ಐಐಟಿ ಬಾಂಬೆಯಲ್ಲಿ ಹೌಸ್ ಕೀಪಿಂಗ್ ಮಾಡುವ ವ್ಯಕ್ತಿಯೊಬ್ಬರು ತಮ್ಮ ಸಮಸ್ಯೆಗಳನ್ನು ಐಐಟಿ ಬಾಂಬೆಯ ತಂತ್ರಜ್ಞರೊಬ್ಬರ ಜೊತೆ ಹಂಚಿಕೊಂಡಿದ್ದಾರೆ.ಅದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ.
ಐಐಟಿ ಬಾಂಬೆಯಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುವ ಆರವ್ ರಂಗ್ವಾನಿ ಅವರು ಐಐಟಿ ಬಾಂಬೆಯಲ್ಲಿ ಹೌಸ್ ಕೀಪಿಂಗ್( ಟಾಯ್ಲೆಟ್ ಬಾತ್‌ರೂಮ್ ಸ್ವಚ್ಛತಾ ಕೆಲಸ) ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೇಳಿಕೊಂಡ ಕತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅವರ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಉಪನ್ಯಾಸದ (ಲೆಕ್ಚರಿಂಗ್) ನಂತರ ಕೈ ತೊಳೆದುಕೊಳ್ಳಲು ವಾಶ್‌ರೂಮ್‌ಗೆ ಹೋದ ಬಾಂಬೆ ಐಐಟಿಯಲ್ಲಿ ಪ್ರಾಡಕ್ಟ್ ಸಸ್ಟೈನೆಬಿಲಿಟಿ ಮತ್ತು ಬೆಳವಣಿಗೆಯ ತಂತ್ರಜ್ಞರಾಗಿರುವ ಆರವ್ ರಂಗ್ವಾನಿ ಅವರು ಅಲ್ಲಿ ಹೌಸ್ ಕೀಪಿಂಗ್ ಅವರು ಹೇಳಿದ ನೋವಿನ ಕತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಐಐಟಿ ಬಾಂಬೆಯಲ್ಲಿ ವಾಶ್ ರೂಮ್ ಬಳಸುವವರು ಅಲ್ಲಿನವರೇ ಆಗಿರ್ತಾರೆ. ಬಹುಶಃ ವಿದ್ಯಾರ್ಥಿಗಳು ಅಥವಾ ಉಪನ್ಯಾಸಕರು ಪ್ರೊಫೆಸರ್‌ಗಳೇ ಆಗಿರುತ್ತಾರೆ. ಇವರಿಗೆ ಶಿಕ್ಷಣಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಆದರೆ ಶಿಕ್ಷಣದಿಂದ ಸಂಸ್ಕಾರವಾಗಲಿ ಅಥವಾ ಕಾಮನ್‌ಸೆನ್ಸ್ ಆಗಲಿ ಬರುವುದಿಲ್ಲ ಎಂಬುದಕ್ಕೆ ಆ ಹೌಸ್ ಕೀಪಿಂಗ್ ವ್ಯಕ್ತಿ ಹೇಳಿದ ಕತೆ ಸಾಕ್ಷಿಯಾಗಿದೆ. ಹಾಗಿದ್ರೆ ಐಐಟಿ ಬಾಂಬೆಯಲ್ಲಿ ಹೌಸ್ ಕೀಪಿಂಗ್ ಮಾಡ್ತಿದ್ದ ವ್ಯಕ್ತಿ ಆರವ್ ರಂಗ್ವಾನಿ ಅವರ ಜೊತೆ ಹೇಳಿದ್ದೇನು?
ಹೈಕ್ಲಾಸ್ ಜನರ ಮುಖವಾಡ ತೆರೆದಿಟ್ಟ ಹೌಸ್ ಕೀಪರ್:
ಆರವ್ ರಂಗ್ವಾನಿ ಅವರು ಈ ಬಗ್ಗೆ ಲಿಂಕ್ಡಿನ್‌ನಲ್ಲಿ ಹೀಗೆ ಬರೆದುಕೊಂಡಿದ್ದು, ಅವರ ಪೋಸ್ಟ್‌ನ ಸಾರಾಂಶ ಇಲ್ಲಿದೆ. ನಾನು ನಿನ್ನೆ ಕ್ಲಾಸ್‌ನಲ್ಲಿ ಉಪನ್ಯಾಸ ಮುಗಿಸಿದ ನಂತರ ಕೈಗಳನ್ನು ತೊಳೆದುಕೊಳ್ಳುವುದಕ್ಕಾಗಿ ವಾಶ್‌ರೂಮ್‌ಗೆ ಹೋಗಿದ್ದೆ. ಅಲ್ಲಿದ್ದ ಹೌಸ್ ಕೀಪರ್, ಅಣ್ಣ ಈಗ ನಾನು ಇಲ್ಲಿ ಕ್ಲೀನ್ ಮಾಡ್ತಿದ್ದೇನೆ ಸ್ವಲ್ಪ ಸಮಯದ ನಂತರ ಬನ್ನಿ ಎಂದು ಹೇಳಿದ. ಅದಕ್ಕೆ ನಾನು ಓಕೆ ಎಂದೆ ಆಗ ಆತ, ನಿಮಗೆ ಏನು ಮಾಡಬೇಕಿತ್ತು ಎಂದು ಕೇಳಿದ ನಾನು ನನ್ನ ಕಾಲು ತೊಳೆಯಬೇಕಿತ್ತು ಎಂದು ಹೇಳಿದೆ.
