ಗುಜರಾತ್‌ನಲ್ಲಿ ಮತ ಚಲಾಯಿಸಲಿದ್ದಾರೆ ಪಾಕ್‌ನ ಹಿಂದೂ ನಿರಾಶ್ರಿತರು
5 ವರ್ಷಗಳಿಂದ ಭಾರತದ ಪೌರತ್ವ ಪಡೆದಿರುವ ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿ ಹಿಂದೂ ನಿರಾಶ್ರಿತರು ಮೊದಲ ಬಾರಿಗೆ ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.
ನವದೆಹಲಿ: 5 ವರ್ಷಗಳಿಂದ ಭಾರತದ ಪೌರತ್ವ ಪಡೆದಿರುವ ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿ ಹಿಂದೂ ನಿರಾಶ್ರಿತರು ಮೊದಲ ಬಾರಿಗೆ ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಅಹಮದಾಬಾದ್ ಜಿಲಾಧಿಕಾರಿ ಕಚೇರಿಯು 2016 ರಲ್ಲಿ ಪಾಕಿಸ್ತಾನದಿಂದ ವಲಸೆ ಬಂದಿದ್ದ 1032 ಹಿಂದೂಗಳಿಗೆ ಪೌರತ್ವ ನೀಡಿತ್ತು. ಡಿ.1 ರಂದು 93 ವಿಧಾನಸಭಾ ಸ್ಥಾನಗಳಿಗೆ ಗುಜರಾತ್‌ನಲ್ಲಿ ಚುನಾವಣೆ ನಡೆಯಲಿದ್ದು, ಭಾರತದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲು ನಿರಾಶ್ರಿತರು ಕಾತರರಾಗಿದ್ದಾರೆ. ಅವರ ಮತಗಳು ಚುನಾವಣೆ ಫಲಿತಾಂಶವನ್ನು ಹೇಗೆ ಬದಲಿಸಬಹುದು ಎಂಬುವುದರ ಬಗ್ಗೆ ರಾಜಕೀಯ ವಲಯದಲ್ಲಿ ಈಗಾಗಲೇ ಚರ್ಚೆಗಳು ಆರಂಭವಾಗಿದೆ.
ಈ ಪೌರತ್ವ ಕಾಯಿದೆ ಜಾರಿಯಾದಾಗ ದೇಶದಲ್ಲಿ ಗಲಭೆಗಳಿದ್ದವು, ಅನೇಕರು ಈ ಪೌರತ್ಬ ಕಾಯಿದೆಯನ್ನು ವಿರೋಧಿಸಿದ್ದರು. ಕೇಂದ್ರ ಸರ್ಕಾರವು ಜಾರಿ ಮಾಡಿರುವ ಪೌರತ್ವ ಕಾಯಿದೆ (ಸಿಎಎ) ತಿದ್ದುಪಡಿಯ ಕಾನೂನಿನಂತೆ ನೆರೆಯ ದೇಶಗಳಾದ ಬಾಂಗ್ಲಾ, ಪಾಕ್, ಆಫ್ಘಾನಿಸ್ತಾನದ ನಿರಾಶ್ರಿತ ಅಲ್ಪ ಸಂಖ್ಯಾತರಾದ ಹಿಂದೂ, ಕ್ರೈಸ್ತ, ಬೌದ್ಧ, ಪಾರ್ಸಿ, ಸಿಕ್ ಜನರು ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದರೆ ಅವರಿಗೆ ಭಾರತದ ಪೌರತ್ವ ನೀಡಲಾಗುತ್ತದೆ.
'ಮುಸ್ಲಿಮರನ್ನು ಯಾಕೆ ನುಸುಳುಕೋರರು ಎನ್ನುತ್ತೀರಿ?'
ಪೌರತ್ವ ತಿದ್ದುಪಡಿ ಕಾಯಿದೆ ಅನುಷ್ಠಾನಕ್ಕೆ ಪಂಜಾಬ್, ಪಶ್ಚಿಮ ಬಂಗಾಳ, ಕೇರಳ ಸೇರಿ ಕಾಂಗ್ರೆಸ್, ಎಡಪಕ್ಷಗಳು ಹಾಗೂ ತೃಣಮೂಲ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಂತೂ ರಾಜ್ಯದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ನನ್ನ ಸರ್ಕಾರ ವಜಾಗೊಳಿಸಿ ಪೌರತ್ವ ಕಾಯಿದೆ ಅನುಷ್ಠಾನಗೊಳಿಸಿ’ ಎಂದು ಸವಾಲು ಹಾಕಿದ್ದರು.
ಪೌರತ್ವ ಕಾಯಿದೆಗೆ ಯಾಕೆ ವಿರೋಧ? ಮುಸ್ಲಿಂ ಧರ್ಮಗುರು ವ್ಯಾಲಿಡ್ ಪಾಯಿಂಟ್ಸ್