Asianet Suvarna News Asianet Suvarna News

2022ರಲ್ಲಿ ಭಾರತದ ಪೌರತ್ವ ತೊರೆದು ಹೋದವರೆಷ್ಟು ಜನ... ಇಲ್ಲಿದೆ ಡಿಟೇಲ್ಸ್

ದೇಶದ ಪೌರತ್ವವನ್ನು ಅನೇಕರು ತೊರೆದು ಹೋಗಿ ವಿದೇಶ ಸೇರಿದ್ದಾರೆ. ಹೀಗೆ ದೇಶದ ಪೌರತ್ವ ತೊರೆದು ಹೋದವರು ಲಕ್ಷಕ್ಕೂ ಹೆಚ್ಚು ಮಂದಿ.  ರಾಜ್ಯಸಭೆಯಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈ ಶಂಕರ್ ಅವರು ಈ ಮಾಹಿತಿ ನೀಡಿದ್ದಾರೆ.

How many people gave up indian Citizenship In 2022, External Affairs Minister S Jaishankar response a question in Rajya Sabha akb
Author
First Published Feb 9, 2023, 8:42 PM IST | Last Updated Feb 9, 2023, 8:42 PM IST

ಹೊಸದಿಲ್ಲಿ:   ನೆರೆಯ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಕ್ರಿಶ್ಚಿಯನ್ ಬೌದ್ಧ ಜೈನ ಧರ್ಮದ ಅನುಯಾಯಿಗಳಿಗೆ ಅಗತ್ಯವಿದ್ದಲ್ಲಿ ಭಾರತದ ಪೌರತ್ವ ನೀಡಲು ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಸಿಎಎ ಕಾಯ್ದೆಯನ್ನು ಜಾರಿಗೊಳಿಸಿತ್ತು. ಆದರೆ ಇದೇ ಸಮಯದಲ್ಲಿ ದೇಶದ ಪೌರತ್ವವನ್ನು ಅನೇಕರು ತೊರೆದು ಹೋಗಿ ವಿದೇಶ ಸೇರಿದ್ದಾರೆ. ಹೀಗೆ ದೇಶದ ಪೌರತ್ವ ತೊರೆದು ಹೋದವರು ಲಕ್ಷಕ್ಕೂ ಹೆಚ್ಚು ಮಂದಿ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಇಂದು ರಾಜ್ಯಸಭೆಯಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈ ಶಂಕರ್ ಅವರು ಉತ್ತರ ನೀಡಿದರು. 

ಕಳೆದ ವರ್ಷ ಭಾರತದ ಪೌರತ್ವ ತೊರೆದು ಹೋದ  2,25,620 ಮಂದಿ ಸೇರಿದಂತೆ 2011 ರಿಂದ 16 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. ಪೌರತ್ವ ತ್ಯಜಿಸಿದ ಭಾರತೀಯರ ವರ್ಷವಾರು ವಿವರವನ್ನು ಇಂದು  ವಿದೇಶಾಂಗ ಸಚಿವ ಎಸ್ ಜೈಶಂಕರ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ನೀಡಿದರು.  ಅದರಲ್ಲೂ ಕಳೆದ ವರ್ಷ (2022) ಅತ್ಯಧಿಕ ಸಂಖ್ಯೆಯ ಜನ ಭಾರತೀಯ ಪೌರತ್ವ ತ್ಯಜಿಸಿದ್ದಾರೆ.  ಹಾಗೆಯೇ  2020ರಲ್ಲಿ ಅತೀ ಕಡಿಮೆ ಎಂದರೆ 85,256 ಜನ ದೇಶದ ಪೌರತ್ವ ತೊರೆದಿದ್ದಾರೆ. 

ಗುಜರಾತ್‌ನಲ್ಲಿ ಮತ ಚಲಾಯಿಸಲಿದ್ದಾರೆ ಪಾಕ್‌ನ ಹಿಂದೂ ನಿರಾಶ್ರಿತರು

2015 ರಲ್ಲಿ ಭಾರತೀಯ ಪೌರತ್ವವನ್ನು ತ್ಯಜಿಸಿದ ಭಾರತೀಯರ ಸಂಖ್ಯೆ 1,31,489 ಆಗಿದ್ದರೆ, 2016 ರಲ್ಲಿ 1,41,603 ಮತ್ತು 2017 ರಲ್ಲಿ 1,33,049  ಹಾಗೂ  2018 ರಲ್ಲಿ 1,34,561, ಹಾಗೆಯೇ  2019 ರಲ್ಲಿ 1,44,017 ಜನ ತಮ್ಮ ಪೌರತ್ವವನ್ನು ತ್ಯಜಿಸಿದರು.  2020 ರಲ್ಲಿ 85,256  ಮತ್ತು 2021 ರಲ್ಲಿ 1,63,370  ಹಾಗೂ  2022 ರಲ್ಲಿ ಅತೀ ಹೆಚ್ಚು ಅಂದರೆ 2,25,620 ಜನರು ದೇಶದ ಪೌರತ್ವವನ್ನು ತೊರೆದಿದ್ದಾರೆ ಎಂದು ಜೈಶಂಕರ್ ಸದನಕ್ಕೆ ಮಾಹಿತಿ ನೀಡಿದರು. 

