ಮಮತಾ ಬ್ಯಾನರ್ಜಿ ಆಪ್ತ ಸಂಬಂಧಿ, ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಸ್ಥಳೀಯರು ಮೊಟ್ಟೆ, ಕಲ್ಲು ಎಸೆದು, ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ, ಕಾಲಿನಿಂದ ಒದ್ದಿದ್ದಾರೆ. ಇದೀಗ ಈ ದಾಳಿಗೆ ಮಮತಾ ಬ್ಯಾನರ್ಜಿ ಕೆರಳಿದ್ದಾರೆ.
- Home
- News
- India News
- India Latest News Live: ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಸ್ಥಳೀಯರ ದಾಳಿಗೆ ಮಮತಾ ಕೆಂಡ, ಕೋಲಾಹಲ ಸೃಷ್ಟಿಸಿದ ವಿಡಿಯೋ
India Latest News Live: ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಸ್ಥಳೀಯರ ದಾಳಿಗೆ ಮಮತಾ ಕೆಂಡ, ಕೋಲಾಹಲ ಸೃಷ್ಟಿಸಿದ ವಿಡಿಯೋ

ನವದೆಹಲಿ: ಇಂಧನ ಬೆಲೆ ಏರಿಕೆ ಮತ್ತು ಪ್ರಯಾಣಿಕರ ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದೇಶದ 2 ದೊಡ್ಡ ವಿಮಾನಯಾನ ಕಂಪನಿಗಳಾದ ಇಂಡಿಗೋ ಮತ್ತು ಏರ್ ಇಂಡಿಯಾ ಜೂನ್ನಿಂದ ಸುಮಾರು 250 ದೇಶೀಯ ವಿಮಾನಗಳನ್ನು ಕಡಿತಗೊಳಿಸಲು ನಿರ್ಧರಿಸಿವೆ. ಬೆಂಗಳೂರು, ಮುಂಬೈ ಮತ್ತು ದೆಹಲಿ ಮಾರ್ಗಗಳಲ್ಲಿ ವಿಮಾನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ದೈನಂದಿನ ಸುಮಾರು 2,200 ವಿಮಾನಗಳನ್ನು ನಡೆಸುವ ಇಂಡಿಗೋ, ಶೇ.5-7ರಷ್ಟು ಅಂದರೆ ಸುಮಾರು 110 ವಿಮಾನಗಳ ದೇಶೀಯ ಸಂಚಾರವನ್ನು ಕಡಿತಗೊಳಿಸುತ್ತಿದೆ. ಏರ್ ಇಂಡಿಯಾ ನಿತ್ಯ ಸುಮಾರು 500 ದೇಶೀಯ ವಿಮಾನಗಳನ್ನು ನಡೆಸುತ್ತದೆ. ಇದು ಜೂನ್-ಜುಲೈ ಅವಧಿಯಲ್ಲಿ ಶೇ.22ರಷ್ಟು ಅಂದರೆ 110 ವಿಮಾನಗಳನ್ನು ಕಡಿತಗೊಳಿಸಲಿದೆ.
India Latest News Live 30 May 2026ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಸ್ಥಳೀಯರ ದಾಳಿಗೆ ಮಮತಾ ಕೆಂಡ, ಕೋಲಾಹಲ ಸೃಷ್ಟಿಸಿದ ವಿಡಿಯೋ
India Latest News Live 30 May 2026ಮಮತಾ ಬ್ಯಾನರ್ಜಿ ಆಪ್ತ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ, ಆಕ್ರೋಶದಿಂದ ಮೊಟ್ಟೆ ಎಸೆದ ಜನ
ಮಮತಾ ಬ್ಯಾನರ್ಜಿ ಆಪ್ತ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆಯಾಗಿದೆ. ಹಲವರು ಮೊಟ್ಟೆ, ಕಲ್ಲು ಎಸೆತಿದ್ದಾರೆ. ಕೆಲವರು ಕಾಲಿನಿಂದ ಒದ್ದೆರೆ, ಮತ್ತೆ ಕೆಲವರು ಕಪಾಳಮೋಕ್ಷ ಮಾಡಲು ಯತ್ನಿಸಿದ ಘಟನೆ ನಡೆದಿದೆ.
