Asianet Suvarna News Asianet Suvarna News

ರಾಜ್ಯದ 700 ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕ ಹುದ್ದೆಗಳು ಖಾಲಿ

ರಾಜ್ಯದ ಸಾವಿರಾರು ಸರ್ಕಾರಿ ಪ್ರೌಢಶಾಲೆಗಳಲ್ಲಿ ಚಿತ್ರಕಲೆ ಮತ್ತು ಕ್ರಾಫ್ಟ್‌ ಶಿಕ್ಷಕರ (ವಿಶೇಷ ಶಿಕ್ಷಕರು) ಹುದ್ದೆಗಳು ಖಾಲಿ ಇದ್ದು, ಪ್ರೌಢಶಾಲಾ ಹಂತದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಚಿತ್ರಕಲಾ ಕಲಿಕೆಗೆ ಹಿನ್ನಡೆಯಾಗಿದೆ.

No recruitment of art teachers in 700 high schools of  karnataka gow
Author
First Published Dec 25, 2023, 9:06 AM IST

ಹುಬ್ಬಳ್ಳಿ: ರಾಜ್ಯದ ಸಾವಿರಾರು ಸರ್ಕಾರಿ ಪ್ರೌಢಶಾಲೆಗಳಲ್ಲಿ ಚಿತ್ರಕಲೆ ಮತ್ತು ಕ್ರಾಫ್ಟ್‌ ಶಿಕ್ಷಕರ (ವಿಶೇಷ ಶಿಕ್ಷಕರು) ಹುದ್ದೆಗಳು ಖಾಲಿ ಇದ್ದು, ಪ್ರೌಢಶಾಲಾ ಹಂತದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಚಿತ್ರಕಲಾ ಕಲಿಕೆಗೆ ಹಿನ್ನಡೆಯಾಗಿದೆ.

ರಾಜ್ಯದಲ್ಲಿ 1690 ಸರ್ಕಾರಿ ಪ್ರೌಢಶಾಲೆಗಳಿವೆ. ಸದ್ಯ 800 ವಿಶೇಷ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 700 ಪ್ರೌಢಶಾಲೆಗಳಲ್ಲಿ ಹುದ್ದೆ ಖಾಲಿಯಾಗಿದ್ದು, ನೇಮಕಾತಿಗೆ ಸರ್ಕಾರ ನಿರ್ಲಕ್ಷ್ಯವಹಿಸಿದೆ. ಸರ್ಕಾರ 2008ರಿಂದ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರನ್ನೇ ನೇಮಕಾತಿ ಮಾಡಿಕೊಂಡಿಲ್ಲ. ಭಾಷೆ, ಲಿಪಿ, ಪಂಥ ಮೀರಿದ ಹೃದಯ ಭಾಷೆ ಚಿತ್ರಕಲೆ ಆಗಿದೆ. ಮಕ್ಕಳನ್ನು ಪಠ್ಯಪುಸ್ತಕಕ್ಕೆ ಜೋತುಬೀಳಿಸದೇ ಹೃದಯ ಭಾಷೆಯ ಕಲಿಕೆಗೆ ಒತ್ತು ನೀಡಬೇಕಾಗಿದ್ದು, ಚಿತ್ರಕಲಾ ಶಿಕ್ಷಣ ಎಲ್ಲ ವಿಷಯಗಳಿಗೂ ಪೂರಕವಾದ ವಿಷಯವಾಗಿದೆ. ಚಿತ್ರಕಲಾ ಶಿಕ್ಷಣ ಪ್ರಪಂಚದ ಭಾಷೆಯಾಗಿದ್ದು, ಸರ್ಕಾರ ಇದನ್ನುನಿರ್ಲಕ್ಷಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ 540 ಗಸ್ತು ಅರಣ್ಯ ಪಾಲಕ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಆಹ್ವಾನ

ವೃಂದ ನೇಮಕಾತಿ ಪ್ರಕಾರ ಪ್ರೌಢಶಾಲೆಗೆ 8:1ರಂತೆ ನೇಮಕಾತಿ ಆಗಬೇಕು, ಇದರಂತೆ 6 ವಿಷಯ ಶಿಕ್ಷಕರು, ಓರ್ವ ದೈಹಿಕ ಶಿಕ್ಷಣ ಶಿಕ್ಷಕ, ಮುಖ್ಯೋಪಾಧ್ಯಾಯ ಹಾಗೂ ಚಿತ್ರಕಲಾ ಶಿಕ್ಷಕರು ಇರಬೇಕು, ಈಗ ಕೇವಲ 8ರಂತೆ ನೇಮಕಾತಿ ಆಗುತ್ತಿದ್ದು, ಇದರಲ್ಲಿ ವಿಶೇಷ ಶಿಕ್ಷಕರ ಹುದ್ದೆ ಕೈಬಿಡಲಾಗಿದೆ. 8:1 ವೃಂದ ನೇಮಕಾತಿಯಲ್ಲೂ ಮೂರು ಡಿವಿಜನ್‌ಗೆ 9 ಶಿಕ್ಷಕರು ಹೆಚ್ಚಾಗುತ್ತಾರೆಂದು ವಿಶೇಷ ಶಿಕ್ಷಕರ ಹುದ್ದೆಯನ್ನು ಕೈಬಿಟ್ಟಿರುವುದು ಮಕ್ಕಳ ಕಲಿಕೆಗೆ ಹಿನ್ನಡೆಯುಂಟಾಗಿದೆ.

