿನ ಕೋಚ್ ಎಂದು ಬಹಿರಂಗಪಡಿಸಿದ್ದಾರೆ. 2023ರ ವಿಶ್ವಕಪ್ ಸೋಲಿನ ನೋವನ್ನು ಹಂಚಿಕೊಂಡಿರುವ ಅವರು, ಸದ್ಯ ತಂಡದಲ್ಲಿನ ತಮ್ಮ ಭವಿಷ್ಯದ ಬಗ್ಗೆಯೂ ಮಾತನಾಡಿದ್ದಾರೆ.
Read Full Story
02:44 PM (IST) Aug 05

India Latest News Live 5 August 2026 ಇಎಫ್‌ಪಿಒ ಸೇವೆಗಳು ವಾರಗಳ ಕಾಲ ವಿಳಂಬವಾಗುವುದಕ್ಕೆ ಕೊನೆಗೂ ಸಿಕ್ಕಿತು ಉತ್ತರ - ಹೊರಬಿತ್ತು ಅಸಲಿ ಕಾರಣ!

ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ತೀವ್ರ ಸಿಬ್ಬಂದಿ ಕೊರತೆ, ವಿಶೇಷವಾಗಿ ಐಟಿ ವಿಭಾಗದಲ್ಲಿ ಹಲವು ವರ್ಷಗಳಿಂದ ನೇಮಕಾತಿ ನಡೆಯದಿರುವುದು ಆನ್‌ಲೈನ್ ಸೇವೆಗಳ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.

Read Full Story
01:46 PM (IST) Aug 05

India Latest News Live 5 August 2026 2 ಸಾವಿರ ರೂ.ಗಿಂತ ಹೆಚ್ಚು UPI ವಹಿವಾಟಿಗೆ ಇನ್ಮುಂದೆ ಶುಲ್ಕ? ಯಾರಿಗೆಲ್ಲಾ ಅನ್ವಯ? ಇಲ್ಲಿದೆ ಡಿಟೇಲ್ಸ್​

ಭವಿಷ್ಯದಲ್ಲಿ, ಯುಪಿಐ ಮೂಲಕ ಪಾವತಿ ಸ್ವೀಕರಿಸುವ ವ್ಯಾಪಾರಿಗಳು ನಿರ್ದಿಷ್ಟ ಮಿತಿಯ ನಂತರ ಶುಲ್ಕ ಪಾವತಿಸಬೇಕಾಗಬಹುದು. ಹಣಕಾಸು ಸಚಿವಾಲಯವು ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯು, ದೊಡ್ಡ ವ್ಯಾಪಾರಿಗಳ ಮೇಲೆ ಮಾತ್ರ ಈ ಶುಲ್ಕವನ್ನು ವಿಧಿಸಲು ಪ್ರಸ್ತಾಪಿಸಿದೆ. ಇದು ಸಾಮಾನ್ಯ ಜನರ ದೈನಂದಿನ ವಹಿವಾಟುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
Read Full Story
01:23 PM (IST) Aug 05

India Latest News Live 5 August 2026 Costume Controversy - 'ರಾಮಾಯಣ' ಕಾಸ್ಟ್ಯೂಮ್‌ ಬಗ್ಗೆ ಭಾರೀ ಟ್ರೋಲ್; ನೆಟ್ಟಿಗರಿಗೆ ಖಡಕ್‌ ಡೋಸ್ ಕೊಟ್ಟ ವಸ್ತ್ರ-ವಿನ್ಯಾಸಕರು!

‘ಕೇವಲ ಅರ್ಧಂಬರ್ಧ ಲೀಕ್ ಆದ ಫೋಟೋಗಳನ್ನು ನೋಡಿ ಸಿನಿಮಾ ಬಗ್ಗೆ ತೀರ್ಮಾನಕ್ಕೆ ಬರಬೇಡಿ’ ಎಂದು ಚಿತ್ರತಂಡ ವಿನಂತಿಸಿದೆ. ‘ಸಿನಿಮಾ ಎಂಬುದು ಒಂದು ಅನುಭವ. ಬೆಳ್ಳಿತೆರೆಯ ಮೇಲೆ ಆ ಪಾತ್ರಗಳು ಜೀವತಳೆದು ಬಂದಾಗ ನೀವು ಈ ಉಡುಪುಗಳ ಸೌಂದರ್ಯವನ್ನು ಕಣ್ಣುಂಬಿಕೊಳ್ಳುತ್ತೀರಿ. ಅಲ್ಲಿಯವರೆಗೆ ಸ್ವಲ್ಪ ತಾಳ್ಮೆಯಿರಲಿ’ ಎಂದು ಡಿಸೈನರ್‌ಗಳು ಹೇಳಿದ್ದಾರೆ.

