MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಕೊಟ್ಟೂರಿನ 'ಕಂಪ್ಯೂಟರ್' ಮ್ಯಾನ್‌ ಲೆಕ್ಕದ ಮಾಯಾಜಾಲ; ಗುಟ್ಟು ರಟ್ಟು ಮಾಡಿದ ಮಗ್ಗಿ ಅಜ್ಜಯ್ಯ

ಕೊಟ್ಟೂರಿನ 'ಕಂಪ್ಯೂಟರ್' ಮ್ಯಾನ್‌ ಲೆಕ್ಕದ ಮಾಯಾಜಾಲ; ಗುಟ್ಟು ರಟ್ಟು ಮಾಡಿದ ಮಗ್ಗಿ ಅಜ್ಜಯ್ಯ

ಕೊಟ್ಟೂರಿನ 'ಕಂಪ್ಯೂಟರ್ ಮ್ಯಾನ್' ಎಂದು ಖ್ಯಾತರಾದ ಮಗ್ಗಿ ಅಜ್ಜಯ್ಯ, ಅದ್ಭುತ ಗಣಿತ ಕೌಶಲ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಕೇವಲ 8ನೇ ತರಗತಿ ಓದಿ ಭಿಕ್ಷಾಟನೆ ಮಾಡುವ ಇವರ, ಸಂಖ್ಯೆಗಳೊಂದಿಗೆ ಆಟವಾಡುವ ಮತ್ತು ಕ್ಷಣಾರ್ಧದಲ್ಲಿ ಲೆಕ್ಕ ಮಾಡುವ ವಿಧಾನದ ರಹಸ್ಯವು ಇದೀಗ ಬಹಿರಂಗವಾಗಿದೆ.

2 Min read
Author : Mahmad Rafik
Published : Mar 10 2026, 10:14 AM IST
Share this Photo Gallery
  • FB
  • TW
  • Linkdin
  • Whatsapp
15
ಕೊಟ್ಟೂರಿನ ಮಗ್ಗಿ ಅಜ್ಜಯ್ಯ
Image Credit : halekotturu Instagram

ಕೊಟ್ಟೂರಿನ ಮಗ್ಗಿ ಅಜ್ಜಯ್ಯ

ಕರ್ನಾಟಕದ ಕಂಪ್ಯೂಟರ್ ಮ್ಯಾನ್ ಕೊಟ್ಟೂರಿನ ಮಗ್ಗಿ ಅಜ್ಜಯ್ಯ ಕೊಟ್ರಯ್ಯ ಅವರ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ಮಾಡಿರುವ ಕಂಟೆಂಟ್ ಕ್ರಿಯೇಟರ್, ಮಗ್ಗಿ ಅಜ್ಜಯ್ಯ ಹೇಗೆ ಸಂಖ್ಯೆಗಳೊಂದಿಗೆ ಆಟವಾಡುತ್ತಾರೆ ಎಂಬುದದನ್ನು ರಿವೀಲ್ ಮಾಡಿದ್ದಾರೆ. ಸ್ವತಃ ತಮ್ಮ ಲೆಕ್ಕಾಚಾರದ ವಿಧಾನವನ್ನು ಅಜ್ಜಯ್ಯ ಯಾವುದೇ ಹಿಂಜರಿಕೆಯಿಲ್ಲದೇ ತಿಳಿಸಿದ್ದಾರೆ.

25
8ನೇ ತರಗತಿ ಓದಿರುವ ಅಜ್ಜ
Image Credit : halekotturu Instagram

8ನೇ ತರಗತಿ ಓದಿರುವ ಅಜ್ಜ

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಗಂಗಮ್ಮನಹಳ್ಳಿಯ ಅಜ್ಜಯ್ಯ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ. ಕೇವಲ 8ನೇ ತರಗತಿ ಓದಿರುವ ಅಜ್ಜ, ಗಣಿತದ ವಿದ್ಯಾರ್ಥಿಗಳು ನಾಚುವಂತೆ ಲೆಕ್ಕ ಮಾಡುತ್ತಾರೆ. ಅಜ್ಜಯ್ಯನವರ ಲೆಕ್ಕಕ್ಕೆ ಮೆಚ್ಚುಗೆ ಸೂಚಿಸಿ ಒಂದಿಷ್ಟು ಹಣವನ್ನು ನೀಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರತಿಭೆಯೊಂದು ಭಿಕ್ಷೆ ಬೇಡುತ್ತಿದೆ ಎಂಬ ಮಾತುಗಳು ಕೇಳಿಬಂದಿದೆ.

Related Articles

Related image1
ನಿಯಂತ್ರಣ ತಪ್ಪಿ ಪಲ್ಟಿಯಾದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್; 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯ
Related image2
ಕೊಟ್ಟೂರಿನ 'ಮಗ್ಗಿ ಅಜ್ಜಯ್ಯ'ನ ಗಣಿತದ ಚಮತ್ಕಾರ! ಇವರ ಟ್ಯಾಲೆಂಟ್‌ ಮುಂದೆ ಕಂಪ್ಯೂಟರ್‌ ಸ್ಲೋ
35
ಮಗ್ಗಿ ಅಜ್ಜಯ್ಯನ ಲೆಕ್ಕದ ಗುಟ್ಟು
Image Credit : halekotturu Instagram

ಮಗ್ಗಿ ಅಜ್ಜಯ್ಯನ ಲೆಕ್ಕದ ಗುಟ್ಟು

ಕೊಟ್ರಯ್ಯ ಅಜ್ಜಯ್ಯನವರ ವಿಡಿಯೋವನ್ನು halekotturu ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ಹಿಂದಿನ ವಿಡಿಯೋಗೆ ಇಲ್ಲಿವರೆಗೆ 21 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಎರಡನೇ ವಿಡಿಯೋದಲ್ಲಿ ಮಗ್ಗಿ ಅಜ್ಜಯ್ಯ ಹೇಗೆ ಲೆಕ್ಕ ಮಾಡ್ತಾರೆ ಎಂಬುದನ್ನು ಕಂಟೆಂಟ್ ಕ್ರಿಯೇಟರ್ ವಿಜಯ್ ಕುಮಾರ್ ತಮ್ಮ ಪೋಸ್ಟ್‌ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.

45
ಪೋಸ್ಟ್‌ ಈ ರೀತಿಯಾಗಿದೆ
Image Credit : halekotturu Instagram

ಪೋಸ್ಟ್‌ ಈ ರೀತಿಯಾಗಿದೆ

ಕೊನೆಗೂ ಅಜ್ಜನವರ Tricks ಗೊತ್ತಾಯಿತು. ಅವರು ಎರಡು ಅಂಕಿದು ಹೇಳಿದಾರೆ ನಾನು ಮೂರು ಅಂಕಿದು ತೊರಸ್ತಿನಿ ನೋಡಿ.

125x123 = 15375

ಮೊದಲು 125ನ್ನು 12 ಸಾರಿ ಕೂಡಿಸಿ ಅಥವಾ 125x 12 ಮಾಡಿ

ಆಗ ನಿಮಿಗೆ 1500 ಬರುತ್ತದೆ ಅದಕ್ಕೆ 0 ಸೇರಿಸಿ ಆಗ 15000 ಆಗುತ್ತದೆ.

15000 ಕ್ಕೆ ಮೂರು ಬಾರಿ 125 ಕುಡಿಸಿ ಅಂದರೆ 15000+125+125+125 = 15375 Final Result ಸಿಗುತ್ತದೆ. ಇದನ್ನ ಅವರು ಅಷ್ಟು ಬೇಗ ಹೇಳಲು ಕಾರಣ ಅವರು ಆ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾರೆ ಅಷ್ಟೇ ಅವರಿಗೆ ವಯಸ್ಸಾದ ಕಾರಣ ಕೆಲವೊಮ್ಮೆ ತಪ್ಪುತ್ತಾರೆ. ಈಗ ಅವರಿಗೆ ಸುಮಾರು 70 ವರ್ಷ.