ವಿಷಯ ಶಿಕ್ಷಕರಲ್ಲಿಯೇ ಒಬ್ಬರನ್ನು ಮುಖ್ಯೋಪಾಧ್ಯಾಯರನ್ನಾಗಿ ಮಾಡಿ ಚಿತ್ರಕಲೆ ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಒಳಗೊಂಡು 8 ಸಿಬ್ಬಂದಿ ಆಗಬೇಕು ಎಂಬ ಸಲಹೆ ಕೇಳಿ ಬಂದಿದೆ. ಮೂರು ಡಿವಿಜನ್‌ ಇರುವಲ್ಲಿ ಮುಖ್ಯೋಪಾಧ್ಯಾಯರ ಕಾರ್ಯಭಾರ ಕಡಿಮೆ ಇರುವುದರಿಂದ ಅವರು ಅರ್ಹತೆ ಹೊಂದಿದ ವಿಷಯ ಬೋಧಿಸಬೇಕು ಎಂಬುದು ಬೇಡಿಕೆಯಾಗಿದೆ. ಇದರಿಂದ ಮುಖ್ಯೋಪಾಧ್ಯಾಯರು ಒಳಗೊಂಡು ವಿಷಯ ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಮತ್ತು ವಿಶೇಷ ಶಿಕ್ಷಕ 8 ಸಿಬ್ಬಂದಿ ಸ್ತರವಿನ್ಯಾಸ ಹೊಂದುತ್ತದೆ. ಸರ್ಕಾರ ಇದನ್ನು ಸಹ ಅನುಸರಿಸುತ್ತಿಲ್ಲ.

ಬ್ಯಾಂಕ್‌ ಕೆಲಸ ಹುಡುಕುತ್ತಿದ್ದೀರಾ? ಬ್ಯಾಂಕ್ ಆಫ್ ಬರೋಡಾನಲ್ಲಿ 250 ಸೀನಿಯರ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ

ಕಮರುತ್ತಿರುವ ಪದವೀಧರರ ಕನಸು: ಚಿತ್ರಕಲಾ ಶಿಕ್ಷಕರಾಗಬೇಕೆಂಬ ಗುರಿಯೊಂದಿಗೆ ಚಿತ್ರಕಲಾ ಪದವಿ ಮುಗಿಸಿದವರೇ ರಾಜ್ಯದಲ್ಲಿ 1200ಕ್ಕೂ ಹೆಚ್ಚು ಜನ ಇದ್ದಾರೆ. ಆದರೆ, ದಶಕದಿಂದ ನೇಮಕಾತಿ ಆಗದಿರುವುದರಿಂದ ಅವರ ಕನಸುಗಳು ಕಮರಿ ಹೋಗುತ್ತಿವೆ. ಅನುದಾನಿತ ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರು ನಿವೃತ್ತರಾಗಿದ್ದರೆ ಆ ಹುದ್ದೆ ಭರ್ತಿಗೆ ಸರ್ಕಾರವು ಅನುಮತಿ ಕೊಡುತ್ತಿಲ್ಲ. ರಾಜ್ಯದಲ್ಲಿ 200 ಅನುದಾನಿತ ಶಾಲೆಗಳಿದ್ದು, ಅಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇವೆ.

ಪಠ್ಯಕ್ರಮವೂ ಇಲ್ಲ: ಶಿಕ್ಷಣ ಕ್ಷೇತ್ರದಲ್ಲಿ ಇಷ್ಟೊಂದು ಬದಲಾವಣೆಗಳಾಗಿದ್ದರೂ ಚಿತ್ರಕಲಾ ಶಿಕ್ಷಕರಿಗೆ ಪಠ್ಯಕ್ರಮವೇ ಇಲ್ಲ. ಇದರಿಂದ ಕಲಿಕೆಗೂ ತೀವ್ರ ಸಮಸ್ಯೆಯಾಗಿದೆ ಎನ್ನುತ್ತಾರೆ ನೊಂದ ಚಿತ್ರಕಲಾ ಶಿಕ್ಷಕರು.))) ((((ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಚಿತ್ರಕಲಾ ಶಿಕ್ಷಣಕ್ಕೆ ಮಹತ್ವ ಕೊಡಲಾಗಿದೆ. ಅದರಂತೆಯೇ ರಾಜ್ಯದಲ್ಲೂ ಕಡ್ಡಾಯ ಪಠ್ಯಕ್ರಮ ರೂಪಿಸಬೇಕೆಂಬುದು ಅವರ ಬೇಡಿಕೆಯಾಗಿದೆ.  

ನೇಮಕಾತಿ ಅಗತ್ಯ : ಹದಿನೈದು ವರ್ಷಗಳ ಹಿಂದೆ 438 ಚಿತ್ರಕಲಾ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಬಳಿಕ ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಕರು ಸೇವೆಯಿಂದ ನಿವೃತ್ತರಾಗಿದ್ದರೂ ನೇಮಕಾತಿ ಆಗಿಲ್ಲ. ಆದ್ದರಿಂದ ಸರ್ಕಾರ ಬೇಗನೆ ನೇಮಕಾತಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಚಿತ್ರಕಲಾ ಶಿಕ್ಷಣದಿಂದ ವಂಚಿತರಾಗದಂತೆ ಮಾಡಬೇಕು.

ಬಿ.ಎಸ್‌. ತೋಟಗಿ ಅಧ್ಯಕ್ಷರು, ಚಿತ್ರಕಲಾ ಶಿಕ್ಷಕರ ಸಂಘ ಧಾರವಾಡ ಜಿಲ್ಲೆ

Follow Us:
Download App:
  • android
  • ios