ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ 20 ದಿನಗಳ ಕಾಲ ಯಾರಿಗೂ ತಿಳಿಯದಂತೆ ವಾಸವಾಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈ: ಐಐಟಿ ಬಾಂಬೆಯ ಕ್ಯಾಂಪಸ್‌ಗೆ ನುಗ್ಗಿ ಅಲ್ಲಿ ಯಾರಿಗೂ ತಿಳಿಯದಂತೆ 20 ದಿನಗಳನ್ನು ಕಳೆದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ನಂತರ ಆತನನ್ನು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದರು. ನ್ಯಾಯಾಲಯವೂ ಆತನನ್ನು ವಿಚಾರಣೆಗಾಗಿ 2 ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಬಂಧಿತ ಯುವಕನನ್ನು 22 ವರ್ಷದ ಬಿಲಾಲ್ ಅಹ್ಮದ್ ತೆಲಿ ಎಂದು ಗುರುತಿಸಲಾಗಿದೆ.

ಈತ ವಿದ್ಯಾರ್ಥಿ ಅಲ್ಲದೇ ಇದ್ದರೂ ಅಲ್ಲಿ ವಿದ್ಯಾರ್ಥಿಗಳ ಜೊತೆ ಐಐಟಿಯಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ನೀಡುವ ತರಗತಿಯನ್ನು ಅಟೆಂಡ್ ಮಾಡಿದ್ದಾನೆ. ರಾತ್ರಿಯ ವೇಳೆ ಅಲ್ಲಿ ವಿದ್ಯಾರ್ಥಿಗಳಿಗಾಗಿ ಇರಿಸಿದ್ದ ಸೋಪಾದಲ್ಲಿ ಆತ ಮಲಗುತ್ತಿದ್ದ. ಹೀಗೆ ಆತ ವಿದ್ಯಾರ್ಥಿಯಲ್ಲದೇ ಹೋದರೂ ಸುಮಾರು 20 ದಿನಗಳ ಕಾಲ ಕಾಲೇಜು ಕ್ಯಾಂಪಸ್‌ನಲ್ಲಿ ಯಾರಿಗೂ ತಿಳಿಯದಂತೆ ವಾಸ ಮಾಡಿದ್ದಾನೆ. ಆತ ಅಷ್ಟು ದಿನ ಅಲ್ಲಿ ವಾಸ ಮಾಡಿ ತರಗತಿಗೆ ಹೋಗಿದ್ದರೂ ಯಾರೂ ಆತನನ್ನು ಗುರುತಿಸಿಲ್ಲ, ಇದೊಂದು ಭಾರಿ ಭದ್ರತಾ ಲೋಪ ಎನ್ನಲಾಗುತ್ತಿದೆ. ಮುಂಬೈನ ಪೊವೆಯಲ್ಲಿ ಈ ಐಐಟಿ ಬಾಂಬೆ ಕ್ಯಾಂಪಸ್ ಇದೆ.

ಆತನನ್ನು ಬುಧವಾರ ಪೊಲೀಸರು ಬಂಧಿಸಿದ ನಂತರ ಆತ ಈ ಕೃತ್ಯಗಳಿಗಾಗಿ 21 ಇಮೇಲ್‌ಗಳನ್ನು ಬಳಸಿದ್ದಾನೆ ಹಾಗೂ ಯಾವುದೇ ಸಾಕ್ಷ್ಯಗಳನ್ನು ಆತ ಬಿಟ್ಟಿಲ್ಲ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಈತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಮೋಸ ಹಾಗೂ ಪೋರ್ಜರಿ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಲಾಗಿದೆ.

ಈತ ಹಗಲಿನ ವೇಳೆ ಉಪನ್ಯಾಸಕರ ಲೆಕ್ಚರ್ ಅಟೆಂಡ್ ಮಾಡುತ್ತಿದ್ದ ರಾತ್ರಿ ವಿದ್ಯಾರ್ಥಿಗಳಿಗಾಗಿ ಇರಿಸಿದ್ದ ಸೋಪಾದಲ್ಲಿ ಮಲಗುತ್ತಿದ್ದ.