ಟಾಯ್ಲೆಟ್‌ಗೆ ಹೋಗಿ ಪ್ಲಶ್ ಕೂಡ ಮಾಡಲ್ಲ:
ಆಗ ಆತ ಭೈಯಾ ಆ ಕೊನೆಯ ಟಾಯ್ಲೆಟ್ ಖಾಲಿ ಇದೆ ಅಲ್ಲಿಗೆ ಹೋಗಿ ಕಾಲು ತೊಳೆದುಕೊಳ್ಳಿ ಎಂದು ಹೇಳಿದೆ. ಇದಾದ ನಂತರ ಒಂದು ಘಟನೆ ನಡೆಯಿತು. ಅದಕ್ಕೆ ನಾನು ಸಿದ್ಧಗೊಂಡಿರಲಿಲ್ಲ, ಆ ಹೌಸ್ ಕೀಪರ್ ನನ್ನ ಬಳಿ ಬಂದು ಆತನ ಕಷ್ಟ ಹೇಳಿಕೊಳ್ಳಲು ಶುರು ಮಾಡಿದ. 'ಭಾಯಿ ಜನ ಹೇಳುವುದನ್ನು ಕೇಳುವುದೇ ಇಲ್ಲ. ನಾನು ಕ್ಲೀನ್ ಮಾಡ್ತಾನೆ ಇರ್ತೆನೆ ಅವರು ಬಳಸಿ ಅದನ್ನು ಗಲೀಜು ಮಾಡಿ ಪ್ಲಶ್ ಮಾಡದೆಯೇ ಹೋಗ್ತಾರೆ. ಕಸ ಹಾಕುವುದಕ್ಕೆ ಡಸ್ಟ್‌ಬಿನ್ ಇದೆ. ಆದರೆ ಅವರೆಲ್ಲರೂ ಕಸವನ್ನು ವಾಟರ್ ಕೂಲರ್‌ನ ಮೇಲೆ ಹಾಕಿ ಹೋಕ್ತಾರೆ. ಅವರು ಮೂತ್ರ ವಿಸರ್ಜನೆ ನಂತರ ಪ್ಲಶ್ ಮಾಡಿದ್ರೆ ಅಲ್ಲಿ ವಾಸನೆ ಬರುವುದಿಲ್ಲ. ಆದರೆ ಅವರು ಅದನ್ನೂ ಮಾಡುವುದಿಲ್ಲ ಎಂದ.
ಪ್ಲಶ್ ಮಾಡಿ ಅಂದ್ರೆ ನಾವು ಪೇ ಮಾಡ್ತಿವಿ ಅಂತಾರೆ:
ಕೊನೆಯ ಟಾಯ್ಲೆಟನ್ನು ಬಳಸುತ್ತಾರೆ ನೀರು ಹಾಕದೆಯೇ ಹೋಗುತ್ತಾರೆ. ನಾನು ಅವರು ಮಾಡಿದೆಲ್ಲವನ್ನೂ ಕ್ಲೀನ್ ಮಾಡಬೇಕು. ಇಲ್ಲಿ ಕಿಟಕಿಯಲ್ಲಿ ಅವರು ಮದ್ಯದ(alcohol bottles)ಬಾಟಲಿಯನ್ನು ಕೂಡ ಎಸೆದು ಹೋಗಿದ್ದಾರೆ. ಈಗ ನಾನು ಎಲ್ಲವನ್ನು ಕ್ಲೀನ್ ಮಾಡಿ ಹೋಗಿರುತ್ತೇನೆ ಸ್ವಲ್ಪ ಹೊತ್ತಿನ ನಂತರ ಬಂದು ನೋಡಿದರೆ ಇಡೀ ಶೌಚಾಲಯ ಕೊಳಕಾಗಿರುತ್ತದೆ ಎಂದ. ಆದರೆ ಆತ ಕೊನೆಯದಾಗಿ ಹೇಳಿದ ಮಾತು ಕೇಳಿ ನನಗೆ ಬಹಳ ನೋವಾಯ್ತು ಎಂದು ಆರವ್ ಅವರು ಹೇಳಿದ್ದಾರೆ. ನಾನು ಅವರಿಗೆ ಏನಾದರು ಹೇಳಿದರೆ ನಾವು ಹಣ ಪಾವತಿ ಮಾಡುತ್ತೇವೆ ಎಂದು ಹೇಳುತ್ತಾರೆ, ಹಾಗೆ ಹೇಳಿದ ನಂತರ ನನಗೆ ಮಾತನಾಡುವುದಕ್ಕೆ ಯಾವುದೇ ಪದಗಳಿರುವುದಿಲ್ಲ ಎಂದು ಆ ಹೌಸ್ ಕೀಪಿಂಗ್ ಮಾಡ್ತಿದ್ದ ವ್ಯಕ್ತಿ ಆರವ್ ಅವರ ಬಳಿ ಹೇಳಿದ್ದಾರೆ.
