ಸಂಸತ್ತಿನಲ್ಲಿ ದೇಶದ ಗಮನ ಸಳೆದ ಸಂಸದೆ ಸುಮಲತಾ ಕಾಶ್ಮೀರದಲ್ಲಿ ರಾಷ್ಟ್ರ ಧ್ವಜ ಹಾರಾಡುತ್ತಿದೆ, ಬದಲಾವಣೆಗೆ ಕೇಂದ್ರಕ್ಕೆ ಮೆಚ್ಚುಗೆ ದೇಶದ ಯಾವುದೇ ಮೂಲೆಯಲ್ಲಿ ರಾಷ್ಟ್ರ ಧ್ವಜ ಹಾರಿಸಲು ಭಯ ಇರಬಾರದು ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ ಸುಮಲತಾ
ನವದೆಹಲಿ(ಫೆ.11): ಕಾಶ್ಮೀರದಲ್ಲಿ ಈ ಹಿಂದೆ ಪರಿಸ್ಥಿತಿ ಹಾಗೂ ಈಗಿರುವ ಪರಿಸ್ಥಿತಿಯನ್ನು ವಿವರಿಸಿದ ಸಂಸದೆ ಸುಮಲತಾ ಅಂಬರೀಷ್(sumalatha ambareesh), ಕೇಂದ್ರ ಸರ್ಕಾರ ತಂದಿರುವ ಮಹತ್ವದ ಬದಲಾವಣೆಯನ್ನು ಶ್ಲಾಘಿಸಿದ್ದಾರೆ. ಹಲವು ವರ್ಷಗಳ ಬಳಿಕ ಕಾಶ್ಮೀರಕ್ಕೆ(Jammu and Kashmir) ಇತ್ತೀಚೆಗೆ ತೆರಳಿದ್ದೆ. ಈ ವೇಳೆ ತ್ರಿವರ್ಣ ಧ್ವಜ(national flag) ಕಾಣದೆ ಇದ್ದ ಹಲವು ಪ್ರದೇಶಗಳಲ್ಲಿ ಭಾರತದ ರಾಷ್ಟ್ರ ಧ್ವಜ ಹಾರಾಡುತ್ತಿದೆ. ಇದೇ ರೀತಿ ದೇಶದ ಯಾವುದೇ ಮೂಲೆಯಲ್ಲಿ ಪ್ರತಿಯೊಬ್ಬರಿಗೂ ರಾಷ್ಟ್ರ ಧ್ವಜ ಹಾರಿಸಲು ಯಾವುದೇ ಭಯ ಇರಬಾರದು. ಈ ವಾತಾವರಣವನ್ನು ಕೇಂದ್ರ ಸರ್ಕಾರ ನಿರ್ಮಿಸಬೇಕು ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಸಂಸತ್ತಿನಲ್ಲಿ ಸಿಕ್ಕ ಅಮೂಲ್ಯ ಅಲ್ಪ ಸಮಯವನ್ನು ಸುಮಲತಾ ಅಂಬರೀಷ್ ಸದುಪಯೋಗಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಡೆದ ತ್ರಿವರ್ಣ ಧ್ವಜ ವಿವಾದ ದೇಶದಲ್ಲಿ ಭಾರಿ ಸದ್ದು ಮಾಡಿತ್ತು. ಈ ವಿವಾದವನ್ನು ಉಲ್ಲೇಖಿಸಿದ ಸುಮಲತಾ ಅಂಬರೀಷ್, ಈ ವಾತಾವರಣ ಬದಲಾಗಬೇಕು. ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ಸಮಯದಲ್ಲಿ, ಯಾರ ಭಯವೂ ಇಲ್ಲದೆ ರಾಷ್ಟ್ರ ಧ್ವಜ ಹಾರಿಸಲು ಗೌರವಿಸುವ ವಾತಾವರಣ ನಿರ್ಮಾಣವಾಗಬೇಕು. ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕಿಡಿಗೇಡಿಗಳು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಮಲತಾ ಮನವಿ ಮಾಡಿದರು.
ವಿವಾದದ ನಡುವೆ ತ್ರಿವರ್ಣ ಬಣ್ಣದಲ್ಲಿ ಕಂಗೊಳಿಸಿದ ಗುಂಟೂರಿನ ಜಿನ್ನಾ ಟವರ್!
