* ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್* ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ* ಬದಲಾಗಿ ಹನಿಟ್ರ್ಯಾಪ್ಗೆ ಬಿಜೆಪಿ ಮುಖಂಡ ಬಲಿ
ಬೆಂಗಳೂರು, (ಮೇ.16): ನಾಲ್ಕು ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಮುಖಂಡ ಅನಂತರಾಜು ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ, ಬದಲಾಗಿ ಹನಿಟ್ರ್ಯಾಪ್ಗೆ ಬಿಜೆಪಿ ಮುಖಂಡ ಬಲಿಯಾಗಿದ್ದಾರೆ. ಅವರೇ ಹನಿಟ್ರ್ಯಾಪ್ ಬಲೆಗೆ ಬಿದ್ದಿರುವ ಬಗ್ಗೆ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಹೇರೋಹಳ್ಳಿ ವಾರ್ಡ್ನ ನಿವಾಸಿ, ಬಿಜೆಪಿ ಮುಖಂಡ ಅನಂತರಾಜು ಮೇ 12ರ ರಾತ್ರಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೇಲ್ನೋಟಕ್ಕೆ ಅನಾರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎನ್ನಲಾಗಿತ್ತಾದರೂ ಇದೀಗ ಸ್ಫೋಟಕ ತಿರುವು ಪಡೆದಿದೆ.
"
ಡೆತ್‌ನೋಟ್‌ನಲ್ಲಿ ಏನಿದೆ?
'ಪ್ರಿಯ ಸುಮಾ, ನನ್ನನ್ನು ಕ್ಷಮಿಸಿಬಿಡು, ನಿನಗೆ ಮೋಸ ಮಾಡಿದ್ದೇನೆ. ನಿನ್ನಿಂದ ಕ್ಷಮೆ ಕೇಳಲು ಅರ್ಹನಲ್ಲ, ಹೆಣ್ಣಿನ ಸಹವಾಸ ಮಾಡಿ ಅವಳಿಂದ ಫೋಟೋ-ವಿಡಿಯೋಗಳ ಟ್ರ್ಯಾಪ್ಗೆ ಸಿಲುಕಿ ಬ್ಲ್ಯಾಕ್ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊ' ಎಂದು ಸಾವಿಗೂ ಮುನ್ನ ಅನಂತರಾಜು ಡೆತ್‌ನೋಟ್ ಬರೆದಿಟ್ಟಿದ್ದಾರೆ.
ಬೆಂಗಳೂರು: ಅನಾರೋಗ್ಯದಿಂದ ಮನನೊಂದು ಬಿಜೆಪಿ ಮುಖಂಡ ಆತ್ಮಹತ್ಯೆ
ಅನಂತರಾಜು ಪತ್ನಿ ಕೊಟ್ಟ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಕೆ.ಆರ್.ಪುರಂನ ನಿವಾಸಿ ರೇಖಾ ಮತ್ತು ಈಕೆಯ ಪತಿ ವಿನೋದ್ ಹಾಗೂ ಸ್ನೇಹಿತೆ ಸ್ಪಂದನ ಎಂಬುವವರು ಅಶ್ಲೀಲ ಫೋಟೋಗಳನ್ನ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದರು. ಫೇಸ್ಬುಕ್ ಮೂಲಕ ರೇಖಾಳ ಪರಿಚಯ ಅನಂತರಾಜು ಆಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ರೇಖಾ ಮತ್ತು ಈಕೆಯ ಗಂಡ ವಿನೋದ್, ಸ್ಪಂದನಾ ಮೂವರು ಸಂಚು ರೂಪಿಸಿ ಅನಂತರಾಜು ಅವರ ಖಾಸಗಿ ಫೋಟೋ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಹಿಂಸಿಸಿದ್ದಾರೆ. ಇವರ ಕಾಟ ಸಹಿಸಲಾಗದೆ ಈ ಹಿಂದೆಯೂ ಆತ್ಮಹತ್ಯೆಗೆ ಅನಂತರಾಜು ಯತ್ನಿಸಿದ್ದರು.
ಇಷ್ಟಕ್ಕೆ ಸುಮ್ಮನಾಗದ ರೇಖಾ, ಪದೆಪದೇ ಕಾಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಈ ಬಗ್ಗೆ ಅನಂತರಾಜು ಅವರ ಪತ್ನಿಗೆ ಗೊತ್ತಾಗಿ, ಹೆದರಬೇಡಿ ಎಂದು ಗಂಡನಿಗೆ ಧೈರ್ಯ ತುಂಬಿದ್ದರು. ಆದರೂ ಆ ಗ್ಯಾಂಗ್ ಬ್ಲ್ಯಾಕ್ಮೇಲ್ ಮಾಡುತ್ತಲೇ ಇತ್ತು. ಇದರಿಂದ ಬೇಸತ್ತ ಅನಂತರಾಜು ನೇಣಿಗೆ ಶರಣಾಗಿದ್ದಾರೆ ಎಂದು ಡೆತ್‌ನೋಟ್ ಸಮೇತ ದೂರು ನೀಡಿದ್ದಾರೆ. ಇದೀಗ ಆರೋಪಿಗಳಿಗಾಗಿ ಬ್ಯಾಡರಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ.
