Asianet Suvarna News Asianet Suvarna News

ಪಾಕ್‌, ಬಾಂಗ್ಲಾ, ಅಫ್ಘಾನಿಸ್ತಾನದ ಹಿಂದೂ, ಸಿಖ್ಖರಿಗೆ ಪೌರತ್ವ ಕಾಯ್ದೆ, 1955ರಡಿ ಸಿಗಲಿದೆ Citizenship

ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ಬರುತ್ತಿರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ ಸಿಎಎ ಕಾಯ್ದೆಯಡಿಯೂ ಭಾರತೀಯ ಪೌರತ್ವ ನೀಡಬಹುದು. ಆದರೆ, ಈ ಕಾಯ್ದೆಯ ನಿಯಮಗಳನ್ನು ಕೇಂದ್ರ ಸರ್ಕಾರ ಇನ್ನೂ ರೂಪಿಸದ ಕಾರಣ ಈ ಕಾಯ್ದೆಯಡಿ ಇದುವರೆಗೆ ಯಾರಿಗೂ ಪೌರತ್ವವನ್ನು ನೀಡಿಲ್ಲ. 

centre to grant citizenship to minorities of pakistan bangladesh afghanistan under citizenship act 1955 ash
Author
First Published Nov 1, 2022, 1:53 PM IST

ಅಫ್ಘಾನಿಸ್ತಾನ (Afghanistan), ಬಾಂಗ್ಲಾದೇಶ (Bangladesh) ಹಾಗೂ ಪಾಕಿಸ್ತಾನದಿಂದ (Pakistan) ಭಾರತಕ್ಕೆ ಬರುತ್ತಿರುವ ಹಾಗೂ ಸದ್ಯ, ಗುಜರಾತ್‌ನ (Gujarat) 2 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ ಭಾರತೀಯ ಪೌರತ್ವ (Indian Citizenship) ನೀಡಲು ಕೇಂದ್ರ ಸರ್ಕಾರ (Central Government) ನಿರ್ಧಾರ ಮಾಡಿದೆ. ಪೌರತ್ವ ಕಾಯ್ದೆ, 1955 ರಡಿ  (Citizenship Act, 1955) ಇವರಿಗೆ ಪೌರತ್ವ ನೀಡಲು ಮೋದಿ ಸರ್ಕಾರ ನಿರ್ಧರಿಸಿದೆ. ಇನ್ನು, ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), 2019 ರಡಿ (Citizenship Amendment Act, 2019) (CAA) ನೀಡುವ ಬದಲು ಪೌರತ್ವ ಕಾಯ್ದೆ, 1955 ರಡಿ ಪೌರತ್ವ ನೀಡಲು ಹೊರಟಿರುವ ನಿರ್ಧಾರ ಸಹ ಮಹತ್ವ ಪಡೆದುಕೊಂಡಿದೆ. 

ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ಬರುತ್ತಿರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ ಸಿಎಎ ಕಾಯ್ದೆಯಡಿಯೂ ಭಾರತೀಯ ಪೌರತ್ವ ನೀಡಬಹುದು. ಆದರೆ, ಈ ಕಾಯ್ದೆಯ ನಿಯಮಗಳನ್ನು ಕೇಂದ್ರ ಸರ್ಕಾರ ಇನ್ನೂ ರೂಪಿಸದ ಕಾರಣ ಈ ಕಾಯ್ದೆಯಡಿ ಇದುವರೆಗೆ ಯಾರಿಗೂ ಪೌರತ್ವವನ್ನು ನೀಡಿಲ್ಲ. 

ಇದನ್ನು ಓದಿ: 5 ವರ್ಷದಲ್ಲಿ 7.5 ಲಕ್ಷ ಭಾರತೀಯರಿಂದ ಪೌರತ್ವ ತ್ಯಾಗ
 
ಗುಜರಾತ್‌ನ ಆನಂದ್‌ ಹಾಗೂ ಮೆಹ್ಸಾನಾ ಜಿಲ್ಲೆಗಳಲ್ಲಿ ವಾಸ ಮಾಡುತ್ತಿರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ ಪೌರತ್ವ ಕಾಯ್ದೆ, 1955 ಸೆಕ್ಷನ್‌ 5 ರಡಿ ಮತ್ತು ಪೌರತ್ವ ನಿಯಮ, 2009 ರ ನಿಬಂಧನೆಗಳಡಿ ಭಾರತೀಯ ಪೌರತ್ವ ನೀಡಲು ಅವಕಾಶವಿದೆ ಅಥವಾ ಸೆಕ್ಷನ್‌ 6ರಡಿ ನೈಸರ್ಗೀಕರಣದ ಪ್ರಮಾಣಪತ್ರ ನೀಡಬಹುದು ಎಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ಹೇಳುತ್ತದೆ.  

