ಭಾರತ ನಡೆಸಿದ ದಾಳಿಗೆ ಪಾಕಿಸ್ತಾನ ವಿಲವಿಲ ಒದ್ದಾಡಿದೆ. ಭಾರತ ಮಾತ್ರವಲ್ಲ ಜಗತ್ತನ್ನೇ ನಾಶ ಮಾಡುತ್ತೇನೆ ಎಂದಿದ್ದ ರಕ್ಷಣಾ ಸಚಿವ ಇದೀಗ ಭಾರತ ಇದರಿಂದ ಹಿಂದೆ ಸರಿದರೆ ನಾವು ಉದ್ವಿಘ್ನತೆ ಕಡಿಮೆ ಮಾಡುತ್ತೇವೆ. ನಾವು ಶಾಂತಿ ಬಯಸುತ್ತಿದ್ದೇವೆ ಎಂದಿದ್ದಾರೆ. ಈ ರಕ್ಷಣಾ ಸಚಿವ ಹೇಳಿದ್ದೇನು? 

ಇಸ್ಲಾಮಾಬಾದ್(ಮೇ.07)  ಭಾರತ ಉಗ್ರರ ಗುರಿಯಾಗಿಸಿ ನಡೆಸಿದ ದಾಳಿಗೆ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಕಳೆದ ಕೆಲ ದಿನಗಳಿಂದ ಗಡಿಗೆ ರೇಡಾರ್, ಆರ್ಟಿಲರಿ, ಶಸ್ತ್ರಾಸ್ತ್ರ ರವಾನಿಸಿದ್ದ ಪಾಕಿಸ್ತಾನಕ್ಕೆ ಭಾರತದ ಮಿಸೈಲ್ ಬಿದ್ದಾಗಲೇ ದಾಳಿಯಾಗಿದೇ ಅನ್ನೋದು ಗೊತ್ತಾಗಿದೆ. ಈ ದಾಳಿಯಿಂದ ಪಾಕಿಸ್ತಾನ ಅಕ್ಷರಶ ನಲುಗಿ ಹೋಗಿದೆ. ಪಾಕಿಸ್ತಾನಕ್ಕೆ ನುಗ್ಗಿ ಹೊಡೆದರೂಪಾಕಿಸ್ತಾನದ ಸೈನ್ಯಕ್ಕೂ ಗೊತ್ತಾಗಿಲ್ಲ. ಭಾರತ ನಿಖರವಾಗಿ ನಿಖರವಾಗಿ ನಡೆಸಿದ ದಾಳಿಯಿಂದ ಪಾಕಿಸ್ತಾನದಲ್ಲಿ ಆತಂಕ ಹೆಚ್ಚಾಗಿದೆ. ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಮೇಲೆ ಇದೇ ರೀತಿ ನಿಖರ ದಾಳಿ ನಡೆಯಬಹುದು ಅನ್ನೋ ಆತಂಕ ಹೆಚ್ಚಾಗಿದೆ. ಪೆಹಲ್ಗಾಂ ಉಗ್ರ ದಾಳಿ ಬಳಿಕ ಪಾಕಿಸ್ತಾನ ರಕ್ಷಣಾ ಸಚಿವ ಆಸಿಫ್ ಖವಾಜ ಪ್ರಚೋದನಕಾರಿ, ಬೆದರಿಕೆ ಹೇಳಿಕೆಗಳನ್ನೇ ನೀಡುತ್ತಿದ್ದರು. ಭಾರತದ ಮೇಲೆ ದಾಳಿ, ಸಿಂಧೂ ನದಿ ನೀರು ನಿಲ್ಲಿಸಿದರೆ ಭಾರತದ ಡ್ಯಾಮ್ ಮೇಲೆ ದಾಳಿ, ಭಾರತ ಮಾತ್ರವಲ್ಲ ಜಗತ್ತನ್ನೇ ಸರ್ವನಾಶ ಮಾಡುತ್ತೇವೆ ಅನ್ನೋ ಹೇಳಿಕೆ ನೀಡಿದ್ದ ಇದೇ ಆಸಿಫ್ ಖವಾಜ ಇದೀಗ ಒಂದೇ ದಾಳಿಯಿಂದ ನಡುಗಿದ್ದಾರೆ. ಇದೀಗ ತಮ್ಮ ವರಸೆ ಬದಲಿಸಿದ್ದಾರೆ. ಭಾರತ ಈ ದಾಳಿ, ಉದ್ವಿಘ್ನತೆಯಿಂದ ಹಿಂದೆ ಸರಿದರೆ ಪಾಕಿಸ್ತಾನ ಕೂಡ ಎಲ್ಲವೂ ನಿಲ್ಲಿಸಲಿದೆ ಎಂದಿದ್ದಾರೆ. ಬ್ಲೂಮ್‌ಬರ್ಗ್ ಟಿವಿ ಜೊತೆ ಮಾತನಾಡಿದ ಖವಾಜಾ, ಯುದ್ಧಕ್ಕಿಂತ ಶಾಂತಿ ಮುಖ್ಯ ಎಂದು ವರಸೆ ಬದಲಿಸಿದ್ದಾರೆ.

