ಶಾಲಾ ಸಮವಸ್ತ್ರ ಹರಿದಿದ್ದರೂ, ಅಜ್ಜನ ಪಿಂಚಣಿ ಬಂದ ನಂತರವೇ ಹೊಸತು ಎಂದು ಹೇಳಿದ ಅನಾಥ ಬಾಲಕನ ಮಾತುಗಳು ಶಿಕ್ಷಕರ ಹೃದಯವನ್ನು ಕರಗಿಸಿವೆ. ಮರುದಿನವೇ ಶಿಕ್ಷಕರು ಆ ಬಾಲಕನಿಗೆ ಹೊಸ ಬಟ್ಟೆ ಹಾಗೂ ಇನ್ನಿತರ ಉಡುಗೊರೆಗಳನ್ನು ನೀಡಿ ಅಚ್ಚರಿ ಮೂಡಿಸಿದ್ದು, ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.

ಯುನಿಫಾರ್ಮ್ ಯಾಕೆ ಧರಿಸಿಲ್ಲ ಅಂದ್ರೆ ಅಪ್ಪ-ಅಮ್ಮ ಇಲ್ಲ ಸರ್. ಅಜ್ಜನಿಗೆ ಪಿಂಚಣಿ ಬಂದ್ರೆ ಮಾತ್ರ ಹೊಸ ಬಟ್ಟೆ ಎಂದ ಪುಟ್ಟ ಕಂದಮ್ಮನ ವಿಡಿಯೋ ನೋಡುಗರ ಹೃದಯವನ್ನು ಭಾರವಾಗಿಸಿದೆ. ಕೆಲವರ ಕಣ್ಣಂಚಲಿ ನೀರು ಬಂದಿದೆ. ಈ ಬಾಲಕನ ವಿಡಿಯೋ ನೋಡಿದ ನೆಟ್ಟಿಗರು ಮಮ್ಮಲ ಮರುಗಿದ್ದು, ಸಹಾಯ ಮಾಡುವ ಭರವಸೆಯನ್ನು ಸಹ ನೀಡಿದ್ದಾರೆ. ದಿವ್ಯಾ (Divya Gandotra Tandon @divya_gandotra) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಮಾರ್ಚ್ 13ರಂದು ಬಾಲಕನ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಬಾಲಕನ ಮಾತು ಕೇಳಿದ ಶಿಕ್ಷಕರು, ಮರುದಿನ ಆತ ಖುಷಿಯಗುವಂತಹ ಕಾಣಿಕೆಯನ್ನು ನೀಡಿದ್ದಾರೆ. ಅಂದು ಶಾಲೆಯಲ್ಲಿ ಆಗಿದ್ದೇನು ಎಂಬುದನ್ನು ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೈರಲ್ ವಿಡಿಯೋದಲ್ಲಿ ಏನಿದೆ?

ಶಿಕ್ಷಕರು ಬಾಲಕನ್ನು ಕರೆಸಿ, ಯಾಕೆ ನೀನು ಸ್ಕೂಲ್ ಯುನಿಫಾರ್ಮ್ ಬದಲಾಗಿ ಬೇರೆ ಪ್ಯಾಂಟ್ ಹಾಕಿಕೊಂಡು ಬಂದಿದ್ದೀಯಾ ಎಂದು ಕೇಳುತ್ತಾರೆ. ಅದಕ್ಕೆ ಬಾಲಕ ಶಾಲೆಯ ಪ್ಯಾಂಟ್ ಹರಿದಿದೆ ಎಂದು ಹೇಳುತ್ತಾನೆ. ಇದಕ್ಕೆ ಶಿಕ್ಷಕರು, ಹೊಸದನ್ನು ತೆಗೆದುಕೊಳ್ಳಬೇಕಲ್ವಾ ಎಂದು ಪ್ರಶ್ನೆ ಮಾಡುತ್ತಾರೆ. ಪಿಂಚಣಿ ಬಂದ ಕೂಡಲೇ ಅಜ್ಜ ಹೊಸ ಬಟ್ಟೆ ತೆಗೆದುಕೊಡ್ತಾರೆ ಎಂದು ಹೇಳುತ್ತಾರೆ.