ಆ ಸಮಯದಲ್ಲಿ ಆತ ಯಾವುದೇ ಶಕ್ತಿಇಲ್ಲದಂತೆ ನನಗೆ ಕಂಡ, ಆತ ಯಾರ ಬಳಿ ದೂರು ನೀಡಬೇಕು, ಎಲ್ಲಿಗೆ ಹೋಗಬೇಕು. ಇಂತಹ ವ್ಯಕ್ತಿಗಳು ಯಾವಾಗಲೂ ಮೌನವಾಗಿರ್ತಾರೆ ಅಥವಾ ತಮ್ಮ ಮಾತುಗಳನ್ನು ಹೇಳದೇ ನಿಗ್ರಹಿಸಿಕೊಳ್ಳುತ್ತಾರೆ. ಒಂದು ವೇಳೆ ಅವರು ದೂರು ನೀಡುತ್ತಾರೆ ಆದರೆ ನಾವದನ್ನು ನಿರ್ಲಕ್ಷಿಸುತ್ತೇವೆ ಅಥವಾ ಒಪ್ಪುತ್ತೇವೆ ಮತ್ತು ಹಾಗೆಯೇ ಮುಂದುವರಿಯುತ್ತೇವೆ. ಅವರ ಜೀವನವು ಒಂದೇ ಚಕ್ರದಲ್ಲಿ ಸುತ್ತುತ್ತಿರುತ್ತದೆ.
ಹಣ ಪಾವತಿ ಮಾಡಿದ ಕೂಡಲೇ ನಿಮಗೆ ಸಂಪತ್ತನ್ನು ಹಾಳು ಮಾಡುವುದಕ್ಕೆ ಅನುಮತಿ ಇಲ್ಲ, ಮೂಲಭೂತವಾದ ಸಭ್ಯತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಸಂಘಟಿತ ಜವಾಬ್ದಾರಿ. ಆತ ನಾನು ಆತನ ಸಮಸ್ಯೆ ಕೇಳುತ್ತೇನೆ ಎಂಬ ಆಶಯದೊಂದಿಗೆ ನನ್ನ ಬಳಿ ಆತನ ಸಮಸ್ಯೆಯ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ. ಏಕೆಂದರೆ ಅವನು ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡಿದರೂ, ಮನೆಗೆಲಸದವನಾಗಿದ್ದರೂ, ಕೈಜೋಡಿಸಿ ಬದುಕಿದರೂ ಸಹ ಇದೆಲ್ಲದರ ಹೊರತಾಗಿಯೂ, ಅವನು ಧ್ವನಿಯನ್ನು ಹೊಂದಿರುವ ಒಬ್ಬ ಮನುಷ್ಯ. ಆತನ ಧ್ವನಿಯನ್ನು ಹೆಚ್ಚಿಸುವುದಕ್ಕೆ ನಾನು ಬಯಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
ಆರವ್ ಅವರ ಈ ಲಿಂಕ್ಡಿನ್ ಪೋಸ್ಟ್ ಭಾರಿ ವೈರಲ್ ಆಗಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಹೀಗೆ ಮಾಡುವವರು ತಾವು ನಾಗರಿಕರಂತೆ ವೇಷ ತೊಟ್ಟಿರುತ್ತಾರೆ ಆದರೆ ಅವರ ಬಳಿ ಮಾನವೀಯತೆಯೇ ಇರುವುದಿಲ್ಲ ಹಣದಿಂದ ಗುಣ ಅಥವಾ ಯೋಗ್ಯತೆಯನ್ನು ಖರೀದಿಸಲಾಗದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಗಣೇಶನ 'ಏಕದಂತಾಯ' ಹಾಡು ಹಾಡುತ್ತಾ ನಾನೊಬ್ಬ ಸನಾತನಿ ಎಂದ ಸ್ಪ್ಯಾನಿಶ್ ತರುಣ
ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ದೂರು ಹೇಳಿದ್ದಕ್ಕೆ ಐರನ್ ಬಾಕ್ಸ್ ಬಿಸಿ ಮಾಡಿ ಬಾಲಕನಿಗಿಟ್ಟ ಸಹಪಾಠಿಗಳು