ಇನ್ನು ಈತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತಾನು ಐಐಟಿಯಲ್ಲಿ ಅಧ್ಯಯನ ಮಾಡಬೇಕೆಂದು ಬಹಳ ಹಂಬಲಿಸಿದ್ದೆ. ಮೇ 27ರಂದು ಇಲ್ಲಿ ಒಂದು ತರಗತಿಯಲ್ಲಿ ಭಾಗಿಯಾಗಿದ್ದೆ ಎಂದಿದ್ದಾನೆ.. ಆದರೆ ಪೊಲೀಸರಿಗೆ ಅನುಮಾನ ಬರಲು ಕಾರಣವಾದುದು ಏನೆಂದರೆ ಆತ ಈ ಕೃತ್ಯಕ್ಕಾಗಿ ಬಳಸಿದ್ದ 21 ಇ ಮೇಲ್‌ಗಳು ಹಾಗೂ ಹಲವು ಫೋನ್ ನಂಬರ್‌ಗಳು. ಈತ ತನ್ನ ಬಳಿ ಸ್ಪಷ್ಟವಾದ ಡಿಜಿಟಲ್ ರೆಕಾರ್ಡ್‌ಗಳನ್ನು ಸೃಷ್ಟಿಸಿಕೊಂಡಿದ್ದ.

ಆದರೆ ಬಾಂಬೆ ಇನ್ಸ್ಟಿಟ್ಯೂಟ್‌ನ ಸಿಬ್ಬಂದಿಯೊಬ್ಬರು ಜೂನ್ 21ರಂದು, ಈ ಹುಡುಗನನ್ನು ಹಿಂದೆ ಎಂದೂ ಕ್ಯಾಂಪಸ್‌ನಲ್ಲಿ ನೋಡಿಲ್ಲ ಎಂದು ಭದ್ರತಾ ಸಿಬ್ಬಂದಿ ಬಳಿ ಆತನ ಬಗ್ಗೆ ಹೇಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ನ್ಯಾಯಾಲಯವೂ ಈತನನ್ನು ಎರಡು ವಾರಗಳ ಪೊಲೀಸ್ ಕಸ್ಟಡಿಗೆ ನೀಡಿತ್ತು. ಇದಾದ ನಂತರ ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಮುಂಬೈ ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ.

ಈ ಬಗ್ಗೆ ದಾಖಲಾದ ಎಫ್‌ಐಆರ್‌ನಲ್ಲಿರುವಂತೆ ಜೂನ್ 4 ರಂದು ಐಐಟಿಯ ಕ್ರೆಡಿಟ್ ಡಿಪಾರ್ಟ್‌ಮೆಂಟ್ ಈತನ ಬಗ್ಗೆ ಮೊದಲಿಗೆ ಆಡಳಿತದ ಗಮನ ಸೆಳೆದಿದೆ. ಒಬ್ಬ ಅಪರಿಚಿತ ವ್ಯಕ್ತಿ ತನ್ನ ಕಚೇರಿ ಆವರಣಕ್ಕೆ ಯಾವುದೇ ಅನುಮತಿ ಇಲ್ಲದೇ ಪ್ರವೇಶಿಸಿದ್ದಾನೆ. ಆತನಲ್ಲಿ ಗುರುತಿನ ಚೀಟಿ ತೋರಿಸಲು ಕೇಳಿದಾಗ, ಆ ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ದೂರಿದ ಮಹಿಳಾ ಸಿಬ್ಬಂದಿ ಭದ್ರತಾ ಸಿಬ್ಬಂದಿಯೊಂದಿಗೆ ಶಂಕಿತನ ಸಿಸಿಟಿವಿ ಚಿತ್ರಗಳನ್ನು ಹಂಚಿಕೊಂಡಿದ್ದರು. ಇದಾದ ನಂತರ ಅವರು ಹುಡುಕಾಟ ಆರಂಭಿಸಿದರು ಆ ಸಮಯದಲ್ಲಿ ಆತನನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ಜೂನ್ 17 ರಂದು ಸಂಜೆ 4 ಗಂಟೆ ಸುಮಾರಿಗೆ, ಸಿಬ್ಬಂದಿ ಮತ್ತೆ ಐಐಟಿ ವಿಜಿಲೆನ್ಸ್ ಇಲಾಖೆಯನ್ನು ಸಂಪರ್ಕಿಸಿ, ಅದೇ ಅಪರಿಚಿತ ವ್ಯಕ್ತಿ ಲೆಕ್ಚರ್ ಹಾಲ್ LH-101 ಒಳಗೆ ಕಾಣಿಸಿಕೊಂಡಿದ್ದು, ತರಗತಿಗೆ ಹಾಜರಾಗುತ್ತಿದ್ದಾನೆ ಎಂದು ತಿಳಿಸಿದ್ದಾರೆ. ನಂತರ ಐಐಟಿ ಕ್ವಿಕ್ ರೆಸ್ಪಾನ್ಸ್ ಟೀಮ್ (ಕ್ಯೂಆರ್‌ಟಿ) ಲೆಕ್ಚರ್ ಹಾಲ್ ತಲುಪಿ ಆ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದೆ. ನಂತರ ಆತನನ್ನು ಸ್ಥಳೀಯ ಪೊವೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ವಿಚಾರಣೆಯ ವೇಳೆ ಆತ ತಾನು ಐಐಟಿ ವಿದ್ಯಾರ್ಥಿ ಅಲ್ಲ, ಅಕ್ರಮವಾಗಿ ಕಾಲೇಜು ಕ್ಯಾಂಪಸ್‌ನಲ್ಲಿರುವ ಹಲವು ಹಾಸ್ಟೆಲ್‌ಗಳಲ್ಲಿ ವಾಸ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಇದಾದ ನಂತರ ಆತನಿಗೆ ಹೋಗಲು ಬಿಟ್ಟ ಪೊಲೀಸರು ನಾವು ಕರೆದಾಗ ಬರಬೇಕು ಎಂದು ಹೇಳಿ ಕಳಿಸಿದ್ದಾರೆ ಎಂದು ವರದಿಯಾಗಿದೆ.

