ಗುಜರಾತ್ ಚುನಾವಣಾ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಧುಮುಕಿದ್ದಾರೆ. ಭಾನುವಾರ ಮೆಹ್ಸಾನದಲ್ಲಿ ಭಾಷಣ ಮಾಡಿದ ಅವರು, ‘ನಾನು ಈ ಹೊಸ ಗುಜರಾತ್‌ನ ನಿರ್ಮಾತೃ’ ಎಂಬ ಹೊಸ ಉದ್ಘೋಷ ಮಾಡಿದ್ದಾರೆ.
ಅಹಮದಾಬಾದ್: ಗುಜರಾತ್ ಚುನಾವಣಾ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಧುಮುಕಿದ್ದಾರೆ. ಭಾನುವಾರ ಮೆಹ್ಸಾನದಲ್ಲಿ ಭಾಷಣ ಮಾಡಿದ ಅವರು, ‘ನಾನು ಈ ಹೊಸ ಗುಜರಾತ್‌ನ ನಿರ್ಮಾತೃ’ ಎಂಬ ಹೊಸ ಉದ್ಘೋಷ ಮಾಡಿದ್ದಾರೆ. ಅಲ್ಲದೇ, ‘ದ್ವೇಷ ಹರಡುತ್ತಿರುವ ಮತ್ತು ಗುಜರಾತ್‌ನ ಮಾನಹಾನಿಗೆ ಕಾರಣವಾಗುತ್ತಿರುವವರನ್ನು ಜನ ಹೊರದಬ್ಬಲಿದ್ದಾರೆ’ ಎಂದು ಹೇಳಿದ್ದಾರೆ.
ರಾಜ್ಯ ಚುನಾವಣೆ (Gujarat Election) ಘೋಷಣೆಯಾದ ಬಳಿಕ ಮೊದಲ ಬಿಜೆಪಿ ರಾರಯಲಿಯಲ್ಲಿ ಮಾತನಾಡಿದ ಅವರು, ‘ರಾಜ್ಯ 20 ವರ್ಷದಲ್ಲಿ ಭಾರಿ ಪ್ರಗತಿ ಸಾಧಿಸಿದೆ. ಪ್ರತಿ ಗುಜರಾತಿ ವ್ಯಕ್ತಿ ಇಂದು ಸಂಪೂರ್ಣ ಆತ್ಮವಿಶ್ವಾಸದಿಂದ ಕೂಡಿದ್ದಾನೆ. ಪ್ರತಿ ಗುಜರಾತಿ ‘ನಾನು ಹೊಸ ಗುಜರಾತ್ ನಿರ್ಮಾತೃ’ ಎಂದು ಹೇಳುತ್ತಿದ್ದಾನೆ. ಕಠಿಣ ಶ್ರಮದ ಮೂಲಕ ರಾಜ್ಯವನ್ನು ಜನರು ಕಟ್ಟಿದ್ದಾರೆ. ಜನರು ಅಂತರಾತ್ಮದಲ್ಲೇ ವಿಶ್ವಾಸ ಹೊರಹೊಮ್ಮುತ್ತಿದೆ. ಹೀಗಾಗಿ ‘ನಾನು ಹೊಸ ಗುಜರಾತ್ ನಿರ್ಮಾತೃ’ ಎಂದು ಅವರ ಅಂತರಾತ್ಮವೇ ಹೇಳುತ್ತಿದೆ’ ಎಂದರು. ತಮ್ಮ 25 ನಿಮಿಷಗಳ ಭಾಷಣದಲ್ಲಿ ‘ನಾನು ಹೊಸ ಗುಜರಾತ್ ನಿರ್ಮಾತೃ’ ಉದ್ಘೋಷವನ್ನು ಹಲವು ಬಾರಿ ಬಳಕೆ ಮಾಡಿ ನೆರೆದ ಜನರಿಂದಲೂ ಹೇಳಿಸಿದರು.
ದ್ವೇಷ ಹರಡುವ, Gujarat ಮಾನಹಾನಿ ಮಾಡುವವರನ್ನು ಹೊರಹಾಕಲಾಗುತ್ತದೆ: ಪ್ರಧಾನಿ ಮೋದಿ
‘ದ್ವೇಷ ಹರಡುವವರನ್ನು ಗುಜರಾತಿನ ಜನ ಪ್ರತಿ ಬಾರಿ ಹೊರದಬ್ಬಿದ್ದಾರೆ. ಈ ವರ್ಷವೂ ಅವರು ಇದನ್ನೇ ಅನುಭವಿಸಲಿದ್ದಾರೆ. ಗುಜರಾತಿನಲ್ಲಿ ಬಿಜೆಪಿ ದಾಖಲೆಯ ಜಯ ಸಾಧಿಸಲಿದೆ ಎಂಬ ಮಾಹಿತಿಯನ್ನು ದೆಹಲಿಯಲ್ಲೇ ಕುಳಿತು ಪಡೆದಿದ್ದೇನೆ. ಆದರೆ ಈಗ ಇಲ್ಲಿಗೆ ಬಂದಿರುವುದು ಹಿಂದಿನ ಗೆಲುವಿನ ದಾಖಲೆಗಳನ್ನು ಮುರಿಯಲು. ನಾನು ಈಗಾಗಲೇ ಹೇಳಿದ್ದೇನೆ, ಗುಜರಾತ್‌ಗೆ ಏನೆಲ್ಲಾ ಕೊಡಲು ಸಾಧ್ಯವೋ ಅದೆಲ್ಲವನ್ನೂ ನಾನು ಕೊಡುತ್ತೇನೆ’ ಎಂದು ಹೇಳಿದರು.
