ಬಾಂಬೆ ಐಐಟಿಯಲ್ಲಿ ಏರೋಸ್ಪೇಸ್‌ ಇಂಜಿನಿಯರಿಂಗ್‌ ಮಾಡಿದ್ದ ವ್ಯಕ್ತಿ ಇಂದು ಮಹಾಸಾಧು!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಐಐಟಿ ಪದವೀಧರರೊಬ್ಬರು ಸನ್ಯಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಏರೋಸ್ಪೇಸ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಆಧ್ಯಾತ್ಮದತ್ತ ಒಲವು ತೋರಿದ ಇವರು, ಜೀವನದ ಅರ್ಥವನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ.

Prayagraj Abhay Singh studied aerospace engineering at IIT Bombay now baba san

ನವದೆಹಲಿ (ಜ.14): ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವವಾದ ಮಹಾಕುಂಭ ಮೇಳದಲ್ಲಿ, ಎಲ್ಲಾ ವರ್ಗದ ಜನರನ್ನು ಭೇಟಿ ಮಾಡಬಹುದು. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ಸಂಗಮದಲ್ಲಿ ಸ್ನಾನ ಮಾಡಲು ಲಕ್ಷಾಂತರ ಭಕ್ತರು ಉತ್ಸವದಲ್ಲಿ ಸೇರುತ್ತಾರೆ. ಮಹಾಕುಂಭಮೇಳದಲ್ಲಿ ಬಾಬಾಗಳು (ತಪಸ್ವಿಗಳು ಅಥವಾ ಋಷಿಗಳು) ನೋಡುವುದೇ ಅಕರ್ಷಕ ಅಂಶಗಳಲ್ಲಿ ಒಂದು. ಭವ್ಯವಾದ ಧಾರ್ಮಿಕ ಉತ್ಸವದಲ್ಲಿ, ಭಕ್ತರು ನಾಗಾ ಬಾಬಾಗಳು, ಅಘೋರಿ ಸಾಧುಗಳು ಮತ್ತು ವಿಶ್ವದ ಅತ್ಯಂತ ಗೌರವಾನ್ವಿತ ಧಾರ್ಮಿಕ ನಾಯಕರನ್ನು ಭೇಟಿಯಾಗಬಹುದು. ಹಾಗಿದ್ದರೂ, ಮಹಾಕುಂಭದಲ್ಲಿ 'ಐಐಟಿಯನ್ ಬಾಬಾ' ಉಪಸ್ಥಿತಿ ಆನ್‌ಲೈನ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಮಹಾಕುಂಭದಲ್ಲಿ ಐಐಟಿ ಬಾಬಾ!

ವಿಜ್ಞಾನವನ್ನು ತೊರೆದು ಆಧ್ಯಾತ್ಮದ ಮಾರ್ಗ ಹಿಡಿದ ಐಐಟಿಯನ್‌ ಬಾಬಾನನ್ನು ಮಾಧ್ಯಮಗಳು ಸಂದರ್ಶನ ಮಾಡಿದೆ. ಅದರಲ್ಲೂ ಬಾಬಾ ಐಐಟಿಯಲ್ಲಿ ಓದಿದ ವ್ಯಕ್ತಿ ಎನ್ನುವುದು ಪತ್ರಕರ್ತನಿಗೆ ತಿಳಿದಿರಲಿಲ್ಲ. ಆದರೆ, ಬಾಬಾ ಇಂಗ್ಲೀಷ್‌ನಲ್ಲಿ ಮಾತನಾಡುವ ಲಯ ಹಾಗೂ ವಿಷದ ಬಗ್ಗೆ ಇದ್ದ ಜ್ಞಾನವನ್ನು ಕಂಡು ಅವರ ಓದಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. 'ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಿ. ಶಿಕ್ಷಣ ಪಡೆದಿರುವ ಹಾಗೆ ಕಾಣುತ್ತಿದೆ' ಎಂದು ಪತ್ರಕರ್ತ ಹೇಳಿದ್ದಾರೆ. ಇದಕ್ಕೆ ಉತ್ತರ ನೀಡುವ ಬಾಬಾ, ನಾನು ಐಐಟಿ ಬಾಂಬೆಯಲ್ಲಿ ಏರೋಸ್ಪೇಸ್‌ ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡಿದ್ದಾಗಿ ತಿಳಿಸಿದ್ದಾರೆ.

ಇದನ್ನು ಕೇಳುತ್ತಿದ್ದ ಹಾಗೆ ಸಂದರ್ಶನ ಮಾಡುತ್ತಿದ್ದ ಪತ್ರಕರ್ತ ದಂಗಾಗಿದ್ದಾರೆ. ಮತ್ತೊಮ್ಮೆ ಖಚಿತಪಡಿಸಿಕೊಳ್ಳಲು ನೀವು ಐಐಟಿ ಬಾಂಬೆಯಲ್ಲಿ ಏರೋಸ್ಪೇಸ್‌ ಇಂಜಿನಿಯರಿಂಗ್‌ ಮಾಡಿದ್ದು ಹೌದಾ ಎಂದು ಕೇಳಿದ್ದಾರೆ. ಇದಕ್ಕೆ ಹೌದು ಎಂದು ಅವರು ಉತ್ತರಿಸಿದ್ದಾರೆ. ಬಳಿಕ ಬಾಬಾನ ಹೆಸರು ಅಭಯ್‌ ಸಿಂಗ್‌ ಎಂದು ತಿಳಿಸುತ್ತಾರೆ.

'ಈ ಹಂತಕ್ಕೆ ನೀವು ಬಂದಿದ್ದು ಹೇಗೆ' ಎನ್ನುವ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಬಾಬಾ, ಈ ಸ್ಥಿತಿಯೇ ಉತ್ತಮ ಸ್ಥಿತಿ ಎನ್ನುವ ನಂಬಿಕೆ ನನಗೆ ಬಂದಿದೆ ಎಂದು ಉತ್ತರ ನೀಡಿದ್ದಾರೆ. ಪ್ರತಿ ಹಂತದಲ್ಲೂ ನೀವು ಜ್ಞಾನಾರ್ಜನೆ ಮಾಡುತ್ತಲೇ ಹೋದಾಗ ನೀವು ಎಲ್ಲಿಗೆ ಹೋಗಿ ಮುಟ್ಟುತ್ತೀರಿ ಅನ್ನೋದಕ್ಕೆ ನಾನೇ ಉದಾಹರಣೆ ಎಂದು ತಿಳಿಸಿದ್ದಾರೆ.

ಹರ್ಯಾಣದಲ್ಲಿ ಜನಿಸಿದ ಅಭಯ್‌ ಸಿಂಗ್‌ ಬಾಬಾ, ಐಐಟಿ ಬಾಂಬೆಯಲ್ಲಿ ನಾಲ್ಕು ವರ್ಷಗಳ ಕಾಲ ಏರೋಸ್ಪೇಸ್‌ ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡಿದ್ದಾರೆ. ಅದಾದ ಬಳಿಕ, ಕಲಾ ಕ್ಷೇತ್ರದ ಬಗ್ಗೆ ಗಮನ ನೀಡಿದ ಅವರು, ಮಾಸ್ಟರ್ಸ್‌ ಇನ್‌ ಡಿಸೈನ್‌ಅನ್ನೂ ಕಲಿತಿದ್ದರು.

ಪ್ರಯಾಗರಾಜ್ ಮಹಾಕುಂಭ 2025: ಇತಿಹಾಸ, ಮಹತ್ವ, ಕಥೆ

ನೀವು ಜೀವನದ ಅರ್ಥವನ್ನು ಹುಡುಕಲು ಪ್ರಯತ್ನ ಮಾಡುತ್ತೀರಿ. ನಾನು ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡುವಾಗಲೂ, ನಾನು ತತ್ವಶಾಸ್ತ್ರದ ಕೋರ್ಸ್‌ಗಳನ್ನು ಮಾಡಿದ್ದೆ. ನವೋತ್ತರತಾವಾದ, ಸಾಕ್ರಟೀಸ್, ಪ್ಲೇಟೋ  ಮುಂತಾದರ ಬರಹಗಳನ್ನು ಜೀವನದ ಅರ್ಥವನ್ನು ತಿಳಿದುಕೊಳ್ಳಲು ಓದುತ್ತಿದ್ದೆ' ಎಂದು ಅವರು ಹೇಳಿದರು.

ಗ್ಲಾಮರ್ ಜಗತ್ತಿನಿಂದ ಸಾಧ್ವಿ ಜೀವನಕ್ಕೆ: ಮಹಾಕುಂಭ ಮೇಳದಲ್ಲಿ ಹರ್ಷ ರಿಚರಿಯಾ

ಐಐಟಿ ಪದವೀಧರ ಬಾಬಾ ಮತ್ತು ಪತ್ರಕರ್ತನ ನಡುವಿನ ಸಂವಾದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಮೆಂಟ್‌ಗಳ ವಿಭಾಗದಲ್ಲಿ ಅನೇಕ ಜನರು ಹಣದ ಬದಲು ಜ್ಞಾನವನ್ನು ಅನುಸರಿಸಿದ್ದಕ್ಕಾಗಿ ಸಿಂಗ್ ಅವರನ್ನು ಹೊಗಳಿದ್ದಾರೆ. ಮಹಾ ಕುಂಭಮೇಳವು ನಿನ್ನೆ ಜನವರಿ 13 ರಂದು ಪ್ರಾರಂಭವಾಗಿ ಫೆಬ್ರವರಿ 26 ರವರೆಗೆ ನಡೆಯಲಿದೆ.

Latest Videos
Follow Us:
Download App:
  • android
  • ios