ಖ್ಯಾತ ಯೂಟ್ಯೂಬರ್‌ ಕಾಮಿಯಾ ಜನಿ ಅವರ ಜಗನ್ನಾಥ ದೇಗುಲ ಪ್ರವೇಶ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಭುವನೇಶ್ವರ (ಡಿ.25): ಖ್ಯಾತ ಯೂಟ್ಯೂಬರ್‌ ಕಾಮಿಯಾ ಜನಿ ಅವರ ಜಗನ್ನಾಥ ದೇಗುಲ ಪ್ರವೇಶ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಕಾಮಿಯಾ, ತನ್ನ ಯೂಟ್ಯೂಬ್‌ ವಿಡಿಯೋಗಳಲ್ಲಿ ಗೋಮಾಂಸ ತಿನ್ನುತ್ತಾಳೆ ಮತ್ತು ಭಕ್ಷಣೆಯನ್ನು ಪ್ರಚಾರ ಮಾಡುತ್ತಾಳೆ. ಹೀಗಿರುವಾಗ ಹಿಂದುಯೇತರರಿಗೆ ಪ್ರವೇಶ ಇಲ್ಲದ ಆಕೆಗೆ ಜಗನ್ನಾಥ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದು ಏಕೆ? ಇದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಹಲವು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯದ 700 ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕ ಹುದ್ದೆಗಳು ಖಾಲಿ

ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಕಾಮಿಯಾ, ನಾನು ಎಂದಿಗೂ ಗೋಮಾಂಸ ತಿಂದಿಲ್ಲ. ನನ್ನ ವಿರುದ್ಧ ಗೋಮಾಂಸ ಭಕ್ಷಣೆಯ ಆರೋಪಕ್ಕೆ ಬಳಲಾದ ಫೋಟೋ, ನನ್ನ ಕೇರಳ ಭೇಟಿಯ ವೇಳೆ ಅಲ್ಲಿಯ ಇಬ್ಬರು ಟ್ರಕ್‌ ಚಾಲಕರ ಆರಂಭಿಸಿದ್ದ ಹೋಟೆಲ್‌ನ ದೃಶ್ಯ. ಅಲ್ಲಿ ನಾನು ಗೋಮಾಂಸ ತಿಂದಿಲ್ಲ ಎಂದಿದ್ದಾರೆ. ಜೊತೆಗೆ ಹಿಂದೂ ಧರ್ಮವನ್ನು ಆಚರಣೆ ಮಾಡುವವಳಾಗಿ ಪುರಿ ದೇಗುಲದಲ್ಲಿ ನಡೆಯುತ್ತಿರುವ ‘ಮಹಾಪ್ರಸಾದ’ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಯ ಕುರಿತು ವಿಡಿಯೋ ಮಾಡಲು ಮತ್ತು ಜಗನ್ನಾಥನ ಆಶೀರ್ವಾದ ಪಡೆಯಲು ತೆರಳಿದ್ದು, ದೇಗುಲದ ಯಾವುದೇ ನಿಯಮ ಉಲ್ಲಂಘಿಸಿಲ್ಲ’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸಂದೇಶ ಹಾಕಿದ್ದಾರೆ.

ಯಾರು ಬುರುಡೆ ಬಿಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತು: ಸಿದ್ದುಗೆ ಸಿಂಹ ತಿರುಗೇಟು!