ಗುಜರಾತ್‌ನ ಈ 2 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಅಂತಹವರು ಆನ್‌ಲೈನ್‌ ಮೂಲಕ ಪೌರತ್ವಕ್ಕಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿಗಳನ್ನು ಜಿಲ್ಲಾ ಮಟ್ಟದಲ್ಲಿ ಕಲೆಕ್ಟರ್‌ ಅಥವಾ ಡಿಸಿ ಅದನ್ನು ಪರಿಶೀಲಿಸುತ್ತಾರೆ. ನಂತರ, ಆ ಅರ್ಜಿ ಹಾಗೂ ವರದಿಗಳು ಕೇಂದ್ರ ಸರ್ಕಾರಕ್ಕೆ ಆನ್‌ಲೈನ್‌ ಮೂಲಕ ಲಭ್ಯವಿರುತ್ತದೆ ಎಂದೂ ಅಧಿಸೂಚನೆ ಹೇಳಿದೆ. 

ಇದನ್ನು ಓದಿ: CAA Implemention ಕೋವಿಡ್ ಅಂತ್ಯಗೊಂಡ ಬೆನ್ನಲ್ಲೇ ಪೌರತ್ವ ಕಾಯ್ದೆ ಜಾರಿ, ಅಮಿತ್ ಶಾ ಘೋಷಣೆ!

ಕಲೆಕ್ಟರ್ ಅರ್ಜಿದಾರರ ಸೂಕ್ತತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವೆಂದು ಪರಿಗಣಿಸಿ ವಿಚಾರಣೆಯನ್ನು ಮಾಡಬಹುದು ಮತ್ತು ಆ ಉದ್ದೇಶಕ್ಕಾಗಿ ಅಂತಹ ವಿಚಾರಣೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಪರಿಶೀಲನೆ ಮತ್ತು ಕಾಮೆಂಟ್‌ಗಳಿಗಾಗಿ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಕಳುಹಿಸಬಹುದು ಎಂದೂ ಹೇಳಿದೆ. ಹಾಗೂ, ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಕಲೆಕ್ಟರ್, ಅರ್ಜಿದಾರರ ಸೂಕ್ತತೆಯ ಬಗ್ಗೆ ತೃಪ್ತರಾಗಿ, ಪೌರತ್ವ ಅಥವಾ ನೈಸರ್ಗಿಕೀಕರಣದ ಮೂಲಕ ಅವನಿಗೆ ಅಥವಾ ಅವಳಿಗೆ ಭಾರತದ ಪೌರತ್ವವನ್ನು ನೀಡುತ್ತಾರೆ ಮತ್ತು ನೋಂದಣಿ ಅಥವಾ ನೈಸರ್ಗಿಕೀಕರಣದ ಪ್ರಮಾಣಪತ್ರವನ್ನು ನೀಡುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ನರೇಂದ್ರ ಮೋದಿ ಸರ್ಕಾರವು ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಅಂದರೆ, ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವ ನೀಡಲು ಬಯಸುತ್ತದೆ.

ಇದನ್ನೂ ಓದಿ: Indian Citizenship : ಭಾರತೀಯ ಪೌರತ್ವಕ್ಕೆ ಪಾಕಿಸ್ತಾನಿಯರಿಂದಲೇ ಅತೀ ಹೆಚ್ಚು ಅರ್ಜಿ!

ಡಿಸೆಂಬರ್ 2019 ರಲ್ಲಿ ಸಿಎಎ ಅನ್ನು ಸಂಸತ್ತು ಅಂಗೀಕರಿಸಿದ ನಂತರ ಮತ್ತು ನಂತರದ ರಾಷ್ಟ್ರಪತಿಗಳ ಅನುಮೋದನೆಯ ನಂತರ ದೇಶದ ಕೆಲವು ಭಾಗಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆದವು. ಈ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆ ಪ್ರತಿಭಟನೆಗಳ ಸಿಎಎಗೆ ಹಿಂದೇಟು ಉಮಟಾಗಿದ್ದು, ಈ ಕಾಯ್ದೆ ಇದುವರೆಗೆ ಜಾರಿಯಾಗಿಲ್ಲ. ಏಕೆಂದರೆ ಅದರ ಅಡಿಯಲ್ಲಿ ನಿಯಮಗಳನ್ನು ಇನ್ನೂ ರೂಪಿಸಲಾಗಿಲ್ಲ.

Follow Us:
Download App:
  • android
  • ios