MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಪ್ರಧಾನಿ ನಿವಾಸ ಸಂಸತ್ ಭವನದಿಂದ ಎಷ್ಟು ದೂರದಲ್ಲಿದೆ? ಪ್ರತಿಭಟನೆ ನಡೆಸಲು ಯಾರ ಅನುಮತಿ ಬೇಕು?

ಪ್ರಧಾನಿ ನಿವಾಸ ಸಂಸತ್ ಭವನದಿಂದ ಎಷ್ಟು ದೂರದಲ್ಲಿದೆ? ಪ್ರತಿಭಟನೆ ನಡೆಸಲು ಯಾರ ಅನುಮತಿ ಬೇಕು?

ನೀಟ್ ಪೇಪರ್ ಲೀಕ್ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಳೆದೊಂದು ತಿಂಗಳಿಂದ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್ ಕೂಡ ಮಂಗಳವಾರ ಪ್ರಧಾನಿ ನಿವಾಸ ಎದುರು ಪ್ರತಿಭಟನೆ ನಡೆಸಿ ಹೈಡ್ರಾಮಾ ಸೃಷ್ಟಿಸಿತು.  ಸಂಸತ್ತಿನಿಂದ ಪ್ರಧಾನಿ ನಿವಾಸಕ್ಕೆ ಇರುವ ದೂರವೆಷ್ಟು?

3 Min read
Author : Ravi Janekal
Published : Jul 22 2026, 11:26 AM IST
Share this Photo Gallery
  • FB
  • TW
  • Linkdin
  • Whatsapp
18
ದೆಹಲಿಯಲ್ಲಿ ಸಿಜೆಪಿ ಬಳಿಕ ಕಾಂಗ್ರೆಸ್ ಪ್ರತಿಭಟನೆ ತೀವ್ರ
Image Credit : Asianet News

ದೆಹಲಿಯಲ್ಲಿ ಸಿಜೆಪಿ ಬಳಿಕ ಕಾಂಗ್ರೆಸ್ ಪ್ರತಿಭಟನೆ ತೀವ್ರ

ನೀಟ್ ಪೇಪರ್ ಲೀಕ್ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಳೆದೊಂದು ತಿಂಗಳಿಂದ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ನೇತೃತ್ವದ ಸಿಜೆಪಿ ಪ್ರತಿಭಟನೆ ನಡೆಸುತ್ತಿದ್ದು ಅದೀಗ ಕಳೆದೆರಡು ದಿನಗಳಿಂದ ತೀವ್ರ ಹಿಂಸಾಚಾರಕ್ಕೆ ತಿರುಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಪ್ರಧಾನಿ ನಿವಾಸದ ಬಳಿ ಕಾಂಗ್ರೆಸ್ ಹೈಡ್ರಾಮಾ
Image Credit : Asianet News

ಪ್ರಧಾನಿ ನಿವಾಸದ ಬಳಿ ಕಾಂಗ್ರೆಸ್ ಹೈಡ್ರಾಮಾ

ದೆಹಲಿ ಸಿಜೆಪಿ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದಾರೆ ಇತ್ತ ಕಾಂಗ್ರೆಸ್ ಸಂಸದರು, ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ ಸೇರಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳನ್ನೊಳಗೊಂಡು ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರಧಾನಿ ಮೋದಿ ನಿವಾಸದ ಬಳಿಯೂ ಪ್ರತಿಭಟನೆ ನಡೆಸಿ ಹೈಡ್ರಾಮಾ ಸೃಷ್ಟಿಸಿದೆ. ಈ ಮೊದಲು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಒತ್ತಾಯಿಸಿದ ಸಿಜಿಪಿ, ಕಾಂಗ್ರೆಸ್ ಇದೀಗ ಪ್ರಧಾನಿ ಮೋದಿಯೂ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಹೋರಾಟ ತೀವ್ರಗೊಳಿಸಿವೆ. 

