Hyderabad Horror: Mother Kills 10-Month-Old Baby, Ends Life; Mother-in-Law Critical ಹೈದರಾಬಾದ್‌ನಲ್ಲಿ ನಡೆದ ಕೌಟುಂಬಿಕ ಕಲಹದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಬದುಕುಳಿಯಲು ಕಷ್ಟಪಡುತ್ತಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟ್‌ನಲ್ಲಿ ಈ ದುರಂತ ಘಟನೆ ನಡೆದಿದೆ.
ಹೈದರಾಬಾದ್ (ಜ.9): ಕೌಟುಂಬಿಕ ಕಲಹದಲ್ಲಿ ತಾಯಿ, ಮಗು ಸಾವನ್ನಪ್ಪಿರುವ ದಾರುಣ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮಗಳು ಹಾಗೂ ಮೊಮ್ಮಗನ ಸಾವಿನಿಂದ ನೊಂದ ಅಜ್ಜಿ ಕೂಡ ಆ*ತ್ಮಹ*ತ್ಯೆಗೆ ಪ್ರಯತ್ನ ಮಾಡಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟ್‌ನಲ್ಲಿ ಈ ದುರಂತ ಘಟನೆ ನಡೆದಿದೆ. ಹತ್ತು ತಿಂಗಳ ಮಗನಿಗೆ ವಿಷ ಕುಡಿಸಿದ ತಾಯಿ ನಂತರ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಮಗಳು ಮತ್ತು ಮೊಮ್ಮಗನ ಸಾವನ್ನು ಸಹಿಸಲಾಗದೆ ಅಜ್ಜಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಹೃದಯವಿದ್ರಾವಕ ಘಟನೆ ಎಲ್ಲರ ಕಣ್ಣಲ್ಲಿ ನೀರು ತರಿಸಿದೆ.
ಮೀರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಜಯಕೃಷ್ಣ ಎನ್ಕ್ಲೇವ್ ನಿವಾಸಿ ಸುಷ್ಮಾ (27) ನಾಲ್ಕು ವರ್ಷಗಳ ಹಿಂದೆ ಚಾರ್ಟರ್ಡ್ ಅಕೌಂಟೆಂಟ್ ಯಶವಂತ್ ರೆಡ್ಡಿ ಅವರನ್ನು ವಿವಾಹವಾಗಿದ್ದರು. ಅವರಿಗೆ ಯಶವರ್ಧನ್ ರೆಡ್ಡಿ (10 ತಿಂಗಳು) ಎಂಬ ಮಗನಿದ್ದಾನೆ. ಕುಟುಂಬ ಕಲಹದಿಂದಾಗಿ ದಂಪತಿಗಳು ಕಳೆದ ಕೆಲವು ದಿನಗಳಿಂದ ಜಗಳವಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಕಾರಣದಿಂದಾಗಿ, ಇಬ್ಬರ ನಡುವೆ ಜಗಳಗಳು ಇತ್ತೀಚೆಗೆ ವಿಕೋಪಕ್ಕೆ ಹೋಗುತ್ತಿದ್ದವು ಈ ಸಂದರ್ಭದಲ್ಲಿ, ಸುಷ್ಮಾ ಅವರ ತಾಯಿ ಲಲಿತಾ (44) ಇತ್ತೀಚೆಗೆ ತಮ್ಮ ಮಗಳ ಮನೆಗೆ ಕಾರ್ಯಕ್ರಮಕ್ಕಾಗಿ ಬಂದಿದ್ದರು.
ಈ ಹಿನ್ನೆಲೆಯಲ್ಲಿ, ಕೌಟುಂಬಿಕ ಕಲಹಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಸುಷ್ಮಾ, ಗುರುವಾರ (ಜನವರಿ 8) ತಾಯಿ ಮನೆಯಲ್ಲಿದ್ದಾಗ ಮಲಗುವ ಕೋಣೆಗೆ ಹೋಗಿ ಮಗನಿಗೆ ವಿಷ ಕುಡಿಸಿದ್ದರು. ಆ ನಂತರ, ಫ್ಯಾನ್‌ಗೆ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡರು. ಮನೆಯಲ್ಲಿ ಮಗಳು ಮತ್ತು ಮೊಮ್ಮಗನ ಸಾವನ್ನು ಸಹಿಸಲಾಗದೆ, ಸುಷ್ಮಾ ಅವರ ತಾಯಿ ಲಲಿತಾ ಕೂಡ ವಿಷ ಸೇವಿಸಿ ಆ*ತ್ಮಹ*ತ್ಯೆಗೆ ಯತ್ನಿಸಿದ್ದಾರೆ. ರಾತ್ರಿ 9:30 ರ ಸುಮಾರಿಗೆ ಮನೆಗೆ ಬಂದ ಯಶವಂತ್ ರೆಡ್ಡಿ, ಬಾಗಿಲುಗಳು ಮುಚ್ಚಿರುವುದನ್ನು ಕಂಡು ಅವುಗಳನ್ನು ಒಡೆದು ಒಳಗೆ ಹೋಗಿದ್ದಾರೆ. ಈ ವೇಳೆ ಪತ್ನಿ ಹಾಗೂ ಪುಟ್ಟ ಮಗನ ಶವ ಪತತೆಯಾಗಿದ್ದರೆ, ಅತ್ತೆ ಲಲಿತಾ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸ್
ಪೊಲೀಸರು ಸ್ಥಳಕ್ಕೆ ಧಾವಿಸಿ ಗಂಭೀರ ಸ್ಥಿತಿಯಲ್ಲಿದ್ದ ಲಲಿತಾಳನ್ನು ಆಸ್ಪತ್ರೆಗೆ ಸಾಗಿಸಿದರು. ಸುಷ್ಮಾ ಮತ್ತು 10 ತಿಂಗಳ ಮಗನ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆಯ ಕುರಿತು ಮೀರ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೌಟುಂಬಿಕ ಕಲಹದಿಂದ ಸುಷ್ಮಾ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಬೇರೆ ಯಾವುದಾದರೂ ಕಾರಣದಿಂದ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.