ಅಲ್ಲದೇ 2011ರಿಂದ 2022ರವರೆಗೆ ಸಚಿವರು ಎಷ್ಟು ಜನ ದೇಶದ ಪೌರತ್ವ ತೊರೆದರು ಎಂಬ ಮಾಹಿತಿಯನ್ನು ಇದೇ ವೇಳೆ ನೀಡಿದರು. ಅದರಂತೆ 2011 ರ ಮಾಹಿತಿ ಪ್ರಕಾರ 1,22,819 ಜನ ದೇಶ ಬಿಟ್ಟಿದ್ದಾರೆ.  2012 ರಲ್ಲಿ 1,20,923 ಜನ,  2013 ರಲ್ಲಿ 1,31,405 ಮತ್ತು 2014 ರಲ್ಲಿ 1,29,328 ಜನ ದೇಶದ ಪೌರತ್ವ ತೊರೆದಿದ್ದು,  ಹೀಗಾಗಿ 2011 ರಿಂದ ಭಾರತೀಯ ಪೌರತ್ವವನ್ನು ತ್ಯಜಿಸಿದ ಒಟ್ಟು ಭಾರತೀಯರ ಸಂಖ್ಯೆ 16,63,440 ಆಗಿದೆ. 

ಪಾಕ್‌, ಬಾಂಗ್ಲಾ, ಅಫ್ಘಾನಿಸ್ತಾನದ ಹಿಂದೂ, ಸಿಖ್ಖರಿಗೆ ಪೌರತ್ವ ಕಾಯ್ದೆ, 1955ರಡಿ ಸಿಗಲಿದೆ Citizenship

ಹಾಗೆಯೇ  ಕಳೆದ ಮೂರು ವರ್ಷಗಳಲ್ಲಿ ಐದು ಭಾರತೀಯ ಪ್ರಜೆಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ಪೌರತ್ವವನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು. ಅಲ್ಲದೇ ಭಾರತೀಯರು ಪೌರತ್ವ (Indian citizenship) ಪಡೆದ 135 ದೇಶಗಳ ಪಟ್ಟಿಯನ್ನು ಸಹ ಜೈಶಂಕರ್ (Jaishankar) ಅವರು ಸದನಕ್ಕೆ ತಿಳಿಸಿದರು. ಮತ್ತೊಂದು ಪ್ರಶ್ನೆಗೆ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಪ್ರತಿಕ್ರಿಯಿಸಿ ಇತ್ತೀಚಿನ ತಿಂಗಳುಗಳಲ್ಲಿ ಯುಎಸ್ ಕಂಪನಿಗಳು (US companies) ಭಾರತೀಯ ಉದ್ಯೋಗಿಗಳನ್ನು ವಜಾಗೊಳಿಸಿರುವ ವಿಷಯದ ಬಗ್ಗೆ ಸರ್ಕಾರಕ್ಕೆ ತಿಳಿದಿದೆ ಎಂದು ಹೇಳಿದರು.

ಹೀಗೆ ದೇಶ ತೊರೆದು ಹೋದವರಲ್ಲಿ  ನಿರ್ದಿಷ್ಟ ಶೇಕಡಾವಾರು ಜನರು H-1B ಮತ್ತು L1 ವೀಸಾಗಳಲ್ಲಿ ಭಾರತೀಯ ಪ್ರಜೆಗಳಾಗಿರಬಹುದು. ಭಾರತ ಸರ್ಕಾರವು ಅಮೆರಿಕಾ ಸರ್ಕಾರದೊಂದಿಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉನ್ನತ ಉದ್ಯೋಗಿಗಳು ದೇಶ ತೊರೆಯುತ್ತಿರುವ ಸಮಸ್ಯೆಗಳನ್ನು ನಿರಂತರವಾಗಿ ಪ್ರಸ್ತಾಪಿಸಿದೆ ಎಂದು ರಾಜ್ಯ ಸಚಿವ ವಿ ಮುರಳೀಧರ್  (Muraleedharan) ಅವರು ಹೇಳಿದರು.  

Latest Videos
Follow Us:
Download App:
  • android
  • ios