- Home
- News
- India News
- ಬೆಂಗಳೂರು, ಮೈಸೂರು- ಚೆನ್ನೈ ನಡುವಿನ 42 ರೈಲುಗಳು 2 ತಿಂಗಳು ರದ್ದು: ಫುಲ್ ಡಿಟೇಲ್ಸ್ ಇಲ್ಲಿದೆ
ಬೆಂಗಳೂರು, ಮೈಸೂರು- ಚೆನ್ನೈ ನಡುವಿನ 42 ರೈಲುಗಳು 2 ತಿಂಗಳು ರದ್ದು: ಫುಲ್ ಡಿಟೇಲ್ಸ್ ಇಲ್ಲಿದೆ
ಬೆಂಗಳೂರು ಕಂಟೋನ್ಮೆಂಟ್ ಮತ್ತು ವೈಟ್‌ಫೀಲ್ಡ್ ನಡುವಿನ ನಿರ್ವಹಣಾ ಕಾರ್ಯದಿಂದಾಗಿ, ನೈಋತ್ಯ ರೈಲ್ವೆ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ 42 ರೈಲುಗಳನ್ನು ರದ್ದುಗೊಳಿಸಿದೆ. ಚೆನ್ನೈ, ಬೆಂಗಳೂರು, ಮೈಸೂರು ಮತ್ತು ಯಶವಂತಪುರ ನಡುವೆ ಸಂಚರಿಸುವ ಈ ರೈಲುಗಳ ರದ್ದತಿಯಿಂದ ಪ್ರಯಾಣವನ್ನು ಮರುಯೋಜಿಸಬೇಕಿದೆ.

ನಿರ್ವಹಣಾ ಕಾರ್ಯದಿಂದಾಗಿ ರದ್ದು
ಬೆಂಗಳೂರು ಕಂಟೋನ್ಮೆಂಟ್ ಮತ್ತು ವೈಟ್‌ಫೀಲ್ಡ್ ರೈಲು ನಿಲ್ದಾಣಗಳ ನಡುವಿನ ನಿರ್ವಹಣಾ ಕಾರ್ಯದಿಂದಾಗಿ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಚೆನ್ನೈನಿಂದ ಬೆಂಗಳೂರು, ಮೈಸೂರು ಮತ್ತು ಯಶವಂತಪುರಕ್ಕೆ ಬರುವ 42 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ರದ್ದಾದ ರೈಲುಗಳ ವಿವರಗಳು: ರೈಲು ಸಂಖ್ಯೆ: 16021
ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಅಶೋಕಪುರಂ (ಮೈಸೂರು) ಎಕ್ಸ್‌ಪ್ರೆಸ್ ರೈಲು
(MGR ಚೆನ್ನೈ ಸೆಂಟ್ರಲ್ - ಮೈಸೂರು ಎಕ್ಸ್‌ಪ್ರೆಸ್)
ರದ್ದಾದ ದಿನಾಂಕ: ಜೂನ್ 4, 6, 9, 10, 11, 21, 26, ಜುಲೈ 2, 5, 6
ರೈಲು ಸಂಖ್ಯೆ: 16022
ಅಶೋಕಪುರಂ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು
(ಮೈಸೂರು ಎಕ್ಸ್‌ಪ್ರೆಸ್ - ಎಂಜಿಆರ್ ಚೆನ್ನೈ ಸೆಂಟ್ರಲ್)
ರದ್ದಾದ ದಿನಾಂಕ: ಜೂನ್ 4, 5, 6, 7, 10, 11, 12, 22, 23, 24, 25, 26, 27 ಮತ್ತು ಜುಲೈ 3, 6, 7
ರೈಲು ಸಂಖ್ಯೆ: 12658 ಮತ್ತು ರೈಲು ಸಂಖ್ಯೆ: 20624
ಕೆಎಸ್ಆರ್ ಬೆಂಗಳೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಚೆನ್ನೈ
ರದ್ದಾದ ದಿನಾಂಕ: ಜೂನ್ 4, 5, 6, 7, 10, 11, 12, 22, 27 ಮತ್ತು ಜುಲೈ 3, 6, 7
ರೈಲು ಸಂಖ್ಯೆ: 20624
KSR ಬೆಂಗಳೂರು-ಅಶೋಕಪುರಂ ಎಕ್ಸ್‌ಪ್ರೆಸ್ ರೈಲು
ರದ್ದಾದ ದಿನಾಂಕ: ಜೂನ್ 4, 5,6,7,10,11,12, 22, 25, 27 ಮತ್ತು ಜುಲೈ 3, 6, 7
ರೈಲು ಸಂಖ್ಯೆ: 12657- ಮತ್ತು ರೈಲು ಸಂಖ್ಯೆ: 22682
ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು
ರದ್ದಾದ ದಿನಾಂಕ: ಜೂನ್ 5, 6, 7, 8, 11, 12, 13, 23, 28 ಮತ್ತು ಜುಲೈ 4, 7, 8
ರೈಲು ಸಂಖ್ಯೆ: 22682
ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಎಕ್ಸ್‌ಪ್ರೆಸ್ ರೈಲು
ರದ್ದಾದ ದಿನಾಂಕ: ಜೂನ್ 11
ರೈಲು ಸಂಖ್ಯೆ: 12291 ಮತ್ತು ರೈಲು ಸಂಖ್ಯೆ: 22681
ಯಶವಂತಪುರ ವೈಪಿಆರ್ -ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು
ರದ್ದಾದ ದಿನಾಂಕ: ಜೂನ್ 5, 12 ಮತ್ತು ಜುಲೈ 3
ರೈಲು ಸಂಖ್ಯೆ: 22681
ಮೈಸೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು
ರದ್ದಾದ ದಿನಾಂಕ: ಜೂನ್ 10
ರೈಲು ಸಂಖ್ಯೆ 12292 ಮತ್ತು ರೈಲು ಸಂಖ್ಯೆ - 07313
ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಯಶವಂತಪುರಂ ಎಕ್ಸ್‌ಪ್ರೆಸ್ ರೈಲು
ರದ್ದಾದ ದಿನಾಂಕ: ಜೂನ್ 6, 13 ಮತ್ತು ಜುಲೈ 13
ರೈಲು ಸಂಖ್ಯೆ - 07313
ಎಸ್.ಎಸ್.ಎಸ್. ಹುಬ್ಬಳ್ಳಿ-ಕೊಲ್ಲಂ ಎಕ್ಸ್‌ಪ್ರೆಸ್ ರೈಲು
ರದ್ದಾದ ದಿನಾಂಕ: ಜೂನ್ 7
ಒಟ್ಟು 42 ರೈಲುಗಳು
ಈ ರೈಲುಗಳು ಸೇರಿದಂತೆ ಒಟ್ಟು 42 ರೈಲುಗಳನ್ನು ಈ ತಿಂಗಳು ಮತ್ತು ಮುಂದಿನ ತಿಂಗಳು ನಿರ್ದಿಷ್ಟ ದಿನಾಂಕಗಳಲ್ಲಿ ರದ್ದುಗೊಳಿಸಲಾಗುವುದು. ಇದರ ಜೊತೆಗೆ, 7 MEMU ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುವುದು ಮತ್ತು 23 ಎಕ್ಸ್‌ಪ್ರೆಸ್ ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗುವುದು. ನಿರ್ದಿಷ್ಟ ದಿನಾಂಕಗಳಲ್ಲಿ ಈ ರೈಲುಗಳಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಅದಕ್ಕೆ ಅನುಗುಣವಾಗಿ ಬದಲಾಯಿಸಲು ವಿನಂತಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