ಕಾಂಗ್ರೆಸ್ ಪ್ರಧಾನಿ ಮೋದಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿರುವ ಬೆನ್ನಲ್ಲೇ ಇದೀಗ ಪ್ರಧಾನಿ ನಿವಾಸದ ಸುರಕ್ಷತೆ ಬಗ್ಗೆ ಪ್ರಶ್ನೆ ಎದ್ದಿದೆ. ಸಂಸತ್ತಿನಿಂದ ಪ್ರಧಾನಿ ನಿವಾಸ ಎಷ್ಟು ದೂರದಲ್ಲಿದೆ? ಅಲ್ಲಿ ಪ್ರತಿಭಟನೆ ನಡೆಸಲು ಯಾರ ಅನುಮತಿ ಅಗತ್ಯವಿದೆ? ಕಾಂಗ್ರೆಸ್ ಸಂಸದರು ಭದ್ರತಾ ಪಡೆಗಳಿಗೂ ಸುಳಿವು ನೀಡದೆ ಅಲ್ಲಿ ಹೋಗಿದ್ದು ಹೇಗೆ? ವಿವರಗಾಗಿ ತಿಳಿಯೋಣ.

Related Articles

Related image1
ಸಂಸತ್ ಭವನ ಮೇಲೆ ದಾಳಿ ಹಿಂದೆ ಖಲಿಸ್ತಾನಿ ಉಗ್ರ ಕೈವಾಡ, ಪನ್ನುನ್ ಡೆಡ್‌ಲೈನ್ ದಿನವೇ ಆ್ಯಟಾಕ್!
Related image2
ಇತಿಹಾಸ ಪುಟ ಸೇರಿದ ಹಳೇ ಸಂಸತ್ ಭವನ, ಪ್ರಜಾಪ್ರಭುತ್ವ ದೇಗುಲ ಮುಂದೆ ಫೋಟೋಶೂಟ್!
38
ಸಂಸತ್ ಮತ್ತು ಪ್ರಧಾನಿ ನಿವಾಸದ ನಡುವಿನ ಅಂತರವೆಷ್ಟು?
Image Credit : Asianet News

ಸಂಸತ್ ಮತ್ತು ಪ್ರಧಾನಿ ನಿವಾಸದ ನಡುವಿನ ಅಂತರವೆಷ್ಟು?

ಸಂಸತ್ ಭವನದ ಸಮೀಪದಲ್ಲೇ ಪ್ರಧಾನಿ ನಿವಾಸವಿದೆ. ಅದು ಪಾರ್ಲಿಮೆಂಟ್‌ನಿಂದ ಸುಮಾರು 2.9 ಕಿಲೋಮೀಟರ್ ಅಂತರವಿದೆ. ಸಂಸತ್ ಮತ್ತ ಪ್ರಧಾನಿಗಳ ನಿವಾಸ ಹತ್ತಿರದಲ್ಲೇ ಇದ್ದರೂ 7 ಜನಪಥ್, ಲೋಕ ಕಲ್ಯಾಣ್ ಮಾರ್ಗದ ಸುತ್ತಮುತ್ತಲಿನ ಭದ್ರತೆ ಹೇಗಿದೆ ಎಂದರೆ ಅಲ್ಲಿಗೆ ಅನುಮತಿ ಇಲ್ಲದೆ ನರಪಿಳ್ಳೆಯೂ ಪ್ರವೇಶಿಸಲು ಸಾಧ್ಯವಿಲ್ಲ. ಇದು ದೇಶದಲ್ಲೇ ಅತ್ಯಂತ ಬಿಗಿಭದ್ರತೆ ಇರುವ ಸ್ಥಳಗಳಲ್ಲಿ ಒಂದಾಗಿದೆ. ಪ್ರಧಾನಿಯವರ ಅಧಿಕೃತ ನಿವಾಸ ಮತ್ತು ಇತರ ಸೂಕ್ಷ್ಮ ಸರ್ಕಾರಿ ಸಂಸ್ಥೆಗಳು ಇರುವುದರಿಂದ ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರವಹಿಸುತ್ತವೆ.

48
ಪ್ರಧಾನಿ ನಿವಾಸದ ಎದುರು ಪ್ರತಿಭಟನೆಗೆ ಯಾರ ಅನುಮತಿ ಬೇಕು?
Image Credit : Asianet News

ಪ್ರಧಾನಿ ನಿವಾಸದ ಎದುರು ಪ್ರತಿಭಟನೆಗೆ ಯಾರ ಅನುಮತಿ ಬೇಕು?