Read Full Story
01:11 PM (IST) Aug 05

India Latest News Live 5 August 2026 ಅಮೆರಿಕದಲ್ಲಿ 28,000 ವಲಸಿಗ ಟ್ರಕ್ ಚಾಲಕರ ಲೈಸೆನ್ಸ್ ರದ್ದು! ಭಾರತೀಯರ ಉದ್ಯೋಗಕ್ಕೂ ಕುತ್ತು?

ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು ಸುಮಾರು 28,000 ವಲಸಿಗ ಟ್ರಕ್ ಚಾಲಕರ ಪರವಾನಗಿಯನ್ನು ರದ್ದುಗೊಳಿಸಿದೆ. ಈ ಕಠಿಣ ನಿರ್ಧಾರವು ಅಮೆರಿಕದ ಟ್ರಕ್ಕಿಂಗ್ ಉದ್ಯಮದಲ್ಲಿರುವ ಭಾರತೀಯ ಚಾಲಕರ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದ್ದು, ಅವರ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ.
Read Full Story
01:02 PM (IST) Aug 05

India Latest News Live 5 August 2026 ​"ತಾಕತ್ ಇದ್ರೆ ನನ್ನನ್ನು ತಂಡದಿಂದ ಕೈಬಿಡಿ!" - ಬಿಸಿ‌ಸಿಐ ಸೆಲೆಕ್ಟರ್ಸ್‌ಗೆ ರೋಹಿತ್ ಶರ್ಮಾ ಕೊಟ್ಟ ಖಡಕ್ ವಾರ್ನಿಂಗ್ ರಹಸ್ಯ ಬಿಚ್ಚಿಟ್ಟ ಮಾಜಿ ಆಟಗಾರ!

ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ ರೋಹಿತ್ ಶರ್ಮಾ, ತಮ್ಮ 2027ರ ವಿಶ್ವಕಪ್ ಆಡುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಈ ಶತಕದ ಬಗ್ಗೆ ಮಾತನಾಡಿರುವ ಮೊಹಮ್ಮದ್ ಕೈಫ್, ಇದು 'ಧೈರ್ಯವಿದ್ದರೆ ನನ್ನನ್ನು ಕೈಬಿಟ್ಟು ನೋಡಿ' ಎಂದು ಆಯ್ಕೆ ಸಮಿತಿಗೆ ರೋಹಿತ್ ನೀಡಿದ ಸವಾಲು ಎಂದು ವಿಶ್ಲೇಷಿಸಿದ್ದಾರೆ.
Read Full Story
01:00 PM (IST) Aug 05

India Latest News Live 5 August 2026 'ಇದು ನನ್ನ ಕೊನೆಯ ಪೋಸ್ಟ್'​ - CJP ಪ್ರತಿಭಟನೆ ವೇಳೆ ವಿವಾದಕ್ಕೀಡಾಗಿದ್ದ ಇನ್​ಫ್ಲುಯೆನ್ಸರ್​ ಶ್ರದ್ಧಾ ಸಿಂಗ್ ಮಾತು

ಕಂಟೆಂಟ್ ಕ್ರಿಯೇಟರ್ ಶ್ರದ್ಧಾ ಸಿಂಗ್, ಜಂತರ್ ಮಂತರ್ ಪ್ರತಿಭಟನೆಯಲ್ಲಿ RAF ಸಿಬ್ಬಂದಿಯನ್ನು ಅಣಕಿಸಿ ವಿವಾದಾತ್ಮಕ ರೀಲ್ ಹಂಚಿಕೊಂಡಿದ್ದರು. ಈ ವಿಡಿಯೋದಿಂದಾಗಿ ತೀವ್ರ ಟ್ರೋಲಿಂಗ್, ಬೆದರಿಕೆಗಳನ್ನು ಎದುರಿಸಿದ ಅವರು, ಕ್ಷಮೆಯಾಚಿಸಿದರೂ ಕಿರುಕುಳ ನಿಲ್ಲದ ಕಾರಣ, ಇದೇ ನನ್ನ ಕೊನೆಯ ಪೋಸ್ಟ್ ಎಂದು ಹೇಳಿ ಈ ಅಧ್ಯಾಯವನ್ನು ಮುಗಿಸುವ ನಿರ್ಧಾರ ಪ್ರಕಟಿಸಿದ್ದಾರೆ.
Read Full Story
12:12 PM (IST) Aug 05

