ಹರಿದ ಸಾಕ್ಸ್ ಧರಿಸಿ ಟ್ರೋಲ್ ಆದ ಶ್ರೀಮಂತ ಪ್ರೊಫೆಸರ್, ನೀಡಿದ ಉತ್ತರಕ್ಕೆ ಎಲ್ಲರೂ ಸೈಲೆಂಟ್!
ಭಾರತದ ಸೋಲಾರ್ ಮ್ಯಾನ್ ಎಂದೇ ಜನಪ್ರಿಯಗೊಂಡಿರುವ ಐಐಟಿ ಪ್ರೊಫೆಸರ್ ಧರಿಸಿದ್ದ ಹರಿದ ಸಾಕ್ಸ್‌ಗೆ ಟ್ರೋಲ್ ಆಗಿದ್ದಾರೆ. ಐಷಾರಾಮಿ 5 ಸ್ಟಾರ್ ಹೊಟೆಲ್‌ನಲ್ಲಿ ಕುಳಿತು ಕೆಲಸ ಮಾಡುತ್ತಿರುವ ಪ್ರೊಫೆಸರ್‌ಗೆ ಸಾಕ್ಸ್ ಖರೀದಿಸಲು ದುಡ್ಡಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಪ್ರೊಫೆಸರ್ ನೀಡಿದ ಉತ್ತರಕ್ಕೆ ಟ್ರೋಲಿಗರು ಸೈಲೆಂಟ್ ಆಗಿದ್ದಾರೆ.
ನವದೆಹಲಿ(ಅ.01) ಚೇತನ್ ಸಿಂಗ್ ಸೋಲಂಕಿ. ಭಾರತದ ಸೋಲಾರ್ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದಾರೆ. ಐಐಟಿ ಬಾಂಬೆ ಪ್ರೊಫೆಸರ್ ಆಗಿರುವ ಚೇತನ್ ಸಿಂಗ್ ಸೋಲಂಕಿ ಉತ್ತಮ ಆದಾಯವನ್ನೂ ಗಳಿಸುತ್ತಿದ್ದಾರೆ. ದೆಹಲಿಯ 5 ಸ್ಟಾರ್ ಹೊಟೆಲ್‌ನಲ್ಲಿ ಕುಳಿತ ಫೋಟೋ ಒಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಐಐಟಿ ಪ್ರೊಫೆಸರ್ ಹರಿದ ಸಾಕ್ಸ್ ಧರಿಸಿ ಕುಳಿತಿರುವ ಫೋಟೋವನ್ನು ಹಲವರು ಟ್ರೋಲ್ ಮಾಡಿದ್ದರು. 5 ಸ್ಟಾರ್ ಹೊಟೆಲ್‌ನಲ್ಲಿ ಕುಳಿತಿರುವ ಪ್ರೊಫೆಸರ್‌ಗೆ ಹರಿದ ಸಾಕ್ಸ್ ಬದಲಿಸಲು ದುಡ್ಡಿಲ್ಲವೇ ಎಂದು ಟ್ರೋಲ್ ಮಾಡಿದ್ದರು. ಆದರೆ ಚೇತನ್ ಸಿಂಗ್ ಸೋಲಂಕಿ ಈ ಟ್ರೋಲಿಗೆ ವಿವರವಾದ ಉತ್ತರ ನೀಡಿದ್ದಾರೆ. ನನಗೆ ಹೊಸ ಸಾಕ್ಸ್ ಖರೀದಿ ಹಾಗೂ ನಿರ್ವಹಣೆ ನನಗೆ ಸಾಧ್ಯ, ಆದರೆ ಪ್ರಕೃತಿಗೆ ಸಾಧ್ಯವಿಲ್ಲ ಎಂದು ವಿವರಣೆ ನೀಡಿದ್ದಾರೆ. ಪ್ರೊಫೆಸರ್ ಉತ್ತರಕ್ಕೆ ಟ್ರೋಲಿಗರು ಸೈಲೆಂಟ್ ಆಗಿದ್ದಾರೆ.
ಕಳೆದ 20 ವರ್ಷದಿಂದ ಪ್ರತಿಷ್ಠಿತ ಐಐಟಿಯಲ್ಲಿ ಪ್ರೊಫೆಸರ್ ಆಗಿರುವ ಚೇತನ್ ಸಿಂಗ್ ಸೋಲಂಕಿ ಸೋಲಾರ್‌ನಲ್ಲಿ ಕ್ರಾಂತಿ ಮಾಡಿ ಸಾಧಕ. ಸೋಲಾರ್ ಬಳಕೆ, ಪರಿಸರ ಮಾಲಿನ್ಯ ತಡೆಗಟ್ಟುವಿಕೆ, ನೈಸರ್ಗಿಕ ಇಂಧನ ಬಳಕೆಯನ್ನು ಉತ್ತೇಜಿಸುತ್ತಾ ದೇಶದ ಮೂಲೆ ಮೂಲೆಗೆ ತೆರಳಿದ್ದಾರೆ. ಜಾಗೃತಿ ಮೂಡಿಸಿದ್ದಾರೆ. ಪರಿಸರಕ್ಕೆ ಹಾನಿಯಾಗದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಸೋಲಂಕಿ ಇತ್ತೀಚೆಗೆ ನವದೆಹಲಿಯ 5 ಸ್ಟಾರ್ ಹೊಟೆಲ್‌ನಲ್ಲಿ ಆಯೋಜಿಸಿದ್ದ ನಾಯಕತ್ವ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಹಲವು ದಿನ ಬಳಿಕ ವಿಜಯ್ ಮಲ್ಯ ಟ್ವೀಟ್, ಬ್ಯಾಂಕ್ ರಜಾ ದಿನವೇ ಬ್ರೋ ಟ್ವೀಟ್ ಎಂದ ನೆಟ್ಟಿಗರು!
