ದೇಶದೆಲ್ಲೆಡೆ ರಕ್ಷಾ ಬಂಧನ ಹಬ್ಬ ಆಚರಿಸಲಾಗುತ್ತಿದೆ. ಇದರ ನಡುವೆ ರಾಜ್ಯಸಭಾ ಸದಸ್ಯೆ, ಲೇಖಕಿ ಸುಧಾಮೂರ್ತಿ ರಕ್ಷಾ ಬಂಧನ ಕುರಿತು ನೀಡಿದ ಸಂದೇಶ ಭಾರಿ ಟ್ರೋಲ್ ಆಗಿದೆ. ಇದೇ ಮೊದಲ ಬಾರಿಗೆ ಸುಧಾಮೂರ್ತಿ ಟ್ರೋಲ್ ಆಗಿದ್ದಾರೆ.

ನವದೆಹಲಿ(ಆ.19) ಇನ್ಫೋಸಿಸ್ ಫೌಂಡೇಷನ್ ಚೇರ್ಮೆನ್, ಸಮಾಜಮುಖಿ ಕೆಲಸಗಳಿಂದ ಗುರಿತಿಸಿಕೊಂಡಿರುವ ಲೇಖಕಿ, ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಇದೇ ಮೊದಲ ಬಾರಿಗೆ ಟ್ರೋಲ್ ಆಗಿದ್ದಾರೆ. ರಕ್ಷಾ ಬಂಧನ ದಿನಾಚರಣೆಗೆ ಸಂದೇಶ ಕೋರಿದ ಟ್ವೀಟ್ ಇದೀಗ ಟ್ರೋಲ್‌ ಹಾಗೂ ಆಕ್ರೋಶಕ್ಕೆ ಗುರಿಯಾಗಿದೆ. ರಕ್ಷಾ ಬಂಧನ ಹಬ್ಬವನ್ನು ಮೊಘಲ್ ದೊರೆ ಹುಮಾಯುನ್ ಸಂಬಂಧಿಸಿದ ಘಟನೆಯೊಂದನ್ನು ಉಲ್ಲೇಖಿಸಿದ್ದಾರೆ. ಇದು ಟ್ರೋಲ್‌ಗೆ ಆಹಾರವಾಗಿದೆ. ಸುಧಾ ಮೂರ್ತಿಯನ್ನು ಎಲ್ಲರು ಗೌರವಿಸುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಸುಧಾ ಮೂರ್ತಿ ರಕ್ಷಾ ಬಂಧನ ವಿಚಾರದಲ್ಲಿ ಟ್ರೋಲ್ ಆಗಿದ್ದಾರೆ. 

ರಕ್ಷಾ ಬಂಧನ ದಿನ ಸುಧಾ ಮೂರ್ತಿ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ರಕ್ಷಾ ಬಂಧನ ಕುರಿತಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. 16ನೇ ಶತಮಾನದಲ್ಲಿ ರಾಣಿ ಕರ್ಣವತಿ ಸಮಸ್ಯೆಯಲ್ಲಿ ಸುಲುಕಿದ್ದಳು. ಸಾಮ್ರಾಜ್ಯದ ಮೇಲೆ ದಾಳಿಯಾಗಿತ್ತು. ಈ ವೇಳೆ ಕರ್ಣವತಿ ರಾಖಿಯೊಂದನ್ನು ಮೊಘಲ್ ದೊರೆ ಹುಮಾಯುನ್‌ಗೆ ಕಳುಹಿಸಿಕೊಟ್ಟು ಸಹೋದರನಾಗಿ ನನ್ನ ರಕ್ಷಣೆಗೆ ಕೋರಿದ್ದಳು. ರಕ್ಷಾ ಬಂಧನ ಕುರಿತು ಅರಿವಿಲ್ಲದ ಹುಮಾಯುನ್ ಈ ಕುರಿತು ತನ್ನ ಆಸ್ತಾನದಲ್ಲಿದ್ದ ಹಿಂದೂ ಸೇವಕರಿಂದ ಅರಿತು ಕರ್ಣವತಿ ರಕ್ಷಣೆಗೆ ಮುಂದಾಗಿದ್ದ. ಈ ಘಟನೆಯನ್ನು ಉಲ್ಲೇಖಖಿಸಿ ಸುಧಾಮೂರ್ತಿ ಅಂದು ಆರಂಭಗೊಂಡ ರಕ್ಷಾ ಬಂಧನದ ಹಬ್ಬ ಈಗಲೂ ಮುಂದುವರಿಯುತ್ತಿದೆ ಎಂದು ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.

ರಕ್ಷಾ ಬಂಧನ ರಜೆಗೆ ಸ್ಯಾಲರಿ ಕಟ್ ನಿರ್ಧಾರ ವಿರೋಧಿಸಿದ ಹೆಚ್ಆರ್ ಅಮಾನತು, ಕಂಪನಿ ಹೇಳಿದ್ದೇನು?

ಇದೇ ವೇಳೆ ರಕ್ಷಾ ಬಂಧನ ಆಚರಣೆ ಮಹತ್ವವನ್ನೂ ಸುಧಾಮೂರ್ತಿ ಹೇಳಿದ್ದಾರೆ. ಆದರೆ ಇವೆಲ್ಲದರ ಬದಲು ಸುಧಾಮೂರ್ತಿ ಹೇಳಿದ ಹುಮಾಯುನ್ ಘಟನೆ ಇದೀಗ ಆಕ್ರೋಶಕ್ಕೆ ತುತ್ತಾಗಿದೆ. ಸಧಾಮೂರ್ತಿಯ ಈ ಟ್ವೀಟ್ ಹಾಗೂ ವಿಡಿಯೋ ಸಂದೇಶ ಹಲವರ ಆಕ್ರೋಶಕ್ಕೆ ಗುರಿಯಾಗಿದೆ. ರಕ್ಷಾ ಬಂಧನ ಶ್ರೀಕೃಷ್ಣನ ಕಾಲದಲ್ಲಿ ಆರಂಭಗೊಂಡ, ಸಹೋದರಿಯರನ್ನು ರಕ್ಷಿಸಿದ ಹಲವು ಘಟನೆಗಳ ಉಲ್ಲೇಖವಿದೆ. ಶ್ರೀಕೃಷ್ಣನ ಕೈಬೆರಳು ಗಾಯಗೊಂಡಾಗ ತಕ್ಷಣವೇ ದ್ರೌಪದಿ ಸೇರಿ ಬದಿ ಹರಿದು ಶ್ರೀಕ್ಷನ ಬೆರಳಿಗೆ ಕಟ್ಟಿದ್ದರು. ಇದು ಅಣ್ಣನ ಆರೋಗ್ಯದ ಕಾಳಜಿ ವಹಿಸಿದ ತಂಗಿಯ ರಕ್ಷಣೆಗೆ ಶ್ರೀಕೃಷ್ಣ ಶಪಥ ಮಾಡಿದ್ದ. ರಾಖಿ ಕಟ್ಟಿದ ದ್ರೌಪದಿಯ ರಕ್ಷಣೆಗೆ ಧಾವಿಸಿದ್ದು ಇದೇ ಶ್ರೀಕೃಷ್ಣ. ಆದರೆ ಸುಧಾಮೂರ್ತಿ ಹುಮಾಯುನ್‌ ಕಾಲದಲ್ಲಿ ರಾಖಿ ಹಬ್ಬ ಆಚರಣೆ ಆರಂಭಗೊಂಡಿತು ಎಂದು ಉಲ್ಲೇಖಿಸಿದ್ದಾರೆ. ಇದು ತಪ್ಪು ಎಂದು ಹಲವರು ಇತಿಹಾಸ ಹಾಗೂ ಪುರಾಣದ ಉಲ್ಲೇಖಗಳನ್ನು ನೀಡಿದ್ದಾರೆ.

Scroll to load tweet…

ಮೊಘಲರು ತಮ್ಮ ಉದ್ದೇಶ ಈಡೇರಿಕೆಗೆ ಒಂದೆರೆಡು ರಾಖಿ ಹಬ್ಬ ಆಚರಿಸಬಹುದು. ಆದರೆ ಅಸಂಖ್ಯಾತ ಹಿಂದೂ ಹೆಣ್ಣುಮಕ್ಕಳು ಬಲಿಯಾಗಿದ್ದಾರೆ. ದೇವಸ್ಥಾನಗಳು ಧ್ವಂಸಗೊಂಡಿದೆ. ನಮ್ಮ ಪರಪಂರೆ ಮಹಾಭಾರತ, ರಾಮಾಯಣ ಕಾಲದಿಂದಲೂ ಇದೆ. ಇದನ್ನು ದಾಳಿಕೋರರಿಗೆ ಹೋಲಿಸಬೇಡಿ, ಈ ಘಟನೆಗಳ ಉಲ್ಲೇಖಿಸುವ ಅಗತ್ಯವೂ ಭಾರತಕ್ಕಿಲ್ಲ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.

Scroll to load tweet…

ರಕ್ಷಾ ಬಂಧನದಿಂದ ಜನ್ಮಾಷ್ಟಮಿಯವರೆಗೆ: ಆಗಸ್ಟ್‌ನಲ್ಲಿವೆ ಈ 5 ಹಿಂದೂ ಹಬ್ಬಗಳು

ಮತ್ತೆ ಕೆಲವರು ಕತೆ ಹೇಳುವ, ಲೇಖನ, ಪುಸ್ತಕಗಳ ಬರೆದಿರುವ ಸುಧಾಮೂರ್ತಿಗೆ ಈ ಕತೆ ಹೇಳಿಕೊಟ್ಟಿದ್ದು ಯಾರು? ಆತಂಕ ಹೆಚ್ಚಾಗುತ್ತಿದೆ ಎಂದು ಮತ್ತೆ ಕೆಲವರು ಟ್ವೀಟ್ ಮಾಡಿದ್ದಾರೆ.


Scroll to load tweet…
Scroll to load tweet…