ಭಾರತದ ನಡೆಸಿದ ಆಪರೇಶನ್ ಸಿಂಧೂರ್ ದಾಳಿಯನ್ನು ಬ್ರಿಟನ್ ಮಾಜಿ ಪ್ರಧಾನಿ ಬೆಂಬಲಿಸಿದ್ದಾರೆ. ಭಾರತದ ನಡೆ ಸರಿಯಾಗಿದೆ ಎಂದಿದ್ದಾರೆ. ಇದೇ ವೇಳೆ ಮಾಜಿ ಪ್ರಧಾನಿ ಕಾಶ್ಮೀರ ಕುರಿತು ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ.

ಲಂಡನ್(ಮೇ.07) ಪೆಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಶನ್ ಸಿಂಧೂರ್ ಮೂಲಕ ಪಾಕಿಸ್ತಾನದ ಉಗ್ರ ತರಬೇತಿ ಕ್ಯಾಂಪ್, ಉಗ್ರರ ತಾಣಗಳ ಮೇಲೆ ಮಿಸೈಲ್ ದಾಳಿ ನಡೆಸಿದೆ. 9 ಉಗ್ರರ ತಾಣಗಳು ಧ್ವಂಸಗೊಂಡಿದೆ. ಪಾಕಿಸ್ತಾನ ಇದೀಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತ ವಿರುದ್ದ ಕ್ರಮಕ್ಕೆ ಆಗ್ರಹಿಸಿದೆ. ಇತ್ತ ಚೀನಾ ಸೇರಿದಂತೆ ಕೆಲ ದೇಶಗಳು ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದೆ. ಆದರೆ ಹಲವು ದೇಶಗಳು ಭಾರತ ನಿರ್ಧಾರವನ್ನು ಸ್ವಾಗತಿಸಿದೆ. ಇದೀಗ ಬ್ರಿಟನ್ ಮಾಜಿ ಪ್ರದಾನಿ ರಿಶಿ ಸುನಕ್, ಭಾರತ ಉಗ್ರರ ವಿರುದ್ದ ತೆಗೆದುಕೊಂಡ ಆಪೇಶನ್ ಸಿಂಧೂರ್ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಇದೇ ವೇಳೆ ಕಾಶ್ಮೀರ ಕುರಿತು ಮಹತ್ವದ ಹೇಳಿಕೆ ನೀಡಿದ್ದರೆ.

ಭಾರತದ ನಿರ್ಧಾರಕ್ಕೆ ಮಾಜಿ ಪ್ರಧಾನಿ ಬೆಂಬಲ
ಪಾಕಿಸ್ತಾನ ಉಗ್ರರ ತಾಣಗಳ ಮೇಲೆ ನಡೆಸಿದ ಭಾರತದ ಆಪರೇಶನ್ ಸಿಂಧೂರ್ ಸರಿಯಾಗಿದೆ ಜೊತೆಗೆ ಸ್ಪಷ್ಟವಾಗಿದೆ ಎಂದು ರಿಶಿ ಸುನಕ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಿಶಿ ಸುನಕ್ ಭಾರತಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಪಾಕಿಸ್ತಾನದ ಕಿವಿ ಹಿಂಡಿದ್ದಾರೆ. ಯಾವುದೇ ದೇಶ ಭಯೋತ್ಪಾದಕ ದಾಳಿಯನ್ನು ಸಹಿಸಿಕೊಳ್ಳುವುದಿಲ್ಲ. ಅದರಲ್ಲೂ ಮತ್ತೊಂದು ದೇಶ ನಿಯಂತ್ರಿಸುತ್ತಿರುವ ಪ್ರದೇಶದಿಂದ ನಡೆಸುವ ಉಗ್ರ ದಾಳಿಯನ್ನು ಸಹಿಸಲು ಸಾಧ್ಯವೇ ಇಲ್ಲ. ಭಾರತ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ತಕ್ಕ ಉತ್ತರ ನೀಡಿದೆ. ಭಯೋತ್ಪಾದಕರಿಗೆ ಯಾವುದೇ ವಿನಾಯಿತಿ ಇಲ್ಲ ಎಂದು ರಿಶಿ ಸುನಕ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಅನ್ನೋದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಪಾಕಿಸ್ತಾನ ನಿಯಂತ್ರಿಸುತ್ತಿರುವ ಪ್ರದೇಶಗಳಿಂದ ಭಾರತದ ವಿರುದ್ದ ಉಗ್ರರ ಕಳುಹಿಸಲಾಗುತ್ತಿದೆ. ಇಲ್ಲಿ ಉಗ್ರರ ತಾಣಗಳನ್ನು ನಿರ್ಮಿಸಿ ಭಾರತದ ಮೇಲೆ ದಾಳಿ ಮಾಡಲಾಗುತ್ತಿದೆ ಅನ್ನೋದನ್ನು ರಿಶಿ ಸುನಕ್ ತಮ್ಮ ಟ್ವೀಟ್ ಮೂಲಕ ಹೇಳಿದ್ದಾರೆ.