ಇದನ್ನೂ ಓದಿ: ಕನಸು ನನಸು ಆಯ್ತು ಅಂತ ನಿಟ್ಟುಸಿರುವ ಬಿಡುವಷ್ಟರಲ್ಲಿ ವರನಿಗೆ ಬಿಗ್ ಶಾಕ್ ನೀಡಿದ ವಧು

55
ವಿಡಿಯೋಗೆ ಕಮೆಂಟ್
Image Credit : halekotturu Instagram

ವಿಡಿಯೋಗೆ ಕಮೆಂಟ್

ಸದ್ಯ ಅಜ್ಜಯ್ಯನವರ ಎರಡನೇ ವಿಡಿಯೋ ಸಹ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು, ಇವರು ನಿಜವಾಗ್ಲೂ ಸರಸ್ವತಿ ಪುತ್ರರು. ಒಂದೊಳ್ಳೆ ಅವಕಾಶ ಸಿಕಿದ್ರೆ ಇವರು ಉನ್ನತ ಸ್ಥಾನದಲ್ಲಿರುತ್ತಿದ್ದರು. ಈ ಅಜ್ಜ ಸೂಪರ್ ಮಾನವ ಕ್ಯಾಲ್ಯೋಲೇಟರ್. ಅಜ್ಜ ನಾನು ಕೊಟ್ಟೂರಿಗೆ ಬಂದಾಗ ನಿಮ್ಮನ್ನು ಭೇಟಿಯಾಗುತ್ತೇನೆ. ಹಿರಿ ಜೀವಕ್ಕೆ ಇವರ ಜ್ಞಾನಕ್ಕೆ ನಾನು ದೂರದದಿಂದಲೇ ನಮಸ್ಕರಿಸುವೆ ಎಂದು ನೂರಾರು ಕಮೆಂಟ್‌ಗಳು ಬಂದಿವೆ.

ಇದನ್ನೂ ಓದಿ: Shivamogga: ಬಾವಿ ಕಳೆದು ಹೋಗಿದೆ ಹುಡುಕಿ ಕೊಡಿ: ಕುಡುಮಲ್ಲಿಗೆ ಗ್ರಾಮಸ್ಥರ ಪ್ರತಿಭಟನೆ

 
 
 
 
View this post on Instagram
 
 
 
 
 
 
 
 
 
 
 

A post shared by HALEKOTTURU (Around Kotturu) (@halekotturu)

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವಿಜಯನಗರ
ವೈರಲ್ ವಿಡಿಯೋ

Latest Videos
Recommended Stories
Recommended image1
ಒಂದೇ ಕೇಸಲ್ಲಿ 4 MLC ಕೊಟ್ಟು ವಿಮಾ ಕಂಪನಿಗೆ ವಂಚಿಸಲು ಯತ್ನ: ವೈದ್ಯರ ವಿರುದ್ಧ ತನಿಖೆಗೆ ತಡೆಕೋರಲು ನಿರಾಕರಿಸಿದ ಹೈಕೋರ್ಟ್‌
Recommended image2
ರಾಮನಗರಕ್ಕೂ ಬಂತು ಬಟ್ಟೆ ಬ್ಯಾಗ್ ಎಟಿಎಂ ಮಷಿನ್! ಎಪಿಎಂಸಿಯಲ್ಲಿ ಪ್ರಾಯೋಗಿಕ ಪ್ರಯತ್ನ
Recommended image3
ಎತ್ತಿನಹೊಳೆ, ಮೇಕೆದಾಟು ವಿಳಂಬಕ್ಕೆ ರಾಜ್ಯ ಸರ್ಕಾರ ಕಾರಣ: ದೇವೇಗೌಡ
Related Stories
Recommended image1
ನಿಯಂತ್ರಣ ತಪ್ಪಿ ಪಲ್ಟಿಯಾದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್; 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯ
Recommended image2
ಕೊಟ್ಟೂರಿನ 'ಮಗ್ಗಿ ಅಜ್ಜಯ್ಯ'ನ ಗಣಿತದ ಚಮತ್ಕಾರ! ಇವರ ಟ್ಯಾಲೆಂಟ್‌ ಮುಂದೆ ಕಂಪ್ಯೂಟರ್‌ ಸ್ಲೋ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved