ಟ್ರೈನ್ ಹೋದ್ರೆ ಮತ್ತೊಂದು ಬರುತ್ತೆ ಆದ್ರೆ ಜೀವ: ಇಷ್ಟೊಂದು ರಿಸ್ಕ್ ಯಾಕೆ: ವೀಡಿಯೋ ವೈರಲ್

ಇಲ್ಲೊಬ್ಬ ಕಾಲಿಡುವುದಕ್ಕೂ ಜಾಗವಿರದ ರೈಲಿನಲ್ಲಿ ಹತ್ತಲು ಪ್ರಯತ್ನಿಸಿದ್ದು, ಆತ ಎಲ್ಲಿ ಬಿದ್ದು ಬಿಡುವನೋ ಎಂದು ನೋಡುಗರಿಗೆ ಭಯವಾಗುವಷ್ಟು ಭಯಾನಕವಾಗಿದೆ ಈ ದೃಶ್ಯ, ಪ್ಲಾಟ್‌ಫಾರ್ಮ್‌ನಲ್ಲಿದ್ದ ಯಾರೋ ಈ ಅಪಾಯಕಾರಿ ದೃಶ್ಯವನ್ನು ಸೆರೆ ಹಿಡಿದಿದ್ದು, ವೀಡಿಯೋ ವೈರಲ್ ಆಗಿದೆ.

If the train goes, another one will come why so much risk dangerous Mumbai Local Train video goes viral in which a guy risking his life akb

ಮುಂಬೈ: ಪ್ರಯಾಣ ಮಾಡುವಾಗ ಅದರಲ್ಲೂ ಬಸ್ಸು ರೈಲು ಮುಂತಾದ ಸಾರ್ವಜನಿಕ ಸಾರಿಗೆಯನ್ನು ಬಳಸುವಾಗ ಬಹುತೇಕರು ಅದರಲ್ಲೂ ವಿಶೇಷವಾಗಿ ಹುಡುಗರು ತಮ್ಮ ಜೀವವನ್ನೇ ಅಪಾಯಕ್ಕೆ ತಳ್ಳುತ್ತಾರೆ, ಬಸ್‌ನ, ರೈಲಿನ ಬಾಗಿಲಲ್ಲಿ ನೇತಾಡಲು ಹೋಗಿ ಜೀವಕ್ಕೆ ಕಂಟಕ ತಂದುಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಬ್ಬ ಕಾಲಿಡುವುದಕ್ಕೂ ಜಾಗವಿರದ ರೈಲಿನಲ್ಲಿ ಹತ್ತಲು ಪ್ರಯತ್ನಿಸಿದ್ದು, ಆತ ಎಲ್ಲಿ ಬಿದ್ದು ಬಿಡುವನೋ ಎಂದು ನೋಡುಗರಿಗೆ ಭಯವಾಗುವಷ್ಟು ಭಯಾನಕವಾಗಿದೆ ಈ ದೃಶ್ಯ, ಪ್ಲಾಟ್‌ಫಾರ್ಮ್‌ನಲ್ಲಿದ್ದ ಯಾರೋ ಈ ಅಪಾಯಕಾರಿ ದೃಶ್ಯವನ್ನು ಸೆರೆ ಹಿಡಿದಿದ್ದು, ವೀಡಿಯೋ ವೈರಲ್ ಆಗಿದೆ. ಮುಂಬೈ ಲೋಕಲ್ ಟ್ರೈನ್‌ನ ದೃಶ್ಯ ಇದಾಗಿದೆ. ವೀಡಿಯೋ ನೋಡಿದ ಅನೇಕರು ಈ ರೀತಿ ಪ್ರಯಾಣಿಸಿ ಜೀವಕ್ಕೆ ತೊಂದರೆ ತಂದುಕೊಳ್ಳದಂತೆ ಮನವಿ ಮಾಡಿದ್ದಾರೆ. 