ನಾಯಕತ್ವ ಕಾನ್ಫರೆನ್ಸ್ ಆರಂಭಕ್ಕೂ ಮುನ್ನ ಹೊಟೆಲ್ ಸೋಫಾದಲ್ಲಿ ಕುಳಿತು ತಮ್ಮ ಲ್ಯಾಪ್‌ಟಾಪ್ ಮೂಲಕ ಮಾತನಾಡುವ ವಿಷಯಗಳ ಕುರಿತು ಪರಿಶೀಲಿಸಿದ್ದಾರೆ. ಈ ವೇಳೆ ಇವರ ಫೋಟೋ ಕ್ಲಿಕ್ ಮಾಡಲಾಗಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಫೋಟೋದಲ್ಲಿ ಚೇತನ್ ಸಿಂಗ್ ಸೋಲಂಕಿ ಧರಿಸಿದ್ದ ಹರಿದ ಸಾಕ್ಸ್ ಬಯಲಾಗಿತ್ತು. ಐಷಾರಾಮಿ ಹೊಟೆಲ್, ಐಐಟಿ ಬಾಂಬೆ ಪ್ರೊಫೆಸರ್, ಉತ್ತಮ ಆದಾಯ ಆದರೂ ಹರಿದ ಸಾಕ್ಸ್ ಧರಿಸಿದ್ದಾರೆ ಎಂದು ಹಲವರು ಟ್ರೋಲ್ ಮಾಡಿದ್ದರು.
ಈ ಟ್ರೋಲಿಗೆ ಉತ್ತರ ನೀಡಿದ ಚೇತನ್ ಸಿಂಗ್ ಸೋಲಂಕಿ, ಹೌದು ನನ್ನ ಹರಿದ ಸಾಕ್ಸ್ ಫೋಟೋ ಮೂಲಕ ಬಹಿರಂಗವಾಗಿದೆ. ಈ ಸಾಕ್ಸ್ ಬದಲಾಯಿಸಬೇಕಿದೆ. ನಾನು ಬದಲಾಯಿಸುತ್ತೇನೆ. ಹೊಸ ಸಾಕ್ಸ್ ಖರೀದಿ ನನಗೆ ಸುಲಭ, ಆದರೆ ಪರಿಸರಕ್ಕೆ ಅದನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಪರಿಸರ ಈ ರೀತಿಯ ತ್ಯಾಜ್ಯಗಳನ್ನು ಸಹಿಸುವುದಿಲ್ಲ. ನನ್ನ ಉತ್ಪಾದಕತೆ, ಅನುಕೂಲಕ್ಕಾಗಿ ನಾನು ಅತ್ಯುತ್ತಮ ಎಲೆಕ್ಟ್ರಾನಿಕ್ ಗ್ಯಾಜೆಟ್ ಬಳಸಬಹುದು. ಆದರೆ ಪರಿಸರದ ಮೇಲೆ ನನ್ನಿಂದ ಆಗುವ ಇಂಗಾಲದ ಪರಿಣಾಮವನ್ನು ಅತ್ಯಂತ ಕಡಿಮೆಗೊಳಿಸಲು ನಾನು ಪ್ರಯತ್ನಿಸುತ್ತೇನೆ. ಹೀಗಾಗಿ ಈ ರೀತಿಯ ವಸ್ತುಗಳನ್ನು ಅತೀ ಕಡಿಮೆ ಬಳಸುತ್ತೇನೆ ಎಂದು ಉತ್ತರಿಸಿದ್ದಾರೆ.
ಚೇತನ್ ಸೋಲಂಕಿ ಪರಿಸರ ಪೂರಕ ಸೋಲಾರ್ ಬಳಕೆ ಕುರಿತು ದೇಶದ ಹಳ್ಳಿ ಹಳ್ಳಿಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪರಿಸರ ಪೂರಕ ಇಂಧನ ಬಳಕೆಯಿಂದ ದೇಶವನ್ನು ಮಹಾ ಸಂಕಷ್ಟದಿಂದ ಹೇಗೆ ಪಾರು ಮಾಡಬಹುದು ಅನ್ನೋದನ್ನು ಸೋಲಂಕಿ ಪದೇ ಪದೇ ಹೇಳಿದ್ದಾರೆ. ಇದೀಗ ತಮ್ಮ ನಡೆಯಲ್ಲೂ ತೋರಿಸಿದ್ದಾರೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಕ್ಷಾ ಬಂಧನಕ್ಕೆ ಮೊಘಲ್ ಹುಮಾಯುನ್ ಘಟನೆ ಹೇಳಿ ಮೊದಲ ಬಾರಿಗೆ ಟ್ರೋಲ್ ಆದ ಸುಧಾಮೂರ್ತಿ!