ಭದ್ರತಾ ನಿಯಮದ ಪ್ರಕಾರ, ಪ್ರಧಾನ ಮಂತ್ರಿಯವರ ನಿವಾಸದ ಬಳಿಯಾಗಲಿ ಅಥವಾ ಹತ್ತಿರದ ಸ್ಥಳಗಳಲ್ಲಾಗಲಿ ಪ್ರತಿಭಟನೆಗೆ ನಿಷೇಧ. ಅನುಮತಿಯಂತೂ ಅಸಾಧ್ಯ. ಈ ಪ್ರದೇಶವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಿತ ಪ್ರದೇಶಗಳ ವ್ಯಾಪ್ತಿಗೆ ಬರುವುದರಿಂದ ಪ್ರವೇಶಿಸುವುದಿರಲಿ ಅತ್ತ ಕಣ್ಣು ಹಾಯಿಸುವುದು ಕಷ್ಟ. ಏಕೆಂದರೆ ಈ ಪ್ರದೇಶದಲ್ಲಿ ಈ ಹೈ-ಸೆಕ್ಯುರಿಟಿ ಇರುತ್ತೆ. ಹೀಗಾಗಿ ಈ ಸ್ಥಳದಲ್ಲಿ ಮೀಟಿಂಗ್ ನಡೆಸುವುದು, ಮೆರವಣಿಗೆ, ಪ್ರತಿಭಟನೆಗಳಿಗೆ ನಿಷೇಧ.

58
ಹಲಿಯಲ್ಲಿ ಪ್ರತಿಭಟನೆಗೆ ಅನುಮತಿ ನೀಡುವವರು ಯಾರು?
Image Credit : Asianet News

ಹಲಿಯಲ್ಲಿ ಪ್ರತಿಭಟನೆಗೆ ಅನುಮತಿ ನೀಡುವವರು ಯಾರು?

ದೆಹಲಿಯಲ್ಲಿ ಯಾವುದೇ ಸಾರ್ವಜನಿಕ ಪ್ರತಿಭಟನೆ ಮೆರವಣಿಗೆ ಅಥವಾ ಧರಣಿ ನಡೆಸುವ ಸಂಘಟಕರು ದೆಹಲಿ ಪೊಲೀಸರಿಂದ ಲಿಖಿತ ಅನುಮತಿಯನ್ನು ಪಡೆಯಬೇಕು. ಅದರಲ್ಲಿ ಪ್ರಸ್ತಾಪಿಸಿದಂತೆ ಕಾರ್ಯಕ್ರಮದ ಸ್ಥಳ, ಉದ್ದೇಶ, ಸೇರುವ ಜನರ ವಿವರಗಳೆಲ್ಲದ ಮಾಹಿತಿ ನೀಡಿ ಅನುಮತಿ ಪಡೆಯಬೇಕಾಗುತ್ತೆ. ಅನುಮತಿ ಇಲ್ಲದೆ ನಡೆಯುವ ಸಭೆ, ಪ್ರತಿಭಟನೆ, ಕಾರ್ಯಕ್ರಮಗಳು ಅನಧಿಕೃತವಾಗಿರುತ್ತವೆ. ಅಂಥವರ ಮೇಲೆ ಕಾನೂನು ಕ್ರಮ ಕಠಿಣವಾಗಿರುತ್ತದೆ

