ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತದ "ಆಪರೇಶನ್ ಸಿಂಧೂರ್" ಯಶಸ್ವಿಯಾಗಿದೆ. ಕರ್ನಲ್ ಸೋಫಿಯಾ ಖುರೇಷಿ ನೇತೃತ್ವದ ಈ ಕಾರ್ಯಾಚರಣೆಯಲ್ಲಿ 70 ಉಗ್ರರು ಹತರಾಗಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸೋಫಿಯಾ ತಂದೆ ತಾಜುದ್ದೀನ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕುಟುಂಬದ ಹಲವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ವಡೋದರ(ಮೇ.07) ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ಆಪರೇಶನ್ ಸಿಂಧೂರ್ ಯಶಸ್ವಿಯಾಗಿದೆ. ಈ ಆಪರೇಶನ್ ಸಿಂಧೂರ್ ದಾಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕರ್ನಲ್ ಸೋಫಿಯಾ ಖುರೇಷಿ ಕುರಿತು ಇಡೀ ಭಾರತವೇ ಹೆಮ್ಮೆ ಪಡುತ್ತಿದೆ. ಭಾರತೀಯ ಮಹಿಳೆಯ ಕುಂಕುಮ ಅಳಿಸಿದ್ದ ಪೆಹಲ್ಗಾಂ ಘಟನೆಗೆ ಭಾರತ ಆಪರೇಶನ್ ಸಿಂಧೂರ್ ಹೆಸರಿನಡಿ ದಾಳಿ ನಡೆಸಿದೆ. ಉಗ್ರರ ತಾಣಗಳನ್ನು ಧ್ವಂಸ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಮಹಿಳಾ ಕರ್ನಲ್ ಸೋಫಿಯಾ ಖುರೇಷಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಇದೀಗ ಮಗಳ ಕುರಿತು ಸೋಫಿಯಾ ತಂದೆ ತಾಜ್ ಮೊಹಮ್ಮದ್ ಪ್ರತಿಕ್ರಿಯಿಸಿದ್ದರೆ. ಮಗಳ ಬಗ್ಗೆ ಅತೀವ ಹೆಮ್ಮೆ ವ್ಯಕ್ತಪಡಿಸಿದ ತಾಜುದ್ದೀನ್ ಮೊಹಮ್ಮದ್ ಖುರೇಷಿ, ದೇಶಕ್ಕಾಗಿ ನನ್ನ ಮಗಳು ಈ ಸಾಹಸ ಮಾಡಿದ್ದಾಳೆ ಎಂದಿದ್ದಾರೆ.

ಭಾರತದ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ಕುರಿತು ಇಂದು ಸುದ್ದಿಗೋಷ್ಛಿಯಲ್ಲಿ ಮಾತನಾಡಿದ ಸೋಫಿಯಾ ಖುರೇಷಿ, ಉಗ್ರರ ತಾಣ ಧ್ವಂಸಗೊಳಿಸಿದ ಚಿತ್ರಣ ನೀಡಿದರು. ಸೋಫಿಯಾ ಖುರೇಷಿ ಕುರಿತು ಭಾರತೀಯ ಹೆಮ್ಮೆ ಪಟ್ಟಿದ್ದಾರೆ. ಇದರ ಬೆನ್ನಲ್ಲೇ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸೋಫಿಯಾ ಖುರೇಷಿ ತಂದೆ ತಾಜುದ್ದೀನ್ ಮೊಹಮ್ಮದ್ ಖುರೇಷಿ, ಈಗಲೂ ಅದೇ ಸೈನಿಕನ ಉತ್ಸಾಹ ಇಟ್ಟುಕೊಂಡಿದ್ದಾರೆ. 

ನನಗೆ ಅವಕಾಶ ಸಿಕ್ಕಿದರೆ ಪಾಕಿಸ್ತಾನ ಉಡೀಸ್
ಮಗಳ ಕುರಿತು ಹೆಮ್ಮೆ ವ್ಯಕ್ತಪಡಿಸಿದ ಸೋಫಿಯಾ ಖುರೇಷಿ ತಂದೆ ತಾಜುದ್ದೀನ್ ಮೊಹಮ್ಮದ್ ಖುರೇಷಿ, ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡುವುದಾಗಿ ಹೇಳಿದ್ದಾರೆ. ನನಗೆ ವಯಸ್ಸಾಗಿದೆ. ಈಗ ಹೆಚ್ಚು ನಡೆದಾಡಲು ಸಾಧ್ಯವಿಲ್ಲ. ಆದರೆ ಪಾಕಿಸ್ತಾನ ವಿಚಾರದಲ್ಲಿ ನನಗೆ ಅವಕಾಶ ಸಿಕ್ಕಿದರೆ, ಪಾಕಿಸ್ತಾನವನ್ನು ಈ ಭೂಪಟದಿಂದ ಅಳಿಸಿ ಬಿಡುತ್ತೇನೆ ಎಂದಿದ್ದಾರೆ.ಈ ಕುರಿತು ನನ್ನ ಮಗಳು ದೇಶಕ್ಕಾಗಿ ಈ ಕಾರ್ಯ ಮಾಡಿದ್ದಾಳೆ. ನನ್ನ ತಂದೆ, ಅಜ್ಜ, ನಾನು, ಇದೀಗ ಮಗಳು ಎಲ್ಲರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರೆ. ಈ ಜಗತ್ತಿನಲ್ಲಿ ಪಾಕಿಸ್ತಾನ ಅನ್ನೋ ದೇಶ ಇರಲು ಯೋಗ್ಯವಲ್ಲ ಎಂದು ತಾಜುದ್ದೀನ್ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.