India Latest News Live 30 May 2026ಹುಬ್ಬಳ್ಳಿ, ದಾವಣಗೆರೆ ಸೇರಿ 10 ದಿನ ಈ ಎಲ್ಲಾ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ - ಡಿಟೇಲ್ಸ್ ಇಲ್ಲಿದೆ
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ, ಮೇ 30 ರಿಂದ 10 ದಿನಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಸಿದ್ದಗಂಗಾ, ವಾಸ್ಕೋ, ಒಡೆಯರ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರ ವಿಳಂಬ, ಮತ್ತು ಮಾರ್ಗ ಬದಲಾವಣೆಯಾಗಲಿದೆ ಎಂದು ರೈಲ್ವೆ ತಿಳಿಸಿದೆ.
India Latest News Live 30 May 2026ಭಾರತಕ್ಕೆ ಮುಂಗಾರು ಆಘಾತ, ಕಳೆದ 11 ವರ್ಷದಲ್ಲೇ ಅತ್ಯಂತ ಕಳಪೆ ಮಾನ್ಸೂನ್ ಜೊತೆಗೆ ಎಲ್ ನಿನೋ
ಒಂದೆಡೆ ತೀವ್ರ ಬಿಸಿಗಾಳಿಯಿಂದ ಬಹುತೇಕ ರಾಜ್ಯಗಳು ತತ್ತರಿಸಿದೆ. ಇದರ ನಡುವೆ ಅಲ್ಲೊಂದು ಇಲ್ಲೊಂದು ಮಳೆ, ಆಲಿಕಲ್ಲು ಮಳೆ, ಬಿರುಗಾಳಿಗೆ ಅವಾಂತರಗಳು ಸೃಷ್ಟಿಯಾಗಿದೆ. ಇದರ ನಡುವೆ ಮತ್ತೊಂದು ಆಘಾತ ಎದುರಾಗಿದೆ.
India Latest News Live 30 May 2026ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷಿ ಯೋಜನೆ, ರೈಲು ಉತ್ಪಾದನಾ ಘಟಕ - 5ವರ್ಷದಲ್ಲಿ 200ಹೈಟೆಕ್ ಇಂಟರ್‌ಸಿಟಿ ರೈಲು ನಿರ್ಮಾಣ!
India Latest News Live 30 May 2026ಟಿಕೆಟ್ ಇದ್ದರೂ ಸೀಟು ಸಿಗದೆ ನಿಂತುಕೊಂಡು ಪ್ರಯಾಣಿಸಿದ ಪ್ರಯಾಣಿಕನಿಗೆ 20,000 ರೂ ಪರಿಹಾರ
ಕನ್‌ಫರ್ಮ್ ಟಿಕೆಟ್ ಇದ್ದರೂ ರೈಲು ಹತ್ತಿ ನೋಡಿದರೆ ತನ್ನ ಸೀಟಿನಲ್ಲಿ ಹಲವರು ಕುಳಿತಿದ್ದಾರೆ. ಎಬ್ಬಿಸಿದರೂ ಏಳಲಿಲ್ಲ. ಬೇರೆ ದಾರಿಯಿಲ್ಲದೆ ನಿಂತುಕೊಡೆ ಪ್ರಯಾಣಿಸಿದ ಪ್ರಯಾಣಿಕನಿಗೆ ಇದೀಗ ಭಾರತೀಯ ರೈಲ್ವೇ 20 ಸಾವಿರ ರೂಪಾಯಿ ಪರಿಹಾರ ನೀಡಲು ಆದೇಶಿಸಿದೆ.
India Latest News Live 30 May 2026ಬಾಂಗ್ಲಾದೇಶಕ್ಕೆ ಭಾರತೀಯ ರೈಲ್ವೆಯ ಕೊಡುಗೆ - ಮುಂದಿನ 2ತಿಂಗಳಲ್ಲಿ ರವಾನೆಯಾಗಲಿದೆ 20 ಆಧುನಿಕ ರೈಲು ಬೋಗಿಗಳ ಮೊದಲ ರೇಕ್!
