Asianet Suvarna News Asianet Suvarna News

ಸತತ 9 ಗಂಟೆ ಮನೀಶ್ ಸಿಸೋಡಿಯಾ ವಿಚಾರಣೆ, ಇದು ಆಪರೇಶನ್ ಕಮಲದ ಪ್ರಯತ್ನ ಎಂದ ಆಪ್ ನಾಯಕ

ಸಿಬಿಐ ವಿಚಾರಣೆಗೆ ಹಾಜರಾದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸತತ 9 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆಯಿಂದ ಹೊರಬಂದ ಮನೀಶ್ ಸಿಸೋಡಿಯಾ ಇಡೀ ಪ್ರಕರಣ ನಕಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

Delhi liquor policy scam Deputy CM Manish Sisodia left the CBI office after 9 hours of questioning ckm
Author
First Published Oct 17, 2022, 9:47 PM IST

ನವದೆಹಲಿ(ಅ.17): ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ಕಚೇರಿಗೆ ತೆರಳಿ ವಿಚಾರಣೆ ಹಾಜರಾದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸತತ 9ಗಂಟೆ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆಯಿಂದ ಹೊರಬಂದ ಬೆನ್ನಲ್ಲೇ ಬಿಜೆಪಿ ವಿರುದ್ಧ ಸತತ ವಾಗ್ದಾಳಿ ನಡೆಸಿದ್ದಾರೆ. ನನ್ನ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಎಲ್ಲಾ ಪ್ರಕರಣ ನಕಲಿಯಾಗಿದೆ. ಇಂದಿನ ವಿಚಾರಣೆ ಹಾಗೂ ಬಿಜೆಪಿ ಯತ್ನಗಳು ದೆಹಲಿಯಲ್ಲಿ ಆಪರೇಶನ್ ಕಮಲ ಯಶಸ್ವಿಯಾಗಿಸುವ ಪ್ರಯತ್ನ ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.  9 ಗಂಟೆಗಳ ಬಳಿಕ ವಿಚಾರಣೆಯಿಂದ ಹೊರಬಂದ ಮನೀಸ್ ಸಿಸೋಡಿಯಾಗೆ ಮತ್ತೆ ವಿಚಾರಣೆಗೆ ಯಾವುದೇ ಸಮನ್ಸ್ ನೀಡಿಲ್ಲ. ಆದರೆ ಅವಶ್ಯಕತೆ ಬಿದ್ದರೆ ಮತ್ತೆ ವಿಚಾರಣೆ ಕರೆಸುವುದಾಗಿ ಸಿಬಿಐ ಹೇಳಿದೆ.

 ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಮನೀಶ್‌, ಅವರ ಆಪ್ತರು ಹಾಗೂ ಅಬಕಾರಿ ವ್ಯಾಪಾರಿಗಳ ಆಸ್ತಿಪಾಸ್ತಿ ಮೇಲೆ ದಾಳಿ ನಡೆಸಿತ್ತು.  ಬಳಿಕ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು.  ‘ನನ್ನ ಮನೆ, ಬ್ಯಾಂಕ್‌ ಖಾತೆಗಳ ತಲಾಶೆಯನ್ನು ಸಿಬಿಐ ನಡೆಸಿತು. ಅದಕ್ಕೆ ಏನೂ ಸಿಗಲಿಲ್ಲ.  ವಿಚಾರಣೆಗೆ ಬರುವಂತೆ ಹೇಳಿದ್ದಾರೆ. ನಾನು ವಿಚಾರಣೆಗೆ ಹೋಗುವೆ. ಯಾವುದೇ ಭಯವಿಲ್ಲ. ಸತ್ಯಮೇವ ಜಯತೆ’ ಎಂದು ವಿಚಾರಣೆ ಸಮನ್ಸ್ ಪಡೆದ ಬಳಿಕ ಟ್ವೀಟ್ ಮಾಡಿದ್ದರು.

ಬಿಜೆಪಿಯವ್ರು ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು; ಸಿದ್ದರಾಮಯ್ಯ ಸರಣಿ ಟ್ವೀಟ್...