ಭಾರತ ಹಿಂದೆ ಸರಿದರೆ ನಾವು ನಿಲ್ಲಿಸುತ್ತೇವೆ, ದಾಳಿಗೆ ಬೆಚ್ಚಿ ಪಾಕ್ ರಕ್ಷಣಾ ಸಚಿವನ ವರಸೆ ಬದಲು

ಪೆಹಲ್ಗಾಂ ಉಗ್ರ ದಾಳಿಯನ್ನು ಉಗ್ರವಾಗಿ ಖಂಡಿಸಿದ್ದ ರಿಶಿ ಸುನಕ್
ಪೆಹಲ್ಗಾಂನಲ್ಲಿ ನಡೆದ ಉಗ್ರ ದಾಳಿಯನ್ನು ರಿಶಿ ಸುನಕ್ ಖಂಡಿಸಿದ್ದರು. ಇದೇ ವೇಳೆ ಭಯೋತ್ಪಾದಕ ದಾಳಿಯನ್ನು ಅತ್ಯಂತ ಕ್ರೂರ ಎಂದಿದ್ದ ಸುನಕ್, ಬ್ರಿಟನ್, ಭಾರತದ ಜೊತೆ ನಿಲ್ಲಲಿದೆ ಎಂದಿದ್ದರು. ಪೆಹಲ್ಗಾಂನಲ್ಲಿ ನಡೆದ ಉಗ್ರ ದಾಳಿ ನವ ದಂಪತಿ, ಮಕ್ಕಳು, ಕುಟುಂಬ ಸೇರಿದಂತೆ ಹಲವು ಮುಗ್ದರನ್ನು ಬಲಿಪಡೆದಿದೆ. ಈ ಘಟನೆ ತೀವ್ರ ನೋವುಂಟು ಮಾಡಿದೆ. ದುಃಖ, ನೋವಿನಲ್ಲಿರುವ ಕುಟುಂಬದ ಜೊತೆ ಸಂಪೂರ್ಣ ಬ್ರಿಟನ್ ನಿಮ್ಮಜೊತೆಗೆ ನಿಲ್ಲಲಿದೆ. ಭಯೋತ್ಪಾದಕತೆ ಗೆಲುವು ಸಾಧಿಸುವುದಿಲ್ಲ. ನಾವು ಭಾರತದ ಜೊತೆಗಿದ್ದೇವೆ ಎಂದು ರಿಶಿ ಸುನಕ್ ಟ್ವೀಟ್ ಮಾಡಿದ್ದರು.

Scroll to load tweet…

ಆಪರೇಶನ್ ಸಿಂಧೂರ್‌ಗೆ ಯುಕೆ ಸಚಿವರ ಪ್ರತಿಕ್ರಿಯೆ
ಆಪರೇಶನ್ ಸಿಂಧೂರ್ ಕುರಿತು ಬ್ರಿಟನ್ ಸಚಿವರು, ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಟ್ರೇಡ್ ಕಾರ್ಯದರ್ಶಿ ಜೋನಾಥನ್ ರೇನಾಲ್ಡ್ಸ್ ಮಾತನಾಡಿದ್ದು, ನಾವು ಭಾರತ ಹಾಗೂ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತೇವೆ. ಎರಡು ದೇಶದ ಜೊತೆ ಬ್ರಿಟನ್ ಉತ್ತಮ ಸಂಬಂಧ ಹೊಂದಿದೆ. ಈ ಯುದ್ಧ ಪರಿಸ್ಥಿತಿಯಿಂದ ಎರಡೂ ದೇಶ ಹಿಂದೆ ಸರಿಯಬೇಕು, ಶಾಂತಿ ನೆಲಸಬೇಕು ಎಂದಿದ್ದಾರೆ. 

ಆಪರೇಶನ್ ಸಿಂಧೂರ್
ಮಧ್ಯ ರಾತ್ರಿ ಅಂದರೆ ಮೇ 7 ರ ರಾತ್ರಿ 1 ಗಂಟೆಗೆ ಭಾರತೀಯ ಸೇನೆ ಪಾಕಿಸ್ತಾನದ 9 ಉಗ್ರ ತಾಣದ ಮೇಲೆ ಮಿಸೈಲ್ ದಾಳಿ ನಡೆಸಿದೆ. 25 ನಿಮಿಷದಲ್ಲಿ 24 ಸ್ಟ್ರೈಕ್ ಮೂಲಕ 9 ಉಗ್ರರ ತಾಣಗಳನ್ನು ಭಾರತ ದ್ವಂಸ ಮಾಡಿದೆ. ಪಾಕಿಸ್ತಾನಕ್ಕೆ ಮಿಸೈಲ್ ದಾಳಿಯಾದ ಬಳಿಕವೇ ಗೊತ್ತಾಗಿದೆ. ಈ ದಾಳಿಯಲ್ಲಿ 70 ಉಗ್ರರು ಹತರಾಗಿದ್ದಾರೆ. 60ಕ್ಕೂ ಹೆಚ್ಚು ಉಗ್ರರು ಗಾಯಗೊಂಡಿದ್ದಾರೆ. ಪೆಹಲ್ಗಾಂ ಉಗ್ರ ದಾಳಿಯಲ್ಲಿ 26 ಭಾರತೀಯರು ಹಾಗೂ ಒರ್ವ ನೇಪಾಳಿ ಪ್ರಜೆ ಮೃತಪಟ್ಟಿದ್ದರು. ಹಿಂದೂಗಳ ಗುರಿಯಾಗಿಸಿ ನಡೆದ ಈ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಶನ್ ಸಿಂಧೂರ್ ಹೆಸರಿನಲ್ಲಿ ಪ್ರತೀಕಾರ ಮಾಡಿದೆ.

25 ನಿಮಿಷ, 24 ಸ್ಟ್ರೈಕ್ , 9 ಉಗ್ರರ ನೆಲೆ ಧ್ವಂಸ; ವಿಡಿಯೋ ರಿಲೀಸ್ ಮಾಡಿದ ಭಾರತೀಯ ಸೇನೆ