ಪೋಲ್ಯಾಂಡ್‌ನ ಓರ್ವಯುವಕ ಗಣೇಶ ಚತುರ್ಥಿಗೆ 'ಏಕದಂತಾಯ ವಕ್ರತುಂಡಾಯ' ಹಾಡನ್ನು ಹಾಡುವ ಮೂಲಕ ಶುಭಾಶಯ ತಿಳಿಸಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈತ ಜನ್ಮತಃ ಕ್ರೈಸ್ತನಾಗಿದ್ದರೂ ಸನಾತನ ಧರ್ಮದಲ್ಲಿ ನಂಬಿಕೆ ಇಟ್ಟಿರುವುದಾಗಿ ತಿಳಿಸಿದ್ದಾನೆ.

ವಿಘ್ನ ನಿವಾರಕ ಗಣೇಶನಿಗೆ ಭಕ್ತರ ಸಂಖ್ಯೆ ಹೆಚ್ಚು, ಗಲ್ಲಿ ಗಲ್ಲಿಗಳಲ್ಲಿ ಊರು ಕೇರಿಗಳಲ್ಲಿ ಮನೆ ಮನೆಗಳಲ್ಲಿ ಗಣೇಶನನ್ನು ಕೂರಿಸುವುದನ್ನು ನೋಡಿದರೆ ತಿಳಿಯುತ್ತದೆ ಗಣೇಶ ಜನರಿಗೆ ಎಷ್ಟು ಫೇವರೇಟ್ ಅಂತ ಹಾಗೆಯೇ ಬರೀ ಭಾರತದಲ್ಲಿ ಮಾತ್ರವಲ್ಲ, ಹಲವು ದೇಶಗಳಲ್ಲಿ ಗಣೇಶನನ್ನು ಪೂಜೆ ಮಾಡುತ್ತಾರೆ. ಗಣೇಶನಿಗೆ ಪ್ರಪಂಚದೆಲ್ಲೆಡೆ ಭಕ್ತರಿದ್ದಾರೆ. ಅದೇ ರೀತಿ ಇಲ್ಲೊಂದು ಕಡೆ ಪೋಲ್ಯಾಂಡ್ ಹುಡುಗನೋರ್ವ ಗಣೇಶನ ಏಕದಂತಾಯ ಹಾಡು ಹಾಡುವ ಮೂಲಕ ಗಣೇಶನ ಭಕ್ತರನ್ನು ಬೆರಗುಗೊಳಿಸಿದ್ದಾರೆ. ಸ್ಪ್ಯಾನಿಷ್ ಯುವಕನೋರ್ವ ಗಣೇಶನ ಅತ್ಯಂತ ಪ್ರಸಿದ್ದ ಹಾಡುಗಳಲ್ಲಿ ಒಂದಾದ 'ಏಕದಂತಾಯ ವಕ್ರತುಂಡಾಯ' ಹಾಡನ್ನು ಬಹಳ ಮನೋಜ್ಞವಾಗಿ ಹಾಡುವ ಜೊತೆಗೆ ಗಣೇಶ ಚತುರ್ಥಿಯ ಶುಭಾಶಯಗಳನ್ನು ತಿಳಿಸಿದ್ದಾನೆ. ಈತನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಗಣೇಶನ ಭಕ್ತನಾದ ಸ್ಪ್ಯಾನಿಷ್ ಹುಡುಗ