68
ಪ್ರತಿಭಟನೆ ನಡೆಸಲು ನಿಮಗೆ ಅನುಮತಿಸುವ ಸ್ಥಳಗಳಿವು
Image Credit : Asianet News

ಪ್ರತಿಭಟನೆ ನಡೆಸಲು ನಿಮಗೆ ಅನುಮತಿಸುವ ಸ್ಥಳಗಳಿವು

ಸಂಸತ್ತು, ಪ್ರಧಾನ ಮಂತ್ರಿಗಳ ನಿವಾಸ ಅಥವಾ ರಾಷ್ಟ್ರಪತಿ ಭವನದ ಬಳಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಹೀಗಾಗಿ ದೆಹಲಿ ಪೊಲೀಸರು ಸಾರ್ವಜನಿಕ ಪ್ರತಿಭಟನೆಗಳಿಗೆ ನಿರ್ದಿಷ್ಟ ಸ್ಥಳಗಳನ್ನು ಗುರುತಿಸುತ್ತಾರೆ. ದೆಹಲಿಯಲ್ಲಿ ಜಂತರ್ ಮಂತರ್ ಈ ಕಾರಣಕ್ಕೆ ಹೆಸರುವಾಸಿ. ಶಾಂತಿಯುತ ಧರಣಿ, ಸಣ್ಣ ಪ್ರಮಾಣದ ಪ್ರತಿಭಟನೆಗಳಿಗೆ ಇಲ್ಲಿ ಅವಕಾಶ ನೀಡಲಾಗುತ್ತೆ. ಇದರೊಂದಿಗೆ ಇನ್ನೊಂದು ಸ್ಥಳವಿದೆ. ಅದೇ ರಾಮಲೀಲಾ ಮೈದಾನ. ಇದು ದೊಡ್ಡ ರಾಜಕೀಯ ರ್ಯಾಲಿಗಳು, ದೊಡ್ಡ ಪ್ರಮಾಣದ ಸಭೆಗಳಿಗೆ ಗೊತ್ತುಪಡಿಸಿದ ಸ್ಥಳವಾಗಿದ್ದು, ದೆಹಲಿ ಪೊಲೀಸರು ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಅನುಮತಿ ಪಡೆಯಬೇಕಾಗುತ್ತದೆ.

78
ಖರ್ಗೆ ಬರ್ತಡೆ ವಿಶ್ ಬಳಿಕ ಕಾಂಗ್ರೆಸ್ ನಾಯಕರು ಪ್ರಧಾನಿ ನಿವಾಸಕ್ಕೆ ಬಂದಿದ್ದೇಗೆ?
Image Credit : Asianet News

ಖರ್ಗೆ ಬರ್ತಡೆ ವಿಶ್ ಬಳಿಕ ಕಾಂಗ್ರೆಸ್ ನಾಯಕರು ಪ್ರಧಾನಿ ನಿವಾಸಕ್ಕೆ ಬಂದಿದ್ದೇಗೆ?

ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ 84ನೇ ಜನ್ಮದಿನವಾದ ಮಂಗಳವಾರ ಶುಭ ಕೋರಲೆಂದು ಅವರ ನಿವಾಸಕ್ಕೆ ತೆರಳಿದ್ದ ಕಾಂಗ್ರೆಸ್‌ ನಾಯಕರು, ಬಳಿಕ ದಿಢೀರನೆ ಅಲ್ಲಿಂದ ಪ್ರಧಾನಿಗಳ ನಿವಾಸದತ್ತ ತೆರಳಿದರು. ಅಲ್ಲಿ ಕುಳಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರಾಜೀನಾಮೆಗೆ ಆಗ್ರಹಿಸಲು ಶುರು ಮಾಡಿದರು. ಈ ನಡೆಯ ಬಗ್ಗೆ ಭದ್ರತಾ ಪಡೆಗಳಿಗೂ ಸುಳಿವಿರಲಿಲ್ಲ ಎನ್ನಲಾಗಿದೆ.

88
ಪ್ರತಿಭಟನೆಗೆ ಅನುಮತಿ ಕೇಳದ ಕಾಂಗ್ರೆಸ್!
Image Credit : Asianet News

ಪ್ರತಿಭಟನೆಗೆ ಅನುಮತಿ ಕೇಳದ ಕಾಂಗ್ರೆಸ್!

