ಪ್ರತಿಯೊಬ್ಬ ಗುಜರಾತಿಯೂ ಆತ್ಮಸ್ಥೈರ್ಯ ತುಂಬಿಕೊಂಡಿದ್ದಾರೆ, ಅದಕ್ಕಾಗಿಯೇ ಪ್ರತಿಯೊಬ್ಬ ಗುಜರಾತಿ ಮಾತನಾಡುತ್ತಾರೆ, ನಮ್ಮೊಳಗಿನ ಆತ್ಮದ ಧ್ವನಿ ಮಾತನಾಡುತ್ತದೆ, ಪ್ರತಿ ಶಬ್ದವು ಗುಜರಾತ್‌ನ ಹೃದಯದಿಂದ ಬರುತ್ತದೆ, ನಾನು ಈ ಗುಜರಾತ್ ಅನ್ನು ಮಾಡಿದ್ದೇನೆ ಎಂದು ಪ್ರಧಾನಿ ಮೋದಿ  ಹೇಳಿದರು.

ಗುಜರಾತ್‌ ಚುನಾವಣೆ ಹತ್ತಿರ ಬರುತ್ತಿದ್ದು, ಪ್ರಧಾನಿ ಮೋದಿ ತನ್ನ ತವರು ರಾಜ್ಯದಲ್ಲಿ ಚುನಾವಣಾ ಪ್ರಚಾರವನ್ನು ಬಿರುಸುಗೊಳಿಸಿದ್ದಾರೆ. ಗುಜರಾತ್‌ ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಇಂದು ಮೋದಿ ಬಿಜೆಪಿಯ ಹೊಸ ಚುನಾವಣಾ ಘೋಷ ವಾಕ್ಯಕ್ಕೆ ಚಾಲನೆ ನೀಡಿದ್ದಾರೆ. ಗುಜರಾತಿ ಭಾಷೆಯಲ್ಲಿ ಈ ಘೋಷ ವಾಕ್ಯವನ್ನು ಮೋದಿ ಹೇಳಿದ್ದಾರೆ. ‘’ನಾನು ಈ ಗುಜರಾತನ್ನು ಮಾಡಿದ್ದೇನೆ’’ ಎಂಬುದೇ ಬಿಜೆಪಿಯ ಮುಂಬರುವ ಗುಜರಾತ್‌ ವಿಧಾನಸಭೆ ಚುನಾವಣೆಯ ಘೋಷ ವಾಕ್ಯವಾಗಿದೆ. ಕಪ್ರಡಾದಲ್ಲಿ ನಡೆದ ಸಾರ್ವಜನಿಕ ಸಭೆ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಯೊಬ್ಬ ಗುಜರಾತಿಯೂ ಆತ್ಮಸ್ಥೈರ್ಯ ತುಂಬಿಕೊಂಡಿದ್ದಾರೆ, ಅದಕ್ಕಾಗಿಯೇ ಪ್ರತಿಯೊಬ್ಬ ಗುಜರಾತಿ ಮಾತನಾಡುತ್ತಾರೆ, ನಮ್ಮೊಳಗಿನ ಆತ್ಮದ ಧ್ವನಿ ಮಾತನಾಡುತ್ತದೆ, ಪ್ರತಿ ಶಬ್ದವು ಗುಜರಾತ್‌ನ ಹೃದಯದಿಂದ ಬರುತ್ತದೆ, ನಾನು ಈ ಗುಜರಾತ್ ಅನ್ನು ಮಾಡಿದ್ದೇನೆ ಎಂದು ಹೇಳಿದರು.

"ಆ ಗುಜರಾತ್, ಮೈ ಬನವ್ಯೂ ಛೇ" (ನಾನು ಈ ಗುಜರಾತ್ ಅನ್ನು ಮಾಡಿದ್ದೇನೆ) ಎಂದು ಪ್ರಧಾನಿ ಹೇಳಿದರು ಮತ್ತು ತಮ್ಮ 25 ನಿಮಿಷಗಳ ಭಾಷಣದಲ್ಲಿ ಸಭಿಕರು ಸಹ ಹಲವಾರು ಬಾರಿ ಪಠಣ ಮಾಡಿಡುವಂತೆ ಮೋದಿ ಹೇಳಿದ್ದಾರೆ.