ಟ್ವಿಟ್ಟರ್‌ನಲ್ಲಿ @ZbigsZach ಎಂಬ ಖಾತೆಯನ್ನು ಹೊಂದಿರುವ ಈ ತರುಣ ತನಗೆ ಭಾರತೀಯ ಭಾಷೆಗಳು ಬರುವುದಿಲ್ಲ, ಆದರೆ ನನಗೆ ಹಾಡುವುದಕ್ಕೆ ಹಾಗೂ ನಟನೆ ಮಾಡುವುದಕ್ಕೆ ಬಹಳ ಇಷ್ಟ, ಭಾರತೀಯ ಭಾಷೆಗಳನ್ನು ಮಾತನಾಡುವುದಕ್ಕೆ ಬರುವುದಿಲ್ಲ. ಆದರೆ ಭಾರತೀಯ ಹಾಡುಗಳನ್ನು ಹಾಡುವುದಕ್ಕೆ ಬರುತ್ತದೆ ಎಂದು ಆತ ತನ್ನ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದು, ಆತ ಎಲ್ಲರಿಗೂ ಏಕದಂತಾಯ ವಕ್ರತುಂಡಾಯ ಭಕ್ತಿಗೀತೆಯನ್ನು ಹಾಡುವ ಮೂಲಕ ಎಲ್ಲರಿಗೂ ಗಣೇಶ ಹಬ್ಬದ ಶುಭ ಕೋರಿದ್ದಾನೆ.

ಏಕದಂತಾಯ ವಕ್ರತುಂಡಾಯ ಹಾಡು ಹಾಡಿದ ಝೆಕ್:

ಪ್ರತಿಯೊಬ್ಬರಿಗೂ ಪೋಲ್ಯಾಂಡ್‌ನಿಂದ ಗಣೇಶ ಚತುರ್ಥಿಯ ಶುಭಾಶಯಗಳು. ನಾನು ಝೆಕ್, ನಾನು ಜನ್ಮತಃ ಓರ್ವ ಕ್ರಿಶ್ಚಿಯನ್, ಆದರೆ ಸನಾತನ ಧರ್ಮದಲ್ಲಿ ಅತೀ ಹೆಚ್ಚು ನಂಬಿಕೆ ಇಟ್ಟುಕೊಂಡಿರುವವ, ಪ್ರತಿಯೊಬ್ಬ ಸನಾತನಿಗೆ ನಾನು ಗಣೇಶ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಗಣೇಶ ಎಲ್ಲರಿಗೂ ಆರೋಗ್ಯ, ಆಯಸ್ಸು, ಶ್ರೀಮಂತಿಕೆ, ಸಮೃದ್ಧಿ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಬುದ್ಧಿವಂತಿಕೆಯನ್ನು ನೀಡಲಿ ಎಂದು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದು, ತಾವು ಹಾಡಿದ ಗಣೇಶನ ಹಾಡಿನ ವೀಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋವನ್ನು 1 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಸ್ಪ್ಯಾನಿಶ್ ತರುಣನ ಹಾಡಿಗೆ ಭಾರಿ ಮೆಚ್ಚುಗೆ:

ವೀಡಿಯೋ ನೋಡಿದ ಅನೇಕರು ಈ ಸ್ಪ್ಯಾನಿಷ್ ಯುವಕನ ಹಾಡಿಗೆ ಧನ್ಯವಾದ ಹೇಳಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಲ್ಲದೇ ಝೆಕ್‌ಗೂ ಗಣೇಶ ಹಬ್ಬದ ಶುಭ ಹಾರೈಸಿದ್ದಾರೆ. ವಿಡಿಯೋ ನೋಡಿದ ಒಬ್ಬರು ಸನಾತನ ಧರ್ಮದಲ್ಲಿ, ನಾವು ನಂಬಿಕೆಗಿಂತ ಪ್ರಕೃತಿಯೊಂದಿಗೆ ಹೊಂದಾಣಿಕೆಯನ್ನು ಅಭ್ಯಾಸ ಮಾಡುತ್ತೇವೆ. ಶ್ಲೋಕಗಳನ್ನು ಪಠಿಸುವುದು, ಧ್ಯಾನ ಮಾಡುವುದು ಮತ್ತು ಯೋಗಾಭ್ಯಾಸ ಮಾಡುವುದರಿಂದ ನಮ್ಮ ವೈಯಕ್ತಿಕ ಸಾಮರ್ಥ್ಯಗಳು ಮತ್ತು ವಿಶ್ವದೊಂದಿಗೆ ಏಕತೆ ಹೆಚ್ಚಾಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

Scroll to load tweet…