Honeytrap: ಮಹಿಳೆ ಮಾತು ನಂಬಿ ಲಕ್ಷಾಂತರ ರು. ಕಳಕೊಂಡ ನಿವೃತ್ತ ಪ್ರಾಚಾರ್ಯ..!
* ನಿವೃತ್ತ ಪ್ರಾಚಾರ್ಯ, ಎಂಜಿನಿಯರ್ ಹನಿಟ್ರ್ಯಾಪ್ ಬಲೆಗೆ
* ಬಾರ್ ಲೈಸೆನ್ಸ್ ಕೊಡಿಸುವುದಾಗಿ ನಿವೃತ್ತ ಪ್ರಾಚಾರ್ಯರ ಬಲೆಗೆ ಸೆಳೆದು ಲಕ್ಷಾಂತರ ರು. ಸುಲಿಗೆ
* ಈ ಬಗ್ಗೆ ಗೋವಿಂದಪುರ ಠಾಣೆಯಲ್ಲಿ ದೂರು
ಬೆಂಗಳೂರು(ನ.05): ತಮ್ಮ ಹನಿಟ್ರ್ಯಾಪ್(Honeytrap) ಬಲೆಗೆ ಬಿದ್ದ ನಿವೃತ್ತ ಪ್ರಾಂಶುಪಾಲ ಹಾಗೂ ಎಂಜಿನಿಯರ್ ವೊರ್ವರನ್ನು ಸುಲಿಗೆ ಮಾಡಿದ್ದ ಮಹಿಳೆ ಸೇರಿದಂತೆ ಏಳು ಮಂದಿಯನ್ನು ಗೋವಿಂದಪುರ ಹಾಗೂ ನಂದಿನಿ ಲೇಔಟ್ ಠಾಣೆ ಪೊಲೀಸರು(Police) ಸೆರೆ ಹಿಡಿದಿದ್ದಾರೆ.
ಬಾರ್ ಲೈಸೆನ್ಸ್ ಪಡೆಯಲು ಮಹಿಳೆ ಸಂಗ:
ಮದ್ಯ(Alcohol) ಮಾರಾಟದ ಪರವಾನಗಿ ಕೊಡಿಸುವ ನೆಪದಲ್ಲಿ ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ನಿವೃತ್ತ ಪ್ರಾಂಶುಪಾಲರಿಗೆ ಬೆದರಿಸಿ 3 ಲಕ್ಷ ವಸೂಲಿ ಮಾಡಿದ್ದ ನಾಲ್ವರು ನಂದಿನಿ ಲೇಔಟ್ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಶ್ರೀರಾಮಪುರದ ತ್ರಿಶಾ ಅಲಿಯಾಸ್ಜಾನ್ಸಿ, ಆಕೆಯ ಸ್ನೇಹಿತ ಮ್ಯಾಥ್ಯು ಚಲಾ ಅಲಿಯಾಸ್ಮುತ್ತು, ಪೆದ್ದರೆಡ್ಡಿ ಹಾಗೂ ದಾಮೋದರ್ಬಂಧಿತರು(Arrest). ಆರೋಪಿಗಳಿಂದ(Accused) 17 ಸಾವಿರ ನಗದು ಜಪ್ತಿಯಾಗಿದೆ. ಮದ್ಯ ಮಾರಾಟದ ಪರವಾನಿಗೆ ಕೊಡಿಸುವ ನೆಪದಲ್ಲಿ ಕರೆಸಿ ನಿವೃತ್ತ ಪ್ರಾಂಶುಪಾಲರನ್ನು ತ್ರಿಶಾ ಗ್ಯಾಂಗ್ ರಚಿಸಿತ್ತು. ಈ ಬಗ್ಗೆ ಸಂತ್ರಸ್ತರು(Victims) ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್ಕರೆಗಳ ಮಾಹಿತಿ ಆಧರಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಲಿಂಗಕಾಮಿಯ ಮೇಲೆ ತಾಲಿಬಾನಿಗಳ ಅತ್ಯಾಚಾರ!