ಆದರೆ ಆತನ ಮೊಬೈಲ್ ಫೋನ್ ಪರಿಶೀಲಿಸಿದಾಗ, ಆತ 21 ಇ-ಮೇಲ್ ವಿಳಾಸಗಳು ಮತ್ತು ಕೆಲವು ಮೊಬೈಲ್ ಫೋನ್‌ಗಳನ್ನು ಈ ಕೃತ್ಯಕ್ಕೆ ಬಳಸಿದ್ದಾನೆಂದು ತಿಳಿದಿದೆ. ಅಲ್ಲದೇ ಆತ ಸಿಮ್ ಇಲ್ಲದೇ ಕರೆ ಮಾಡಿ ಮಾತನಾಡುವಂತಹ ಹಲವು ಆಪ್‌ಗಳನ್ನು ಬಳಸಿಕೊಂಡು ಯಾವುದೇ ಕುರುಹುಗಳನ್ನು ಉಳಿಸಬಾರದೆಂದು ಪ್ಲಾನ್ ಮಾಡಿದ್ದಾನೆ. ಅಲ್ಲದೇ ಆತ ಕೆಲ ದಿನ ಹೊರ ಹೋಗಿ ಮತ್ತೆ ಇಲ್ಲಿಗೆ ಬಂದಿದ್ದಾನೆ ಎಂಬ ಅನುಮಾನವಿದೆ. ಆತ 10ನೇ ತರಗತಿವರೆಗೆ ಮಾತ್ರ ಓದಿದ್ದು, 10ನೇ ತರಗತಿಯಲ್ಲಿ ಕೇವಲ 48 ಶೇಕಡಾ ಮಾರ್ಕ್‌ ಗಳಿಸಿದ್ದಾನೆ.

ಅವನು ಇನ್ನೂ ಎರಡು ವರ್ಷ ಓದಿದ್ದೇನೆ ಎಂದು ಹೇಳಿದರು ಅದಕ್ಕೆ ಸಾಕ್ಷಿ ಇಲ್ಲ, ಓದಿನ ನಂತರ ಆತ ಕೆಲವು ವರ್ಷಗಳ ಕಾಲ ಕೆಲಸದ ನಿಮಿತ್ತ ಸೂರತ್‌ನಲ್ಲಿದ್ದ ಮತ್ತು ನಂತರ ಅವನು ಮಂಗಳೂರಿಗೆ ಮರಳಿದ್ದಾನೆ. ಆದರೆ ತಂತ್ರಜ್ಞಾನದಲ್ಲಿ ಅವನಿಗೆ ತುಂಬಾ ಆಸಕ್ತಿ ಇತ್ತು ಮತ್ತು ಆದ್ದರಿಂದ ಅವನು ಇಲ್ಲಿಗೆ ಬರಲು ನಿರ್ಧರಿಸಿದ್ದಾಗಿ ಅವನು ಹೇಳಿದ್ದಾನೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.