ಇದನ್ನು ಓದಿ: ಗುಜರಾತ್‌ನಲ್ಲಿ ಮಿಲಿಟರಿ ವಿಮಾನ ಘಟಕಕ್ಕೆ PM Narendra Modi ಅಡಿಗಲ್ಲು

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

ಇನ್ನು, ಪ್ರತಿಸ್ಪರ್ಧಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಅವರು ಗುಜರಾತ್‌ ರಾಜ್ಯವನ್ನು "ಮಾನಹಾನಿ" ಮಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ, ಕಳೆದ 20 ವರ್ಷಗಳಿಂದ ರಾಜ್ಯವನ್ನು ದೂಷಿಸುವಲ್ಲಿ ಕಳೆದಿರುವ ವಿಭಜಕ ಶಕ್ತಿಗಳನ್ನು ಗುಜರಾತ್ ನಾಶಪಡಿಸಲಿದೆ ಎಂದೂ ಅವರು ಹೇಳಿದರು. 

ವಲ್ಸಾದ್ ಜಿಲ್ಲೆಯ ಭಾಗವಾಗಿರುವ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಾಗಿರುವ ಕಪ್ರಡಾ ವಿಧಾನಸಭಾ ಕ್ಷೇತ್ರದಿಂದ ಪ್ರಧಾನಿ ತಮ್ಮ ಗುಜರಾತ್ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು. ಬುಡಕಟ್ಟು ಸಮುದಾಯವು ತಮಗೆ ಎಷ್ಟು ಮುಖ್ಯ ಮತ್ತು ಬಿಜೆಪಿ ಪಕ್ಷವು ಅವರಿಗಾಗಿ ಏನು ಮಾಡಿದೆ ಎಂಬುದರ ಬಗ್ಗೆ ಪ್ರಧಾನಿ ಮೋದಿ ಆದಿವಾಸಿ ಸಮುದಾಯಕ್ಕೆ ಹೇಳಿದ್ದಾರೆ. ಈ ಮೂಲಕ ಬುಡಕಟ್ಟು ಸಮುದಾಯದ ಪರ ಪರೋಕ್ಷವಾಗಿ ಮತ ಬೇಟೆ ನಡೆಸಿದ್ದಾರೆ. 

ಇದನ್ನೂ ಓದಿ: Gujarat Elections 2022: ಯಾವ್ಯಾವ ವಯಸ್ಸಿನ ಮತದಾರರ ಒಲವು ಯಾವ ಪಕ್ಷದತ್ತ ಇದೆ ನೋಡಿ..

ಗುಜರಾತ್‌ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ತವರು ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡುತ್ತಿರುವುದು ಇದೇ ಮೊದಲು. ಈ ಮಧ್ಯೆ, ಪ್ರಧಾನಿ ಮೋದಿ ಭಾವನಗರದಲ್ಲಿ 'ಪಾಪಾ ನಿ ಪರಿ' ಲಗ್ನೋತ್ಸವ 2022 ಎಂಬ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಮಡಿದ್ದಾರೆ. ಈ ಸಾಮೂಹಿಕ ಸಮಾರಂಭದಲ್ಲಿ ತಂದೆ ಇಲ್ಲದ 522 ಹೆಣ್ಣು ಮಕ್ಕಳಿಗೆ ವಿವಾಹ ನಡೆದಿದೆ.

ಅಕ್ಟೋಬರ್ 13 ರಂದು ಅಹಮದಾಬಾದ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು "ಗುಜರಾತ್ ಗೌರವ್ ಯಾತ್ರೆ" ಉದ್ಘಾಟಿಸಿದ ನಂತರ ಬಿಜೆಪಿ ತನ್ನ ಚುನಾವಣಾ ಪ್ರಚಾರವನ್ನು ತೀವ್ರಗೊಳಿಸಿದೆ. ಅದಕ್ಕೂ ಒಂದು ದಿನ ಮೊದಲು ಬಿಜೆಪಿ ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಮೆಹ್ಸಾನಾದಲ್ಲಿ 'ಗುಜರಾತ್ ಗೌರವ್ ಯಾತ್ರೆ'ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಅಕ್ಟೋಬರ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್‌ಕೋಟ್ ಜಿಲ್ಲೆಯ ಜಮ್ಕಂದೋರ್ನಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರ‍್ಯಾಲಿ ಬಳಿಕ ರೋಡ್ ಶೋ ಕೂಡ ನಡೆಸಿದರು.

ಇದನ್ನೂ ಓದಿ: ದೆಹಲಿ ಸಿಎಂಗೆ 'ಚೋರ್‌ ಚೋರ್‌', 'ಮೋದಿ ಮೋದಿ' ಘೋಷಣೆ ಕೂಗಿದ ಗುಜರಾತ್‌ ಜನತೆ; ಕಪ್ಪು ಬಾವುಟ ಪ್ರದರ್ಶನ

ಗುಜರಾತ್‌ನಲ್ಲಿ ಡಿಸೆಂಬರ್ 1 ಹಾಗೂ 5 ರಂದು 2 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.