ಪ್ರಾಂಶುಪಾಲರಾಗಿ ನಿವೃತ್ತರಾದ ಬಳಿಕ ಸಂತ್ರಸ್ತ, ನಗರದಲ್ಲಿ ಮದ್ಯದ ಮಾರಾಟ ಮಳಿಗೆ ತೆರೆಯಲು ಮುಂದಾಗಿದ್ದರು. ಈ ಸಂಬಂಧ ಪರವಾನಿಗೆ ಪಡೆಯಲು ಸರ್ಕಾರದ(Government) ಮಟ್ಟದಲ್ಲಿ ಅವರು ಓಡಾಡುತ್ತಿದ್ದರು. ಆಗ ಅವರಿಗೆ ಪರಿಚಯಸ್ಥ ಚಂದ್ರಶೇಖರ್, ನನಗೆ ತ್ರಿಶಾ ಎಂಬಾಕೆ ಗೊತ್ತು. ಸರ್ಕಾರದ ಮಟ್ಟದಲ್ಲಿ ಆಕೆಗೆ ಒಳ್ಳೆಯ ಸಂಪರ್ಕವಿದೆ. ನಿಮಗೆ ಬಾರ್ ಲೈಸೆನ್ಸ್ ಕೊಡಿಸುತ್ತಾಳೆ ಎಂದು ತ್ರಿಶಾ ನಂಬರ್ಕೊಟ್ಟಿದ್ದ. ಅ.1ರಂದು ಆಕೆಯ ನಂಬರ್ಗೆ ಕರೆ ಮಾಡಿದ ಪ್ರಾಂಶುಪಾಲರು, ತಮಗೆ ಬಾರ್ ಲೈಸೆನ್ಸ್ ಕೊಡಿಸಲು ನೆರವು ನೀಡುವಂತೆ ಕೋರಿದ್ದಾರೆ. ಈ ಮಾತಿಗೆ ಒಪ್ಪಿದ ಆಕೆ, ಲಗ್ಗೆರೆ ಸರ್ಕಾರಿ ಆಸ್ಪತ್ರೆಗೆ ಸಮೀಪ ಬರುವಂತೆ ಸೂಚಿಸಿದ್ದಳು. ಅಂತೆಯೇ ಪ್ರಾಂಶುಪಾಲರು ಅಲ್ಲಿಗೆ ತೆರಳಿದಾಗ ಅಲ್ಲಾಗಲ್ಲೇ ತ್ರಿಶಾ ಗ್ಯಾಂಗ್ನ ಸದಸ್ಯರು ಕಾಯುತ್ತಿದ್ದರು. ಬಳಿಕ ಅಲ್ಲಿಂದ ಪ್ರಾಂಶುಪಾಲರನ್ನು ತ್ರಿಶಾಳ ಮನೆಗೆ ಆಕೆಯ ಸಹಚರರು ಕರೆದೊಯ್ದಿದ್ದಾರೆ. ಕೆಲ ಹೊತ್ತು ಪ್ರಾಂಶುಪಾಲರ ಜತೆ ತ್ರಿಶಾ ಏಕಾಂತದಲ್ಲಿ ಮಾತುಕತೆ ನಡೆಸಿದ್ದಾಳೆ. ಇದೇ ಸಮಯಕ್ಕೆ ಆಕೆ ಮನೆಗೆ ನುಗ್ಗಿದ ಹನಿಟ್ರ್ಯಾಪ್ ದಂಧೆಕೋರರು, ತಮ್ಮ ಮೊಬೈಲ್‌ನಲ್ಲಿ ತ್ರಿಶಾಳ ಜತೆ ಖಾಸಗಿ ಕ್ಷಣ ಕಳೆಯುತ್ತಿದ್ದ ಪ್ರಾಂಶುಪಾಲರ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್‌ಮೇಲ್(Blackmail) ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸವಿ ಮಾತಿಗೆ ಬಿದ್ದ ಎಂಜಿನಿಯರ್
ಸಾಮಾಜಿಕ ಜಾಲತಾಣಗಳಲ್ಲಿ(Social Media) ಹನಿಟ್ರ್ಯಾಪ್ಬಲೆಗೆ ಬೀಳಿಸಿಕೊಂಡು 50 ವರ್ಷದ ಎಂಜಿನಿಯರ್ ವೊಬ್ಬರಿಂದ ದುಷ್ಕರ್ಮಿಗಳು 5.91 ಲಕ್ಷ ದೋಚಿ ಪರಾರಿಯಾಗಿದ್ದಾರೆ.