ಭಾರತೀಯ ರೈಲ್ವೆಯ 'ರೈಟ್ಸ್ ಲಿಮಿಟೆಡ್' ಸಂಸ್ಥೆಯು, ಬಾಂಗ್ಲಾದೇಶ ರೈಲ್ವೆಗೆ 20 ಪ್ಯಾಸೆಂಜರ್ ಕೋಚ್‌ಗಳ ಮೊದಲ ರೇಕ್ ಅನ್ನು ಮುಂದಿನ ಎರಡು ತಿಂಗಳಲ್ಲಿ ತಲುಪಿಸಲು ಸಜ್ಜಾಗಿದೆ. ಇದು 200 ಬ್ರಾಡ್ ಗೇಜ್ ಬೋಗಿಗಳನ್ನು ಪೂರೈಸುವ ಬೃಹತ್ ಒಪ್ಪಂದದ ಭಾಗವಾಗಿದೆ.
India Latest News Live 30 May 2026ಅಣ್ಣಾ, ಬೆಲ್ ಮಾಡ್ಬೇಡ, ಕಾಲ್ ಮಾಡಿ; ರಾತ್ರಿ ಹುಡುಗಿಯರು ರಹಸ್ಯವಾಗಿ ಆರ್ಡರ್ ಮಾಡೋದೇನು?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಜೆಪ್ಟೋ ಡೆಲಿವರಿ ಯುವಕನೊಬ್ಬ ಮಧ್ಯರಾತ್ರಿ ಮಹಿಳೆಯರು ರಹಸ್ಯವಾಗಿ ಏನು ಆರ್ಡರ್ ಮಾಡುವ ಬಗ್ಗೆ ಮಾತನಾಡಿದ್ದಾನೆ. ಈ ವಿಡಿಯೋಗೆ ನೆಟ್ಟಿಗರಿಂದ ಪರ-ವಿರೋಧದ ಚರ್ಚೆಗಳು ವ್ಯಕ್ತವಾಗಿವೆ.
India Latest News Live 30 May 2026ಈ ವಯಸ್ಸಲ್ಲಿ ಚಿನ್ನಿ ದಾಂಡು ಕೂಡ ಸರಿಯಾಗಿ ಆಡೋಕೆ ಬರ್ತಿರಲಿಲ್ಲ - ವೈಭವ್ ಸೂರ್ಯವಂಶಿ ಆಟಕ್ಕೆ ಬಿಗ್‌ಬಿ ಸಲಾಂ
India Latest News Live 30 May 2026ರೇಷನ್ ಕಳ್ಳರಿಗೆ ಬಿಗ್ ಶಾಕ್ - ಅನರ್ಹ ಫಲಾನುಭವಿಗಳು, ಅಕ್ರಮ ದಾಸ್ತಾನುದಾರರ ಆಟ ಇನ್ಮುಂದೆ ನಡೆಯಲ್ಲ
ಬಡವರಿಗಾಗಿ ಇರುವ ಪಡಿತರ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಶ್ರೀಮಂತರು ಮತ್ತು ಅಕ್ರಮ ದಾಸ್ತಾನುದಾರರಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ 'ಸಾರ್ಥಕ್ ಸಾರ್ವಜನಿಕ ವಿತರಣಾ ವ್ಯವಸ್ಥೆ' ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯು ಬಯೋಮೆಟ್ರಿಕ್ ದೃಢೀಕರಣ ಮತ್ತು ಡಿಜಿಟಲೀಕರಣವನ್ನು ಒಳಗೊಂಡಿದೆ.
India Latest News Live 30 May 2026ಸಂಚಲನ ಸೃಷ್ಟಿಸಿದ ಮಾಧುರಿ ದೀಕ್ಷಿತ್ 12 ಸೆಕೆಂಡ್ ವಿಡಿಯೋ ಕ್ಲಿಪ್; ಯಾಕಿಂಗೆ ಮಾಡ್ತಾರೆ?