ಇನ್ಸ್ಟಾಗ್ರಾಮ್‌ನ ವೈರಲ್ ಭಯಾನಿ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದ್ದು, ಒಂದು ಮಿಲಿಯನ್‌ಗೂ ಅಧಿಕ ಮಂದಿ ಈ ವೀಡಿಯೋ ವೀಕ್ಷಿಸಿದ್ದಾರೆ. ಮುಂಬೈ ಲೋಕಲ್ ರೈಲಿನಲ್ಲಿ ಪ್ರತಿದಿನವೂ ಇದೇ ಪರಿಸ್ಥಿತಿ ಇರುತ್ತದೆ. ಈ ರೈಲಿನಲ್ಲಿ ಲಕ್ಷಾಂತರ ಜನ ದಿನವೂ ಪ್ರಯಾಣಿಸುತ್ತಾರೆ. ಆದರೆ ಹಾಗಂತ ಜೀವವನ್ನು ಅಪಾಯಕ್ಕಿಟ್ಟು ಪ್ರಯಾಣಿಸುವುದು ಎಷ್ಟು ಸೂಕ್ತ. ಅದೇ ರೀತಿ ಈ ವೀಡಿಯೋದಲ್ಲಿ ಕಾಣಿಸುವಂತೆ ರೈಲು ಈಗಾಗಲೇ ತುಂಬಿ ತುಳುಕಿದ್ದು, ರೈಲಿನ ಬಾಗಿಲಲ್ಲಿ ಕಾಲಿಡುವುದಕ್ಕೂ ಜಾಗವಿಲ್ಲ, ಆದರೂ ಯುವಕನೋರ್ವ ರೈಲಿನಲ್ಲಿ ಹತ್ತಿಕೊಂಡು ಬಾಗಿಲಿನ ಸರಳಿನಲ್ಲಿ ನೇತಾಡುತ್ತಾ ಸಾಗಿದ್ದಾನೆ. ಏನಾದರೂ ಸಣ್ಣ ಕಂಬ ಅಡ್ಡ ಸಿಕ್ಕಿದರೂ ಆತನ ಜೀವ ಅಪಾಯಕ್ಕೀಡಾಗುವುದು ಗ್ಯಾರಂಟಿ. ಈ ವೀಡಿಯೋ ನೋಡಿದ ಜನ ಇದೆಷ್ಟು ಅಪಾಯಕಾರಿ ಎಂದು ಕಾಮೆಂಟ್ ಮಾಡಿದ್ದಾರೆ.  

ರೈಲು ನಿಲ್ದಾಣದಲ್ಲಿ ಮಲಗಿದ ಪ್ರಯಾಣಿಕರಿಗೆ ನೀರೆರಚಿದ ಪೊಲೀಸ್: Video Viral ವ್ಯಾಪಕ ಆಕ್ರೋಶ

ಈ ವೀಡಿಯೋ ನೋಡಿ ನನ್ನ ಎದೆ ಬಡಿತ ಹೆಚ್ಚಾಗಿದೆ. ಈತನಿಗೆ ಏನು ಆಗದಿದ್ದರೆ ಸಾಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಸಾಮಾನ್ಯ ಜನರ ದಿನನಿತ್ಯದ ಗೋಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ರೈಲು ವೇಗಗೊಳ್ಳುತ್ತಿದ್ದಂತೆ ನನ್ನ ಹೃದಯ ಬಡಿತವೂ ಹೆಚ್ಚಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ನಿಮ್ಮ ಬಗ್ಗೆ ಯೋಚಿಸದಿದ್ದರೂ ಪರವಾಗಿಲ್ಲ, ಕನಿಷ್ಠ ನಿಮ್ಮ ಮನೆಯವರ ಬಗ್ಗೆಯಾದರೂ ಯೋಚಿಸಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೋ ಸಹೋದರ ಈ ರೀತಿ ಪ್ರಯಾಣಮಾಡದಿರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಒಡಿಶಾ ರೈಲು ದುರಂತಕ್ಕೆ ಸಿಬ್ಬಂದಿ ಕಾರಣ: ರೈಲ್ವೆ ತನಿಖಾ ವರದಿ; ವಿಧ್ವಂಸಕ ಕೃತ್ಯದ ಅನುಮಾನದ ಬಗ್ಗೆ ಸಿಬಿಐ ತನಿಖೆ ಮುಂದುವರಿಕೆ

ಜೀವವನ್ನೇಕ್ಕೆ ಅಪಾಯಕ್ಕೆ ದೂಡುತ್ತಿರಿ, ಈ ರೀತಿ ಮಾಡದಿರಿ ಮಾಡದಿರಿ ಮನೆಯಲ್ಲಿ ನಿಮಗಾಗಿ ಕುಟುಂಬವೂ ಕಾಯುತ್ತಿರುತ್ತದೆ ಅವರ ಬಗ್ಗೆ ಯೋಚಿಸಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

 

Latest Videos
Follow Us:
Download App:
  • android
  • ios