ನಗ್ನ ವೀಡಿಯೋ ತೋರಿಸಿ ಹನಿಟ್ರ್ಯಾಪ್! ತಾಯಿ-ಮಗಳು & ಗ್ಯಾಂಗ್ ಅರೆಸ್ಟ್
ಸಂತ್ರಸ್ತ ವ್ಯಕ್ತಿಯು ಸರ್ಜಾಪುರ ಅತ್ತಿಬೆಲೆ ಮುಖ್ಯರಸ್ತೆಯ ನಿವಾಸಿ ಆಗಿದ್ದು, ಈತನ ದೂರು ಆಧರಿಸಿ ಮಹಮ್ಮದ್ ಎಂಬಾತನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಯುವತಿ ಸೇರಿದಂತೆ ಮತ್ತಿಬ್ಬರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಎರಡು ವರ್ಷ ಹಿಂದೆ ಸಾಮಾಜಿಕ ತಾಲತಾಣದಲ್ಲಿ ಸಂತ್ರಸ್ತರಿಗೆ ಉತ್ತರ ಭಾರತ(North India) ಮೂಲದ ಯುವತಿ ಪರಿಚಯವಾಗಿದೆ. ಬಳಿಕ ಪರಸ್ಪರ ಫೋನ್ ನಂಬರ್ ವಿನಿಮಯವಾಗಿ ಇಬ್ಬರ ನಡುವೆ ಆತ್ಮೀಯ ಮಾತುಕತೆ ನಡೆದಿತ್ತು. ಹೀಗಿರುವಾಗ ತಾನು ನಿಮ್ಮನ್ನು ಭೇಟಿ ಮಾಡಲು ಬೆಂಗಳೂರಿಗೆ(Bengaluru)ಬರುತ್ತಿದ್ದೇನೆ. ವೀರಣ್ಣಪಾಳ್ಯದ ಜಂಕ್ಷನ್ ಸಮೀಪದ ಹೋಟೆಲ್ನಲ್ಲಿ ಸಿಗೋಣ ಎಂದು ಎಂಜಿನಿಯರಿಂಗ್ಮೆಸೇಜ್ಕಳುಹಿಸಿದ್ದಳು. ಈ ಸಂದೇಶ ನೋಡಿ ಪುಳಕಿತನಾದ ಆತ, ಗೆಳತಿ ಭೇಟಿಗೆ ಹೋಟೆಲ್‌ಗೆ ಹೋಗಿದ್ದ. ಸ್ನೇಹಿತೆ ಜತೆ ಏಕಾಂತದಲ್ಲಿದ್ದಾಗ ಪೊಲೀಸರ ಸೋಗಿನಲ್ಲಿ ದುಷ್ಕರ್ಮಿಗಳು, ಹೋಟೆಲ್‌ಗೆ ದಾಳಿ(Raid) ನಡೆಸಿ ಸಂತ್ರಸ್ತನ ಅರೆಬೆತ್ತಲೆ ದೃಶ್ಯವನ್ನು ಸೆರೆಹಿಡಿದಿದ್ದರು.
ಬಳಿಕ ಆತನಿಂದ ಪರ್ಸ್, ಮೊಬೈಲ್(Mobile), ಕ್ರೆಡಿಟ್ ಕಾರ್ಡ್(Credit Card) ಮತ್ತು ಹಣ ಕಸಿದುಕೊಂಡು ರೂಮ್‌ನಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದರು. ಕೆಲ ಹೊತ್ತಿನ ಬಳಿಕ ಹೋಡೆಲ್ ಸಿಬ್ಬಂದಿ ಸಹಾಯದಿಂದ ಹೊರಬಂದ ಇಂಜಿನಿಯರ್, ಮನೆಗೆ ಹೋಗಿ ಇಮೇಲ್(E-Mail) ಪರಿಶೀಲಿಸಿದಾಗ 5.91 ಲಕ್ಷ ಹಣವು ತಮ್ಮ ಖಾತೆಯಿಂದ ಬೇರೊಂದು ಖಾತೆಗೆ ವರ್ಗಾವಣೆಯಾಗಿರುವುದು ಗೊತ್ತಾಯಿತು. ಕೊನೆಗೆ ಈ ಬಗ್ಗೆ ಗೋವಿಂದಪುರ ಠಾಣೆ ಪೊಲೀಸರಿಗೆ ಸಂತ್ರಸ್ತರು ದೂರು ಕೊಟ್ಟಿದ್ದಾರೆ.