ನಟಿ ಮಾಧುರಿ ದೀಕ್ಷಿತ್ (Actress Madhuri Dixit) ಅವರ ಡೀಪ್‌ಫೇಕ್ ವಿಡಿಯೋವೊಂದು ವೈರಲ್ ಆಗಿದ್ದು, ಅವರನ್ನು ಬೋಲ್ಡ್ ಆಗಿ ಚಿತ್ರಿಸಲಾಗಿದೆ. ಎಐ ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾದ ಈ ವಿಡಿಯೋ ಸುಳ್ಳು ಎಂದು ಫ್ಯಾಕ್ಟ್ ಚೆಕ್‌ನಿಂದ ದೃಢಪಟ್ಟಿದ್ದು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
India Latest News Live 30 May 2026ಚಿನ್ನ-ಬೆಳ್ಳಿ ದರದಲ್ಲಿ ಅನಿರೀಕ್ಷಿತ ಕುಸಿತ - ಒಂದು ವಾರದಲ್ಲಿ ಕಡಿಮೆಯಾಗಿದೆಷ್ಟು? ಇವತ್ತು ಇಳಿಕೆ
India Latest News Live 30 May 2026ಪೇಸ್ಟ್ ಹಚ್ಚೋಕೂ ಮುನ್ನ ರೇಟ್ ಚೆಕ್ ಮಾಡಿ, ಟೂತ್‌ಪೇಸ್ಟ್ ಬೆಲೆ ಭಾರಿ ಏರಿಕೆ ಮಾಡಿದ ಕೋಲ್ಗೇಟ್
ಕಚ್ಚಾ ವಸ್ತುಗಳ ಮತ್ತು ಪ್ಯಾಕೇಜಿಂಗ್ ವೆಚ್ಚ ಹೆಚ್ಚಳದಿಂದಾಗಿ, ಕೋಲ್ಗೇಟ್-ಪಾಮೋಲಿವ್ ಇಂಡಿಯಾ ತನ್ನ ಪ್ರಮುಖ ಟೂತ್‌ಪೇಸ್ಟ್‌ಗಳ ಬೆಲೆಯನ್ನು ಶೇ. 4 ರಿಂದ 5 ರಷ್ಟು ಹೆಚ್ಚಿಸಿದೆ. ಕೋಲ್ಗೇಟ್ ಡೆಂಟಲ್ ಕ್ರೀಮ್, ಮ್ಯಾಕ್ಸ್ ಫ್ರೆಶ್ ಮತ್ತು ವಿಸಿಬಲ್ ವೈಟ್‌ನಂತಹ ಜನಪ್ರಿಯ ಉತ್ಪನ್ನಗಳ ದರ ಪರಿಷ್ಕರಣೆಯಾಗಿದೆ.
India Latest News Live 30 May 2026ನಟ ಅಜಿತ್ ಕುಮಾರ್‌ಗೆ ಮಾತೃವಿಯೋಗ, ಮೂರೇ ವರ್ಷದ ಅಂತರದಲ್ಲಿನ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಸೂಪರ್‌ಸ್ಟಾರ್
India Latest News Live 30 May 2026ಕರ್ನಾಟಕದಿಂದ ರಾಜ್ಯಸಭೆಗೆ ವೈಎಸ್‌ಆರ್ ಪುತ್ರಿ ಶರ್ಮಿಳಾ ರೆಡ್ಡಿ?
ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ. ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಬಗ್ಗೆ ಎಐಸಿಸಿ ನಾಯಕತ್ವ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ.
India Latest News Live 30 May 2026ಕೂದಲಿಲ್ಲದೇ ಇದ್ರೆ ಅಟೆಂಡೆನ್ಸ್ ಕೂಡ ಇಲ್ಲ..ಫೇಸ್ ಸ್ಕ್ಯಾನ್‌ಗೆ ಮಹಾ ಉಪಾಯ ಮಾಡಿದ ನರೇಗಾ ಕಾರ್ಮಿಕ
ತೆಲಂಗಾಣದಲ್ಲಿ ದೇವರಿಗೆ ಹರಕೆ ತೀರಿಸಲು ತಲೆ ಬೋಳಿಸಿಕೊಂಡ ನರೇಗಾ ಕಾರ್ಮಿಕನೊಬ್ಬನ ಮುಖವನ್ನು ಡಿಜಿಟಲ್ ಹಾಜರಾತಿ ಆ್ಯಪ್ ಗುರುತಿಸಲು ವಿಫಲವಾಗಿದೆ. ಹಾಜರಾತಿಗಾಗಿ, ಸಹೋದ್ಯೋಗಿ ಮಹಿಳೆಯೊಬ್ಬರ ಕೂದಲನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡು ಫೋಟೋ ತೆಗೆಸಿಕೊಂಡ ನಂತರವೇ ಆ್ಯಪ್ ಆತನನ್ನು ಗುರುತಿಸಿದೆ.