ದಿಲ್ಲಿಯಲ್ಲಿ ಸುಮಾರು 400ಕ್ಕೂ ಹೆಚ್ಚು ಬಾರ್‌ ಲೈಸೆನ್ಸ್‌ಗಳನ್ನು ನಿಯಮ ಮೀರಿ ಬೇಕಾಬಿಟ್ಟಿಯಾಗಿ ಹಂಚಲಾಗಿದೆ ಎಂಬುದು ಆರೋಪ. ಇದರ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಇದರ ಅಂಗವಾಗಿ ಸಿಬಿಐ ದಾಳಿ ನಡೆಸಿತ್ತು. ದಾಖಲೆ ಸೇರಿದಂತೆ ಹಲವು ಮಾಹಿತಿಗಳನ್ನು ಪರಿಶೀಲನೆ ನಡೆಸಿತ್ತು. ಆದರೆ ಇದು ಸುಳ್ಳು ಆರೋಪ, ನಕಲಿ ಪ್ರಕರಣ ಎಂದು ಆಪ್ ಹಾಗೂ ಸಿಸೋಡಿಯಾ ಹೇಳಿದ್ದಾರೆ. ದೆಹಲಿಯಲ್ಲಿ ಅಧಿಕಾರ ಹಿಡಿಯಲು ಯತ್ನಿಸುತ್ತಿರುವ ಬಿಜೆಪಿ, ಆಪರೇಶನ್ ಕಮಲ ನಡೆಸಲು ಈ ಪ್ರಯತ್ನ ಮಾಡುತ್ತಿದೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ. ಹೆದರಿಸಿ, ಬೆದರಿಸಿ ಬಿಜೆಪಿ ಸೇರಿಕೊಳ್ಳುವಂತೆ ಕೇಂದ್ರ ಸರ್ಕಾರ ಮಾಡುತ್ತಿದೆ. ಇದಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಮೋದಿಗೆ ಜನ್ಮ ನೀಡಿದ್ದೆ ಮಹಾ ಅಪರಾಧ, ಮೋದಿ ತಾಯಿ ವಿರುದ್ಧ ಆಪ್ ಅಧ್ಯಕ್ಷನ ವಿವಾದಾತ್ಮಕ ಹೇಳಿಕೆ!

 ದಿಲ್ಲಿ ಅಬಕಾರಿ ಹಗರಣ: ಸಿಸೋಡಿಯಾ ಆಪ್ತ ನಾಯರ್‌ ಬಂಧನ
ದೆಹಲಿಯಲ್ಲಿ ಹಿಂಪಡೆಯಲಾದ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎಂಬುದರ ಕುರಿತಾಗಿ ತನಿಖೆ ನಡೆಸುತ್ತಿರುವ ಸಿಬಿಐ, ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರ ಆಪ್ತ, ಉದ್ಯಮಿ ವಿಜಯ್‌ ನಾಯರ್‌ ಎಂಬುವವರನ್ನು ಸೋಮವಾರ ಬಂಧಿಸಿದೆ. ಈ ಅಕ್ರಮದಲ್ಲಿ ಸಿಸೋಡಿಯಾ, ನಾಯರ್‌ ಸೇರಿದಂತೆ 14 ಜನರ ಪಾತ್ರ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಅಲ್ಲದೇ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ 15 ಜನರಿಗೆ ಸಂಬಂಧಿಸಿದ ಕಂಪನಿಗಳ ವ್ಯವಹಾರವನ್ನು ಕಾರ್ಪೋರೆಟ್‌ ವ್ಯವಹಾರಗಳ ಸಚಿವಾಲಯ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ನಾಯರ್‌ ವಿಚಾರಣೆ ಎದುರಿಸದೇ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದನ್ನು ನಿರಾಕರಿಸಿದ್ದ ನಾಯರ್‌ ವಿಚಾರಣೆಗೆ ಹಾಜರಾಗಿದ್ದರು.

Follow Us:
Download App:
  • android
  • ios