ಸಾಮಾನ್ಯವಾಗಿ ಇಂಥ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಮುನ್ನ ಪಕ್ಷ ಮಾಧ್ಯಮಗಳಿಗೆ ಮಾಹಿತಿ ನೀಡಿರುತ್ತಿತ್ತು. ಆದರೆ ಈ ಬಾರಿ ಮಧ್ಯಾಹ್ನ ಗೌಪ್ಯವಾಗಿ ವಿಜಯ್‌ ಚೌಕ್‌ ವರೆಗೆ ಮೆರವಣಿಗೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಈ ಯೋಜನೆ ಲೀಕ್ ಆದ ಕಾರಣ ಅದನ್ನು ಕೈಬಿಡಲಾಯಿತು. ಮಧ್ಯಾಹ್ನ 3ರ ಹೊತ್ತಿಗೆ ಕೆಲ ಹಿರಿಯ ನಾಯಕರು ಖರ್ಗೆ ಅವರ ನಿವಾಸಕ್ಕೆ ಹೋದಾಗ, ಹುಟ್ಟುಹಬ್ಬದ ಪ್ರಯುಕ್ತ ಶುಭ ಕೋರಲು ಎಂದುಕೊಳ್ಳಲಾಗಿತ್ತು. ಆದರೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿಯವರಂತಹ ಪ್ರಮುಖ ನಾಯಕರು ಒಟ್ಟಾಗುತ್ತಿದ್ದಂತೆ ಪ್ರಧಾನಿ ನಿವಾಸದತ್ತ ಹೊರಟುಬಿಟ್ಟರು. ಸಿಜೆಪಿ ಪ್ರತಿಭಟನೆಯಿಂದ ದೇಶದಲ್ಲಿ ಕೋಲಾಹಲವೆದ್ದಿದ್ದರೂ ಸರ್ಕಾರದ ವಿರುದ್ಧ ಪ್ರತಿಭಟಿಸದಿದ್ದರೆ, ಕಾಂಗ್ರೆಸ್‌ ವಿದ್ಯಾರ್ಥಿಗಳ ಪರವಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಇದನ್ನು ತಪ್ಪಿಸಲು ಈ ಪ್ರತಿಭಟನೆ ಎನ್ನಲಾಗಿದೆ.

ಆದರೆ ಪ್ರಧಾನಿ ನಿವಾಸದೆದುರು ನಡೆದ ಹೈಡ್ರಾಮಾದಲ್ಲಿ ರಾಹುಲ್ ಗಾಂಧಿ ಪ್ರಿಯಾಂಕ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಭಾರತ ಸುದ್ದಿ
ಕಾಂಗ್ರೆಸ್
ಪ್ರತಿಭಟನೆ
ರಾಹುಲ್ ಗಾಂಧಿ
ಜಿರಳೆ ಜನತಾ ಪಾರ್ಟಿ
Latest Videos
Recommended Stories
Recommended image1
ಕಾಂಗ್ರೆಸ್‌ನಿಂದ ದೇಶ ಒಡೆಯಲು ಯತ್ನ, ರಾಹುಲ್ ಗಾಂಧಿ ವಿದೇಶಿ ಭೇಟಿ ಬಗ್ಗೆ ತನಿಖೆಯಾಗಲಿ: ಸಂಸದ ನಿಶಿಕಾಂತ್ ದುಬೆ
Recommended image2
PAN Card 2.0: ಹಳೆ ಪ್ಯಾನ್ ಕಾರ್ಡ್‌ಗಳು ರದ್ದಾಗಲಿವೆಯೇ? ಹೊಸ ಇ-ಪ್ಯಾನ್ ಕಾರ್ಡ್ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ
Recommended image3
ಕಡಲಲ್ಲಿ ಭಾರತೀಯ ಸೇನೆಯ ಶೌರ್ಯ : ತನ್ನ 12 ಸಿಬ್ಬಂದಿಯ ಜೀವ ಉಳಿಸಿದ್ದಕ್ಕೆ ಭಾರತಕ್ಕೆ ಚೀನಾ ಧನ್ಯವಾದ!
Related Stories
Recommended image1
ಸಂಸತ್ ಭವನ ಮೇಲೆ ದಾಳಿ ಹಿಂದೆ ಖಲಿಸ್ತಾನಿ ಉಗ್ರ ಕೈವಾಡ, ಪನ್ನುನ್ ಡೆಡ್‌ಲೈನ್ ದಿನವೇ ಆ್ಯಟಾಕ್!
Recommended image2
ಇತಿಹಾಸ ಪುಟ ಸೇರಿದ ಹಳೇ ಸಂಸತ್ ಭವನ, ಪ್ರಜಾಪ್ರಭುತ್ವ ದೇಗುಲ ಮುಂದೆ ಫೋಟೋಶೂಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved