Asianet Suvarna News Asianet Suvarna News

Ladakh Issue: ಚೀನಾಕ್ಕೆ ತಿರುಗೇಟು, ಗಲ್ವಾನ್‌ನಲ್ಲಿ ಭಾರತದಿಂದಲೂ ಧ್ವಜಾರೋಹಣ!

*   ಜ.1ರಂದೇ ತ್ರಿವರ್ಣ ಧ್ವಜ ಪ್ರದರ್ಶಿಸಿ ಸಡ್ಡು ಹೊಡೆದ ಸೇನೆ
*   ಅತ್ಯಾಧುನಿಕ ಎಸ್‌ಐಜಿ-716 ರೈಫಲ್‌ ಹಿಡಿದು ಶಕ್ತಿ ಪ್ರದರ್ಶನ
*   ಜ.1ರಂದು ಪರಸ್ಪರ ಸಿಹಿ ವಿನಿಮಯದ ಮೂಲಕ ಸೌಹಾರ್ದತೆ ಪ್ರದರ್ಶಿಸಿದ್ದ ಭಾರತ ಮತ್ತು ಚೀನಾ ಯೋಧರು
 

Flag Hoist from India in Galwan grg
Author
Bengaluru, First Published Jan 5, 2022, 7:20 AM IST

ನವದೆಹಲಿ(ಜ.05): ಹೊಸ ವರ್ಷದ ಮೊದಲ ದಿನ ಗಲ್ವಾನ್‌ ಕಣಿವೆ ಪ್ರದೇಶದಲ್ಲಿ ಚೀನಾ(China) ತನ್ನ ಧ್ವಜ ಪ್ರದರ್ಶಿಸುವ ಮೂಲಕ ಭಾರತ(India) ಮತ್ತು ಭಾರತೀಯ ಸೇನೆಯನ್ನು(Indian Army) ಅಣಕಿಸುವ ಯತ್ನ ಮಾಡಿದ್ದಕ್ಕೆ ಭಾರತೀಯ ಸೇನೆಯೂ ಅಂದೇ ಪ್ರಬಲವಾಗಿ ತಿರುಗೇಟು ನೀಡಿರುವುದು ಈಗ ಬೆಳಕಿಗೆ ಬಂದಿದೆ. ಜ.1ರಂದು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಚೀನಾ ಯೋಧರು(China Soldiers) ರಾಷ್ಟ್ರಧ್ವಜ(National Flag) ಪ್ರದರ್ಶಿಸಿದಂತೆ ತಮ್ಮ ವಶದಲ್ಲಿರುವ ಗಲ್ವಾನ್‌ ಕಣಿವೆಯಲ್ಲಿ ಭಾರತೀಯ ಯೋಧರೂ(Indian Soldiers) ಜ.1ರಂದೇ ಧ್ವಜಾರೋಹಣ ಮಾಡಿರುವ ಫೋಟೋಗಳನ್ನು ಸೇನಾ ಮೂಲಗಳು ಮಂಗಳವಾರ ಬಿಡುಗಡೆ ಮಾಡಿವೆ.

ಬಿಡುಗಡೆ ಆದ 2 ಫೋಟೋಗಳ ಪೈಕಿ ಒಂದರಲ್ಲಿ 30 ಸೈನಿಕರು ಗಲ್ವಾನ್‌(Galwan) ಕಣಿವೆ ಪ್ರದೇಶದಲ್ಲಿ ನಿಂತಿದ್ದು, ಈ ಪೈಕಿ ನಾಲ್ವರು ರಾಷ್ಟ್ರಧ್ವಜವನ್ನು ಹಿಡಿದಿರುವ ದೃಶ್ಯವಿದೆ. ಇನ್ನೊಂದರಲ್ಲಿ ತಾತ್ಕಾಲಿಕ ಕಣ್ಗಾವಲು ಕೇಂದ್ರದ ಬಳಿ ಇರುವ ಧ್ವಜಕಂಬದಲ್ಲಿ ರಾಷ್ಟ್ರಧ್ವಜ ಹಾರಿಸಿರುವ, ಅದರ ಸಮೀಪದಲ್ಲೇ 30 ಸೈನಿಕರ ಜೊತೆ ಇತರೆ ನಾಲ್ವರು ರಾಷ್ಟ್ರಧ್ವಜ ಹಿಡಿದುಕೊಂಡಿರುವ ದೃಶ್ಯಗಳಿವೆ. ಅತ್ಯಾಧುನಿಕ ಎಸ್‌ಐಜಿ-716 ರೈಫಲ್‌ಗಳನ್ನೂ ನಮ್ಮ ಯೋಧರು ಹಿಡಿದಿದ್ದಾರೆ. ಈ ಫೋಟೋಗಳನ್ನು ಹೊಸ ವರ್ಷದ ದಿನವಾದ ಜ.1ರಂದು ತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

Prevent Nuclear Weapons: ಅಣ್ವಸ್ತ್ರ ದಾಳಿ, ಶಸ್ತ್ರಾಸ್ತ್ರ ಪೈಪೋಟಿಗೆ ಹೋಗಲ್ಲ: ಐದು ದೇಶಗಳ ಶಪಥ!

ವಿಶೇಷವೆಂದರೆ ಪೂರ್ವ ಲಡಾಖ್‌ನಲ್ಲಿ(Ladhak) ಗಡಿ ಭಾಗದಲ್ಲಿ ಜ.1ರಂದು ಭಾರತ ಮತ್ತು ಚೀನಾ ಯೋಧರು ಪರಸ್ಪರ ಸಿಹಿ ವಿನಿಮಯದ ಮೂಲಕ ಸೌಹಾರ್ದತೆ ಪ್ರದರ್ಶಿಸಿದ್ದರು. ಆದರೆ ಅದಾದ ಎರಡೇ ದಿನದಲ್ಲಿ ಚೀನಾ ಮಾಧ್ಯಮಗಳು ಕುತಂತ್ರ ಬುದ್ಧಿ ಪ್ರದರ್ಶಿಸುವ ಫೋಟೋಗಳನ್ನು ಹರಿಯಬಿಡುವ ಮೂಲಕ ಭಾರತದ ಜೊತೆ ಕಾಲು ಕೆರೆಯ ಜಗಳದ ಯತ್ನ ಮಾಡಿದ್ದವು.

ಲಡಾಖ್‌ ಗಡಿಯಲ್ಲಿ ಸೇತುವೆ: ಚೀನಾ ಮತ್ತೆ ಕಿರಿಕ್‌

ನವದೆಹಲಿ: ಭಾರತ ಹಾಗೂ ಚೀನಾ ನಡುವೆ ಘನಘೋರ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಪೂರ್ವ ಲಡಾಖ್‌ನಲ್ಲಿ ಚೀನಾ ಮತ್ತೆ ಎರಡು ಹೊಸ ತಗಾದೆ ತೆಗೆದಿದೆ. ಒಂದೆಡೆ ಪ್ಯಾಂಗ್ಯಾಂಗ್‌ ಸರೋವರದಲ್ಲಿ ಸದ್ದಿಲ್ಲದೆ ಸೇತುವೆಯೊಂದನ್ನು ನಿರ್ಮಾಣ ಮಾಡಲು ಆರಂಭಿಸಿದೆ. ಈ ಸಂಗತಿ ಗುಪ್ತಚರ ತಜ್ಞ ಡೇಮಿಯನ್‌ ಸೈಮನ್‌ ಅವರು ಪಡೆದಿರುವ ಉಪಗ್ರಹ ಚಿತ್ರಗಳಿಂದ ಪತ್ತೆಯಾಗಿದೆ. ಇನ್ನೊಂದೆಡೆ ಹೊಸ ವರ್ಷದ ದಿನದಂದೇ ಗಲ್ವಾನ್‌ ಕಣಿವೆಯಲ್ಲಿ ತನ್ನ ಧ್ವಜ ಪ್ರದರ್ಶಿಸುವ ಮೂಲಕ ಭಾರತಕ್ಕೆ ಸವಾಲು ಎಸೆದಿತ್ತು. 

ಗಡಿಯಲ್ಲಿ ಸೇತುವೆ ಕಿರಿಕ್‌:

ಚೀನಾ ಲಡಾಖ್‌ ಗಡಿಗೆ ಹೊಂದಿಕೊಂಡ ಭಾಗದ ಪ್ಯಾಂಗ್ಯಾಂಗ್‌ ಸರೋವರದ ಮೇಲೆ ಸೇತುವೆ ನಿರ್ಮಾಣ ಆರಂಭಿಸಿದೆ. ತನ್ನ ಭಾಗದ ಸರೋವರದಲ್ಲಿ ಈ ಸೇತುವೆ ನಿರ್ಮಾಣ ಮಾಡುತ್ತಿದೆಯಾದರೂ, ಅದರ ಉದ್ದೇಶ ಆತಂಕಕಾರಿಯಾಗಿದೆ.

New Year: ಗಲ್ವಾನ್ ಕಣಿವೆಯಲ್ಲಿ ಚೀನಾ ಧ್ವಜ, ಸರ್ಕಾರದ ವಿರುದ್ಧ ರಾಹುಲ್ ಕಿಡಿ!

ಈ ಸ್ಥಳ ಪ್ಯಾಂಗಾಂಗ್‌ ಸರೋವರದ ಎರಡೂ ದಂಡೆಗಳನ್ನು ಸಂಪರ್ಕಿಸುವ ಕಾರಣ, ಭಾರತದ ಜತೆಗೆ ಸಂಘರ್ಷ ಆರಂಭವಾದಾಗ ಅತ್ಯಂತ ತ್ವರಿತಗತಿಯಲ್ಲಿ ಯೋಧರು ಹಾಗೂ ಸೇನಾ ಸಾಧನಗಳನ್ನು ರವಾನಿಸುವ ಅವಕಾಶ ಚೀನಾಕ್ಕೆ ದಕ್ಕಲಿದೆ. ಸರೋವರದ ಕಿರಿದಾದ ಪ್ರದೇಶದಲ್ಲಿ ಈ ಸೇತುವೆ ನಿರ್ಮಾಣ ನಡೆಯುತ್ತಿದ್ದು, ಬಹುತೇಕ ಮುಗಿಯುವ ಹಂತದಲ್ಲಿದೆ ಎಂದು ಚಿತ್ರಗಳನ್ನು ಸಂಗ್ರಹಿಸಿರುವ ಸೈಮನ್‌ ಹೇಳಿದ್ದಾರೆ.

ಕಳೆದ ವರ್ಷ ಚೀನಾ ಜತೆಗೆ ಸಂಘರ್ಷ ಆರಂಭವಾದಾಗ ಅತ್ಯಂತ ಶೀಘ್ರವಾಗಿ ಭಾರತೀಯ ಯೋಧರು ಪ್ಯಾಂಗಾಂಗ್‌ ಸರೋವರದ ಬೆಟ್ಟದ ತುದಿಗಳನ್ನು ಏರಿ ಕುಳಿತಿದ್ದರು. ಇದರಿಂದಾಗಿ ಚೀನಾ ಎದುರು ಭಾರತದ ಕೈ ಮೇಲಾಗಿತ್ತು. ಆದರೆ ಈ ಸೇತುವೆ ನಿರ್ಮಾಣಗೊಂಡರೆ, ಹೆಚ್ಚುವರಿ ಯೋಧರನ್ನು ರವಾನಿಸಲು ಚೀನಾಕ್ಕೆ ಅಧಿಕ ಮಾರ್ಗಗಳು ಲಭಿಸಿದಂತಾಗಲಿದೆ. ಇದು ಭಾರತದ ಕಳವಳಕ್ಕೆ ಕಾರಣ.
 

Follow Us:
Download App:
  • android
  • ios