ಹಲವು ವರ್ಷಗಳ ಬಳಿಕ ಇತ್ತೀಚೆಗೆ ಕಾಶ್ಮೀರಕ್ಕೆ ತೆರಳಿದ್ದೆ. ಕಾಶ್ಮೀರದ ಸುಂದರ ತಾಣಗಳ ನೋಟ, ಕಾಶ್ಮೀರದ ಪರಿಸ್ಥಿತಿ ನನ್ನ ಸಂತಸವನ್ನು ಮತ್ತಷ್ಟು ಇಮ್ಮಡಿಗೊಳಿಸಿತು. ಇದಕ್ಕೆ ಕಾರಣ ಕಾಶ್ಮೀರದ ಹಲವು ಭಾಗದಲ್ಲಿ ತ್ರಿವರ್ಣ ಧ್ವಜ ಹಾರಿಸುವುದು ಅಸಾಧ್ಯವಾಗಿತ್ತು. ಇದಕ್ಕಾಗಿ ಭಾರಿ ವಾದ ವಿದಾದ ಮಾತ್ರವಲ್ಲ, ಅಹಿತಕರ ಘಟನಗಳೇ ನಡೆದಿದೆ. ಆದರೆ ಇತ್ತೀಚೆಗೆ ಕಾಶ್ಮೀರ ಭೇಟಿಯಲ್ಲಿ ಅಸಾಧ್ಯವಾಗಿರುವ ಪ್ರದೇಶಗಳಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಇದನ್ನು ನೋಡುವಾಗಿ ನನಗೆ ಆನಂದ ಅಷ್ಟಿಷ್ಟಲ್ಲ. ಈ ಬದಲಾವಣೆ ಕಾಶ್ಮೀರದಲ್ಲಿ ಆಗಿದೆ ಅನ್ನೋದು ಮತ್ತಷ್ಟು ಸಂತೋಷ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.
"
ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಆದರೆ ಇತ್ತೀಚೆಗೆ ಆಂಧ್ರಪ್ರದೇಶದ ಗುಂಟೂರಿನಲ್ಲಿರುವ(Guntur andhra Pradesh) ಜಿನ್ನಾ ಟವರ್‌ನಲ್ಲಿನ(Tricolour hoisted at Jinnah Tower) ರಾಷ್ಟ್ರಧ್ವಜ ವಿವಾದ ಹಾಗೂ ಅಹಿತಕರ ಘಟನೆ ನಿಜಕ್ಕೂ ನೋವುಂಟು ಮಾಡುತ್ತಿದೆ. ಜಿನ್ನಾ ಟವರ್‌ನಲ್ಲಿ ಧ್ವಜಾರೋಹಣ ದೊಡ್ಡ ವಿವಾದ, ಗಲಾಟೆಗ ಕಾರಣವಾಗಿತ್ತು. ಪೊಲೀಸರು(Police) ಲಾಠಿ ಚಾರ್ಜ್ ಮಾಡಿ ಹಲವರನ್ನು ಬಂಧಿಸಿದ್ದಾರೆ. ಇದೇ ರೀತಿಯ ಘಟನೆಗಳ ನನ್ನ ರಾಜ್ಯವಾಗಿರುವ ಕರ್ನಾಟಕದಲ್ಲೂ(Karnataka) ನಡೆದಿದೆ. ಸುಪ್ರೀಂ ಕೋರ್ಟ್ (Supreme court)ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ತಿಳಿಗೊಂಡಿತು ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.
Underwater Flag Hoisting : ಲಕ್ಷದ್ವೀಪದಲ್ಲಿ ನೀರೊಳಗೆ ಧ್ವಜಾರೋಹಣ ಮಾಡಿದ ಸ್ಕೂಬಾ ಟೀಮ್!
ಈ ಘಟನೆಗಳು ನನ್ನ ಮನಸ್ಸಿನಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದೆ. ಈಗಲೂ ನಮ್ಮ ದೇಶದಲ್ಲಿ ರಾಷ್ಟ್ರ ಧ್ವಜ ಹಾರಿಸಲು ಸಾಧ್ಯವಾಗದ ಪ್ರದೇಶಗಳು ಇದೆಯಾ ? ಕೆಲವು ಗುಂಪುಗಳು ರಾಷ್ಟ್ರ ಧ್ವಜವನ್ನು ಹಾರಿಸಲು ಅವಕಾಶ ಮಾಡಿಕೊಡ ಪರಿಸ್ಥಿತಿ ಈಗಲೂ ಇದೆ. ಈ ರೀತಿಯ ಗುಂಪುಗಳನ್ನು ನಾವು ಬೆಂಬಲಿಸುವುದು ಯಾಕೆ? ಇತರ ಯಾವುದೇ ದೇಶದಲ್ಲಿ ರಾಷ್ಟ್ರಧ್ವಜ ಹಾರಾಟಕ್ಕೆ ಅವಕಾಶ ನೀಡದಿರುವುದು ಅತ್ಯಂತ ಗಂಭೀರವಾಗಿ ಪರಿಣಿಸಲಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಈ ಕುರಿತು ಕಠಿಣ ನಿಯಮ ಜಾರಿಗೆ ತರಬೇಕು. ಈ ಮೂಲಕ ಭಾರತದ ಯಾವುದೇ ಪ್ರಜೆ, ಯಾವುದೇ ಪ್ರದೇಶದಲ್ಲಿ ಯಾರ ಭಯವೂ ಇಲ್ಲದೆ ರಾಷ್ಟ್ರ ಧ್ವಜ ಹಾರಿಸುವಂತಾಗಬೇಕು ಎಂದು ಸುಮಲತಾ ಅಂಬರೀಷ್ ಆಗ್ರಹಿಸಿದ್ದಾರೆ.