India Latest News Live 5 August 2026 Non-dairy paneer ಬ್ಯಾನ್ ಮಾಡಿದ ಸರ್ಕಾರ.. ಪನೀರ್‌ ಪ್ರಿಯರಿಗೆ ಶಾಕ್!‌ ಆರೋಗ್ಯಕ್ಕೆ ಎಷ್ಟು ಹಾನಿಕಾರಕ?

ಗ್ರಾಹಕರ ಆರೋಗ್ಯ ಮತ್ತು ತಪ್ಪು ಲೇಬಲಿಂಗ್ ತಡೆಯಲು ಮಹಾರಾಷ್ಟ್ರ ಸರ್ಕಾರವು 'ಅನಲಾಗ್ ಪನೀರ್' ಅನ್ನು ನಿಷೇಧಿಸಿದೆ. ಅಸಲಿ ಪನೀರ್ ಎಂದು ಹೇಳಿ ಮಾರಾಟವಾಗುತ್ತಿದ್ದ ಈ ಕೃತಕ ಪನೀರ್ ಎಂದರೇನು, ಅದರ ಅಪಾಯಗಳೇನು ಮತ್ತು ಅದನ್ನು ಗುರುತಿಸುವುದು ಹೇಗೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story
11:29 AM (IST) Aug 05

India Latest News Live 5 August 2026 NEET Paper Leak - ಎನ್‌ಟಿಎ ಕಚೇರಿಗಳ 24x7 ಭದ್ರತೆಗೆ ₹7.5 ಕೋಟಿ ಟೆಂಡರ್!

ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ಕಚೇರಿಗಳು ಮತ್ತು ಗೌಪ್ಯ ಸಾಮಗ್ರಿಗಳ ಭದ್ರತೆಗಾಗಿ ₹7.5 ಕೋಟಿ ಮೌಲ್ಯದ ಟೆಂಡರ್ ಕರೆದಿದೆ.

Read Full Story
11:01 AM (IST) Aug 05

India Latest News Live 5 August 2026 ರೋಹಿತ್‌ ಶರ್ಮಾಗೆ ಖೆಡ್ಡಾ ತೋಡಲು ಹೋಗಿ ತಾವೇ ಬಿದ್ರಾ ಅಜಿತ್ ಅಗರ್ಕರ್? ಚೀಫ್ ಸೆಲೆಕ್ಟರ್ ಹುದ್ದೆಯಿಂದ ಶೀಘ್ರದಲ್ಲೇ ಗೇಟ್‌ಪಾಸ್!

ರೋಹಿತ್ ಶರ್ಮಾ ವಿವಾದದ ಬೆನ್ನಲ್ಲೇ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರ ಕುರ್ಚಿ ಅಲುಗಾಡುತ್ತಿದೆ. ಬಿಸಿಸಿಐ, ಅಗರ್ಕರ್ ಅವರನ್ನು ಬದಲಿಸಿ ಎನ್‌ಸಿಎ ಮುಖ್ಯಸ್ಥ ವಿ.ವಿ.ಎಸ್. ಲಕ್ಷ್ಮಣ್ ಅವರನ್ನು ಹೊಸ ಮುಖ್ಯ ಆಯ್ಕೆಗಾರರನ್ನಾಗಿ ನೇಮಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಈ ಬದಲಾವಣೆಯಾದರೆ ಅನುಭವಿ ಆಟಗಾರರಿಗೆ ಮತ್ತೆ ಅವಕಾಶ ಸಿಗುವ ನಿರೀಕ್ಷೆಯಿದೆ.
Read Full Story