ನ್ಯೂಕ್ಲಿಯರ್ ದಾಳಿ ಬೆದರಿಕೆ ಬದಲು ಇದೀಗ ಶಾಂತಿ ಮಂತ್ರ
ಭಾರತ ಸೇನೆ ನಡೆಸಿದ ಮಿಸೈಲ್ ದಾಳಿಗೆ ಪಾಕಿಸ್ತಾನದ 9 ಉಗ್ರರ ತಾಣಗಳು ಧ್ವಂಸಗೊಂಡಿದೆ. ಇದರಲ್ಲಿ ಉಗ್ರರ ಮಸೀದಿ ಕೂಡ ಸೇರಿದೆ. ಈ ದಾಳಿಯಿಂದ ಬೆಚ್ಚಿದ ಪಾಕಿಸ್ತಾನ ರಕ್ಷಣಾ ಸಚಿವ ಇದೀಗ ಮಾತು ಬದಲಿಸಿದ್ದಾರೆ. ಇಷ್ಟು ದಿನ ಕೈಯಲ್ಲಿ ನ್ಯೂಕ್ಲಿಯರ್ ಹಿಡಿದಿದ್ದೇನೆ ಅನ್ನೋ ರೀತಿ ಮಾತನಾಡುತ್ತಿದ್ದ ಆಸಿಫ್ ಖವಾಜಾ ಇದೀಗ ಶಾಂತಿ ಮಂತ್ರ ಪಠಿಸಿದ್ದಾರೆ.

ತುರ್ತು ಸಭೆಯಲ್ಲಿ ಪಾಕ್ ಪ್ರಧಾನಿ ಕೆಂಡಾಮಂಡಲ, ಉಗ್ರರೇ ಇಲ್ಲದ ದೇಶದ ಮೇಲೆ ದಾಳಿ ಎಂದ ಷರೀಫ್

ಭಾರತ ಸಂಘರ್ಷವನ್ನು ತಪ್ಪಿಸಿದರೆ ಸಮಸ್ಯೆ ಪರಿಹಾರಕ್ಕೆ ಸಿದ್ಧ ಎಂದು ಅಸಿಫ್ ಖವಾಜ ಹೇಳಿದ್ದಾರೆ. ಕಳೆದ ಎರಡು ವಾರದಿಂದ ಪರಿಸ್ಥಿತಿ ಉದ್ವಿಘ್ನವಾಗಿತ್ತು. ಆದರೆ ಪಾಕಿಸ್ತಾನ ಶಾಂತಿ ಕಾಪಾಡುತ್ತಾ ಬಂದಿದೆ. ನಾವಾಗಿ ಯಾವುದೇ ದಾಳಿಗೆ ಮಂದಾಗುವುದಿಲ್ಲ ಅನ್ನೋದು ಹೇಳಿಕೊಂಡೇ ಬಂದಿದೆ. ಆದರೆ ಇದೀಗ ಭಾರತ ಆಪರೇಶನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ ಅಮಾಯಕರನ್ನು ಗುರಿಯಾಗಿಸಿ ದಾಳಿ ಮಾಡಿದೆ. ಭಾರತ ಈ ಸಂದರ್ಭದಲ್ಲಿ ಹಿಂದೆ ಸರಿದರೆ, ನಾವು ಸಂಘರ್ಥವನ್ನು ತಪ್ಪಿಸಲು ಸಿದ್ದ ಎಂದು ಆಸಿಫ್ ಖವಾಜ ಹೇಳಿದ್ದಾರೆ.

ರಾಜತಾಂತ್ರಿಕ ಮಾತುಕತೆಯ ಮಾಹಿತಿ ಇಲ್ಲ ಎಂದ ಸಚಿವ
ಸದ್ಯ ಭಾರತದ ಜೊತೆ ರಾಜತಾಂತ್ರಿಕ ಮಾತುಕತೆ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಆಸಿಫ್ ಖವಾಜ ಹೇಳಿದ್ದಾರೆ. ಭಾರತ ಈ ಪರಿಸ್ಥಿತಿಯಿಂದ, ಉದ್ವಿಘ್ನತೆಯಿಂದ ಹಿಂದೆ ಸರಿದರೆ ಪಾಕಿಸ್ತಾನ ಕೂಡ ಶಾಂತಿ ಸ್ಥಾಪನೆಗೆ ಸಿದ್ದವಾಗಿದೆ ಎಂದು ಆಸಿಫ್ ಖವಾಜ ಹೇಳಿದ್ದಾರೆ. ಇಷ್ಟು ದಿನ ಭಾರತದ ಮುಗಿಸುತ್ತೇವೆ ಎನ್ನುತ್ತಿದ್ದ ರಕ್ಷಣಾ ಸಚಿವ ಇದೀಗ ರಾಜತಾಂತ್ರಿಕ ಮಾತುಕತೆ ಕುರಿತು ಮಾತನಾಡಿದ್ದಾರೆ. ಈ ಮೂಲಕ ಭಾರತದ ನಡೆಸಿದ ಒಂದು ದಾಳಿಯಿಂದ ಪಾಕಿಸ್ತಾನ ನಿಂತಲೇ ನಡುಗುತ್ತಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಕ್ಯಾಂಪ್ ಮಾತ್ರ ಟಾರ್ಗೆಟ್ ಮಾಡಿಲ್ಲ. ಸಂಪೂರ್ಣ ಪಾಕಿಸ್ತಾನದ ನೆಲದಲ್ಲಿರುವ ಉಗ್ರರ ಕ್ಯಾಂಪ್ ಮೇಲೂ ದಾಳಿ ಮಾಡಲಾಗಿದೆ. ಇದು ಪಾಕಿಸ್ತಾನವನ್ನು ಬೆಚ್ಚಿ ಬೀಳಿಸಿದೆ. ಮಿಲಿಟರಿ, ಉಗ್ರರ ಭದ್ರತೆ, ರೇಡಾರ್, ಗುಪ್ತಚರ ಇಲಾಖೆ ಸೇರಿದಂತೆ ಎಲ್ಲವೂ ಪಾಕಿಸ್ತಾನದ ಬಳಿ ಇದೆ ಎಂದು ಹೇಳಿಕೊಳ್ಳುತ್ತಲೇ ಬರುತ್ತಿದೆ. ಇತ್ತ ಭಾರತ ಪ್ರತಿಕಾರ ನಡೆಸಲಿದೆ ಅನ್ನೋದು ಅಷ್ಟೇ ಖಚಿತವಾಗಿತ್ತು. ಆದರೂ ಪಾಕಿಸ್ತಾನದ ಸೇನೆಗೆ ಯಾವ ಮಾಹಿತಿಯೂ ಸಿಗದೆ ಉಗ್ರರ ಕ್ಯಾಂಪ್ ಹೊಡೆದುರುಳಿಸಲಾಗಿದೆ. 

25 ನಿಮಿಷ, 24 ಸ್ಟ್ರೈಕ್ , 9 ಉಗ್ರರ ನೆಲೆ ಧ್ವಂಸ; ವಿಡಿಯೋ ರಿಲೀಸ್ ಮಾಡಿದ ಭಾರತೀಯ ಸೇನೆ