18ರ ಹರೆಯದ ಹೂ ಮಾರೋ ಹುಡುಗಿಯ ರೋಚಕ ಸಾಹಸ: ಯಮುನೆಯಲ್ಲಿ ಮುಳುಗುತ್ತಿದ್ದ 4 ಬಾಲಕರ ರಕ್ಷಣೆ
ಆಗ್ರಾದಲ್ಲಿ ಯಮುನಾ ನದಿಯಲ್ಲಿ ನಾಲ್ವರು ಬಾಲಕರು ಕೊಚ್ಚಿ ಹೋಗುತ್ತಿದ್ದಾಗ 18 ವರ್ಷದ ಯುವತಿಯೊಬ್ಬರು ಸಾಹಸದಿಂದ ರಕ್ಷಿಸಿದ್ದಾರೆ. ಈ ಸಾಹಸಕ್ಕೆ ಆಕೆಗೆ ಸಿಕ್ಕಿದ ಬಹುಮಾನ ಮಾತ್ರ ಕೇವಲ 200 ರೂಪಾಯಿ.
ಯಮುನಾ ನದಿಯಲ್ಲಿ ಕೋಚ್ಚಿ ಹೋಗುತ್ತಿದ್ದ ನಾಲ್ವರು ಬಾಲಕರನ್ನು 18 ವರ್ಷದ ತರುಣಿಯೊಬ್ಬಳು ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡಿ ಸಾಹಸ ಮರೆದಿದ್ದಾಳೆ. ಆದರೆ ಆಕೆಯ ಈ ಮಹೋನ್ನತ ಕಾರ್ಯಕ್ಕೆ ಸಿಕ್ಕಿದ್ದು 200 ರೂಪಾಯಿಯ ಬಹುಮಾನ. ಸೆಪ್ಟೆಂಬರ್ 17ರಂದು ಆಗ್ರಾದ ಬಟೇಶ್ವರ ರಾಣಿ ಘಾಟ್‌ನಲ್ಲಿ ಗಣೇಶನನ್ನು ಬಿಡುತ್ತಿದ್ದ ವೇಳೆ ನಾಲ್ವರು ಬಾಲಕರು ಯಮುನೆಯಲ್ಲಿ ಕೊಚ್ಚಿ ಹೋಗುತ್ತಿದ್ದರು. ಇದನ್ನು ನೋಡಿದ 18 ವರ್ಷದ ತರುಣಿ ಮೋಹಿನಿ ಗೋಸ್ವಾಮಿ ಹಿಂದೆ ಮುಂದೆ ಯೋಚನೆ ಮಾಡದೇ ಸೀದಾ ಯಮನೆಗೆ ಧುಮುಕಿ ಜೀವಾಪಾಯದಲ್ಲಿದ್ದ ಹುಡುಗರನ್ನು ರಕ್ಷಿಸಿದ್ದಾಳೆ. ಆಕೆಯ ಈ ಸಾಹಸವನ್ನು ಅಲ್ಲೇ ನಿಂತಿದ್ದ ಕೆಲವರು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಅಲ್ಲದೇ ಮೋಹಿನಿ ಗೋಸ್ವಾಮಿಯ ಈ ಸಮಯಪ್ರಜ್ಞೆ ಹಾಗೂ ಸಾಹಸಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿತ್ತು.
ಹೀಗೆ ಮಕ್ಕಳನ್ನು ರಕ್ಷಣೆ ಮಾಡಿದ ಮೋಹಿನಿ ಗೋಸ್ವಾಮಿ ಅವರು ಬಟೇಶ್ವರ ರಾಣಿ ಘಾಟ್‌ನಲ್ಲಿ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ಆದರೆ ಘಟನೆ ನಡೆದಾಗ ಸ್ವಲ್ಪವೂ ಯೋಚನೆ ಮಾಡದ ಮೋಹಿನಿ ಸೀದಾ ಹೋಗಿ ತುಂಬಿ ಹರಿಯುತ್ತಿದ್ದ ಯಮುನೆಗೆ ಹಾರಿ ನಾಲ್ವರು ಬಾಲಕರ ಜೀವ ಉಳಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಮೋಹಿನಿ, ನಾಲ್ವರು ಬಾಲಕರು ನೀರಿನಲ್ಲಿ ಮುಳುಗಿ ಮೇಲೆ ಬರಲು ಕಷ್ಟಪಡುತ್ತಿರುವುದನ್ನು ನೋಡಿದೆ. ಕೂಡಲೇ ಅವರ ರಕ್ಷಣೆಗೆ ಧಾವಿಸಿ ನಾಲ್ವರನ್ನು ರಕ್ಷಿಸಿದ್ದೇನೆ ಎಂದು ಹೇಳಿದ್ದಾರೆ. ಮೋಹಿನಿಯ ಈ ಸಾಹಸಕ್ಕೆ ಬಟೇಶ್ವರ ದೇಗುಲದ ಮ್ಯಾನೇಜರ್ ಅಜಯ್ ಭದುರಿಯಾ, ನಟ್ಟಿಲಾಲ್ ಗೋಸ್ವಾಮಿ ಪುರೋಹಿತರಾದ ರಾಕೇಶ್ ವಾಜಪೇಯಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಕೆಯ ಕೆಲಸವನ್ನು ಶ್ಲಾಘಿಸಿ 200 ರೂಪಾಯಿ ಉಡುಗೊರೆಯನ್ನು ನೀಡಿದ್ದಾರೆ.