ಕಾಂಗ್ರೆಸ್ ಬಗ್ಗೆ ಆಜಾದ್ ಪ್ರಶಂಸೆ
ಶ್ರೀನಗರ: ಇತ್ತೀಚೆಗೆ ಕಾಂಗ್ರೆಸ್ ತೊರೆದಿದ್ದ ಹಿರಿಯ ಮುಖಂಡ ಗುಲಾಂ ನಬಿ ಆಜಾದ್(Ghulam Nabi Azad), ತಮ್ಮ ಮಾತೃ ಪಕ್ಷವನ್ನು ಪ್ರಶಂಸಿಸಿದ್ದಾರೆ. ಭಾನುವಾರ ಮಾತನಾಡಿದ ಅವರು, ‘ಗುಜರಾತ್‌ನಲ್ಲಿ ಬಿಜೆಪಿಗೆ ಸವಾಲು ಹಾಕುವ ಶಕ್ತಿ ಕಾಂಗ್ರೆಸ್‌ಗೆ ಮಾತ್ರ ಇದೆ. ಆಪ್ ಕೇವಲ ದಿಲ್ಲಿ ಕೇಂದ್ರಿತ ಪಕ್ಷ’ ಎಂದಿದ್ದಾರೆ. ನಾನು ಕಾಂಗ್ರೆಸ್ಸಿಂದ ಪ್ರತ್ಯೇಕ ಆಗಿದ್ದರೂ ಅದರ ಜಾತ್ಯತೀತ ನಿಲುವಿನ ವಿರುದ್ಧ ಇಲ್ಲ. ಪಕ್ಷದಲ್ಲಿನ ವ್ಯವಸ್ಥೆ ಬಗ್ಗೆ ಮಾತ್ರ ನಾನು ವಿರೋಧ ಹೊಂದಿದ್ದೇನೆ. ಗುಜರಾತ್, ಹಿಮಾಚಲದಲ್ಲಿ (Himachal) ಪಕ್ಷ ಉತ್ತಮ ಸಾಧನೆ ಮಾಡಬೇಕು ಎಂಬ ಆಸೆ ಹೊಂದಿದ್ದೇನೆ. ಆಪ್‌ನಿಂದ ಇದು ಸಾಧ್ಯವಿಲ್ಲ’ ಎಂದಿದ್ದಾರೆ.
ಗುಜರಾತ್ ಚುನಾವಣೆಯಿಂದ ಹಿಂದೆ ಸರಿಯಲು ಬಿಜೆಪಿ ಆಮಿಷ: ಕೇಜ್ರಿ ಬಾಂಬ್
ಹಿಮಾಚಲ ಬಿಜೆಪಿ ಬಂಡಾಯ ಅಭ್ಯರ್ಥಿಗಳ ಮೇಲೆ ಮೋದಿ ಒತ್ತಡ ಆರೋಪ
ಇತ್ತ ಹಿಮಾಚಲ ಪ್ರದೇಶದಲ್ಲಿ (Himachal Pradesh) ಪಕ್ಷದ ವಿರುದ್ಧ ಬಂಡೆದ್ದ ನಾಯಕರಿಗೆ, ಚುನಾವಣೆಗೆ ಸ್ಪರ್ಧಿಸದಂತೆ ಪ್ರಧಾನಿ ನರೇಂಂದ್ರ ಮೋದಿ ಒತ್ತಡ ಹೇರುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿ ಬಂಡಾಯ ಅಭ್ಯರ್ಥಿ ಕೃಪಾಲ್ ಪಾರ್ಮರ್‌ಗೆ (Kripal parmer) ಮೋದಿ ಧ್ವನಿಯನ್ನು ಹೋಲುವ ವ್ಯಕ್ತಿಯೊಬ್ಬರು ಕರೆ ಮಾಡಿ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯದಂತೆ ಸೂಚಿಸುವ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದ್ದು ಅದನ್ನು ಆಧರಿಸಿ ಕಾಂಗ್ರೆಸ್ ನಾಯಕ (Congress leader) ಅಭಿಷೇಕ್ ಮನು ಸಿಂಘ್ವಿ (Abhishek Manu Singhvi) ಈ ಆರೋಪ ಮಾಡಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಅವರು ಕೃಪಾಲ್‌ಗೆ ದೂರವಾಣಿ ಕರೆ ಮಾಡಿ ಒತ್ತಡ ಹೇರಿದ್ದಲ್ಲದೆ, ಭಾವನಾತ್ಮಕವಾಗಿ ಬ್ಲಾಕ್‌ಮೇಲ್ ಮಾಡಿದ್ದಾರೆ. ಇದು ಬಿಜೆಪಿ ಮತ್ತು ನರೇಂದ್ರ ಮೋದಿ ಅವರಿಗೆ ಆಡಳಿತಕ್ಕಿಂತ ಚುನಾವಣೆಯೇ ಮುಖ್ಯ ಎಂಬುದನ್ನು ಸಾಬೀತುಪಡಿಸಿದೆ’ ಎಂದು ಹೇಳಿದ್ದಾರೆ.
