ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ ಆಗಸ್ಟ್ 7 ರಿಂದ 12ರವರೆಗೆ ನಡೆಯಲಿದ್ದು, ಅಮೆಜಾನ್ ಪೇ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಇದರಲ್ಲಿ ₹1,500 ಮೇಲಿನ ಖರೀದಿಗೆ ಬಡ್ಡಿರಹಿತ 'ಪೇ-ಇನ್-3' ಸೌಲಭ್ಯ, ಪ್ರವಾಸ ಬುಕಿಂಗ್‌ಗಳ ಮೇಲೆ ಭಾರಿ ರಿಯಾಯಿತಿ ಹಾಗೂ ಯುಪಿಐ ಪಾವತಿಗಳಿಗೆ ಕ್ಯಾಶ್‌ಬ್ಯಾಕ್ ಆಫರ್‌ಗಳು ಸೇರಿವೆ.
ಬೆಂಗಳೂರು: ಅಮೆಜಾನ್‌ನ ಗ್ರೇಟ್ ಫ್ರೀಡಂ ಸೇಲ್ ಆಗಸ್ಟ್ 7 ರಿಂದ 12ರವಗೆ ನಡೆಯಲಿದ್ದು, ಅದರ ಭಾಗವಾಗಿ ಅಮೆಜಾನ್ ಪೇ ಗ್ರಾಹಕರಿಗಾಗಿ ಹಲವು ವಿಶೇಷ ಕೊಡುಗೆ ಹಾಗೂ ರಿಯಾಯಿತಿಗಳನ್ನು ಪ್ರಕಟಿಸಿದೆ. ಪ್ರವಾಸ, ಶಾಪಿಂಗ್ ಮತ್ತು ದೈನಂದಿನ ಡಿಜಿಟಲ್ ಪಾವತಿಗಳ ಮೇಲೆ ಗ್ರಾಹಕರು ಭಾರಿ ಆಫರ್‌ಗಳನ್ನು ಪಡೆಯಬಹುದಾಗಿದೆ.
ಪೇ-ಇನ್-3 ಸೌಲಭ್ಯ
ಪ್ರಮುಖವಾಗಿ, ಪ್ರತಿಯೊಬ್ಬ ಗ್ರಾಹಕನಿಗೂ ಕೈಗೆಟುಕುವ ದರದಲ್ಲಿ ಸೇವೆ ಒದಗಿಸುವ ಉದ್ದೇಶದಿಂದ ಪೇ-ಇನ್-3 ಸೌಲಭ್ಯವನ್ನು ಪರಿಚಯಿಸಲಾಗಿದೆ. ₹1,500ಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಖರೀದಿಯನ್ನಾದರೂ ಮೂರು ಕಂತುಗಳಲ್ಲಿ ಬಡ್ಡಿ ಮತ್ತು ಪ್ರೊಸೆಸಿಂಗ್ ಶುಲ್ಕವಿಲ್ಲದೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಆಗಸ್ಟ್ 7 ರಿಂದ 9ರವರೆಗೆ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನ ಬುಕಿಂಗ್‌ಗಳ ಮೇಲೆ ಶೇ. 6 ರಷ್ಟು ರಿಯಾಯಿತಿ ಸಿಗಲಿದೆ. ಹೊಸ ಗ್ರಾಹಕರಿಗೆ ಹೆಚ್ಚುವರಿ ಶೇ. 10ರವರೆಗೆ ಉಳಿತಾಯದ ಅವಕಾಶವಿದೆ.
ಶೇ. 60ರವರೆಗೆ ಉಳಿತಾಯ ಸಾಧ್ಯತೆ
ಹೋಟೆಲ್ ಬುಕಿಂಗ್‌ಗಳ ಮೇಲೆ ಶೇ. 40ರವರೆಗೆ ರಿಯಾಯಿತಿ ಇದ್ದು, ಪ್ರೈಮ್ ಸದಸ್ಯರಿಗೆ ಹೆಚ್ಚುವರಿ ಶೇ. 5 ರಿಯಾಯಿತಿ ಲಭ್ಯ. ಒಟ್ಟಾರೆಯಾಗಿ ಶೇ. 60ರವರೆಗೆ ಉಳಿತಾಯ ಮಾಡಬಹುದು. ಬಸ್ ಟಿಕೆಟ್ ಬುಕಿಂಗ್‌ಗೆ ಶೇ. 17ರವರೆಗೆ ರಿಯಾಯಿತಿ ಹಾಗೂ ₹100 ಕ್ಯಾಶ್‌ಬ್ಯಾಕ್ ದೊರೆಯಲಿದೆ.
ಈ ಮೊದಲು ಕೇವಲ ದುಬಾರಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ಮಾತ್ರ ಸೀಮಿತವಾಗಿದ್ದ ನೋ-ಕಾಸ್ಟ್ ಇಎಮ್‌ಐ ಆಯ್ಕೆಯನ್ನು, ಈಗ ಪೇ-ಇನ್-3 ಮೂಲಕ ಗ್ರೋಸರಿ, ಫ್ಯಾಷನ್, ಗೃಹಬಳಕೆಯ ವಸ್ತುಗಳು ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ವಿಸ್ತರಿಸಲಾಗಿದೆ. ನಿರ್ದಿಷ್ಟ ವಸ್ತುವಿಗೆ ಮಾತ್ರವಲ್ಲದೆ, ಇಡೀ ಕಾರ್ಟ್ ಮೌಲ್ಯಕ್ಕೆ ಈ ಸೌಲಭ್ಯ ಅನ್ವಯವಾಗಲಿದೆ. ಯಾವುದೇ ವಾರ್ಷಿಕ ಶುಲ್ಕವಿಲ್ಲದ ಈ ಕಾರ್ಡ್ ಬಳಕೆದಾರರಿಗೆ ಗ್ರೇಟ್ ಫ್ರೀಡಂ ಸೇಲ್‌ನಲ್ಲಿ ಮಾಡುವ ಪ್ರತಿ ಖರೀದಿಯ ಮೇಲೆಯೂ ಶೇ. 5ರಷ್ಟು ಅನಿಯಮಿತ ಕ್ಯಾಶ್‌ಬ್ಯಾಕ್ ಸಿಗಲಿದೆ.
ಅಮೆಜಾನ್ ಪೇ ಯುಪಿಐ ಮೂಲಕ ಕನಿಷ್ಠ ₹1 ಪಾವತಿಸುವ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ಬಳಕೆದಾರರು ಮುಂದಿನ ಆರ್ಡರ್‌ನಲ್ಲಿ ₹50 ರವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಮೊಬೈಲ್ ರೀಚಾರ್ಜ್ ಮಾಡುವವರಿಗೂ ₹50 ರವರೆಗೆ ಕ್ಯಾಶ್‌ಬ್ಯಾಕ್ ಸೌಲಭ್ಯವಿದೆ.
ಇದನ್ನೂ ಓದಿ: Iphone ಪ್ರಿಯರಿಗೆ ಭರ್ಜರಿ ಆಫರ್: ಐಫೋನ್ 17 ಪ್ರೋ ಬೆಲೆಯಲ್ಲಿ ಭಾರಿ ಇಳಿಕೆ; ಬರೋಬ್ಬರಿ ₹17,000 ಉಳಿತಾಯ!