ಜಲಾವೃತ ಸ್ಥಳದಲ್ಲಿ ಪ್ರಾಣ ಪಣಕ್ಕಿಟ್ಟು ಪಾರ್ಸೆಲ್ ತಲುಪಿಸಿದ ಡೆಲವರಿ ಬಾಯ್, ಮನಗೆದ್ದ ದೃಶ್ಯ ಸೆರೆ!
ಹೀಗೆ ಯಮುನೆಯಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರು ಬಾಲಕರಲ್ಲಿ ಇಬ್ಬರನ್ನು ಫಿರೋಜಾಬಾದ್‌ನ ಆಕಾಶ್ ಹಾಗೂ ಹಿಮಾಲಯ ಎಂದು ಗುರುತಿಸಲಾಗಿದೆ. ಉಳಿದಿಬ್ಬರು ಬಾಲಕರು ರಕ್ಷಿಸಲ್ಪಟ್ಟ ಕೆಲವೇ ನಿಮಿಷದಲ್ಲಿ ಅಲ್ಲಿಂದ ಓಡಿ ಹೋಗಿರುವುದರಿಂದ ಅವರ ಗುರುತು ಪತ್ತೆ ಮಾಡಲಾಗಿಲ್ಲ. ಮಂಗಳವಾರ ಸಂಜೆ 5 ಗಂಟೆಗೆ ಈ ಘಟನೆ ನಡೆದಿತ್ತು. ಗಣೇಶನನ್ನು ಬಿಡುವುದಕ್ಕಾಗಿ ಬಂದ ಜನರಿಂದ ಬಟೇಶ್ವರ ಘಾಟ್ ತುಂಬಿ ತುಳುಕುತ್ತಿತ್ತು. ಈ ವೇಳೆ ಆಕಾಶ್, ಹಿಮಾಲಯ ಹಾಗೂ ಇವರಿಬ್ಬರು ಸ್ನೇಹಿತರು ಗಣೇಶನ ಮೂರ್ತಿಯ ಜೊತೆಗೆ ನದಿಗಿಳಿದಿದ್ದಾರೆ. ಈ ವೇಳೆ ಅವರು ನೀರಿನ ಉಯಿಲಿಗೆ ಸಿಲುಕಿಗೆ ಬ್ಯಾಲೆನ್ಸ್ ಕಳೆದುಕೊಂಡಿದ್ದು, ಮುಳುಗಲು ಶುರು ಮಾಡಿದ್ದಾರೆ. ಇದನ್ನು ನೋಡಿ ಅಲ್ಲಿದ್ದವರು ಬೊಬ್ಬೆ ಹೊಡೆಯಲು ಶುರು ಮಾಡಿದ್ದು. ಕೂಡಲೇ ತಮ್ಮ ಅಂಗಡಿಯಲ್ಲಿದ್ದ ಮೋಹಿನಿ ನದಿಗೆ ಹಾರಿ ಆ ಒಬ್ಬರಾದ ಮೇಲೊಬ್ಬರಂತೆ ನಾಲ್ವರನ್ನು ರಕ್ಷಿಸಿದ್ದಾರೆ.
ಉಕ್ಕಿ ಹರಿದ ಕಾವೇರಿ ನದಿ ತಟದಲ್ಲಿ ಸಿಲುಕಿದ ನಾಯಿಗೆ ಡ್ರೋನ್ ಮೂಲಕ ಬಿರಿಯಾನಿ ರವಾನೆ!