ನಮ್ಮ ಎದೆ 56 ಇಂಚಾಗಿದೆ
ತಂಗಿ ಕರ್ನಲ್ ಸೋಫಿಯಾ ಖುರೇಷಿ ಸಾಧನೆ ಕುರಿತು ಮಾತನಾಡಿದ ಸಹೋದರ ಮೊಹಮ್ಮದ್ ಸಂಜಯ್ ಖುರೇಷಿ, ನನ್ನ ತಂಗಿಯ ಸಾಧನೆಗೆ ಹೆಮ್ಮೆ ಇದೆ. ಆಕ ನನ್ನ ರೋಲ್ ಮಾಡೆಲ್. ನಮ್ಮ ಕುಟುಂಬ ಕಳೆದ ಹಲವು ಶತಮಾನಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದೆ. ಪ್ರತಿ ಬಾರಿ ನಮ್ಮ ಮೇಲೆ ದಾಳಿಯಾದಾಗ ನಾವು ಕುಗ್ಗಿ ಹೋಗುತ್ತೇವೆ. ನೋವು ಅನುಭವಿಸುತ್ತೇವೆ. ಆದರೆ ಇಂದು ನಮ್ಮ ಕುಟುಂಬ, ವಡೋದರ ಜನತೆ, ಗುಜರಾತ್ ಜನತೆಯ ಎದೆ 56 ಇಂಚಾಗಿದೆ ಎಂದು ಮೊಹಮ್ಮದ್ ಸಂಜಯ್ ಖುರೇಷಿ ಹೇಳಿದ್ದಾರೆ. 

Scroll to load tweet…

ಆಪರೇಶನ್ ಸಿಂಧೂರ್ ದಾಳಿಗೆ 70 ಉಗ್ರರು ಖತಂ
ಪೆಹಲ್ಗಾಂ ದಾಳಿ ನಡೆದ ಮರು ಕ್ಷಣವೇ ದಾಳಿ ಹಿಂದಿನ ರೂವಾರಿಗಳನ್ನು ಭಾರತೀಯ ಸೇನೆ ಪತ್ತೆ ಹಚ್ಚಿತ್ತು. ಕಳುಹಿಸಿದ ಉಗ್ರರು ತಲೆ ಮರೆಸಿಕೊಂಡಿದ್ದರು. ಆದರೆ ಇದರ ಹಿಂದೆ ಯಾರಿದ್ದಾರೆ, ಎಲ್ಲಿಂದ ಉಗ್ರರು ನುಸುಳಿ ಭಾರತಕ್ಕೆ ಬಂದಿದ್ದಾರೆ ಅನ್ನೋ ಮಾಹಿತಿಯನ್ನು ಕಲೆ ಹಾಕಿತ್ತು. ಬಳಿಕ ಆಪರೇಶನ್ ಸಿಂಧೂರ್ ದಾಳಿಗೆ ತಯಾರಿ ಮಾಡಿದೆ. ಮಧ್ಯರಾತ್ರಿ 1 ಗಂಟೆಗೆ ಪಾಕಿಸ್ತಾನದ ಒಟ್ಟು 9 ಉಗ್ರರ ತಾಣಗಳ ಮೇಲೆ ಭಾರತ ಮಿಸೈಲ್ ದಾಳಿ ಮಾಡಿದೆ. 9 ತಾಣಗಳು ಧ್ವಂಸಗೊಡಿದೆ. ಈ ದಾಳಿಯಲ್ಲಿ 70 ಉಗ್ರರು ಹತರಾಗಿದ್ದಾರೆ. ಇನ್ನು 60ಕ್ಕೂ ಹೆಚ್ಚು ಉಗ್ರರು ಗಾಯಗೊಂಡಿದ್ದಾರೆ.

ಭಾರತ ಹಿಂದೆ ಸರಿದರೆ ನಾವು ನಿಲ್ಲಿಸುತ್ತೇವೆ, ದಾಳಿಗೆ ಬೆಚ್ಚಿ ಪಾಕ್ ರಕ್ಷಣಾ ಸಚಿವನ ವರಸೆ ಬದಲು