-18 ವರ್ಷದ ಹಿಂದಿನ ಪಾಕ್ ವಿಶ್ವ ದಾಖಲೆಗೆ ಮುರಿದ ಹಿರಿಮೆ- ಏಕಕಾಲಕ್ಕೆ 75000 ಜನರಿಂದ ರಾಷ್ಟ್ರಧ್ವಜ ಬೀಸಿ ದಾಖಲೆ- ಜಗದೀಶ್‌ಪುರದ ದೊರೆ ವೀರ್ ಕುವರ್ ಸಿಂಗ್ ಪುಣ್ಯಸ್ಮರಣೆ
ಜಗದೀಶ್‌ಪುರ್(ಏ.24): ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಲ್ಲಿ ಬಿಹಾರದ ಜಗದೀಶ್‌ಪುರದಲ್ಲಿ ಸುಮಾರು 75,000 ಜನರು ಏಕಕಾಲಕ್ಕೆ ರಾಷ್ಟ್ರಧ್ವಜವನ್ನು ಬೀಸಿ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಮೂಲಕ 18 ವರ್ಷಗಳ ಹಿಂದೆ ಪಾಕಿಸ್ತಾನ ನಿರ್ಮಿಸಿದ ದಾಖಲೆ ಮುರಿದಿದ್ದಾರೆ.
1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಗದೀಶ್‌ಪುರದ ದೊರೆ ವೀರ್ ಕುವರ್ ಸಿಂಗ್ ಅವರ 164 ನೇ ಪುಣ್ಯಸ್ಮರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 77,700 ಜನರು ಏಕಕಾಲಕ್ಕೆ ಸುಮಾರು 5 ನಿಮಿಷಗಳ ಕಾಲ ತ್ರಿವರ್ಣ ಧ್ವಜವನ್ನು ಬೀಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರಾದ ಆರ್.ಕೆ. ಸಿಂಗ್, ನಿತ್ಯಾನಂದ ರಾಯ್, ಉಪ ಮುಖ್ಯಮಂತ್ರಿ ತರ್ಕಿಶೋರ್ ಪ್ರಸಾದ್, ರೇಣು ದೇವಿ ಹಾಗೂ ಸುಶೀಲ್ ಕುಮಾರ್ ಮೋದಿ ‘ವಂದೇ ಮಾತರಂ’ ವಾದ್ಯ ಸಂಗೀತಕ್ಕೆ ಧ್ವಜವನ್ನು ಬೀಸಿದರು. ದೇಶ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ನಡೆಸಲಾದ ‘ಆಜಾದಿ ಕಾ ಅಮೃತ ಮಹೋತ್ಸವ’ದಡಿಯಲ್ಲಿ ಇದನ್ನು ಹಮ್ಮಿಕೊಳ್ಳಲಾಗಿತ್ತು. ಈ ಮೊದಲು 2004ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿ 56,000 ಜನರು ಏಕಕಾಲಕ್ಕೆ ರಾಷ್ಟ್ರಧ್ವಜ ಬೀಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
ಕಾಶ್ಮೀರದ ಬದಲಾವಣೆ ಶ್ಲಾಘಿಸಿ, ಇದೇ ರೀತಿ ದೇಶದೆಲ್ಲೆಡೆ ರಾಷ್ಟ್ರಧ್ವಜ ಹಾರಿಸುವ ಅವಕಾಶಬೇಕು; ಸಂಸದ ಸುಮಲತಾ!
ತ್ರಿವರ್ಣ ಧ್ವಜ ರೂಪಿಸಿದ ವೆಂಕಯ್ಯ ಪುತ್ರಿಗೆ ಸಿಎಂ ಜಗನ್ ಸನ್ಮಾನ
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 2021ರ ಆ.15ಕ್ಕೆ 75 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿರುವ ಬೆನ್ನಲ್ಲೇ, ದೇಶದ ತ್ರಿವರ್ಣ ಧ್ವಜ ರೂಪಿಸಿದ ಕೀರ್ತಿಯ ಪಿಂಗಾಳಿ ವೆಂಕಯ್ಯ ಅವರ ಪುತ್ರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರು ಸನ್ಮಾನ ಮಾಡಿದ್ದಾರೆ. ಗುಂಟೂರು ಜಿಲ್ಲೆಯ ಮಚೆರ್ಲಾ ಗ್ರಾಮಕ್ಕೆ ಆಗಮಿಸಿದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು, ಪಿಂಗಾಳಿ ವೆಂಕಯ್ಯ ಅವರ ಪುತ್ರಿಯಾದ 99 ವರ್ಷದ ಹಿರಿಯ ನಾಯಕಿ ಘಂಟಸಾಲ ಸೀತಾಮಹಾಲಕ್ಷ್ಮೇ ಅವರಿಗೆ ಸ್ಮರಣಿಕೆಯೊಂದನ್ನು ನೀಡಿ ಸನ್ಮಾನ ನೆರವೇರಿಸಿದರು. ಮುಖ್ಯಮಂತ್ರಿ ಜಗನ್ ಅವರ ಈ ವೈಖರಿಯು ನಾನು ಮನಸೋತಿದ್ದೇನೆ ಎಂದು ಸೀತಾಮಹಾಲಕ್ಷ್ಮೇ ತಿಳಿಸಿದರು.
ಚೀನಾಕ್ಕೆ ತಿರುಗೇಟು, ಗಲ್ವಾನ್‌ನಲ್ಲಿ ಭಾರತದಿಂದಲೂ ಧ್ವಜಾರೋಹಣ!
ಜಮ್ಮು- ಕಾಶ್ಮೀರ: ಶಾಲಾ ಸೂಚನಾ ಫಲಕಗಳಲ್ಲಿ ತ್ರಿವರ್ಣ ಧ್ವಜ ಕಡ್ಡಾಯ
ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಮೂಡಿಸುವ ಉದ್ದೇಶದಿಂದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸೂಚನಾ ಫಲಕಗಳ ಹಿಂದೆ ತ್ರಿವರ್ಣ ಧ್ವಜದ ಹಿನ್ನೆಲೆ ಇರಬೇಕು ಮತ್ತು ಶಾಲಾ ಕಟ್ಟಡಗಳಿಗೆ ಬಿಳಿ ಮತ್ತು ಬೂದು ಬಣ್ಣವನ್ನು ಬಳಿಯಬೇಕು ಎಂದು ಜಮ್ಮು- ಕಾಶ್ಮೀರ ಆಡಳಿತ ಸೂಚನೆ ನೀಡಿದೆ. ಎಲ್ಲಾ ಶಾಲೆಗಳ ಮುಖ್ಯಸ್ಥರು ಶಾಲೆಗಳಲ್ಲಿ ತ್ರಿವರ್ಣ ಧ್ವಜದ ಹಿನ್ನೆಲೆ ಇರುವ ಸೂಚನಾ ಫಲಕಗಳನ್ನೇ ಅಳವಡಿಸಬೇಕು. ಶಾಲಾ ಕಟ್ಟಡಗಳಿಗೆ ನಿರ್ದಿಷ್ಟಬಣ್ಣವನ್ನೇ ಬಳಿಯಬೇಕು ಆದೇಶದಲ್ಲಿ ತಿಳಿಸಲಾಗಿದೆ. ಈ ಮುನ್ನ ಗಣರಾಜ್ಯೋತ್ಸವದಂದು ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು.