ಹೌದಾ, ಅಜ್ಜನಿಗೆ ಪೆನ್ಷನ್ ಬರಬೇಕಾ? ಹಾಗಾದ್ರೆ ನಿಮ್ಮ ತಂದೆ ಏನ್ ಆಡ್ತಾರೆ ಅಂತ ಕೇಳಿದ್ದಕ್ಕೆ ಬಾಲಕ, ಸತ್ತಿದ್ದಾನೆ ಅಂತ ಹೇಳ್ತಾನೆ. ಒಂದು ಕ್ಷಣ ಗಾಬರಿಯಾದ ಶಿಕ್ಷಕ, ಅಮ್ಮ ಎಲ್ಲಿದ್ದಾರೆ ಅಂತ ಕೇಳಿದಾಗ, ಅಮ್ಮನೂ ಇಲ್ಲ. ಆಕೆಯೂ ಸತ್ತಿದ್ದಾಳೆ ಎಂದು ಉತ್ತರಿಸುತ್ತಾನೆ. ಅಪ್ಪ-ಅಮ್ಮ ಇಲ್ಲ ಅಂತ ಕೇಳ್ತಿದ್ದಂತೆ ಶಿಕ್ಷಕ, ಬೇರೆ ಮಕ್ಕಳಿಗೆ ಈತನಿಗೆ ತಾಯಿ-ತಂದೆ ಇಲ್ಲವಾ ಎಂದು ಕೇಳಿದಾಗ ಎಲ್ಲರೂ ಇಲ್ಲ ಎಂದು ಉತ್ತರಿಸುತ್ತಾರೆ.

ಮರುದಿನ ಬಾಲಕನಿಗೆ ಸಿಕ್ತು ಸರ್ಪೈಸ್

ಅಪ್ಪ-ಅಮ್ಮನಿಲ್ಲದ ಬಾಲಕನ ಕಥೆ ಕೇಳಿ ಮರುಗಿದ ಶಿಕ್ಷಕ, ಮರುದಿನ ಆತ ಖುಷಿಯಾಗುವಂತಹ ಉಡುಗೊರೆಯನ್ನು ನೀಡಿದ್ದಾರೆ. ಕ್ಲಾಸ್‌ರೂಮ್‌ಗೆ ಬರುತ್ತಿದ್ದಂತೆ ರಾಜ್ ಬಂದಿದ್ದಾನಾ ಎಂದು ಶಿಕ್ಷಕ ಕೇಳುತ್ತಾರೆ. ಶಿಕ್ಷಕನ ಬಳಿ ಬರುವ ರಾಜ್‌ಗೆ, ಹೊಸ ಬಟ್ಟೆ, ಪೆನ್, ಪುಸ್ತಕ ಮತ್ತು ಬಣ್ಣದ ಪೆನ್ಸಿಲ್‌ಗಳನ್ನು ನೀಡಿದ್ದಾರೆ. ಅಲ್ಲಿಯೇ ರಾಜ್‌ಗೆ ಹೊಸಬಟ್ಟೆ ತೊಡಿಸಿದ್ದಾರೆ. ತನಗೆ ಸಿಕ್ಕ ಗಿಫ್ಟ್‌ನಿಂದ ರಾಜ್ ಖುಷಿಯಾಗಿದ್ದಾನೆ.

ಇದನ್ನೂ ಓದಿ:  ಶ್ರೀಶೈಲ ಭಕ್ತರಿಗಾಗಿ ನಿದ್ದೆಯೂ ಮಾಡ್ತಿಲ್ಲ ಕೊಪ್ಪಳದ ವೆಂಕೊಬಾ ಕಾಕಾ; ಇವರೇ ಮಲ್ಲಯ್ಯ ಎಂದ ಜನ್ರು

ಇನ್ನೊಂದು ವಿಡಿಯೋದಲ್ಲಿ ರಾಜ್‌ ಮನೆಗೆ ಭೇಟಿ ನೀಡಿರುವ ವ್ಯಕ್ತಿ, ಬಾಲಕನಿಗೆ ಹೊಸ ಬಟ್ಟೆ ಜೊತೆಗೆ ಬ್ಯಾಟ್ ನೀಡಿದ್ದಾರೆ. ನಂತರ ಅವರೇ ಬೌಲ್‌ಗೆ ರಾಜ್ ಖುಷಿಯಿಂದ ಬ್ಯಾಟ್ ಬೀಸಿದ್ದಾನೆ. ಮೊಮ್ಮಗನಿಗೆ ಜನರು ತೋರಿಸುತ್ತಿರುವ ಪ್ರೀತಿಯನ್ನು ಕಂಡು ಅಜ್ಜ-ಅಜ್ಜಿ ಭಾವುಕರಾಗಿದ್ದಾರೆ. ಈ ಎರಡು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಾಜ್ ಎಲ್ಲಿಯವನು ಎಂದು ತಿಳಿದು ಬಂದಿಲ್ಲ.

ಇದನ್ನೂ ಓದಿ: ಕೊಟ್ಟೂರಿನ 'ಕಂಪ್ಯೂಟರ್' ಮ್ಯಾನ್‌ ಲೆಕ್ಕದ ಮಾಯಾಜಾಲ; ಗುಟ್ಟು ರಟ್ಟು ಮಾಡಿದ ಮಗ್ಗಿ ಅಜ್ಜಯ್ಯ

Scroll to load tweet…